ಮುಸ್ಲಿಂ ವ್ಯಕ್ತಿ ಒಂದಕ್ಕಿಂತ ಹೆಚ್ಚು ವಿವಾಹ ನೋಂದಣಿ ಮಾಡಬಹುದು: ಬಾಂಬೇ ಹೈಕೋರ್ಟ್

ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಪುರುಷನಿಗೆ ಒಂದಕ್ಕಿಂತ ಹೆಚ್ಚು ವಿವಾಹವಾಗುವ ಅವಕಾಶವಿದ್ದು, ಅದನ್ನು ನೋಂದಾಯಿಸಿಕೊಳ್ಳಬಹುದು ಎಂದು ಬಾಂಬೆ ಹೈಕೋರ್ಟ್‌ ಮಂಗಳವಾರ ಹೇಳಿದೆ. ಮುಸ್ಲಿಂ ವ್ಯಕ್ತಿಯೊಬ್ಬ ಅಲ್ಜೀರಿಯಾದ ತನ್ನ ಮೂರನೇ ಪತ್ನಿ ನಡುವಿನ ಮದುವೆಯ ನೋಂದಣಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಬಿ.ಪಿ. ಕೊಲಬವಾಲಾ ಹಾಗೂ ನ್ಯಾ. ಸೋಮಶೇಖರ ಸುಂದರೇಶನ್‌ ಅವರಿದ್ದ ಪೀಠವು, ಇದರ ಸಾಧ್ಯತೆ ಕುರಿತು ವಿವಾಹ ಉಪನೋಂದಣಾಧಿಕಾರಿಗೆ ನಿರ್ದೇಶಿಸಿತ್ತು. ಅರ್ಜಿದಾರ ಮೂರನೇ ಮದುವೆಯಾಗುತ್ತಿದ್ದು, ಮಹಾರಾಷ್ಟ್ರ ವಿವಾಹ ನಿಯಂತ್ರಣ ಹಾಗೂ ನೋಂದಣಿ ಕಾಯ್ದೆಯಡಿ ಸಿಂಧುವಲ್ಲ ಎಂದು ಪ್ರಾಧಿಕಾರವು […]

Continue Reading

ತನಿಖೆಗೊಳಗಾದವರ ನಿದ್ರಿಸುವ ಹಕ್ಕನ್ನು ಗೌರವಿಸುವುದು ಮಹತ್ವದ್ದು; ಹೊತ್ತಲ್ಲದ ಹೊತ್ತಿನಲ್ಲಿ ಹೇಳಿಕೆ ದಾಖಲಿಸಿ ವ್ಯಕ್ತಿಯ ನಿದ್ರೆಯ ಹಕ್ಕನ್ನು ಇ.ಡಿ ಕಸಿಯುವಂತಿಲ್ಲ: ಬಾಂಬೆ ಹೈಕೋರ್ಟ್

ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ಸಮನ್ಸ್‌ ಪಡೆದವರ ಹೇಳಿಕೆಗಳನ್ನು ತಡರಾತ್ರಿಯವರೆಗೂ ಪಡೆದುಕೊಳ್ಳುವ ಬದಲು ಕಚೇರಿ ಅವಧಿಗ ಸೀಮಿತಗೊಳಿಸಲು ಎಲ್ಲಾ ಯತ್ನ ಮಾಡುವಂತೆ ಜಾರಿ ನಿರ್ದೇಶನಾಲಯ ತನ್ನ ಅಧಿಕಾರಿಗಳಿಗೆ ಸೂಚಿಸಿದೆ.ಕಳೆದ ಏಪ್ರಿಲ್‌ನಲ್ಲಿ ಬಾಂಬೆ ಹೈಕೋರ್ಟ್‌ ನೀಡಿದ್ದ ನಿರ್ದೇಶನದಂತೆ ಸುತ್ತೋಲೆ ಹೊರಡಿಸಿರುವ ಇ.ಡಿ ತನಿಖೆಗೊಳಗಾದವರ ನಿದ್ರಿಸುವ ಹಕ್ಕನ್ನು ಗೌರವಿಸುವುದು ಮಹತ್ವದ್ದು ಎಂದಿದೆ. ಹೊತ್ತಲ್ಲದ ಹೊತ್ತಿನಲ್ಲಿ ಹೇಳಿಕೆ ದಾಖಲಿಸಿ ವ್ಯಕ್ತಿಯ ನಿದ್ರೆಯ ಹಕ್ಕನ್ನು ಇ ಡಿ ಕಸಿಯುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ತನ್ನ ಅಕ್ರಮ ಬಂಧನ ಪ್ರಶ್ನಿಸಿ 64 ವರ್ಷದ […]

