ಅಪಘಾತದಲ್ಲಿ ಪೋಷಕರು ಮೃತಪಟ್ಟರೆ, ವಿವಾಹಿತ, ಉದ್ಯೋಗಿ ಮಕ್ಕಳು ಕೂಡ ಪರಿಹಾರ ಪಡೆಯಲು ಅರ್ಹರು: ಸುಪ್ರೀಂ ಕೋರ್ಟ್

ಅಪಘಾತದಲ್ಲಿ ಪೋಷಕರು ಮೃತಪಟ್ಟ ಸಂದರ್ಭದಲ್ಲಿ, ಅವರ ವಯಸ್ಕ, ವಿವಾಹಿತ ಹಾಗೂ ಲಾಭದಾಯಕ ಉದ್ಯೋಗದಲ್ಲಿರುವ ಮಕ್ಕಳು ಕೂಡ ಪರಿಹಾರ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅವಲಂಬನೆಯ ಪ್ರಮಾಣಕ್ಕೆ ಅನುಗುಣವಾಗಿ ಈ ಮಕ್ಕಳೂ ಪರಿಹಾರಕ್ಕಾಗಿ ಕಾನೂನುಬದ್ಧವಾಗಿ ಅರ್ಹರು ಎಂದು ನ್ಯಾಯಮೂರ್ತಿಗಳಾದ ಎನ್. ಕೋಟೀಶ್ವರ್ ಸಿಂಗ್ ಮತ್ತು ಎನ್.ವಿ. ಅಂಜಾರಿಯ ಅವರ ಪೀಠವು ತೀರ್ಪು ನೀಡಿದೆ. ಕಾನೂನುಬದ್ಧ ಪ್ರತಿನಿಧಿ ಎಂಬುದನ್ನು ಮೋಟಾರು ವಾಹನ ಕಾಯ್ದೆಯಲ್ಲಿ ವ್ಯಾಖ್ಯಾನಿಸಿಲ್ಲವಾದರೂ, ಮೃತ ವ್ಯಕ್ತಿಯ ಆಸ್ತಿಯನ್ನು ಕಾನೂನುಬದ್ಧವಾಗಿ ಪ್ರತಿನಿಧಿಸುವವರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರು […]

Continue Reading

ಕುಖ್ಯಾತ ಡ್ರಗ್ಸ್ ಕಿಂಗ್ ಪಿನ್ ವೀರೇಂದ್ರ ಸಿಂಗ್ ಬಸೋಯಾ ಯುಎಇಯಿಂದ ಭಾರತಕ್ಕೆ ಹಸ್ತಾಂತರ: NCB ವಶಕ್ಕೆ

13,000 ಕೋಟಿ ರೂ. ಮೌಲ್ಯದ ಮಾದಕ ವಸ್ತು ಪ್ರಕರಣದಲ್ಲಿ ಬೇಕಾಗಿದ್ದ ಡ್ರಗ್ ಕಿಂಗ್‌ಪಿನ್‌ನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. 2023 ರಲ್ಲಿ, ತನ್ನ ಮಗನ ಮದುವೆಯ ಒಂದು ದಿನದ ನಂತರ, ವೀರೇಂದ್ರ ಬಸೋಯಾ ದೇಶ ಬಿಟ್ಟು ಪಲಾಯನ ಮಾಡಿದ್ದ. ಮಾದಕವಸ್ತು ಕಿಂಗ್ ಪಿನ್ ವೀರೇಂದ್ರ ಸಿಂಗ್ ಬಸೋಯಾನನ್ನು ಯುಎಇಯಿಂದ ಭಾರತಕ್ಕೆ ಕರೆತರಲಾಗಿದ್ದು, ಮಾದಕವಸ್ತು ನಿಯಂತ್ರಣ ಬ್ಯೂರೋ ಎನ್‌ಸಿಬಿ ಆತನನ್ನು ವಶಕ್ಕೆ ಪಡೆದಿದೆ. ಎನ್‌ಸಿಬಿ ಕೋರಿಕೆಯ ಮೇರೆಗೆ ಇಂಟರ್‌ಪೋಲ್ ರೆಡ್ ನೋಟಿಸ್ ಹೊರಡಿಸಿದ ನಂತರ ಜೂನ್‌ ತಿಂಗಳಲ್ಲಿ ಬಸೋಯಾನನ್ನು ಯುಎಇಯಲ್ಲಿ ಬಂಧಿಸಲಾಯಿತು. […]

Continue Reading

ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆಯ ನಂತರ ವೇದಿಕೆ ಶುದ್ಧೀಕರಣ; ಇದು ದಲಿತ ಸಮುದಾಯಕ್ಕೆ ಮಾಡಿದ ಅವಮಾನ ಕಾಂಗ್ರೆಸ್

