ಕೇಂದ್ರ ಸರಕಾರ ಜಾರಿ ಮಾಡಿದ ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ವಿರೋಧಿಸಿ ಪ್ರತಿಭಟನಾ ಪ್ರದರ್ಶನ

ಕೇಂದ್ರದ ನರೇಂದ್ರ ಮೋದಿ ಸರಕಾರ ಜಾರಿ ಮಾಡಿದ ಕಾರ್ಮಿಕ ವಿರೋಧಿಯಾದ ಸಂಹಿತೆಗಳ ಅಧಿಸೂಚನೆಯನ್ನು ವಿರೋಧಿಸಿ ಹಾಗೂ ಕರ್ನಾಟಕ ರಾಜ್ಯ ಸರಕಾರ ಈ ಸಂಹಿತೆಗಳಿಗೆ ನಿಯಮಗಳನ್ನು ರೂಪಿಸಬಾರದು ಎಂದು ಒತ್ತಾಯಿಸಿ ಇಂದು ದೇಶಾದ್ಯಂತ ಕಾರ್ಮಿಕರಿಂದ ಸ್ವಯಂಪ್ರೇರಿತ ಪ್ರತಿಭಟನೆ ನಡೆಸಬೇಕೆಂದು CITU ಕರೆ ನೀಡಿದ ಹಿನ್ನೆಲೆಯಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಮಿಕರು, ಕಾರ್ಪೊರೇಟ್ ಗಳ ಹಿತಾಸಕ್ತಿಗಳನ್ನು ಕಾಪಾಡುವ ಕೇಂದ್ರದ ನರೇಂದ್ರ ಮೋದಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ […]

Continue Reading

ಇನ್ಮುಂದೆ ಗಡಿ ಜಿಲ್ಲೆಗಳ ಕ್ರಿಮಿನಲ್ ಗಳ ಎದೆಯಲ್ಲಿ ಢವ..ಢವ; ಮಂಗಳೂರು ಕಮೀಷನರ್ ಕಚೇರಿಯಲ್ಲಿ ಬಾರ್ಡರ್ ಕ್ರೈಂ ಮೀಟಿಂಗ್

ಅಪರಾಧ ಕೃತ್ಯಗಳನ್ನು ಮಟ್ಟ ಹಾಕಲು ಕಾನೂನನ್ನು ಬಿಗಿಯಾಗಿ ಜಾರಿಗೊಳಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿರುವ ಮಂಗಳೂರು ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಜಿಲ್ಲಾ ಎಸ್ಪಿ ಡಾ. ಅರುಣ್ ಕೆ ಇದೀಗ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ ಲಾಭ ಪಡೆದು ಕ್ರಿಮಿನಲ್ ಗಳು ಬಚವಾಗಲು ಯತ್ನಿಸುತ್ತಿದ್ದರು. ಆದರೆ ಇದೀಗ ಅದಕ್ಕೆ ಅಂಕುಶ ಬಿದ್ದಿದೆ. ನವೆಂಬರ್ 22 ರಂದು ಕೇರಳ ರಾಜ್ಯದ ಕಣ್ಣೂರು ವಲಯದ ಡಿಐಜಿಪಿ ಯತೀಶ್ಚಂದ್ರ ಜಿ.ಹೆಚ್, ಕಾಸರಗೋಡು ಎಸ್ ಪಿ […]

Continue Reading

ಬಡಪಾಯಿ ಬೀಡಿ ಕಾರ್ಮಿಕರಿಗೆ ಭಾರೀ ವಂಚನೆ ಮಾಡಿದ ಬೀಡಿ ಮಾಲಕರ ವಿರುದ್ದ ನಿರ್ಣಾಯಕ ಹೋರಾಟಕ್ಕಿಳಿದ ಬೀಡಿ ಕಾರ್ಮಿಕರು

ಸಮಾನ ಮನಸ್ಕ ಸಂಘಟನೆಗಳಿಂದ ಸಂಪೂರ್ಣ ಬೆಂಬಲ ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ತುಟಿಭತ್ತೆಯನ್ನು ಕಳೆದ 7 ವರ್ಷಗಳಿಂದ ನಿರಂತರವಾಗಿ ವಂಚಿಸುತ್ತಾ ಬಂದಿರುವ ಬೀಡಿ ಮಾಲಕರ ವಿರುದ್ಧ ಹಾಗೂ ಕನಿಷ್ಠ ಕೂಲಿ ಜಾರಿ ಮಾಡಲು ವಿಳಂಬ ನೀತಿ ಅನುಸರಿಸುತ್ತಿರುವ ಕಾರ್ಮಿಕ ಇಲಾಖೆಯ ಬೇಜವಾಬ್ದಾರಿತನವನ್ನು ವಿರೋಧಿಸಿ ಬೀಡಿ ಕಾರ್ಮಿಕರು ನವೆಂಬರ್ 24 ರಿಂದ ಅನಿರ್ದಿಷ್ಟಾವಧಿ ರಾತ್ರಿ ಹಗಲು ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದು, ಇಂತಹ ನ್ಯಾಯಪರ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸಲು ದ.ಕ.ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ನಿರ್ಧರಿಸಿವೆ. ಕೇಂದ್ರ ಕಾರ್ಮಿಕ […]

