ರಾಹುಲ್‌ ಗಾಂಧಿಗೆ ಎದುರಾಗಿದೆ ಮತ್ತೊಂದು ಸಂಕಷ್ಟ.! 2018 ರಲ್ಲಿ ಅಮಿತ್‌ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ; ಕೋರ್ಟ್‌ ಸಮನ್ಸ್‌ ಜಾರಿ

ಕಾಂಗ್ರೆಸ್‌ ಅಧಿನಾಯಕ ರಾಹುಲ್‌ ಗಾಂಧಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 2018ರಲ್ಲಿ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣ ವಿಚಾರವಾಗಿ ರಾಹುಲ್‌ ಗಾಂಧಿಯವರಿಗೆ ಕೋರ್ಟ್‌ ಸಮನ್ಸ್‌ ನೀಡಿದೆ. 2018ರ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್‌ ಗಾಂಧಿಯವರು ಅಮಿತ್‌ ಶಾ ಅವರನ್ನು ಕೊಲೆಗಾರ (Murderer) ಅಂತ ಸಂಭೋದಿಸಿದ್ದರು. ಇದೇ ವಿಚಾರವಾಗಿ ಉತ್ತರಪ್ರದೇಶದ ಸುಲ್ತಾನ್‌ಪುರ್‌ನ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿದ್ದ ವಿಜಯ್‌ ಮಿಶ್ರ ಎಂಬವರು ರಾಹುಲ್‌ ವಿರುದ್ಧ ಎಂ.ಪಿ /ಎಂ.ಎಲ್.ಎ […]

Continue Reading

ವಿವಾಹಿತ ಮಹಿಳೆಯೊಬ್ಬಳಿಗೆ ತನ್ನ ಹಳೆಯ ಸ್ನೇಹಿತನಿಂದ ಹಲವು ಬಾರಿ ಚೂರಿ ಇರಿತ

ವಾದ ವಿವಾದದ ಹಿನ್ನೆಲೆಯಲ್ಲಿ 22 ವರ್ಷದ ವಿವಾಹಿತ ಮಹಿಳೆಯೊಬ್ಬಳಿಗೆ ತನ್ನ ಹಳೆಯ ಸ್ನೇಹಿತ ಹಲವು ಬಾರಿ ಚೂರಿಯಿಂದ ಇರಿದು ಆಕೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಈಶಾನ್ಯ ದೆಹಲಿ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ಭಾನುವಾರ ನಡೆದಿದೆ. ಸಂತ್ರಸ್ತೆಯನ್ನು ಶಾಸ್ತ್ರಿ ಪಾರ್ಕ್‌ನ ಹಸ್ಮತ್ ಜಹಾನ್ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯನ್ನು ಕೊಲೆ ಯತ್ನದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಬುಲಂದ್ ಮಸೀದಿ ಬಳಿ ಈ ಘಟನೆ ನಡೆದಿದ್ದು, ಬಿಹಾರದ ಕಿಶನ್‌ಗಂಜ್ ಮೂಲದ ಆರೋಪಿ ಶಾ […]

Continue Reading

ತಂದೆಯ ಉದ್ಯೋಗ ಪಡೆಯಲು ವಿವಾಹಿತ ಮಗಳೂ ಅರ್ಹಳು: ಮದ್ರಾಸ್ ಹೈಕೋರ್ಟ್

ವಿವಾಹಿತ ಮಗ ಮತ್ತು ವಿವಾಹಿತ ಮಗಳ ನಡುವೆ ಯಾವುದೇ ತಾರತಮ್ಯ ತೋರಲು ಸಾಧ್ಯವಿಲ್ಲ. ವೈವಾಹಿಕ ಸ್ಥಿತಿಯ ಆಧಾರದ ಮೇಲೆ ಮಗ ಮತ್ತು ಮಗಳ ನಡುವೆ ತಾರತಮ್ಯ ಮಾಡುವುದು ನಿರಂಕುಶತೆಯ ಪ್ರತೀಕ ಮತ್ತು ಸಮಾನತೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಮೂರ್ತಿ ಕಳೆದ ವಾರ ನೀಡಿದ ಮಹತ್ವಪೂರ್ಣ ಪ್ರಕರಣವೊಂದರ ತೀರ್ಪಿನ ಸಂದರ್ಭದಲ್ಲಿ ಹೇಳಿದ್ದಾರೆ. ಸೇವೆಯಲ್ಲಿದ್ದಾಗಲೇ ಮರಣ ಹೊಂದಿದ ಸರ್ಕಾರಿ ಉದ್ಯೋಗಿಯ ವಿವಾಹಿತ ಮಗ ತಂದೆಯ ಕೆಲಸವನ್ನು ಪಡೆಯಲು ಅರ್ಹನಾಗಿರುತ್ತಾರೆ. ಆದರೆ ಮೃತನ ವಿವಾಹಿತ ಮಗಳಿಗೆ ಅನುಕಂಪದ ಆಧಾರದ ಅಡಿಯಲ್ಲಿ […]