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆಯ ನಂತರ ವೇದಿಕೆಯನ್ನು “ಶುದ್ಧೀಕರಿಸುವುದು” ದೊಡ್ಡ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ಖರ್ಗೆ ಜನರನ್ನು ಉದ್ದೇಶಿಸಿ ಮಾತನಾಡಿದ ವೇದಿಕೆಯನ್ನು ಕೆಲವು ವ್ಯಕ್ತಿಗಳು ನಂತರ “ಶುದ್ಧೀಕರಿಸಿದರು” ಎಂದು ಕಾಂಗ್ರೆಸ್ ಆರೋಪಿಸಿದೆ. ಇದನ್ನು ಬಿಜೆಪಿಗೆ ಸಂಬಂಧಿಸಿದ ಜನರು ಮಾಡಿದ್ದು ಇದು ದಲಿತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಆಗಸ್ಟ್ 8 ರಂದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ದೊಡ್ಡ ಸಾರ್ವಜನಿಕ ಸಭೆಯನ್ನು […]

Continue Reading

ದೇಶದಲ್ಲಿ ಪ್ರತಿನಿತ್ಯ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಪ್ರತಿ ಗಂಟೆಗೆ ಸರಾಸರಿ 20 ಜನರು ಬಲಿಯಾಗುತ್ತಿದ್ದಾರೆ: ಸಚಿವ ನಿತಿನ್ ಗಡ್ಕರಿ ಆತಂಕ

ಪ್ರತಿ ಗಂಟೆಗೆ ಸರಾಸರಿ 20 ಜನರು ರಸ್ತೆ ಅಪಘಾತಗಳಲ್ಲಿ ಬಲಿ. ವರ್ಷಕ್ಕೆ 5 ಲಕ್ಷ ರಸ್ತೆ ಅಪಘಾತಗಳು; ಅಂದಾಜು 1.8 ಲಕ್ಷ ಜನರ ಸಾವು, ಶೇಕಡಾ 66 ರಷ್ಟು ಯುವಕರು ಭಾರತದ ರಸ್ತೆಗಳಲ್ಲಿ ಸುರಕ್ಷತೆಯ ಕೊರತೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದ್ದು, ದೇಶದಲ್ಲಿ ಪ್ರತಿನಿತ್ಯ ಸಂಭವಿಸುತ್ತಿರುವ ರಸ್ತೆ ಅಪಘಾತಗಳು ಯಾವುದೇ ಯುದ್ಧ ಅಥವಾ ಸಾಂಕ್ರಾಮಿಕ ರೋಗಕ್ಕಿಂತಲೂ ಹೆಚ್ಚು ಜನರನ್ನು ಬಲಿ ಪಡೆಯುತ್ತಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಆತಂಕ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿ […]

Continue Reading

ಪೂರ್ಣ ಹಣ ಪಾವತಿಸದಿದ್ದರೂ ನೋಂದಾವಣಿಯಾದ ಕ್ರಯ ಪತ್ರ ಅಸಿಂಧುವಾಗಲ್ಲ, ಕ್ರಯಪತ್ರವನ್ನೇ ಅನೂರ್ಜಿತಗೊಳಿಸುವಂತೆ ಕೋರಲು ಬರುವುದಿಲ್ಲ: ಸು. ಕೋ

ಕ್ರಯಪತ್ರವನ್ನು ನೋಂದಾಯಿಸುವ ಸಮಯದಲ್ಲಿ, ಖರೀದಿ ಮಾಡುವ ಸ್ವತ್ತಿನ ಮೌಲ್ಯದ ಸಂಪೂರ್ಣ ಮೊತ್ತವನ್ನು ಪಾವತಿಸಲೇಬೇಕು ಎಂದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಸ್ವತ್ತನ್ನು ವರ್ಗಾಯಿಸಲು ಪಕ್ಷಗಾರರು ಬಯಸಿದಲ್ಲಿ, ಪಾವತಿಸಬೇಕಾದ ಒಟ್ಟು ಮೊತ್ತದಲ್ಲಿ ಒಂದು ಭಾಗ ಬಾಕಿ ಇದ್ದ ಹೊರತಾಗಿಯೂ, ದಸ್ತಾವೇಜು ನೋಂದಣಿ ಮತ್ತು ಕಾರ್ಯಗತಗೊಳಿಸುವ ಪ್ರಕ್ರಿಯೆ ಪೂರ್ಣಗೊಳ್ಳುತ್ತಿ‌ದ್ದಂತೆಯೇ ಮಾಲೀಕತ್ವದ ವರ್ಗಾವಣೆಯು ಪೂರ್ಣಗೊಳ್ಳುತ್ತದೆ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ. ಬಾಕಿ ಮೊತ್ತವನ್ನು ಪಾವತಿಸಿಲ್ಲ ಎಂದ ಮಾತ್ರಕ್ಕೆ ನೋಂದಣಿಯಾದ ಕ್ರಯಪತ್ರ ಅಸಿಂಧುವಾಗುವುದಿಲ್ಲ. ಇಂಥ ಸಂದರ್ಭಗಳಲ್ಲಿ, ಬಾಕಿ ಮೊತ್ತ ವಸೂಲಿಗಾಗಿ ಮಾರಾಟಗಾರರು ದಾವೆ ಹೂಡಬಹುದೇ […]

