ಪ್ರತಿಭಟನೆಯಿಂದ ಪೊಲೀಸರಿಗೆ ಸಂಕಷ್ಟ ಶುರು.! ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪೊಲೀಸ್‌ ಸಿಬ್ಬಂದಿಯ ವಿರುದ್ದ ಕ್ರಮಕ್ಕೆ ಮುಂದಾದ ಇಲಾಖೆ

ಇತ್ತೀಚಿಗೆ ಚಿಕ್ಕ ಮಂಗಳೂರಿನಲ್ಲಿಪೊಲೀಸ್‌ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಹಾಗೂ ಪೊಲೀಸ್‌ ಠಾಣಾಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಮದ್ಯಪಾನ ಮಾಡಿ ಬಂದು ಪೊಲೀಸ್‌ ಠಾಣೆಯಲ್ಲಿ ದಾಂಧಲೆ ಎಬ್ಬಿಸಿದ್ದಾರೆ ಎಂದು ಆರೋಪಿಸಿ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಡೆಸಿದ್ದ ಪ್ರತಿಭಟನೆಯಿಂದ ಪೊಲೀಸರಿಗೆ ಸಂಕಷ್ಟ ಶುರುವಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪೊಲೀಸ್‌ ಸಿಬ್ಬಂದಿಯನ್ನು ಗುರುತಿಸಿ ಅವರ ವಿರುದ್ದ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ. ಹೆಲ್ಮೆಟ್‌ ಧರಿಸದೆ ವಾಹನ ಚಲಾಯಿಸುತ್ತಿದ್ದ ಚಿಕ್ಕಮಂಗಳೂರಿನ ವಕೀಲ ಪ್ರೀತಮ್‌ ರನ್ನು ಪ್ರಶ್ನಿಸಿದ್ದ ಕಾರಣಕ್ಕೆ ವಿವಾದ […]

Continue Reading

ರಾಜ್ಯ ಬಿಜೆಪಿಯಲ್ಲಿ ಡ್ರಾಮಾ; ವಿಪಕ್ಷ ನಾಯಕನ ವಿರುದ್ಧವೇ ಬಿಜೆಪಿ ಶಾಸಕರು ಗರಂ.!

‘ಸಾಮ್ರಾಟ’ ಇಡುಗಂಟು ಇಲ್ಲ..ಬೆಲೆನೂ ಇಲ್ಲ..ಇದೆಂಥಾ ದುರ್ವಿಧಿ! ಬಿಜೆಪಿ ಹೈಕಮಾಂಡ್ ‘ತ್ರಿ’ ಮೂರ್ತಿಗಳಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಕಕ್ಕಾಬಿಕ್ಕಿಯಾಗಬೇಕು. ಮ್ಯಾಜಿಕ್ ನಡೆಯಬೇಕು. ಸ್ಟ್ರಾಂಗ್ ವಿರೋಧದಿಂದಾಗಿ ರಾಜ್ಯದಲ್ಲಿ ಬಿಜೆಪಿ ಪರ ಅಲೆಯೊಂದನ್ನು ಸೃಷ್ಟಿಸಬೇಕು ಅಂದುಕೊಂಡಿದ್ದ ಹೈಕಮಾಂಡ್ ನಾಯಕರಿಗೆ ರಾಜ್ಯದಲ್ಲಿ ನಡೆಯುತ್ತಿರುವ ಉಲ್ಟಾಪಲ್ಟಾ ಗಳಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಜೆಡಿಎಸ್ ದೋಸ್ತಿನೊಂದಿಗೆ ಕುಮಾರಸ್ವಾಮಿ, ವಿಪಕ್ಷ ನಾಯಕ ಅಶೋಕ್, ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸದನದಲ್ಲಿ ಅಬ್ಬರಿಸುವಂತೆ ಮಾಡಿ ಕಾಂಗ್ರೆಸ್ ಕಕ್ಕಾಬಿಕ್ಕಿ ಮಾಡುವ ಪ್ಲ್ಯಾನ್ ಉಲ್ಟಾ ಆಗಿದೆ.ಬಿಜೆಪಿಯಲ್ಲೇ ಭಿನ್ನಮತ ಸದನದಲ್ಲಿ ಬಹಿರಂಗ ಆಗುವ ಮೂಲಕ […]