Continue Reading

ಪತ್ರಕರ್ತೆ ಗೌರಿ ಲಂಕೇಶ್ ಹಂತಕ ಶಿಂಧೆ ಬಣದ ಪಕ್ಷಕ್ಕೆ ಸೇರ್ಪಡೆ.. ಚುನಾವಣಾ ಪ್ರಚಾರದ ಮುಖ್ಯಸ್ಥರನ್ನಾಗಿ ಆಯ್ಕೆ!

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದೆ. ನವೆಂಬರ್ 20 ರಂದು ನಡೆಯಲಿರುವ ಮಹಾ ಕದನ ದೇಶದ ಗಮನ ಸೆಳೆದಿದೆ. ಈ ನಡುವೆಯೇ ಆತಂಕಕಾರಿ ಘಟನೆಯೊಂದು ವರದಿಯಾಗಿದ್ದು, ದೇಶವನ್ನೇ ಬೆಚ್ಚಿಬೀಳಿಸಿದ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಶ್ರೀಕಾಂತ್ ಪಂಗರ್ಕರ್ ಏಕನಾಥ ಶಿಂಧೆ ಬಣದ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ವರದಿಗಳು ತಿಳಿಸಿವೆ. ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 5, 2017 ರಂದು ಬೆಂಗಳೂರಿನ ಅವರ ನಿವಾಸದ ಎದುರೇ ಗುಂಡಿಕ್ಕಿ ಕೊಲ್ಲಲಾಗಿತ್ತು. ಬಲಪಂಥೀಯ ವಿಚಾರಧಾರೆಯ ವಿರುದ್ಧ ಅಕ್ಷರ ಸಮರ ಸಾರಿದ್ದ […]

Continue Reading

ಬಡ್ಡಿ ಸಮೇತ ಪರಿಹಾರ ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಗ್ರಾಹಕರ ನ್ಯಾಯಾಲಯ ಆದೇಶ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಹಕರೊಬ್ಬರಿಗೆ ಆದ ತೊಂದರೆಗೆ ಜಿಲ್ಲಾ ಗ್ರಾಹಕ ನ್ಯಾಯಾಲಯ ಬಡ್ಡಿ ಸಮೇತ ಪರಿಹಾರ ನೀಡಲು ಆದೇಶಿಸಿದೆ. ನಿವೃತ್ತ ಸರಕಾರಿ ಅಭಿಯೋಜಕ ನಾಗರಾಜ ಆಚಾರ್, ಬ್ಯಾಂಕ್ ನ ತಮ್ಮ ಖಾತೆ ವಿವರಗಳನ್ನು 2023 ರ ಸೆಪ್ಟೆಂಬರ್ 28 ರಂದು ಪರಿಶೀಲಿಸಿದಾಗ ಎರಡು ದಿನದ ಹಿಂದೆ ಖಾತೆಯ ಯುಪಿಐ ಮೂಲಕ 99,000 ರೂಪಾಯಿ ಮೊತ್ತ ವರ್ಗಾವಣೆಯಾಗಿತ್ತು. ಅವರ ಗಮನಕ್ಕೆ ಬಾರದಂತೆ ಹಣ ವರ್ಗಾವಣೆಗೊಂಡಿದ್ದರ ಬಗ್ಗೆ ಬ್ಯಾಂಕಿಂಗ್ ಓಂಬಡ್ಸ್ ಮನ್ ಮತ್ತು ಸಕ್ಷಮ […]