Continue Reading

ಪಾಕಿಸ್ತಾನದ ‘ಹನಿ ಟ್ರ್ಯಾಪ್’ ಜಾಲಕ್ಕೆ ಬಿದ್ದು, ದೇಶದ ರಕ್ಷಣಾ ಮಾಹಿತಿ ಹಂಚಿಕೊಂಡ ಭಾರತೀಯ ವಾಯುಸೇನೆ IAF ಅಧಿಕಾರಿ

ಪಾಕಿಸ್ತಾನದ ಗುಪ್ತಚರ ಅಧಿಕಾರಿಯೊಬ್ಬರಿಗೆ ಸಾಮಾಜಿಕ ಮಾಧ್ಯಮದ ಮೂಲಕ ಭಾರತೀಯ ವಾಯುಪಡೆಯ ರಕ್ಷಣಾ ಸಂಬಂಧಿತ ಅತ್ಯಂತ ಸೂಕ್ಷ್ಮ ಹಾಗೂ ಕಾರ್ಯತಂತ್ರದ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇಲೆ ಭಾರತೀಯ ವಾಯುಪಡೆ(IAF)ಯ ವಿಂಗ್‌ ಕಮಾಂಡರ್‌ ಹುದ್ದೆಯ ಅಧಿಕಾರಿಯೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅಧಿಕೃತ ರಹಸ್ಯ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮೇ 30 ರಂದು ಅವರನ್ನು ಬಂಧಿಸಲಾಗಿದೆ. ತನಿಖೆ ಪೂರ್ಣಗೊಂಡ ನಂತರ ಜುಲೈ 30 ರಂದು ನ್ಯಾಯಾಲಯದ ಮುಂದೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ […]

Continue Reading

2019 ರಿಂದ 2026 ರ ನಡುವಿನ ಅವಧಿಯಲ್ಲಿ 36 ದೇಶಗಳಿಂದ 274 ಅಪರಾಧಿಗಳನ್ನು ಪತ್ತೆ ಹಚ್ಚಿ ಭಾರತಕ್ಕೆ ವಾಪಾಸ್

ವಿವಿಧ ಅಪರಾಧಗಳನ್ನು ಎಸಗಿ ದೇಶದಿಂದ ಪರಾರಿಯಾಗಿ ತಲೆಮರೆಸಿಕೊಂಡಿರುವ ಅಪರಾಧಿಗಳ ಪೈಕಿ 274 ಮಂದಿಯನ್ನು ಕಳೆದ ಐದು ವರ್ಷದ ಅವಧಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗಿದೆ. 2019 ರಿಂದ 2026 ರ ನಡುವಿನ ಅವಧಿಯಲ್ಲಿ 36 ದೇಶಗಳಿಂದ 274 ಅಪರಾಧಿಗಳನ್ನು ಭಾರತಕ್ಕೆ ತರಲಾಗಿದೆ ಎನ್ನುವ ಮಾಹಿತಿಯನ್ನು ಕೇಂದ್ರಸರ್ಕಾರ ನೀಡಿದೆ. ಪ್ರಸಕ್ತ ಕೇಂದ್ರ ಸರ್ಕಾರವು ಅಪರಾಧಿಗಳ ಹಸ್ತಾಂತರವನ್ನು ‘ರಾಷ್ಟ್ರೀಯ ಆದ್ಯತೆ’ಯನ್ನಾಗಿ ಮಾಡಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್‌ ಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. 2022ರಲ್ಲಿ 40, 2023ರಲ್ಲಿ 100, 2024ರಲ್ಲಿ […]

Continue Reading

ಕಬನಿ ನದಿಗೆ ಅಡ್ಡಲಾಗಿ ನಿರ್ಮಿಸಲಿರುವ ಬೈರಾಕುಪ್ಪ ಸೇತುವೆಗೆ ಕರ್ನಾಟಕದಿಂದ ನಿರಾಕ್ಷೇಪಣಾ ಪತ್ರ (NOC) ಮಂಜೂರು: ಕೇರಳ ಸಚಿವ