Continue Reading

ಜನರ ದಿಕ್ಕು ತಪ್ಪಿಸುವ ಜಾಹಿರಾತು ನೀಡಿದರೆ ಕಠಿಣ ಕ್ರಮ; ಒಂದು ಕೋಟಿ ರೂ.ದಂಡ, ಪತಾಂಜಲಿ ಸಂಸ್ಥೆಗೆ ಸುಪ್ರೀಂ ಖಡಕ್ ಎಚ್ಚರಿಕೆ

ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ತಮ್ಮ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಿಗೆ ತಪ್ಪು ಹಾಗೂ ಸುಳ್ಳು ಪ್ರಚಾರ ಮಾಡಿ,ಜನರ ದಿಕ್ಕು ತಪ್ಪಿಸುವ ಜಾಹಿರಾತು ನೀಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪತಂಜಲಿ ಮುಖ್ಯಸ್ಥ ಯೋಗ ಗುರು ರಾಮ್ ದೇವ್ ಒಡೆತನದ ಪತಾಂಜಲಿ ಆಯುರ್ವೇದ ಸಂಸ್ಥೆಗೆ ಸುಪ್ರೀಂಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ. ನ್ಯಾಯಮೂರ್ತಿ ಅಹಸಾಸುದ್ದೀನ್ ಅಮಾನುಲ್ಲಾ ಮತ್ತು ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ವಿಭಾಗೀಯ ಪೀಠ, ಜನರ ದಿಕ್ಕು ತಪ್ಪಿಸಲು ಸುಳ್ಳು ಹಾಗೂ ತಪ್ಪು ಮಾಹಿತಿಯ […]

Continue Reading

ಅಪ್ರಾಪ್ತ ಬಾಲಕನಿಂದ 10 ವರ್ಷ ಪ್ರಾಯದ ಬಾಲಕಿಯನ್ನು ಎತ್ತೊಯ್ದು ಅಮಾನುಷವಾಗಿ ಅತ್ಯಾಚಾರ

ಬಾಲಕಿ ತನ್ನ ಕುಟುಂಬಸ್ಥರ ಜತೆ ಮಾಳಿಗೆಯ ಮೇಲೆ ಮಲಗಿದ್ದಳು. ರಾತ್ರಿ ಸುಮಾರು 12 ಗಂಟೆ ಸುಮಾರಿಗೆ ನೆರೆಯ ಸ್ಲಂ ನಿವಾಸಿ ಬಾದಲ್ ಹುಡುಗಿಯನ್ನು ಎತ್ತಿಕೊಂಡು ಹೋಗಿ ಖಾಲಿಯಿದ್ದ ಪ್ಲಾಟ್ ಒಂದರಲ್ಲಿ ಕುಕೃತ್ಯವನ್ನು ಎಸಗಿದ್ದಾನೆ. ಬಾಲಾಪರಾಧಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಜಿಲ್ಲೆಯ ಲೋನಿ ಕ್ಷೇತ್ರದಲ್ಲಿ ಕಳವಳಕಾರಿ ಘಟನೆಯೊಂದು ನಡೆದಿದ್ದು, ಮಾಳಿಗೆಯ ಮೇಲೆ ಮಲಗಿದ್ದ ನೆರಮನೆಯ ನಿವಾಸಿ 10ರ ಪ್ರಾಯದ ಬಾಲಕಿಯನ್ನು ಅಪಹರಿಸಿದ 16 ವರ್ಷದ ಬಾಲಕನೊಬ್ಬ ಆಕೆಯ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿದ್ದಾನೆ. ಮಗುವಿನ ಅಳುವಿನ […]

Continue Reading

ಅನ್ಯ ರಾಜ್ಯಗಳಲ್ಲಿ FIR ಆದರೂ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಬಹುದು: ಸುಪ್ರೀಂ ಕೋರ್ಟ್ ತೀರ್ಪು