Continue Reading

ಬಿಲ್ಡರ್ ಗಳಿಗೆ ಜೈಲು ಶಿಕ್ಷೆ ವಿಧಿಸಿದ ತೀರ್ಪಿಗೆ ಗ್ರಾಹಕ ರಾಜ್ಯ ಆಯೋಗದಿಂದ ತಡೆಯಾಜ್ಞೆ

ಗುಜ್ಜರಕೆರೆಯ ಬಹುಮಹಡಿ ವಸತಿ ಸಂಕೀರ್ಣದಲ್ಲಿ ಫ್ಲ್ಯಾಟ್ ಖರೀದಿಸಿದ ಮಹಿಳೆಯೊಬ್ಬರಿಗೆ ಕಾರು ಪಾರ್ಕಿಂಗ್ ನೀಡದಿರುವ ಪ್ರಕರಣದಲ್ಲಿ ಬಿಲ್ಡರ್ ಗಳಿಗೆ ಜೈಲು ಶಿಕ್ಷೆ ವಿಧಿಸಿ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿತ್ತು. ಇದಕ್ಕೆ ವೇದಿಕೆಯ ಬೆಂಗಳೂರಿನ ರಾಜ್ಯ ಆಯೋಗದಿಂದ ತಡಯಾಜ್ಞೆ ವಿಧಿಸಿ ಆದೇಶ ಹೊರಡಿಸಿದೆ. ಕಾರ್ ಪಾರ್ಕಿಂಗ್ ನೀಡಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ಬಿಲ್ಡರ್ ಗಳ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ಪ್ರಕರಣ ದಾಖಲಿಸಿದ್ದು, ವೇದಿಕೆ ವಿಚಾರಣೆ ನಡೆಸಿ ದೂರುದಾರರಿಗೆ ಕಾರ್ ಪಾರ್ಕಿಂಗ್ ಗೆ ಜಾಗ ಮತ್ತು 50 ಸಾವಿರ ರೂಪಾಯಿ ಪರಿಹಾರ, […]

Continue Reading

ಭವಾನಿ ರೇವಣ್ಣ ಕಾರು ಪ್ರಕರಣ; ಕಾರಿನ ಮಾಲೀಕರ ಹುಡುಕಾಟದಲ್ಲಿ.! ಬಿಬಿಎಂಪಿಯ ಗುತ್ತಿಗೆದಾರ ರೆಡ್ಡಿ ಯಾರು.?

ಇತ್ತಿಚೆಗೆ ದೇವೇಗೌಡರವರ ಸೊಸೆ ಭವಾನಿ ರೇವಣ್ಣರವರು ಕಾರಿನಲ್ಲಿ ಪ್ರಯಾಣಿಯುವಾಗ ಬೈಕ್ ಸವಾರನೊಬ್ಬ ಕಾರಿಗೆ ಗುದ್ದಿದ್ದ ವೇಳೆ ಭವಾನಿ ರೇವಣ್ಣ ಬಹಳ ಗರಂ ಆಗಿದ್ದರು. ನೀನು ಸಾಯುವುದಕ್ಕೆ ನನ್ನ ಕಾರೇ ಬೇಕಿತ್ತಾ..? 50 ಲಕ್ಷ ಕೊಡಿ ಎಂದೆಲ್ಲಾ ಹೇಳಿದ ಮಾತಿನ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಒಂದೂವರೆ ಕೋಟಿ ರೂಪಾಯಿ ಕಾರಿನ ಅಪಘಾತದ ಈ ಪ್ರಕರಣದ ಸುಖಾಂತ್ಯಕ್ಕೆ ದೇವೇಗೌಡ್ರ ಕುಟುಂಬ ಸಾಕಷ್ಟು ಪ್ರಯತ್ನ ಪಟ್ಟಿತ್ತು. ಆದರೆ ಇದೀಗ ಒಂದೂವರೆ ಕೋಟಿ ಬೆಲೆಯ ಕಾರಿನ ಮಾಲೀಕ ಯಾರಿರಬಹುದು ಎಂಬುದರ ಬಗ್ಗೆ […]

