ಆತ್ಮಹತ್ಯೆ ಗೈಯ್ಯಲು ಯತ್ನಿಸಿದ ಕೃಷಿಕನ ಜೀವ ರಕ್ಷಿಸಿದ ಪಣಂಬೂರು ಪೊಲೀಸರು

ಇನ್ಸ್ ಪೆಕ್ಟರ್ ಸಲೀಂ ಅಬ್ಬಾಸ್ ವಳಾಲ್ ನೇತೃತ್ವದ ತಂಡದ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ಪೊಲೀಸರೆಂದರೆ ಸಾಕು ನಾಗರೀಕರು ಭಯ ಬೀಳುವ ಪ್ರಸಂಗವೇ ಹೆಚ್ಚು. ಅಪರಾಧಿಗಳ ಹೆಡೆಮುರಿ ಕಟ್ಟಿ ಜೈಲು ಕಂಬಿಗೆ ದೂಡುವುದೇ ಪೊಲೀಸರ ಕೆಲಸ ಅಂದುಕೊಂಡವರೆ ಹೆಚ್ಚು. ಆದರೆ ಪಣಂಬೂರು ಪೊಲೀಸರು ಇದಕ್ಕಿಂತ ಭಿನ್ನ.‌ ಮಾನವೀಯ ಕಾಳಜಿಗೆ ಪಣಂಬೂರು ಪೊಲೀಸರು ಎತ್ತಿದ ಕೈ ಅನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಕಳೆದ ಆರು ತಿಂಗಳ ಹಿಂದೆ ಪಣಂಬೂರು ಇನ್ಸ್ ಪೆಕ್ಟರ್ ಸಲೀಂ ಅಬ್ಬಾಸ್ ವಳಾಲ್ ನೇತೃತ್ವದ ಪೊಲೀಸ್ ತಂಡ […]

Continue Reading

ಪುತ್ತೂರು: ಎರಡು ಪ್ರತ್ಯೇಕ ಪೋಕ್ಸೋ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು

ಬದಿಯಡ್ಕದ ಪೃಥ್ವಿರಾಜ್, ಜಾರ್ಖಂಡ್ ಮೂಲದ ರೇಮುಂಡಾ ನಿಗೆ ಜಾಮೀನು ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಬದಿಯಡ್ಕದ ನಿವಾಸಿ ಪ್ರಥ್ವಿರಾಜ್ ಹಾಗೂ ಮತ್ತೊಂದು ಪೋಕ್ಸೋ ಪ್ರಕರಣದ ಆರೋಪಿ ಜಾರ್ಖಂಡ್ ಮೂಲದ ರೇಮುಂಡಾ ಎಂಬಾತನಿಗೂ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಸರಿತಾ. ಡಿ ರವರು ಎರಡೂ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಆದೇಶ ನೀಡಿರುತ್ತಾರೆ. ಆರೋಪಿ ಪ್ರಥ್ವಿರಾಜ್ ಸಂತ್ರಸ್ಥೆಯೊಂದಿಗೆ ಪ್ರೀತಿಯ ನಾಟಕವಾಡಿ, ಆಕೆಯನ್ನು ಪುಸಲಾಯಿಸಿ ತನ್ನ ಜೊತೆ ಕರೆದುಕೊಂಡು ಹೋಗುತ್ತಿದ್ದ. ಸಂತ್ರಸ್ಥೆಯ ತಾಯಿಯ […]

Continue Reading

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ:

ಉಪ್ಪಿನಂಗಡಿ ಠಾಣಾ ಅ.ಕ್ರ.ಸಂ: 158/2015ರ ಪ್ರಕರಣದಲ್ಲಿ ಆರೋಪಿಯಾಗಿದ್ದು, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸರಿ ಸುಮಾರು ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಂಗಳೂರು ಕಸಬಾ ಬೇಂಗ್ರೆ ನಿವಾಸಿ ಅಕ್ರಂ @ ಬೋಜ ಅಕ್ರ ಎಂಬಾತನನ್ನು ದಿನಾಂಕ: 22-05-2026 ರಂದು, ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸೈ ಕೌಶೀಕ್ ಬಿ.ಸಿ, ನೇತ್ರತ್ವದ ತಂಡ ಆರೋಪಿಯನ್ನು ಮಂಗಳೂರಿನ ಪಣಂಬೂರು ಎಂಬಲ್ಲಿ ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಆರೋಪಿ ಅಕ್ರಂ @ ಬೋಜ ಅಕ್ರ ನಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಆರೊಪಿಯ ವಿರುದ್ಧ ಪಣಂಬೂರು […]

