ಅಮೇರಿಕ: ದೊಡ್ಡಣ್ಣನ ಮತ್ತೊಂದು ಬ್ಯಾಂಕ್‌ ಪತನ: ವಿಶ್ವದ ಬಲಿಷ್ಠ ರಾಷ್ಟ್ರಕ್ಕೆ ಶಾಕ್.!

ವಿಶ್ವದ ಅತೀ ಬಲಿಷ್ಠ ಆರ್ಥಿಕ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರುವ ಅಮೆರಿಕದ ಬ್ಯಾಂಕಿಂಗ್‌ ಕ್ಷೇತ್ರ ಮತ್ತೊಮ್ಮೆ ತಲ್ಲಣಗೊಂಡಿದೆ. ಎರಡು ಪ್ರತಿಷ್ಠಿತ ಬ್ಯಾಂಕುಗಳು ಮುಳುಗಡೆಯಾಗಿ ಎರಡು ತಿಂಗಳು ಪೂರ್ಣಗೊಳ್ಳುವ ಮುನ್ನವೇ ಮತ್ತೊಂದು ಜನಪ್ರಿಯ ಬ್ಯಾಂಕ್‌ ಪತನಗೊಂಡಿದೆ. ಅಮೆರಿಕದ ಫಸ್ಟ್‌ ರಿಪಬ್ಲಿಕ್‌ ಬ್ಯಾಂಕ್‌ ದಿವಾಳಿ ಅಂಚಿಗೆ ಸಿಲುಕಿದ ಹಿನ್ನೆಲೆಯಲ್ಲಿ ಕ್ಯಾಲಿರ್ಫೋನಿಯಾದ ಹಣಕಾಸು ಸಂರಕ್ಷಣೆ ಅದನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದರ ಬೆನ್ನಲ್ಲೇ, ಸಂಕಷ್ಟಕ್ಕೆ ಸಿಲುಕಿದ್ದ ಬ್ಯಾಂಕನ್ನು ಜೆಪಿ ಮೊರ್ಗಾನ್‌ ಚೇಸ್‌ ಅಂಡ್‌ ಕಂಪನಿಗೆ ಮಾರಾಟ ಮಾಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ಫಸ್ಟ್‌ ರಿಪಬ್ಲಿಕ್‌ […]

Continue Reading

ಜುಬೈಲ್ ನಲ್ಲಿ ನಡೆದ ಅಪಘಾತದಲ್ಲಿ ಕಾಪು ನಿವಾಸಿ ರಿಯಾಝ್ ಕಾಪು ಮೃತ್ಯು

ಕಾರು ಅಪಘಾತದಲ್ಲಿ ಗಾಯಗೊಂಡು ಗಂಭೀರವಸ್ಥೆಯಲ್ಲಿದ್ದ ಉಡುಪಿ ಜಿಲ್ಲೆಯ ಕಾಪು ನಿವಾಸಿ,ರಿಯಾಝ್ ಕಾಪು ಜುಬೈಲ್ ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಿಯಾಝ್ ಅವರು ಮಾರ್ಚ್ 25 ರಂದು ಜುಬೈಲ್ ನಲ್ಲಿ ರಸ್ತೆ ಅಪಘಾತಕ್ಕಿಡಾಗಿ ಗಂಭೀರವಾದ ಗಾಯದಿಂದ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು.ಯಾವುದೇ ಚೇತರಿಕೆ ಕಾಣದೆ ಇಂದು ರಿಯಾಝ್ ಕಾಪುರವರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.ರಿಯಾಝ್ ರವರ ಅಂತ್ಯಸಂಸ್ಕಾರ ಸೌದಿ ಅರೇಬಿಯಾದಲ್ಲೆ ನಡೆಯುವ ಸಾಧ್ಯತೆ ಇದೆ.

Continue Reading

ನೀಲಿ ಚಿತ್ರ ತಾರೆಗೆ 1.30 ಲಕ್ಷ ಡಾಲರ್ ಕಳ್ಳ ಹಣ ನೀಡಿದ ಟ್ರಂಪ್;ಬಂಧನದ ಭೀತಿಯಲ್ಲಿ ಅಮೇರಿಕದ ಮಾಜಿ ಅಧ್ಯಕ್ಷ.!

ಕಳೆದ ಚುನಾವಣೆಯಲ್ಲಿ ಸೋಲಿನ ಬಳಿಕ ಮತ್ತೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಣಕ್ಕಿಳಿಯಲು ಬಯಸಿರುವ ಡೊನಾಲ್ಡ್ ಟ್ರಂಪ್, ನೀಲಿ ಚಿತ್ರ ತಾರೆಗೆ ಕಳ್ಳ ಹಣ ನೀಡಿದ ಸಂಗತಿ ಸಂಚಲನ ಮೂಡಿಸಿದೆ. 2016ರ ಅಮೆರಿಕ ಚುನಾವಣೆಗೂ ಮುನ್ನ ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಅವರಿಗೆ ಗುಟ್ಟಾಗಿ ಹಣ ನೀಡಿದ ಅಪರಾಧ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬಂಧನ ಭೀತಿ ಎದುರಾಗಿದೆ. ತಮ್ಮ ಹಗರಣವೊಂದರಿಂದ ಬಚಾವಾಗಲು ಟ್ರಂಪ್ ಅವರು ಸ್ಟಾರ್ಮಿ ಅವರಿಗೆ ಗೋಪ್ಯವಾಗಿ ದುಡ್ಡು ಕೊಟ್ಟಿದ್ದರು ಎಂದು […]

Continue Reading

ಚೀನಾದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ‘ಫಾಲ್‌ ಇನ್‌ ಲವ್‌’ ವೀಕ್‌ ಆಫ್:‌ ಪ್ರೀತಿಸಲು ವಾರಪೂರ್ತಿ ಕಡ್ಡಾಯ ರಜೆ.!