Continue Reading

ಭಾರತೀಯ ಪೌರತ್ವ ಕಾಯ್ದೆಯ ‘ಸೆಕ್ಷನ್‌ 6ಎ’ದ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದು ಸುಪ್ರೀಂ ಕೋರ್ಟ್‌

ಅಸ್ಸಾಂಗೆ ವಲಸೆ ಬಂದಿರುವವರಿಗೆ ಪೌರತ್ವ ನೀಡುವ, ಭಾರತೀಯ ಪೌರತ್ವ ಕಾಯ್ದೆಯ ‘ಸೆಕ್ಷನ್‌ 6ಎ’ದ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದು ಸುಪ್ರೀಂ ಕೋರ್ಟ್‌ ಗುರುವಾರ ಬಹುಮತದ ತೀರ್ಪು ನೀಡಿದೆ. ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಐವರು ಸದಸ್ಯರು ಇದ್ದ ಸಂವಿಧಾನ ಪೀಠವು 4:1 ರ ತೀರ್ಪು ನೀಡಿದ್ದು, ‘ಸೆಕ್ಷನ್ 6ಎ’ದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. ಸಿಜೆಐ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಎಂ.ಎಂ.ಸುಂದ್ರೇಶ್ ಹಾಗೂ ಮನೋಜ್‌ ಮಿಶ್ರಾ ಅವರು ‘ಸೆಕ್ಷನ್‌ 6ಎ’ದ ಸಿಂಧುತ್ವ ಎತ್ತಿ ಹಿಡಿದಿದ್ದರೆ, […]

Continue Reading

ನೋಟರಿ ವಕೀಲರು ವಿವಾಹ ನೋಂದಣಿ ಮತ್ತು ವಿವಾಹ ವಿಚ್ಚೇದನದ ಅಫಿಡವಿಟ್‌ಗೆ ದೃಢೀಕರಣ ಮಾಡುವಂತಿಲ್ಲ

ನೋಂದಣಿ ಮಾಡಿಸಿಕೊಂಡಲ್ಲಿ ಅದನ್ನು ಗಂಭೀರ ದುರ್ವರ್ತನೆ ಎಂದು ಪರಿಗಣಿಸಿ, ಅಂತಹ ವಕೀಲರ ವಿರುದ್ಧ ಕಾನೂನು ಕ್ರಮ: ಸಚಿವಾಲಯ ಕೇಂದ್ರ ಸರ್ಕಾರದಿಂದ ನೇಮಕಗೊಂಡಿರುವ ನೋಟರಿ ವಕೀಲರಿಗೆ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರಗಳ ವಿಭಾಗ ಮಹತ್ವದ ಸೂಚನೆ ಹೊರಡಿಸಿದೆ. ದಿನಾಂಕ 10-10-2024ರಂದು ಕಾನೂನು ವ್ಯವಹಾರಗಳ ವಿಭಾಗ ಎಲ್ಲ ನೋಟರಿ ವಕೀಲರಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಇದರಲ್ಲಿ ಕೆಲವೊಂದು ಮಹತ್ವದ ಸೂಚನೆಗಳನ್ನು ನೀಡಲಾಗಿದೆ. ನೋಟರಿ ವಕೀಲರು ವಿವಾಹ ನೋಂದಣಿ ಮತ್ತು ವಿವಾಹ ವಿಚ್ಚೇದನದ ಅಫಿಡವಿಟ್‌ಗೆ ದೃಢೀಕರಣ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. […]

Continue Reading

ಮುಂಬೈ : ರಾಜಕೀಯ ರಕ್ತಪಾತದ ಭೀಕರ ಇತಿಹಾಸ.. ಛೋಟಾ ಶಕೀಲ್ ಟು ಲಾರೆನ್ಸ್ ಬಿಷ್ಣೋಯಿ.!