Continue Reading

ನೆಲ್ಲಿಕಾರು ಪಂಚಾಯತ್ ಗೆ ಹಿಡಿಶಾಪ; ಕಂದಾಯ ಇಲಾಖೆಯ ಬೇಜವಾಬ್ದಾರಿತನ

ಅನುದಾನ ಮಂಜೂರು ಆದರೂ ರಸ್ತೆಗಿಲ್ಲ ಕಾಯಕಲ್ಪ; ಮೂಡಬಿದ್ರೆ ಮಾಂಟ್ರಾಡಿ ನಾಗರಿಕರ ನರಕಯಾತನೆ.! ಇನ್ನೇನೂ ಕೆಲವೇ ದಿನಗಳಲ್ಲಿ ಮುಂಗಾರು ಮಳೆ ತೀವ್ರತೆ ಪಡೆದುಕೊಳ್ಳಲಿದೆ. ಸುಸ್ಥಿತಿಯಲ್ಲಿರುವ ರಸ್ತೆಯಲ್ಲೇ ವಾಹನ ಓಡಿಸುವುದು ಕಷ್ಟ. ಅಂತಹದರಲ್ಲಿ ಹೊಂಡ ಗುಂಡಿಗಳಿರುವ ರಸ್ತೆಯಲ್ಲಿ ವಾಹನ ಚಲಾಯಿಸುವುದು ಹೇಗೆ ಸಾಧ್ಯ.? ಇಂತಹದ್ದೊಂದು ನರಕಯಾತನೆ ಮಾಂಟ್ರಾಡಿ ಕ್ರಾಸ್ ರಸ್ತೆಯಲ್ಲಿ ಕಂಡುಬಂದಿದೆ. ಮೂಡಬಿದ್ರೆ ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿ ಕ್ರಾಸ್ (ಕೈಕಂಬ) ರಸ್ತೆ ಅಷ್ಟೊಂದು ಹದಗೆಟ್ಟಿದೆ. ವಾಹನ ಸಂಚಾರ ಬಿಡಿ ಕಾಲ್ನಡಿಗೆಯಲ್ಲಿ ತೆರಳುವುದಕ್ಕೂ ಅಯೋಗ್ಯವಾದ ಸ್ಥಿತಿಯಲ್ಲಿದೆ. ಒಂದು […]

Continue Reading

ಜಿಲ್ಲೆಯ ಸರಕಾರಿ ಆಸ್ಪತ್ರೆಗಳ ಖಾಸಗೀಕರಣ; ಮೇ 26 ರಂದು ಮಂಗಳೂರಿನಲ್ಲಿ ದುಂಡು ಮೇಜಿನ ಸಭೆ

ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ, ಆರೋಗ್ಯ ಕ್ಷೇತ್ರದ ಖಾಸಗೀಕರಣದ ನೀತಿಯ ಕುರಿತು ಚರ್ಚಿಸಲು, ಮುಂದಿನ ಹೋರಾಟವನ್ನು ತೀರ್ಮಾನಿಸಲು ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯು ಮೇ 26 ರಂದು ಸಂಜೆ ನಾಲ್ಕು ಗಂಟೆಗೆ ಮಂಗಳೂರು ನಗರದ ಸಹೋದಯ ಸಭಾಂಗಣದಲ್ಲಿ ದುಂಡು ಮೇಜಿನ ಸಭೆಯನ್ನು ಆಯೋಜಿಸಿದೆ. ಸಭೆಯಲ್ಲಿ ಎಡಪಕ್ಷಗಳು, ರೈತ, ದಲಿತ, ಕಾರ್ಮಿಕ, ಯುವಜನ, ಮಹಿಳಾ ಸಂಘಟನೆಗಳ ಪ್ರತಿನಿಧಿಗಳು, ಬರಹಗಾರರು, ಚಿಂತಕರು ಭಾಗವಹಿಸಲಿದ್ದಾರೆ ಎಂದು ಸಿಪಿಐಎಂ ಪ್ರಕಟನೆ ತಿಳಿಸಿದೆ. ಇಂದು ಜಿಲ್ಲಾ ಪ್ರವಾಸದಲ್ಲಿದ್ದ […]

Continue Reading

ಬೆಳ್ತಂಗಡಿ: ಮಡಿವಾಳ ಕುಟುಂಬದ ಪಡಿತರ ಚೀಟಿಯಲ್ಲಿ ಬಂಟ ಸಮುದಾಯದ ಹೆಸರು ಸೇರ್ಪಡೆ..!