Continue Reading

14 ವರ್ಷಗಳಿಂದ ದಂಡ ಕಟ್ಟಲು ಸಾಧ್ಯವಾಗದೇ, ಕಾರಾಗೃಹದಲ್ಲಿ ಬಂಧಿಯಾಗಿದ್ದ ಬಿಜಾಪುರದ ಖೈದಿಗೆ ನೆರವಾದ ಮಂಗಳೂರಿನ ಸಮಾಜಸೇವಕ

ಜೈಲೇ ಶಾಶ್ವತ ಎಂದು ನಂಬಿ ಕೂತಿದ್ದ ಅಪರಾಧಿಯ ಬಾಳಿಗೆ ಬೆಳಕಾಗಿ ಬಂದ ಮಂಗಳೂರಿನ ಗಿರೀಶ್ ಕೊಟ್ಟಾರಿಯ ಮಾನವೀಯ ಕಾಳಜಿಗೆ ವ್ಯಾಪಕ ಶ್ಲಾಘನೆ ಕಳೆದ ಹದಿನಾಲ್ಕು ವರ್ಷಗಳಿಂದ ಕಾರಾಗೃಹದಲ್ಲಿ ಬಂಧಿಯಾಗಿರುವ ಖೈದಿ. ಬಿಡುಗಡೆಯ ಭಾಗ್ಯವಿದ್ದರೂ ದಂಡದ ಹಣ ಕಟ್ಟಲಾಗದೆ ಜೈಲು ಕಂಬಿಯನ್ನೇ ಎಣಿಸಬೇಕಾದ ದುಸ್ಥಿತಿ. ಕುಟುಂಬಸ್ಥರು ಯಾರೂ ಈ ಖೈದಿಯ ನೆರವಿಗೆ ಬಾರದೇ ಇದ್ದುದರಿಂದ ಜೈಲೇ ಶಾಶ್ವತ ಎಂದು ನಂಬಿ ಕೂತಿದ್ದ ಬಿಜಾಪುರದ ಅಪರಾಧಿಯ ಬಾಳಿಗೆ ಬೆಳಕಾಗಿ ಬಂದಿದ್ದು ಮಂಗಳೂರಿನ ಸಮಾಜ ಸೇವಕ. ಎಲ್ಲಿಯ ಬಿಜಾಪುರ, ಎಲ್ಲಿಯ ಮಂಗಳೂರು. […]

Continue Reading

ಕೆಂಪು‌ಕಲ್ಲು ದರ ಇಳಿಕೆಗೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಬೇಕು; ಸಿಪಿಐಎಂ ಆಗ್ರಹ

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಹವಾಲು ಸಭೆ ನಡೆಸಿ, ಕೆಂಪು ಕಲ್ಲಿನ ದರ ನಿಗದಿಯನ್ನು ಜಿಲ್ಲಾಡಳಿತವೇ ಮಾಡಬೇಕು ರಾಜಧನವನ್ನು 257 ರೂ. ಗಳಿಂದ 97 ರೂ. ಗಳಿಗೆ ಇಳಿಕೆ ಮಾಡಿದ ತರುವಾಯವೂ ಕೆಂಪು ಕಲ್ಲು ಬೆಲೆಯನ್ಜು ಎರಡು ಪಟ್ಟು ಏರಿಕೆ ಮಾಡಿರುವ ಕೆಂಪುಕಲ್ಲು ಪಾಯಗಳ ಮಾಲಕರ ನೀತಿ ಕಾಳದಂಧೆಯ ವ್ಯಾಪಾರವನ್ನು ನೆನಪಿಸುವಂತಿದೆ. ಈ ವಿಪರೀತ ದರ ಏರಿಕೆ ಕಡಿಮೆ ಆದಾಯದ ಜನತೆಯ ಮನೆ ಕಟ್ಟುವ ಕನಸನ್ನು ಭಗ್ನಗೊಳಿಸಿದೆ, ಕಟ್ಟಡ ನಿರ್ಮಾಣ ಕಾರ್ಮಿಕರ ದುಡಿಮೆಗೆ ಬರೆ ಎಳೆದಿದೆ. ದ.ಕ. ಜಿಲ್ಲಾಧಿಕಾರಿಗಳು ಈ […]

Continue Reading

ಮುಚ್ಚಿ ಹೋಗಿರುವ ಕನ್ಯಾನ ಪೊಲೀಸ್ ಹೊರಠಾಣೆ ಆರಂಭಿಸಬೇಕು. ಗಡಿಭಾಗದ ಬೆರಿಪದವುನಲ್ಲಿ ಪೊಲೀಸ್ ಚೆಕ್ ಪೋಸ್ಟ್ ತೆರೆಯಬೇಕು.