ಅನ್ಯ ರಾಜ್ಯಗಳಲ್ಲಿ ಎಫ್ ಐ ಆರ್ ದಾಖಲಾಗಿದ್ದರೂ ಯಾವುದೇ ರಾಜ್ಯದ ಹೈಕೋರ್ಟ್ ಹಾಗೂ ಸೆಷನ್ಸ್ ನ್ಯಾಯಾಲಯಗಳು ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ನಾಗರಿಕರ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಸಾಂವಿಧಾನಿಕ ಅಗತ್ಯವನ್ನು ಪರಿಗಣಿಸಿ ಅತಿ ಅಪರೂಪದ ಸಂದರ್ಭಗಳಲ್ಲಿ ಕೆಲವು ಸೀಮಿತ ಷರತ್ತುಗಳೊಂದಿಗೆ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಬಹುದಾಗಿದೆ ಎಂದು ನ್ಯಾಯಮೂರ್ತಿ ಬಿ.ವಿ ನಾಗರತ್ನ ಹಾಗೂ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ ಹೇಳಿದೆ. “ಆರೋಪಿಗೆ ಬಂಧನ ರಕ್ಷಣೆ […]

Continue Reading

ಆಧಾರ್ ಆಫ್ ಡೇಟ್ ಗೆ ಡಿಸೆಂಬರ್ 14 ಕೊನೆಯ ದಿನ. ತಪ್ಪಿದಲ್ಲಿ ಭಾರಿ ದಂಡ ಸಾಧ್ಯತೆ

10 ವರ್ಷ ಅವದಿ ಮುಗಿದ ಆಧಾರ್ ಕಾರ್ಡ್ ಗೆ ದಾಖಲಾತಿ ಅಪ್ಲೋಡ್ ಮಾಡಿ ಆಧಾರ್ ಕಾರ್ಡ್ ನವೀಕರಿಸಲು ಡಿಸೆಂಬರ್ 14 ಕೊನೆಯ ದಿನಾಂಕ ಎಂದು ಆಧಾರ್ ಪ್ರಾಧಿಕಾರ ತಿಳಿಸಿದೆ. ತಪ್ಪಿದಲ್ಲಿ ಆಧಾರ್ ಕಾರ್ಡ ನಿಷ್ಕ್ರೀಯಗೊಳ್ಳಲಿದೆ ಎಂದು ಉಲ್ಲೇಖಿಸಲಾಗಿದೆ. ಆಧಾರ್ ಕಾರ್ಡ್ ಹೊಂದಿರುವ ನಾಗರಿಕರು ರಾಜ್ಯ ಮತ್ತು ಕೇಂದ್ರ ಸರಕಾರದಿಂದ ವಿವಿಧ ಯೋಜನೆಯಡಿ ಸೌಲಭ್ಯ ಪಡೆಯಲು 10 ವರ್ಷಕ್ಕೆ ಒಮ್ಮೆ ತಮ್ಮ ಆಧಾರ್ ಕಾರ್ಡ್ ನಲ್ಲಿ ದಾಖಲಾಗಿರುವ ಗುರುತಿನ ವಿವರ ಮತ್ತು ವಿಳಾಸದ ಮಾಹಿತಿಯನ್ನು ನವೀಕರಿಸುವುದು ಕಡ್ಡಾಯವಾಗಿರುತ್ತದೆ. ಇದರ […]

Continue Reading

ಕಾಶ್ಮೀರಿ ಪಂಡಿತರೊಬ್ಬರ ಅಂತಿಮ ವಿಧಿಗಳನ್ನು ನೆರೆಹೊರೆಯ ಮುಸ್ಲಿಮರು ನೆರವೇರಿಸಿ ಕೋಮು ಸೌಹಾರ್ದತೆಯ ಸಂಪ್ರದಾಯವನ್ನು ನೆನಪಿಸಿದ್ದಾರೆ.

ಮಂಗಳವಾರ ಸಂಜೆ ನಿಧನರಾದ ಕಾಶ್ಮೀರಿ ಪಂಡಿತರೊಬ್ಬರ ಅಂತಿಮ ವಿಧಿಗಳನ್ನು ಇಲ್ಲಿನ ನೆರೆಹೊರೆಯ ಮುಸ್ಲಿಮರು ನೆರವೇರಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿನ ಕೋಮು ಸೌಹಾರ್ದತೆಯ ಸಂಪ್ರದಾಯವನ್ನು ನೆನಪಿಸಿದ್ದಾರೆ. ಅಶೋಕ್ ಕುಮಾರ್ ವಾಂಗೂ ಅವರು ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಪಾಂಪೋರ್ ಪಟ್ಟಣದ ಡ್ರಂಗಬಾಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು ಪಾರ್ಥಿವ ಶರೀರವನ್ನು ಜಮ್ಮುವಿಗೆ ಕೊಂಡೊಯ್ಯುವ ಬದಲು ಕಾಶ್ಮೀರ ಪಂಡಿತ ಸಮುದಾಯವು ಇಲ್ಲಿಯೇ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ನಿರ್ಧರಿಸಿತು. ಈ ಸಂದರ್ಭ ನೆರೆಯ ಮುಸ್ಲಿಂ ಸಮುದಾಯದ ಜನರು ಪಂಡಿತರ […]