Continue Reading

ಭ್ರೂಣ ಹತ್ಯೆ ಮಾಡಿದರೆ ಕೊಲೆ ಕೇಸ್​ ದಾಖಲಿಸಲು ಪೊಲೀಸ್ ಇಲಾಖೆ ಚಿಂತನೆ

ರಾಜ್ಯದಲ್ಲಿ ಭ್ರೂಣಹತ್ಯೆ ತಡೆಗೆ ಪೊಲೀಸ್ ಇಲಾಖೆ ಹೊಸ ನಿಯಮ ಜಾರಿಗೆ ತರಲು ಚಿಂತನೆ ನಡೆಸಿದೆ. ಇನ್ಮು ಮುಂದೆ 6 ತಿಂಗಳ ಮತ್ತು ನಂತರದ ಭ್ರೂಣ ಹತ್ಯೆ ಮಾಡಿದರೆ ಕೊಲೆ ಕೇಸ್​ ದಾಖಲಿಸಲು ಪೊಲೀಸ್ ಇಲಾಖೆ ಪ್ಲ್ಯಾನ್ ಮಾಡುತ್ತಿದೆ. ಆರು ತಿಂಗಳು ಮತ್ತು ನಂತರದ ಭ್ರೂಣ ಹತ್ಯೆ ಮಾಡಿದರೆ ಕೊಲೆ ಕೇಸ್​ ದಾಖಲಿಸಲು ಪೊಲೀಸ್ ಇಲಾಖೆ ಪ್ಲ್ಯಾನ್ ನಡೆಸುತ್ತಿದೆ. ಭ್ರೂಣ ಹತ್ಯೆ ಮಾಡಿದರೆ IPC 302 ಅಡಿ ಕೇಸ್ ದಾಖಲಿಸಿಕೊಳ್ಳಲು ಚಿಂತನೆಗಳು ನಡೆದಿದ್ದು, ಈ ಹೊಸ ನಿಯಮ ಜಾರಿಗೆ […]

Continue Reading

ಲಕ್ಕಿ ಸ್ಕೀಂ ನಂತಾದ ಅಲ್ಪಸಂಖ್ಯಾತರ ಕಲ್ಯಾಣ ಯೋಜನೆ

18 ಸಾವಿರ ಅರ್ಜಿಗಳು, 57 ಮಂದಿ ಫಲಾನುಭವಿಗಳು.! ಸೈಬರ್ ಗಳಲ್ಲಿ ಒಂದೊಂದು ಅರ್ಜಿಗೆ 100 ರೂ. ವಸೂಲಿ, ಹುಚ್ಚು ಮುಂಡೆ ಮದುವೇಳಿ ಉಂಡೋನೆ ಜಾಣ.! ಇದೀಗ ಜಿಲ್ಲೆಯಾದ್ಯಂತ ನಾಯಿಕೊಡೆಗಳಂತೆ ಅಲ್ಲಲ್ಲಿ ತಲೆ ಎತ್ತಿ ನಿಂತಿರುವ ಲಕ್ಕಿ ಸ್ಕೀಂ ಬಗ್ಗೆ ನಿಮಗೆ ತಿಳಿದಿದೆ. ಯಾರೋ ಒಬ್ಬರು ಮಾಡಿ ಕೋಟಿಗಟ್ಟಲೆ ದುಡ್ಡು ಸಂಪಾದಿಸಿದ್ದಾರೆ ಎಂದು ಇದೀಗ ವೆರೈಟಿ ವೆರೈಟಿ ಹೆಸರಿನಲ್ಲಿ ನೂರಾರು ಲಕ್ಕಿ ಸ್ಕೀಂ ಗಳು ತಲೆ ಎತ್ತಿದೆ. ಮಾಸಿಕ 1000 ರೂಪಾಯಿಯಂತೆ 20 ತಿಂಗಳು ಕಟ್ಟಬೇಕಿದೆ. ಅದೃಷ್ಟವಂತ ಫಲಾನುಭವಿಗಳಿಗೆ […]

Continue Reading

ಕ್ರಿಮಿನಲ್​ ಮೊಕದ್ದಮೆ ಎದುರಿಸುತ್ತಿರುವವರಿಗೆ ಹೊಸ ಪಾಸ್ ಪೋರ್ಟ್ ನವೀಕರಣ, ಮರು ವಿತರಣೆ ನಿಷೇಧಿಸಲಾಗಿದೆ: ಹೈಕೋರ್ಟ್

ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವವರಿಗೆ ಹೊಸ ಪಾಸ್ ಪೋರ್ಟ್ ನೀಡುವುದು, ನವೀಕರಣ ಅಥವಾ ಮರು ವಿತರಣೆ ಮಾಡಲು ಸಾಧ್ಯವಿಲ್ಲ ಎಂಬ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಯ ನಿಯಮವನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ಎತ್ತಿಹಿಡಿದಿದೆ. ಸೆಷನ್ಸ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಬಾಕಿ ಇರುವ ಸಂತೋಷ ಬೀಜಾಡಿ ಶ್ರೀನಿವಾಸ್ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ವ್ಯಕ್ತಿಯ ಕ್ರಿಮಿನಲ್​ ಮೊಕದ್ದಮೆಯನ್ನು ಪರಿಗಣಿಸದೆ ಆತನಿಗೆ ಪಾಸ್ ಪೋರ್ಟ್ ವಿತರಣೆ ಮಾಡಬಹುದು ಅಥವಾ ನವೀಕರಣ, ಮರು ನೀಡುವಂತೆ ಪಾಸ್ ಪೋರ್ಟ್ […]