ತಿರುವನಂತಪುರಂ: ಕೇರಳ-ಕರ್ನಾಟಕ ಗಡಿಯಲ್ಲಿರುವ ಕಬನಿ ನದಿಗೆ ಅಡ್ಡಲಾಗಿ ನಿರ್ಮಿಸಲಿರುವ, ದೀರ್ಘಕಾಲದಿಂದ ಬಾಕಿ ಉಳಿದಿದ್ದ ಬೈರಾಕುಪ್ಪ ಸೇತುವೆಯ ನಿರ್ಮಾಣಕ್ಕೆ ಕರ್ನಾಟಕವು ನಿರಾಕ್ಷೇಪಣಾ ಪತ್ರವನ್ನು (NOC) ಮಂಜೂರು ಮಾಡಿದೆ ಎಂದು ಕೇರಳದ ಸಾರ್ವಜನಿಕ ನಿರ್ಮಾಣ ಕಾರ್ಯಗಳ ಸಚಿವ ಪಿ.ಎ. ಬಶೀರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ನಡೆಸಿದ ಚರ್ಚೆಯ ನಂತರ ಈ ಅನುಮತಿ ದೊರೆತಿದೆ ಎಂದು ಸಚಿವರು ಹೇಳಿದ್ದಾರೆ ಎಂದು ಗುರುವಾರ ಬಿಡುಗಡೆಯಾದ ಅಧಿಕೃತ ಹೇಳಿಕೆಯೊಂದು ತಿಳಿಸಿದೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಕರ್ನಾಟಕ […]

Continue Reading

370ನೇ ವಿಧಿ ರದ್ದತಿಯ ವಾರ್ಷಿಕೋತ್ಸವದ ಹಿನ್ನೆಲೆ: ಅನುಮತಿಯಿಲ್ಲದೆ ಯಾವುದೇ ಸಭೆ, ಸಮಾರಂಭಗಳಿಗೆ ಅವಕಾಶವಿಲ್ಲ: ಜಮ್ಮು-ಕಾಶ್ಮೀರ ಪೊಲೀಸ್

ಶ್ರೀನಗರ: ಬುಧವಾರದಂದು 370ನೇ ವಿಧಿ ರದ್ದತಿಯ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಾರ್ವಜನಿಕ ಸೂಚನೆಯೊಂದನ್ನು ಹೊರಡಿಸಿದ್ದು, ಅನಧಿಕೃತ ಪ್ರತಿಭಟನೆಗಳು ಅಥವಾ ಮೆರವಣಿಗೆಗಳನ್ನು ನಿಷೇಧಿಸಿದ್ದಾರೆ ಹಾಗೂ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ (PDP) ಪಕ್ಷವು ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ವಿವಿಧ ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿಗಳು ಈ ಸೂಚನೆಯನ್ನು ಹೊರಡಿಸಿವೆ. “ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ಯಾವುದೇ ಪ್ರತಿಭಟನೆ, ರ್ಯಾಲಿ, ಮೆರವಣಿಗೆ, ಪ್ರದರ್ಶನ ಅಥವಾ […]

Continue Reading

ಕೇರಳದಲ್ಲಿ ಭಾರಿ ಮಳೆ; ಎಂಟು ಮಂದಿ ಸಾವು, 13 ಮಂದಿಗೆ ಗಾಯ, 8 ಮಂದಿ ನಾಪತ್ತೆ: ಕೇರಳ ಸಿಎಂ

ತಿರುವನಂತಪುರಂ: (ಆಗಸ್ಟ್ 2) ರಾಜ್ಯದ ಹಲವೆಡೆ ಆಸ್ತಿಪಾಸ್ತಿ ಹಾನಿ, ಭೂಕುಸಿತ ಮತ್ತು ಜಲಾವೃತಕ್ಕೆ ಕಾರಣವಾದ ಹಿಂದಿನ ದಿನದ ಭಾರಿ ಮಳೆಯಿಂದಾಗಿ ಎಂಟು ಮಂದಿ ಮೃತಪಟ್ಟಿದ್ದಾರೆ, ಅಷ್ಟೇ ಸಂಖ್ಯೆಯ ಜನರು ನಾಪತ್ತೆಯಾಗಿದ್ದಾರೆ ಮತ್ತು 13 ಮಂದಿ ಗಾಯಗೊಂಡಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಭಾನುವಾರ ತಿಳಿಸಿದ್ದಾರೆ. ತಮ್ಮ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, 27 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ, 196 ಮನೆಗಳು ಭಾಗಶಃ ಹಾನಿಗೀಡಾಗಿವೆ ಮತ್ತು ರಾಜ್ಯಾದ್ಯಂತ ತೆರೆಯಲಾದ 209 ಪರಿಹಾರ ಶಿಬಿರಗಳಿಗೆ 5,792 ಜನರನ್ನು ಸ್ಥಳಾಂತರಿಸಲಾಗಿದೆ […]

Continue Reading