ಮಂಗಳೂರು: ಕುತ್ತಾರು ಬಳಿ ಮರ ಬಿದ್ದು ಮನೆ ಗೋಡೆ ಕುಸಿತ, ಒಂದೇ ಕುಟುಂಬದ ನಾಲ್ವರು ಬಲಿ

ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮದ ಕುತ್ತಾರು ಮದನಿ ನಗರದಲ್ಲಿ ಮಳೆಗೆ ಮನೆ ಕುಸಿದು ಬಿದ್ದು ಒಂದೇ ಕುಟುಂದ ನಾಲ್ವರು ಮೃತಪಟ್ಟ ಘಟನೆ ನಡೆದಿದೆ. ಮೃತ ಪಟ್ಟವರನ್ನು ಯಾಸಿರ್ (45), ಅವರ ಪತ್ನಿ ಮರಿಯಮ್ಮ(40) ಹಾಗೂ ಅವರ ಮಕ್ಕಳಾದ ರಿಯಾನ, ರಿಫಾನ ಎಂದು ಗುರುತಿಸಲಾಗಿದೆ. ಘಟನೆಯ ಮಾಹಿತಿ ತಿಳಿದ ಸ್ಥಳೀಯರು ಮೂವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬಾಲಕಿ ಮೃತದೇಹಕ್ಕಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.

Continue Reading

ಕಸಬಾ ಬೆಂಗ್ರೆ ಪ್ರಾಥಮಿಕ ಶಾಲೆಯ ಆವರಣಗೋಡೆಯ ಸಮಸ್ಯೆ ಮತ್ತು ಕೊಠಡಿಗಳ ದುರಸ್ತಿಗೆ ಶೀಘ್ರ ಪರಿಹಾರ ಕಲ್ಪಿಸಿಕೊಡಲು ಡಿವೈಎಪ್ಐ ಬೇಂಗ್ರೆ ಘಟಕದಿಂದ ಮನವಿ

ಕಸಬಾ ಬೆಂಗ್ರೆ: DYFI ಬೆಂಗ್ರೆ ಗ್ರಾಮ ಸಮಿತಿ ಮಂಗಳೂರು ತಾಲೂಕಿನ ಬೆಂಗ್ರೆ ಕಸಬಾ ಸರಕಾರಿ ಪ್ರಾಥಮಿಕ ಶಾಲೆಯ ಅವ್ಯವಸ್ಥೆಯ ಕುರಿತು ಕಳೆದ ಮೂರು ವರ್ಷಗಳಿಂದ ಶಾಲೆಯ ಆವರಣಗೋಡೆಯ ಸಮಸ್ಯೆ ಕುರಿತು ಶಾಲಾ ಸಮಿತಿಯಿಂದ ಸಂಭಂದಿಸಿದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಲವು ಮನವಿಗಳನ್ನು ನೀಡಿದರು ಯಾವುದೇ ಕಾಮಗಾರಿ ಪ್ರಾರಂಭವಾಗಿರುವುದಿಲ್ಲ. ಕಳೆದ ಎರಡು ವರ್ಷಗಳಿಂದ ಆವರಣಗೋಡೆಯ ಭಾಗಗಳು ಬೀಳುತಿದ್ದು ಮೊನ್ನೆ ಶನಿವಾರ ಮತ್ತೆ ಮಕ್ಕಳಿರದ ಸಂಜೆ ಸಂಧರ್ಭದಲ್ಲಿ ಗೋಡೆ ಭಾಗ ಬಿದ್ದಿದೆ. ಅಪಾಯ ಸ್ಥಿತಿಯಲ್ಲಿರುವ ಆವರಣಗೋಡೆಯ ಪುನರ್ನಿರ್ಮಾಣ ಶಾಲಾ ತರಗತಿ […]