ವಿಕಲಚೇತನ ಹೆಸರಿನಲ್ಲಿ ಮಂಜೂರಾಗಿರುವ ನ್ಯಾಯಬೆಲೆ ಅಂಗಡಿ ಮುಕ್ಕಲು ಷಡ್ಯಂತ್ರ.. ಆಹಾರ ಇಲಾಖೆ ಅಧಿಕಾರಿಗಳು ಸಾಥ್. ಬೆಳ್ತಂಗಡಿ ತಾಲೂಕಿನ ಕೋಡಿಬೆಟ್ಟು ನಿವಾಸಿಯಾಗಿರುವ ತ್ಯಾಂಪಣ್ಣ ಮಡಿವಾಳರ ಪತ್ನಿಯಾಗಿರುವ ಅಮಿತಾ ಎಂಬವರು ನಂ. 110100157404 ನ ಆದ್ಯತಾ ಕುಟುಂಬಕ್ಕೆ ಮೀಸಲಾಗಿರುವ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದು, ಪಡಿತರ ಚೀಟಿಯಲ್ಲಿ ಅವರ ಮಗಳಾದ ಕೆ.ನಿಕ್ಷಿತಾ ಳ ಹೆಸರು ಇದೆ . ಕೆ. ನಿಕ್ಷಿತಾ ಎಂಬಾಕೆ ವಿಕಲಚೇತನಳಾಗಿದ್ದು , ಮನೆಯಲ್ಲಿಯೇ ಇರುತ್ತಾಳೆ. ಆಕೆಯ ಹೆಸರಿನಲ್ಲಿ 21 ಎಂವಿಎಸ್ಎಸ್ ಗುರುವಾಯನಕೆರೆ ನ್ಯಾಯಬೆಲೆ ಅಂಗಡಿಯ ಪರವಾನಗಿ ಇರುತ್ತದೆ. […]

Continue Reading

ಉಪ್ಪಿನಂಗಡಿ: ಖಾಸಗಿ ಆಸ್ಪತ್ರೆಯ ಘೋರ ನಿರ್ಲಕ್ಷ್ಯಕ್ಕೆ ಯುವಕ ಬಲಿ

ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಬೇಜವಾಬ್ದಾರಿತನಕ್ಕೆ ಬಲಿಯಾಗುತ್ತಿದೆ ಅಮಾಯಕ ಜೀವಗಳು “ಮೆಡಿಕಲ್ ಹಬ್” ಎಂದು ಕರೆಸಿಕೊಳ್ಳುವ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳ ಬೇಜವಾಬ್ದಾರಿ ಘಟನೆಗಳು ಪದೇಪದೇ ಮರುಕಳಿಸುತ್ತಿರುವುದು ದುರಂತದ ಸಂಗತಿ. ದುರಂತಗಳು ಸಂಭವಿಸಿ ಒಂದೆರಡು ದಿನ ಸಾರ್ವಜನಿಕ ಆಕ್ರೋಶ ವ್ಯಕ್ತವಾದಾಗ ಮಾತ್ರ ತೋರಿಕೆಗೆ ತನಿಖೆ ನಡೆಸಿ ಹಳೇ ಕಡತ ಸೇರಿಸುವ ಪ್ರವೃತ್ತಿ ನಮ್ಮ ಇಲಾಖೆಗಳಲ್ಲಿದೆ. ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರ ಮೇಲಿನ ಸರ್ಕಾರದ ನಿಯಂತ್ರಣ ಸಂಪೂರ್ಣವಾಗಿ ಕುಸಿದಿರುವುದಕ್ಕೆ ಈ ಘಟನೆಯೇ ಸಾಕ್ಷಿ. ಇಂತಹ ಘಟನೆಗಳಲ್ಲಿ ಅಮಾಯಕರು ಬಲಿಯಾದಾಗ ಅವರ ಕುಟುಂಬಗಳು […]

Continue Reading

ಬಡವರ ಆಸ್ಪತ್ರೆಯ ಗೋಳು ಕೇಳುವವರ್ಯಾರು..?

ಆರೋಪಿಗಳಿಗೆ ಜಾಮೀನು ಬೇಕಿದ್ದರೆ ವೆನ್ಲಾಕ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆದರೆ ಸಾಕು.. ವೆನ್ಲಾಕ್ ನಲ್ಲಿ ನಡೆಯುತ್ತಿದೆ ಮೆಗಾ ಡೀಲಿಂಗ್.. ಸೆಟ್ಟಿಂಗ್.! ಮಂಗಳೂರು ತುಂಬಾ ಖಾಸಗಿ ಆಸ್ಪತ್ರೆಗಳದ್ದೇ ದರ್ಬಾರ್. ರೋಗಿಯೊಬ್ಬ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಒಳಹೊಕ್ಕು ಹೊರಬರುವ ಹೊತ್ತಿಗೆ ಲಕ್ಷಗಟ್ಟಲೆ ಬಿಲ್ ಪಾವತಿಸಬೇಕಾಗುತ್ತದೆ. ಬಡವರಿಗಂತೂ ಚಿಕಿತ್ಸೆ ಪಡೆಯಲು ಇಂತಹ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಗಳು ಗಗನ ಕುಸುಮ. ಮಂಗಳೂರಿನಲ್ಲಿ ಬಡವರಿಗೆ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಇರುವ ಸರ್ಕಾರಿ ಆಸ್ಪತ್ರೆ ಇದು. ಕೆಲವು ವರ್ಷಗಳ […]