ಸರ್ಕಾರಕ್ಕೆ, ಗೃಹ ಇಲಾಖೆಗೆ, ನಾಗರಿಕರ ಒತ್ತಾಯ . ವಿಟ್ಲ : ಅಂತರಾಜ್ಯಗಡಿ ಭಾಗದ ಕನ್ಯಾನದಲ್ಲಿ ಐದು ವರ್ಷಗಳ ಹಿಂದೆ ಆರಂಭವಾಗಿದ್ದ ಪೊಲೀಸ್ ಹೊರಠಾಣೆ ಒಂದು ವರ್ಷದಲ್ಲೇ ಕೋಮಾ ಸ್ಥಿತಿಗೆ ತಲುಪಿ ನಿರ್ಜೀವಗೊಂಡಿದೆ. 30/01/2021ರಂದು ಲೋಕಾರ್ಪಣೆ ಆಗಿದ್ದ ಕನ್ಯಾನ ಪೊಲೀಸ್ ಹೊರಠಾಣೆ ಒಂದು ವರ್ಷದಲ್ಲೇ ಮುಚ್ಚಿ ಹೋಗಿತ್ತು. ಬೆರಿಪದವು ಗಡಿಭಾಗದಲ್ಲಿ ಚೆಕ್ ಪೋಸ್ಟ್ ಒತ್ತಾಯ.ಕೇರಳ ಗಡಿ ಭಾಗದ ಪೆರುವಾಯಿ ಗ್ರಾಮದಲ್ಲೂ ದೋ ನಂಬರ್ ದಂಧೆಯ ಖದೀಮರು ತಮ್ಮ ಸಾಮ್ರಾಜ್ಯ ಸ್ಥಾಪಿಸಲು ಹೆಣಗಾಡುತ್ತಿದ್ದಾರೆ.ಕೇರಳದಿಂದ ಬೆರಿಪದವು ಮೂಲಕ ಪೆರುವಾಯಿ ಗ್ರಾಮವನ್ನು ಸಂಪರ್ಕಿಸಿ […]

Continue Reading

ಯಕ್ಷಗಾನ ಕಲಾವಿದ ಈಶ್ವರ ಗೌಡ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ

ಉಡುಪಿ : ಮಂದಾರ್ತಿ ಎರಡನೇ ಮೇಳದಲ್ಲಿ ದೇವಿ ಮಹಾತ್ಮೆಯಲ್ಲಿ ಮಹಿಷಾಸುರನ ಪಾತ್ರ ಮುಗಿಸಿ ಚೌಕಿಗೆ ನಿರ್ಗಮಿಸುತ್ತಿದ್ದಂತೆ ಈಶ್ವರ ಗೌಡರು ( 51) ಹೃದಯಾಘಾತದಿಂದ ನಿನ್ನೆ ನಿಧನರಾದರು. ಅವರ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅಕಾಡೆಮಿಯ ಸರ್ವ ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಈಶ್ವರ ಗೌಡರು ಬುಧವಾರ ರಾತ್ರಿ ಮಂದಾರ್ತಿ ಎರಡನೇ ಮೇಳದಲ್ಲಿ ಮಹಿಷಾಸುರ ಪಾತ್ರ ಮಾಡುತ್ತಿದ್ದರು. ಪಾತ್ರ ಮುಗಿಸಿ ವೇಷ ಕಳಚುತ್ತಿದ್ದಂತೆ ಅಸ್ವಸ್ಥ ಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ […]

Continue Reading

ಸುಖಾನಂದ ಶೆಟ್ಟಿ ಹತ್ಯೆಯ ಪ್ರಮುಖ ಆರೋಪಿಗೆ ಆಶ್ರಯ ನೀಡಿದ ಅಡ್ಡೂರಿನ ಸಲಾಂ 19 ವರ್ಷಗಳ ನಂತರ ಖಾಕಿ ಬಲೆಗೆ