Continue Reading

ಉಡುಪಿ: ಜೈಲ್ ಅಧಿಕಾರಿಗಳ ಮೇಲೆ ಗರುಡ ಗ್ಯಾಂಗ್ ಆರೋಪಿಗಳಿಂದ ಹಲ್ಲೆ, ಪ್ರಕರಣ ದಾಖಲು

ಉಡುಪಿ: ಉಡುಪಿ ನಗರದ ಪ್ರಮುಖ ರಸ್ತೆಯಲ್ಲಿ ತಲವಾರ್ ದಾಳಿ ನಡೆಸಿ ಬಂಧಿತರಾಗಿರುವ ಗರುಡ ಗ್ಯಾಂಗ್ ನ ಆರೋಪಿಗಳು ಜೈಲು ಅಧಿಕಾರಿ ಹಾಗೂ ಸಿಬಂದಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಉಡುಪಿ ತಾಲೂಕಿನ ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ವಿಚಾರಣಾ ಕೈದಿಗಳಾದ ಮುಹಮ್ಮದ್ ಆಶಿಕ್ ಮತ್ತು ಮಹಮ್ಮದ್ ಸಕ್ಲೇನ್ ಜಿಲ್ಲಾ ಕಾರಾಗೃಹ ಅಧೀಕ್ಷಕ, ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಕರೆ ಮಾಡಲು ತಡವಾಯಿತೆಂದು ಜೈಲರ್ ಎಸ್.ಎ.ಶಿರೋಳಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಿಲ್ಲಾ ಕಾರಾಗೃಹ ಅಧೀಕ್ಷಕ ಸಿದ್ಧರಾಮ ಬಿ.ಪಾಟೀಲ್ ಹಾಗೂ […]

Continue Reading

ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆಯನ್ನು ಶಾಶ್ವತವಾಗಿ ತಡೆದು, ದ್ವೀಪವಾಸಿಗಳ ಬದುಕಿನ ರಕ್ಷಣೆಗೆ ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳಿಂದ ಜಿಲ್ಲಾಧಿಕಾರಿಗಳ ಭೇಟಿ

ಪಾವೂರು ಉಳಿಯ ದ್ವೀಪದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ಶಾಶ್ವತವಾಗಿ ತಡೆಗಟ್ಟಬೇಕು ಹಾಗೂ ಅಲ್ಲಿನ ದ್ವೀಪವಾಸಿಗಳ ಬದುಕನ್ನು ರಕ್ಷಿಸಬೇಕೆಂದು ಒತ್ತಾಯಿಸಿ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್(ರಿ) ಹಾಗೂ ದ.ಕ.ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ಆಶ್ರಯದಲ್ಲಿ ಇಂದು(24-06-2024) ದ.ಕ.ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಲಾಯಿತು. ಉಳ್ಳಾಲ ತಾಲೂಕು, ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಪಾವೂರು ಉಳಿಯ ದ್ವೀಪ(ಕುದ್ರು) ದಲ್ಲಿ ಯಾವುದೇ ತರಹದ ಮರಳುಗಾರಿಕೆಗೆ ಅನುಮತಿ ಇಲ್ಲದಿದ್ದರೂ ಬಲಾಢ್ಯ ಮರಳು ಮಾಫಿಯಾ ಅಕ್ರಮವಾಗಿ ಮರಳುಗಾರಿಕೆ ವ್ಯಾಪಕವಾಗಿ ನಡೆಸುತ್ತಿರುವುದರಿಂದ ಇಡೀ […]

Continue Reading

ಕಾಂಕ್ರೀಟೀಕರಣಗೊಂಡ ರಸ್ತೆಯನ್ನು ಮತ್ತೆ, ಮತ್ತೆ ಅಗೆಯುವುದು ಭ್ರಷ್ಟಾಚಾರದ ವಿರಾಟ್ ಸ್ವರೂಪ: CPIM ಗಂಭೀರ ಆರೋಪ