Continue Reading

ಜಿಲ್ಲಾಧಿಕಾರಿಗಳಿಗೆ ಜನಸಾಮಾನ್ಯರು, ಪರಿಸರಕ್ಕಿಂತ MRPL ಮೇಲೆ ಹೆಚ್ಚು ಕಾಳಜಿ: ಮುನೀರ್ ಕಾಟಿಪಳ್ಳ

ಜೋಕಟ್ಟೆ ನಾಗರಿಕರ ಧರಣಿ ಎರಡನೆ ದಿನಕ್ಕೆ ಕೋಕ್ ಸಲ್ಪರ್ ಘಟಕದ ಸಹಿತ ಎಮ್ ಆರ್ ಪಿಎಲ್ ನಿಂದ ಜನಸಾಮಾನ್ಯರ ಆರೋಗ್ಯ, ಪರಿಸರದ ಮೇಲಾಗುತ್ತಿರುವ ಗಂಭೀರ ಪರಿಣಾಮಗಳ ಕುರಿತು ದ.ಕ. ಜಿಲ್ಲಾಧಿಕಾರಿ ದರ್ಶನ್ ಅವರಿಗೆ ಯಾವುದೇ ಕಾಳಜಿ ಇಲ್ಲ. ಎಮ್ಆರ್ ಪಿಎಲ್ ಸಹಿತ ಮಾಲಿನ್ಯಕಾರಕ ಕೈಗಾರಿಕೆಗಳ ಹಿತಕಾಯಲು ಮಾತ್ರ ಟೊಂಕಕಟ್ಟಿ ನಿಲ್ಲುತ್ತಾರೆ. ಜೋಕಟ್ಟೆ, ಕೆಂಜಾರು ಭಾಗದಲ್ಲಿ ಗ್ರಾಮಸ್ಥರು ಎದುರಿಸುತ್ತಿರುವ ನರಕ ಸದೃಶ ಸ್ಥಿತಿಯ ಅರಿವಿದ್ದರೂ ಭೂಸ್ವಾಧೀನ, ಪುನರ್ವಸತಿಗೆ ಸಂಬಂಧಿಸಿ ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಮುನೀರ್ ಕಾಟಿಪಳ್ಳ […]

Continue Reading

ಮಂಗಳೂರು, ಬಂಟ್ವಾಳ ಆಡಳಿತ ಸೌಧ; ಹೇಳೋರಿಲ್ಲ.. ಕೇಳೋರಿಲ್ಲ.. ಇವರು ಆಡಿದ್ದೇ ಆಟ, ಆಧಿಕಾರಿಗಳದ್ದೇ ದರ್ಬಾರ್

‘ಸರಕಾರಿ ಕೆಲಸ ದೇವರ ಕೆಲಸ ‘ ಅನ್ನಲಾಗುತ್ತಿದೆ. ಇದೆಲ್ಲ ಈಗ ಮರೀಚಿಕೆಯಾಗಿಬಿಟ್ಟಿದೆ. ಜನರಿಗೆ ಸೇವೆ ನೀಡಲು ಸರಕಾರಿ ಕೆಲಸಕ್ಕೆ ಸೇರುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಎಷ್ಟು ಸಿಗುತ್ತೋ ಅಷ್ಟು ಬಾಚಿ ತಿನ್ನುವುದನ್ನೇ ಸರಕಾರಿ ಕೆಲಸ ಅಂದುಕೊಂಡವರ ಸಂಖ್ಯೆ ಹೆಚ್ಚಾಗಿದೆ. ಜನಸಾಮಾನ್ಯರು ಕೆಲಸಕ್ಕಾಗಿ ಸರಕಾರಿ ಕಚೇರಿಗೆ ಬಂದರೆ ಅಲೆದಾಡುವುದೇ ಆಗಿ ಬಿಟ್ಟಿದೆ. ಅದರಲ್ಲೂ ಮಂಗಳೂರಿನ ಮಿನಿ ವಿಧಾನಸೌಧ, ಬಂಟ್ವಾಳದ ಮಿನಿ ವಿಧಾನಸೌಧದ ಕಥೆಯೇ ಖರಾಬ್ ಆಗಿ ಬಿಟ್ಟಿದೆ. ಬಂಟ್ವಾಳ ಮಿನಿ ವಿಧಾನಸೌಧದ ಖದರ್ರೆ ಕರಕಲಾಗಿದೆ. ಇಲ್ಲಿನ ಮಿನಿ ವಿಧಾನಸೌಧದ […]

Continue Reading