2006 ಡಿಸೆಂಬರ್ 1 ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿಯನ್ನು ಗುರುಪುರ ಕಬೀರ್ ಹಾಗೂ ಆತನ ಸಹಚರರು ಸೇರಿಕೊಂಡು ಹತ್ಯೆ ಮಾಡಿದ್ದರು. ಸುಖಾನಂದ ಶೆಟ್ಟಿ ಹತ್ಯೆ ಆ ದಿನಗಳಲ್ಲಿ ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಪ್ರಕರಣದ ಪ್ರಮುಖ ಆರೋಪಿ ಕಬೀರ್ ಎಂಬಾತನಿಗೆ ಲತೀಫ್ ಯಾನೆ ಅಡ್ಡೂರು ಲತೀಫ್ ಹಾಗೂ ಪ್ರಸ್ತುತ ಕಿನ್ನಿಪದವು ನಿವಾಸಿ ಅಬ್ದುಲ್ ಸಲಾಂ ಅಡ್ಡೂರು ಎಂಬ ಸಹೋದರರು ತಮ್ಮ ಅಡ್ಡೂರು ಟಿಬೇಟ್ ಕಾಲೋನಿಯಲ್ಲಿರುವ ಮನೆಯಲ್ಲಿ ಎರಡು […]

Continue Reading

ಮಂಗಳೂರು: ವಕೀಲರಿಗೆ ನಿಂದನೆ ಆರೋಪ; ಮಹಿಳಾ ಠಾಣಾ ಇನ್ಸ್ ಪೆಕ್ಟರ್ ಬಾಲಕೃಷ್ಣ ವಿರುದ್ಧ ಪೊಲೀಸ್ ಆಯುಕ್ತರಿಗೆ, ಮಾನವ ಹಕ್ಕು ಆಯೋಗಕ್ಕೆ, ಡಿಜಿಪಿಗೆ ದೂರು

ಡಿವೈಎಫ್ಐ ಮುಖಂಡರು, ವಕೀಲರಾಗಿರುವ ನಿತಿನ್ ಕುತ್ತಾರ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ವೃತ್ತಿ ಧರ್ಮಕ್ಕೆ ಅಪಮಾನ ಮಾಡಿರುವ ಆರೋಪದಲ್ಲಿ ಮಂಗಳೂರು ನಗರ ಮಹಿಳಾ ಠಾಣೆಯ ಪೊಲೀಸ್ ನಿರೀಕ್ಷರಾಗಿರುವ ಬಾಲಕೃಷ್ಣ ಎಂಬವರ ವಿರುದ್ಧ ಪೊಲೀಸ್ ಆಯುಕ್ತರಿಗೆ, ಮೇಲಾಧಿಕಾರಿಗಳಿಗೆ, ಮಾನವ ಹಕ್ಕು ಆಯೋಗಕ್ಕೂ ದೂರು ಸಲ್ಲಿಸಲಾಗಿದೆ. ಮಂಗಳೂರು ನಗರದಲ್ಲಿ ಏಳೆಂಟು ವರ್ಷಗಳಿಂದ ವಕೀಲ ವೃತ್ತಿ ನಡೆಸಿಕೊಂಡು ಬರುವ ಯುವ ವಕೀಲ ನಿತಿನ್ ಕುತ್ತಾರ್ ನವೆಂಬರ್ 13 ರಂದು ಕೌಟುಂಬಿಕ ವಿಚಾರವಾಗಿ ಕಕ್ಷಿದಾರರ ಪರವಾಗಿ ಮಂಗಳೂರು ನಗರ ಮಹಿಳಾ ಠಾಣೆಗೆ ಭೇಟಿ […]

Continue Reading

National Level Beauty Pageant ನ ಜೂನಿಯರ್ ಪ್ರಿನ್ಸೆಸ್ ವಿಭಾಗದಲ್ಲಿ ವಿನ್ನರ್ ಪ್ರಶಸ್ತಿ ಪಡೆದುಕೊಂಡ ಉಡುಪಿಯ ಸಚಿತ ರಾವ್

ಉಡುಪಿ : ಉಡುಪಿಯ ಪುಟಾಣಿ ಪ್ರತಿಭೆಯಾದ ಸಚಿತ ರಾವ್ ಅವರು ಇತ್ತೀಚೆಗೆ ನಡೆದ ಎರಡು ಪ್ರಮುಖ ಸೌಂದರ್ಯ ಸ್ಪರ್ಧೆಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ನವೆಂಬರ್ 15 ರಂದು ಬೆಂಗಳೂರಿನ ಆರ್.ಆರ್. ನಗರದಲ್ಲಿ ನಡೆದ National Level Beauty Pageant ನ ಜೂನಿಯರ್ ಪ್ರಿನ್ಸೆಸ್ ವಿಭಾಗದಲ್ಲಿ ವಿನ್ನರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ನವೆಂಬರ್ 16 ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಮಿಸ್ ಮಲೆನಾಡು 2025 ಬ್ಯೂಟಿ ಕಾಂಟೆಸ್ಟ್‌ನಲ್ಲಿ ಮೊದಲ ರನ್ನರ್ ಅಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಉಡುಪಿಯ […]

Continue Reading