Continue Reading

ವೈದ್ಯಕೀಯ ಸೀಟುಗಳ ಮೇಲೆ ಮಿತಿ ಹೇರುವ ಆಯೋಗದ ನಿಲುವಿಗೆ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆಯೋಗ ತನ್ನ ನಿರ್ಧಾರವನ್ನು ತಡೆಹಿಡಿದಿದೆ

ದಕ್ಷಿಣ ರಾಜ್ಯಗಳಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿ ಹೊಸ ವೈದ್ಯಕೀಯ ಸೀಟುಗಳ ಸಂಖ್ಯೆ ಮೇಲೆ ಮಿತಿ ಹೇರುವ ಕುರಿತ ತನ್ನ ನಿರ್ಧಾರವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಬುಧವಾರ ತಡೆಹಿಡಿದಿದೆ. ಹೀಗಾಗಿ, ಕರ್ನಾಟಕ, ತಮಿಳುನಾಡು ಮತ್ತಿತರ ರಾಜ್ಯಗಳಿಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವ ಆಯ್ಕೆ ಲಭಿಸಿದಂತಾಗಿದೆ. ‘ಪ್ರತಿ 10 ಲಕ್ಷ ಜನಸಂಖ್ಯೆಗೆ 100 ಎಂಬಿಬಿಎಸ್‌ ಸೀಟುಗಳು ಇರಬೇಕು ಎಂಬ ತನ್ನ ಈ ಹಿಂದಿನ ನಿರ್ಧಾರವನ್ನು 2025-26ನೇ ಶೈಕ್ಷಣಿಕ ವರ್ಷದಿಂದ ಅನುಷ್ಠಾನಗೊಳಿಸಲಾಗುತ್ತದೆ’ ಎಂದು ಆಯೋಗವು ತನ್ನ ಆದೇಶದಲ್ಲಿ […]

Continue Reading

ಒಬೆರಾಯ್ ಗ್ರೂಪ್‌ನ ಅಧ್ಯಕ್ಷ, ಒಬೆರಾಯ್ ಹೊಟೇಲ್ ಮಾಲಿಕ ಆರ್‌.ಎಸ್ ಒಬೆರಾಯ್ ನಿಧನ.

ಒಬೆರಾಯ್ ಗ್ರೂಪ್‌ನ ಅಧ್ಯಕ್ಷ ಆರ್‌.ಎಸ್ ಒಬೆರಾಯ್ ಇಂದು ಬೆಳಿಗ್ಗೆ ನಿಧನರಾದರು. PRS ಒಬೆರಾಯ್ ಭಾರತದಲ್ಲಿ ಹೋಟೆಲ್ ಉಧ್ಯಮದ ರೂಪವನ್ನು ಬದಲಾಯಿಸುವಲ್ಲಿ ಹೆಸರುವಾಸಿಯಾಗಿದ್ದರು. ದಿ ಒಬೆರಾಯ್ ಗ್ರೂಪ್‌ನ ಪ್ರಮುಖ ಕಂಪನಿಯಾದ EIH ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದರು. ಅವರು EIH ಲಿಮಿಟೆಡ್‌ನ ಪ್ರಮುಖ ಷೇರುದಾರರಾದ ಒಬೆರಾಯ್ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರೂ ಆಗಿದ್ದರು. ಹಲವಾರು ದೇಶಗಳಲ್ಲಿ ಐಷಾರಾಮಿ ಹೋಟೆಲ್‌ಗಳ ನಿರ್ವಹಣೆಗೆ ನಾಯಕತ್ವವನ್ನು ಒದಗಿಸುವುದರ ಜೊತೆಗೆ, ಒಬೆರಾಯ್ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳ ಅಭಿವೃದ್ಧಿಯ ಪ್ರವರ್ತಕರಲ್ಲಿ PRS ಒಬೆರಾಯ್ ಪ್ರಮುಖ ಪಾತ್ರ ವಹಿಸಿದ್ದಾರೆ. […]

Continue Reading