ಅಂಡರ್ ವರ್ಲ್ಡ್ ಪಾತಕಿಗಳ ಟ್ರಿಗ್ಗರ್ ಗೆ ಬಲಿಯಾದ್ರು ಡಜನ್ ಗಟ್ಟಲೆ ಶಾಸಕರು..27 ವರ್ಷಗಳ ನಂತರ ನಡೆಯಿತು ಮೊದಲ ಮರ್ಡರ್.! ಮುಂಬೈ ರಾಜಕಾರಣಕ್ಕೂ ಅಂಡರ್ ವರ್ಲ್ಡ್ ಗೂ ಗಳಸ್ಯ ಕಂಠಸ್ಯ ಸಂಬಂಧ. ಇಲ್ಲಿ ಪಾತಕ ಲೋಕಕ್ಕೆ ಬಿದ್ದ ಹೆಣಗಳಿಗೆ ಲೆಕ್ಕ ಇಲ್ಲ. ಅದರಲ್ಲೂ ಹೈ ಪ್ರೊಫೈಲ್ ರಾಜಕಾರಣಿಗಳು ಪಾತಕಿಗಳ ಟ್ರಿಗ್ಗರ್ ಗೆ ಬಲಿಯಾದ ರಕ್ತಸಿಕ್ತ ಇತಿಹಾಸವನ್ನೇ ಹೊಂದಿದೆ. ಡಜನ್ ಗಟ್ಟಲೆ ದೊಡ್ಡ ದೊಡ್ಡ ಜನ ನಾಯಕರು ಭೂಗತ ಪಾತಕಿಗಳ ಗುಂಡಿಗೆ ಬಲಿಯಾದ ಭೀಕರ ಇತಿಹಾಸವೇ ಇದೆ. 1960 ರ […]

Continue Reading

ಪ್ರಹ್ಲಾದ್ ಜೋಷಿ ಪೂರ್ವಜರು ಸ್ವಾತಂತ್ರ್ಯ ಪೂರ್ವದಲ್ಲಿ ಯಾರೊಂದಿಗಿದ್ದರೆಂದು ನೆನಪು ಮಾಡಿಕೊಳ್ಳಲಿ: ವೈ.ಬಿ.ಚಂದ್ರಕಾಂತ್

    ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಪೂರ್ವಜರು ಮುಸ್ಲೀಮರ ಮತ್ತು ಬ್ರಿಟೀಷರ ಆಡಳಿತದ ಅವಧಿಯಲ್ಲಿ ಯಾರ ಕೈ ಕೆಳಗೆ ದಾಸ್ಯ ಮಾಡುತ್ತಿದ್ದರು ಎನ್ನುವುದನ್ನು ಮೊದಲು ನೆನಪು ಮಾಡಿಕೊಂಡು ನಂತರ ಕಾಂಗ್ರೇಸ್ ಪಕ್ಷ ಮತ್ತು ಕಾಂಗ್ರೇಸ್ ಪಕ್ಷದ ನಾಯಕರ ಬಗ್ಗೆ ಮಾತನಾಡಬೇಕೆಂದು ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ತಿರುಗೇಟು ನೀಡಿದ್ದಾರೆ. ಪ್ರಹ್ಲಾದ್ ಜೋಷಿಯವರು ಒಬ್ಬ ಹಿರಿಯ ಮತ್ತು ಅನುಭವಿ ರಾಜಕಾರಣಿ ಮತ್ತು ಕೇಂದ್ರದ ಸಚಿವರಾಗಿ, ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ನಕಲಿ ಗಾಂಧಿ ಕುಟುಂಬವೆಂದು ಹೇಳಿರುವುದು, […]