Continue Reading

ನೈಸ್ ಸಂಸ್ಥೆಗೆ ನೀಡಿರುವ 554 ಎಕರೆ ಜಮೀನನ್ನು ಹಿಂಪಡೆಯಲು ಸರ್ಕಾರ ನಿರ್ಧಾರ

ನೈಸ್ ಸಂಸ್ಥೆಗೆ ನೀಡಿರುವ 554 ಎಕರೆ ಜಮೀನನ್ನು ಹಿಂಪಡೆಯಲು ಸರ್ಕಾರ ಬದ್ಧವಾಗಿದೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ್ ಅವರು ವಿಧಾನಪರಿಷತ್‍ಗೆ ಹೇಳಿದ್ದಾರೆ. ಬಿಜೆಪಿ ಸದಸ್ಯ ಮುನಿರಾಜೇಗೌಡ. ಅವರ ಪ್ರಶ್ನೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪರವಾಗಿ ಉತ್ತರಿಸಿದ ಸಚಿವ ಶರಣಬಸಪ್ಪ ದರ್ಶನಾಪುರ್, ನೈಸ್ ಸಂಸ್ಥೆಯವರಿಗೆ ಹೆಚ್ಚುವರಿಯಾಗಿ 554 ಎಕರೆ ಜಮೀನನ್ನು ಹಿಂತಿರುಗಿಸಬೇಕೆಂದು ಕೆಐಎಡಿಬಿ ಮೂಲಕ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಜಮೀನು ಹಿಂಪಡೆಯುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಎಂಐಸಿ ಯೋಜನೆಗೆ […]

Continue Reading

ಮಹಿಳೆಯರ ಮೇಲೆ ನಡೆಯುವ ಅಪರಾಧ ಪ್ರಕರಣಗಳಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.!

ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೋ (NCRB) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿ ಪ್ರಕಾರ, 2022 ರಲ್ಲಿ 2 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ 19 ಮಹಾನಗರಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ದೆಹಲಿ ಮತ್ತು ಮುಂಬೈ ನಂತರ ಬೆಂಗಳೂರು ಸ್ಥಾನ ಪಡೆದುಕೊಂಡಿದೆ. NCRB ವರದಿ ಪ್ರಕಾರ, ಬೆಂಗಳೂರು ನಗರದಲ್ಲಿ ಆ್ಯಸಿಡ್ ದಾಳಿಯ ಆರು ಘಟನೆಗಳು ವರದಿಯಾಗಿದ್ದು, ಇದು ದೇಶದ ಯಾವುದೇ ಮೆಟ್ರೋಪಾಲಿಟನ್ ನಗರದಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣವಾಗಿದೆ. ಬೆಂಗಳೂರು ನಗರದಲ್ಲಿ 151 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ […]

Continue Reading

ಕೋಟಿ ವಂಚಕಿ ಚೈತ್ರಾ ಳಿಗೆ ಜಾಮೀನು ಮಂಜೂರು

ರಾಜ್ಯದಾದ್ಯಂತ ಭಾರೀ ಸುದ್ಧಿಗೆ ಕಾರಣವಾಗಿದ್ದ ಬಿಜೆಪಿ ಟಿಕೆಟ್ ದೋಖಾ ಪ್ರಕರಣದಲ್ಲಿ ಹೊಟೇಲ್‌ ಉದ್ಯಮಿ ಗೋವಿಂದಬಾಬು ಪೂಜಾರಿಗೆ 7 ಕೋಟಿ ರೂ. ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಸಹಿತ ಇಬ್ಬರಿಗೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಹಾಗೂ 7ನೇ ಆರೋಪಿ ಶ್ರೀಕಾಂತ್‌ಗೆ 3ನೇ ಎಸಿಎಂಎಂ ಕೋರ್ಟ್‌ ಜಾಮೀನು ಮಂಜೂರು ಮಾಡಿದ್ದು, ಮಂಗಳವಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಮೂವರಿಗೆ ಜಾಮೀನು ಸಿಕ್ಕಂತಾಗಿದೆ. ಈ ಹಿಂದೆ ಹೊಸಕೋಟೆಯ ಹಾಲಶ್ರೀ ಸ್ವಾಮೀಜಿಗೆ […]

Continue Reading