ಜನಸಂಖ್ಯೆ ನಿಯಂತ್ರಣದಿಂದ ಕಂಗಾಲದ ಚೀನಾ. ಚೀನಾದಲ್ಲಿ ಜನಸಂಖ್ಯಾ ಕಾಳಜಿ ತನ್ನ ಹಂತವನ್ನು ತಲುಪಿದ್ದು, ಜನನ ಪ್ರಮಾಣವನ್ನು ಹೆಚ್ಚಿಸಲು ಅನೇಕ ತಜ್ಞರು ಸರ್ಕಾರಕ್ಕೆ ಹಲವಾರು ಶಿಫಾರಸುಗಳನ್ನು ಮಾಡಿದ್ದಾರೆ. ಇದೀಗ ಚೀನಾದ ಕೆಲವು ಕಾಲೇಜುಗಳು ಕೂಡ ಕೂಡ,ಈ ರಾಷ್ಟ್ರೀಯ ಕಾಳಜಿಯನ್ನು ಬೆಂಬಲಿಸಲು ವಿಶಿಷ್ಟವಾದ ಯೋಜನೆಯನ್ನು ಜಾರಿಗೊಳಿಸಿವೆ. ಚೀನಾದ ಒಂಬತ್ತು ಕಾಲೇಜುಗಳು ಏಪ್ರಿಲ್‌ನಲ್ಲಿ ವಿದ್ಯಾರ್ಥಿಗಳಿಗೆ “ಫಾಲ್‌ ಇನ್‌ ಲವ್” ಹೆಸರಿನ ಒಂದು ವಾರದ ರಜೆಯನ್ನು ಘೋಷಿಸಿವೆ. ಎನ್‌ಬಿಸಿ ನ್ಯೂಸ್ ಪ್ರಕಾರ, ಫ್ಯಾನ್ ಮೇ ಎಜುಕೇಶನ್ ಗ್ರೂಪ್ ನಡೆಸುತ್ತಿರುವ ಒಂಬತ್ತು ಕಾಲೇಜುಗಳಲ್ಲಿ ಒಂದಾದ […]

Continue Reading

ಉಪವಾಸ ಕ್ಯಾನ್ಸರ್ ವೈರಾಣು ವಿರುಧ್ದ ಹೋರಾಡುತ್ತೆ: ಜಪಾನ್ ನೋಬಲ್ ವಿಜೇತ ವಿಜ್ಞಾನಿ ಯೋಶಿನೋರಿ ಓಹ್ಸುಮಿ

ಜಪಾನಿನ ನೊಬೆಲ್ ಶಾಂತಿ  ವಿಜೇತ ವಿಜ್ಞಾನಿ, ಯೋಶಿನೋರಿ ಓಹ್ಸುಮಿ ರಂಜಾನ್ ಸಮಯದಲ್ಲಿ ಉಪವಾಸ ಮಾಡುವುದರಿಂದ ನಮ್ಮ ದೇಹವು ಕ್ಯಾನ್ಸರ್ ವಿರುದ್ಧ ಹೋರಾಡಬಹುದು ಎಂದು ಸೂಚಿಸಿದ್ದಾರೆ.ಜಪಾನಿನ ವಿಜ್ಞಾನಿ ಯೋಶಿನೋರಿ ಜೀವಕೋಶಗಳು ಅದರ ವಿಷಯವನ್ನು ಹೇಗೆ ಮರುಬಳಕೆ ಮಾಡುತ್ತವೆ ಎಂಬುದನ್ನು ಕಂಡುಹಿಡಿಯುವಲ್ಲಿ ಕೆಲಸ ಮಾಡುತ್ತಿದ್ದಾರೆ, ಈ ಪ್ರಕ್ರಿಯೆಯನ್ನು ಆಟೊಫ್ಯಾಜಿ ಎಂದು ಕರೆಯಲಾಗುತ್ತದೆ, ಇದನ್ನು ಗ್ರೀಕ್ ಭಾಷೆಯಲ್ಲಿ ಸ್ವಯಂ-ತಿನ್ನುವುದು ಎಂದೂ ಕರೆಯುತ್ತಾರೆ. ಜೀವಕೋಶಗಳು ಪ್ರೋಟೀನ್ ಮತ್ತು ಎಲ್ಲಾ ಅನಿವಾರ್ಯವಲ್ಲದ ಘಟಕಗಳನ್ನು ಒಡೆದು ಶಕ್ತಿಗಾಗಿ ಇವೆಲ್ಲವನ್ನೂ ಮರುಬಳಕೆ ಮಾಡಿದಾಗ ಇದು ಒಂದು ನಿರ್ಣಾಯಕ […]

Continue Reading