Continue Reading

ಲಘು ವಾಹನಗಳಿಗೆ ಟೋಲ್ ಪ್ರೀ; ಇಂದು ಮಧ್ಯರಾತ್ರಿಯಿಂದಲೇ ಜಾರಿ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಏಕನಾಥ್ ಶಿಂಧೆ ಸರ್ಕಾರ ಸೋಮವಾರ ಮಹತ್ವದ ನಿರ್ಧಾರ ಕೈಗೊಂಡಿದೆ.ಮುಂಬೈಗೆ ಪ್ರವೇಶಿಸುವ ಎಲ್ಲಾ ಐದು ಟೋಲ್ ಬೂತ್‌ಗಳಲ್ಲಿ ಲಘು ಮೋಟಾರು ವಾಹನಗಳಿಗೆ ಟೋಲ್ ಶುಲ್ಕವನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಸರ್ಕಾರದ ಈ ಮಹತ್ವದ ನಿರ್ಧಾರ ಇಂದು ಮಧ್ಯರಾತ್ರಿ 12 ಗಂಟೆಯಿಂದಲೇ ಜಾರಿಗೆ ಬರಲಿದೆ. ಸರ್ಕಾರದ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಸಚಿವ ದಾದಾಜಿ ದಗ್ದು ಭೂಸೆ, ಮಧ್ಯರಾತ್ರಿಯ ನಂತರ ಲಘು ವಾಹನಗಳಿಗೆ ಟೋಲ್‌ನಿಂದ ವಿನಾಯಿತಿ ನೀಡಲಾಗುವುದು ಎಂದು ಹೇಳಿದ್ದಾರೆ. […]

Continue Reading

ಪೊಲೀಸ್ ಮಗ, ಲಾಯರ್, ಬಲಪಂಥೀಯರ ಭಾಯಿಜಾನ್; ಯಾರು ಈ ಡಾನ್ ಲಾರೆನ್ಸ್ ಬಿಷ್ಣೋಯ್..?

ಜೈಲಿನಲ್ಲೇ ಅಡ್ಡೆ.. ದೇಶಾದ್ಯಂತ 700 ಶಾರ್ಪ್ ಶೂಟರ್ ಗಳು..ಬೆಚ್ಚಿಬೀಳಿಸುತ್ತಿದೆ ನಟೋರಿಯಸ್ ಡಾನ್ ಅಸಲಿ ರೂಪ.! ಸಿದ್ದೀಕಿ ಹತ್ಯೆಯ ಹಿಂದೆ ಖ್ಯಾತ ಬಿಲ್ಡರ್ ಸುಪಾರಿ.? ಯಾವ ಸಿನೇಮಾ ಸ್ಟಾರ್ ಗೂ ಕಮ್ಮಿಯಿಲ್ಲದ ಲುಕ್! ಮೈ ನವಿರೇಳಿಸುವ, ಕುಣಿಯಬೇಕು ಎಂದು ಪ್ರೇರೇಪಿಸುವ ಪಂಜಾಬಿ ಹಾಡುಗಳ ಅಬ್ಬರ ಮಧ್ಯೆ ಹೂಡಿ ಧರಿಸಿ ಬಾಲಿವುಡ್ ಹೀರೋ ರೀತಿ ಎಂಟ್ರಿ ಕೊಡ್ತಾನೆ ಲಾರೆನ್ಸ್ ಬಿಷ್ಣೋಯಿ. ಇದು ಈತನ ಟ್ರೇಡ್ ಮಾರ್ಕ್. ನೋಡಲು ಸ್ಪುರದ್ರೂಪಿ ಯುವಕ. ಆದರೆ ಈತನದ್ದು ಖತರ್ನಾಕ್ ಕಾಯಕ! ಸುಪಾರಿ ಕಿಲ್ಲಿಂಗ್, ಮಾದಕ […]

Continue Reading