ಮಂಗಳೂರು ನಗರದಾದ್ಯಂತ ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ಒಂದೆರಡು ತಿಂಗಳಲ್ಲಿ ಮತ್ತೆ ಅಗೆಯುವುದು ಬಿಜೆಪಿ ಆಡಳಿತದ ಭ್ರಷ್ಟಾಚಾರದ ವಿರಾಟ್ ಸ್ವರೂಪವಾಗಿದೆ ಎಂದು CPIM ದ.ಕ.ಜಿಲ್ಲಾ ಸಮಿತಿಯು ಗಂಭೀರ ಆರೋಪವನ್ನು ವ್ಯಕ್ತಪಡಿಸಿದೆ._ ವಿವಿಧ ಯೋಜನೆಗಳ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಯನ್ನು ಅಭಿವೃದ್ದಿಯ ಹೆಸರಿನಲ್ಲಿ ಕೇವಲ ರಸ್ತೆ ಕಾಮಗಾರಿಗಾಗಿಯೇ ವಿನಿಯೋಗಿಸಲಾಗುತ್ತದೆ.40 ಪರ್ಸೆಂಟ್ ಕಮಿಷನ್ ಹೆಸರಿನಲ್ಲಿ ಕೋಟ್ಯಾಂತರ ಹಣವನ್ನು ನುಂಗಿ ಹಾಕಲು ಏಕೈಕ ಸಾಧನ ರಸ್ತೆ ಅಭಿವೃದ್ಧಿಯಾಗಿದೆ .ರಸ್ತೆಗೆ ಕಾಂಕ್ರೀಟ್ ಮಾಡುವ ಸಂದರ್ಭದಲ್ಲಿ ರಸ್ತೆಯ ಅಡಿ ಭಾಗದಲ್ಲಿರುವ ಕೇಬಲ್,ನೀರಿನ ಪೈಪ್ ಲೈನ್,ಚರಂಡಿ ಸೇರಿದಂತೆ ಎಲ್ಲವುಗಳನ್ನು […]

Continue Reading

ಮಂಗಳೂರು “ಸ್ಮಾರ್ಟ್ ಸಿಟಿ” ಕರ್ಮಕಾಂಡ; ಕಳಪೆ ಕಾಮಗಾರಿ, ಹಣಕಾಸು ದುರುಪಯೋಗ, ಭ್ರಷ್ಟಾಚಾರ. “ಯಾರದೊ ದುಡ್ಡು ಯಲ್ಲಮ್ಮನ ಜಾತ್ರೆ”: ಮುನೀರ್ ಕಾಟಿಪಳ್ಳ

ಚೇಂಬರ್ ಗುಂಡಿಗೆ ಬಿದ್ದು ಕೈಕಾಲು ಮುರಿದವರನ್ನು ಎತ್ತಿಕೊಂಡು ನಗರ ಪಾಲಿಕೆ ಮುಂಭಾಗ ಧರಣಿ ಕೂರುವುದು ಅನಿವಾರ್ಯ ಅಷ್ಟೆ.. ಬಿಜೆಪಿ ಆಡಳಿತದ ಮಂಗಳೂರು ನಗರದಲ್ಲಿ “ಸ್ಮಾರ್ಟ್ ಸಿಟಿ” ಯೋಜನೆಯ ಕರ್ಮಕಾಂಡ ಒಂದೊಂದಾಗಿ ಹೊರಬರುತ್ತಿದೆ. ಕಳಪೆ ಕಾಮಗಾರಿ, ಹಣಕಾಸು ದುರುಪಯೋಗ, ಭ್ರಷ್ಟಾಚಾರದಿಂದ ಇಡೀ ಯೋಜನೆ ಹಳ್ಳಹಿಡಿದಿದೆ. “ಯಾರದೊ ಕಾಸು ಯಲ್ಲಮ್ಮನ ಜಾತ್ರೆ” ಎಂಬಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಇದು ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಿಂದ ವಾಣಿಜ್ಯ ಕೇಂದ್ರ ಹಳೆ ಬಂದರಿಗೆ ಸಾಗುವ ನೆಲ್ಲಿಕಾಯಿ ರಸ್ತೆ. ಈ ರಸ್ತೆಯನ್ನು ಒಟ್ಟಾರೆ ದುಡ್ಡು ಸುರಿದು […]

Continue Reading

ಜಿಲ್ಲಾ ಕಾಂಗ್ರೆಸ್ ನ್ನು ಲಗಾಡಿ ತೆಗೆದುಬಿಟ್ರಾ ಡಿಸಿಸಿ ಅಧ್ಯಕ್ಷರು.!

ಡಿಸಿಸಿ ಅಧ್ಯಕ್ಷರ ಅಂಧಾ ದರ್ಭಾರ್ ಗೆ ಬೀಳುತ್ತಾ ಬ್ರೇಕ್.! ಕಳೆದ ವಿಧಾನಸಭಾ ಚುನಾವಣೆಯಲ್ಲಿ ಫೀನಿಕ್ಸ್ ನಂತೆ ಎದ್ದು ಬಂದಿದ್ದ ರಾಜ್ಯ ಕಾಂಗ್ರೆಸ್, ಲೋಕಸಭಾ ಚುನಾವಣೆಯಲ್ಲಿ ಡಬಲ್ ಡಿಜಿಟ್ ತಲುಪಲಾಗದಿದ್ದರೂ ಸಮಾಧಾನಕರ ರೀತಿಯ ಪ್ರದರ್ಶನವಂತೂ ತೋರಿದೆ. ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ರವರ ಕೆಲವೊಂದು ಚಾಣಾಕ್ಷ ರೀತಿಯ ತಂತ್ರಗಳು, ಕೆಪಿಸಿಸಿ ಪದಾಧಿಕಾರಿಗಳ ಸಂಘಟನಾತ್ಮಕ ತಂಡಗಳ ಕಾರ್ಯ ನಿರ್ವಹಣೆ ಕಾಂಗ್ರೆಸ್ ಪಕ್ಷ ಪುಟಿದೇಳಲು ತಮ್ಮದೇ ಆದ ಕೊಡುಗೆಯನ್ನು ನೀಡಿರುವುದನ್ನು ಅಲ್ಲಗಳೆಯಲಾಗದು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ಇನ್ನೂ […]

Continue Reading

ಮಂಗಳೂರಿನ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಛೇರಿಯಲ್ಲಿ ಭರ್ಜರಿ ಬಾಡೂಟ, ಸರ್ಕಾರಿ ಇಲಾಖೆಯ ವಾಹನದಲ್ಲೇ ಅಡ್ಯಾರ್ ಫಾಲ್ಸ್ ಟ್ರಿಪ್..

ಸರ್ಕಾರಿ ಅಧಿಕಾರಿಗಳ ಅಂಧಾ ದರ್ಬಾರ್ ಗೆ ಕೊನೆಯಿಲ್ಲವೇ.? ಮಂಗಳೂರು: ದ.ಕ.ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ-ನಿರ್ದೇಶಕರ ಕಛೇರಿಯಲ್ಲಿನ ಅಧಿಕಾರಿಗಳಿಗೆ, ಸಿಬ್ಬಂದಿಗಳ ಆಟಕ್ಕೆ ಅಂಕುಶ ಹಾಕೋರಿಲ್ಲವೇ.? ಎಂದು ಜನ ಪ್ರಶ್ನಿಸುತ್ತಿದ್ದಾರೆ. ಸರ್ಕಾರಿ ಕಛೇರಿಯಲ್ಲೇ ಭರ್ಜರಿ ಬಾಡೂಟ ಏರ್ಪಡಿಸಿ ಬಳಿಕ ಸರ್ಕಾರಿ ವಾಹನದಲ್ಲೇ ಅಧಿಕಾರಿಗಳು, ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರುಹಾಜರಾಗಿ ಅಡ್ಯಾರ್ ಫಾಲ್ಸ್ ಗೆ ಜಾಲಿ ಟ್ರಿಪ್ ಹೋಗಿರುವುದು ನಾಗರಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿನ ಉಪನಿರ್ದೇಶಕಿ, ಮ್ಯಾನೇಜರ್ ವಿರುದ್ಧ ಇದೇ ಮೊದಲಲ್ಲ ಸಾರ್ವಜನಿಕ ಆರೋಪಗಳು ಪದೇ ಪದೇ ಕೇಳಿಬರುತ್ತಿವೆ. ಜಿಲ್ಲಾ […]

Continue Reading

ಮಾಣಿ ಬಳಿ ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು. ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ.

ವಿಟ್ಲ : ಮಾಣಿ ಗ್ರಾಮದಲ್ಲಿ ಹಾಡಹಗಲೇ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ, ನಗದು ಹಣ ಕಳ್ಳತನ ನಡೆಸಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಲ್ಲಿನ ಮಾಣಿ ಪಲಿಕೆ ನಿವಾಸಿ ಸುಜಯ್ ಎಂಬವರು ಶನಿವಾರ ಬೆಳಗ್ಗೆ ಮನೆಗೆ ಬೀಗ ಹಾಕಿ ಪೇಟೆಗೆ ಹೋಗಿದ್ದು ಮಧ್ಯಾಹ್ನ ಮರಳಿ ಬಂದಾಗ ಕಳ್ಳತನ ನಡೆದಿರುವುದು ಕಂಡುಬಂದಿದೆ. ಬಾಗಿಲಿನ ಬೀಗ ಒಡೆದು ಒಳನುಗ್ಗಿದ ಕಳ್ಳರು ಎರಡು ಕಪಾಟುಗಳನ್ನು ಮುರಿದು ಒಳಗಿದ್ದ 80ಸಾವಿರ ಮೌಲ್ಯದ ಚಿನ್ನದ ಚೈನು, 28ಸಾವಿರ ಮೌಲ್ಯದ […]

Continue Reading

ಕಳಪೆ ಗುಣಮಟ್ಟದ ಕಾಮಗಾರಿ, ಅಳಕೆ ರಾಜಕಾಲುವೆ ತಡೆಗೋಡೆ ಕುಸಿತ, ಶಾಸಕ ವೇದವ್ಯಾಸ ಕಾಮತ್ ನೇರ ಹೊಣೆ- ಡಿವೈಎಫ್ಐ

ಪ್ರತೀ ವರುಷ ಮಂಗಳೂರಿನಲ್ಲಿ ಸುರಿಯುವ ಮಳೆಯಿಂದ ರಾಜಕಾಲುವೆಗಳು ತುಂಬಿ ಹರಿದು ಸುತ್ತಮುತ್ತಲ ತಗ್ಗು ಪ್ರದೇಶದ ಮನೆಮಠ ಅಂಗಡಿ ಮುಂಗಟ್ಟುಗಳಿಗೆ ನೀರು ತುಂಬುವ ಮೂಲಕ ಸೃಷ್ಟಿಯಾಗುವ ಕೃತಕ ನೆರೆಯಿಂದ ರಕ್ಷಿಸಿಕೊಳ್ಳಲು ಸಣ್ಣ ನೀರಾವರಿ ಯೋಜನೆಯಡಿ ಅಳಕೆ ಪ್ರದೇಶದಲ್ಲಿರುವ ರಾಜಕಾಲುವೆಗೆ ಇತ್ತೀಚೆಗೆ ನಿರ್ಮಿಸಿರುವ ತಡೆಗೋಡೆ ನಗರದಲ್ಲಿ ಎಡೆಬಿಡದೆ ಸುರಿದ ಒಂದೆರಡು ಮಳೆಗೆ ಕುಸಿತಗೊಂಡಿದೆ. ಇದು ಮೇಲ್ನೋಟಕ್ಕೆ ಕಳಪೆ ಗುಣಮಟ್ಟದ ಕಾಮಗಾರಿಯಂತೆ ಕಂಡಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಡಿವೈಎಫ್ಐ ಹಾಗೂ ಸಮಾನ ಮನಸ್ಕ […]

Continue Reading