ಮಂಗಳೂರು: ಸಿಸಿಬಿ ಪೊಲೀಸರ ಕಾರ್ಯಾಚರಣೆ; ಎಂಡಿಎಂಎ ಮಾದಕ ವಸ್ತು ಸಹಿತ ಮೂರು ಮಂದಿ ಆರೋಪಿಗಳ ಬಂಧನ

ಎಂಡಿಎಂಎಯನ್ನು ಖರೀದಿಸಿ ಅದನ್ನು ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪಂಪ್ವೆಲ್ ಉಜ್ಜೋಡಿ ನಿವಾಸಿ ಜೈಸನ್ ಮಿನೇಜಸ್, ತೊಕ್ಕೊಟ್ಟು ಪೆರ್ಮನ್ನೂರಿನ ಚೆಂಬುಗುಡ್ಡೆ ನಿವಾಸಿಗಳಾದ ಹೈದರ್ ಅಲಿ, ಮುಹಮ್ಮದ್ ಸಜಾದ್, ಎಂದು ತಿಳಿದು ಬಂದಿದೆ. ಆರೋಪಿಗಳು ಆಟೋ ರಿಕ್ಷಾದಲ್ಲಿ ಪಂಪ್ ವೆಲ್-ಎಕ್ಕೂರು ಪರಿಸರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾರಾಟ ಮಾಡುತ್ತಿದ್ದ ಕುರಿತು ಲಭಿಸಿದ ಖಚಿತ ಮಾಹಿತಿಯನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು […]

Continue Reading

ಅಮೇರಿಕನ್ ಸಾಮ್ರಾಜ್ಯಶಾಹಿಗಳ ಯುದ್ದಕೋರ ನೀತಿ ಖಂಡಿಸಿ ಹಾಗೂ ಶಾಂತಿಗಾಗಿ ಒತ್ತಾಯಿಸಿ ಪ್ರತಿಭಟನೆ

ಅಮೇರಿಕನ್ ಸಾಮ್ರಾಜ್ಯಶಾಹಿಗಳ ಯುದ್ದಕೋರ ನೀತಿಗಳನ್ನು ಖಂಡಿಸಿ, ಜಾಗತಿಕ ಮಟ್ಟದಲ್ಲಿ ಶಾಂತಿ ನೆಲೆಗೊಳ್ಳಬೇಕೆಂದು ಒತ್ತಾಯಿಸಿ ಇಂದು ಮಂಗಳೂರು ನಗರದ ಹೃದಯ ಭಾಗದಲ್ಲಿ CITU, DYFI, JMS,DHS,ಆದಿವಾಸಿ ಸಂಘಟನೆಗಳ ಜಂಟಿ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಅಮೇರಿಕನ್ ಸಾಮ್ರಾಜ್ಯಶಾಹಿಗಳ ಯುದ್ದದಾಹದ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಜಗತ್ತಿನೆಲ್ಲೆಡೆ ಶಾಂತಿ ನೆಲೆಗೊಳ್ಳಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಅಮೇರಿಕನ್ ಸಾಮ್ರಾಜ್ಯಶಾಹಿ ಇಡೀ ಜಗತ್ತನ್ನು ತನ್ನ‌ ನಿಯಂತ್ರಣದಲ್ಲಿಡಲು ಹರಸಾಹಸ ಪಡುತ್ತಿದೆ.ಜಗತ್ತಿನ 80 […]

Continue Reading

ವಿನಾಯಕ ಬಾಳಿಗನ ಕೊಲೆಗಡುಕರನ್ನು ಬಿಜೆಪಿ, ಆರ್ ಎಸ್ ಎಸ್ ನಾಯಕರು ರಕ್ಷಿಸುತ್ತಿದ್ದಾರೆ: ಬಿ ಕೆ ಹರಿಪ್ರಸಾದ್ ಆರೋಪ

ಮೆರವಣಿಗೆಯ ತರುವಾಯ ವಿನಾಯಕ ಬಾಳಿಗಾ ಮನೆಯ ಬಳಿ ನಡೆದ ಬಹಿರಂಗ‌ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ “ನನ್ನ ಜೀವನದಲ್ಲಿ ಇಂತಹ ಒಂದು ಅಪರೂಪದ ದಿನ ಬರುತ್ತದೆ ಎಂದು ನಾನು ಕನಸು ಮನಸ್ಸಿನಲ್ಲಿಯೂ ಯೋಚಿಸಿರಲಿಲ್ಲ. ಓರ್ವ ಬಿಜೆಪಿ ಕಾರ್ಯಕರ್ತನ ಸಾವಿಗೆ ನ್ಯಾಯ ಕೇಳಿ ಹುಟ್ಟಾ ಕಾಂಗ್ರೆಸ್ಸಿಗನಾದ ನಾನು ಬೀದಿಗೆ ಬಂದಿದ್ದೇನೆ. ಹಿಂದೂಗಳ ಮೇಲೆ ದೌರ್ಜನ್ಯವಾದಾಗ ಬಿ ಕೆ ಹರಿಪ್ರಸಾದ್ ಯಾಕೆ ಮಾತಾಡಲ್ಲ, ಹಿಂದುತ್ವವಾದಿಗಳ ಕೊಲೆಯಾದಾಗ ಬಿ. ಕೆ.ಹರಿಪ್ರಸಾದ್ ಯಾಕೆ ಮಾತನಾಡಲ್ಲ ಎಂದು […]

Continue Reading

“ಯಾರನ್ನೂ ಬೆಳೆಯಲು ಬಿಡದ ರಾಜಕೀಯ.?” ಮಾಜಿ ಸಚಿವರ ವಿರುದ್ಧ ಕಾರ್ಯಕರ್ತರ ಅಸಮಾಧಾನ ಬಹಿರಂಗ

ಬಂಟ್ವಾಳ ರಾಜಕೀಯ ವಲಯದಲ್ಲಿ ಮಾಜಿ ಸಚಿವರ ವಿರುದ್ಧ ಕಾರ್ಯಕರ್ತರ ಅಸಮಾಧಾನ ಮತ್ತೆ ಬಯಲಾಗುತ್ತಿದೆ. “ಯಾರನ್ನೂ ಬೆಳೆಯಲು ಬಿಡದ ರಾಜಕೀಯ” ಎಂಬ ಆರೋಪಗಳು ಮತ್ತೆ ಕೇಳಿಬರುತ್ತಿದ್ದು, ಕೆಲ ಕಾರ್ಯಕರ್ತರು ತಮ್ಮ ನೋವು ಮತ್ತು ಅಸಮಾಧಾನವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಸಚಿವರೊಬ್ಬರ ಅನುಯಾಯಿಗಳು ಈ ಆರೋಪಗಳನ್ನು “ಕಟ್ಟುಕಥೆ” ಎಂದು ತಳ್ಳಿ ಹಾಕಿದರೂ, ಪಕ್ಷದ ಒಳಗಡೆ ಹಲವು ವರ್ಷಗಳಿಂದ ಒತ್ತಡದ ವಾತಾವರಣ ಇದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಹಳೆಯ ನಾಯಕರ ಉದಾಹರಣೆಗಳು ಮತ್ತೆ ಚರ್ಚೆಗೆಪಕ್ಷದೊಳಗಿನ ಅಸಮಾಧಾನವನ್ನು ವಿವರಿಸುವ ಸಂದರ್ಭದಲ್ಲಿ […]

Continue Reading

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಹಲವು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ.

ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ನಗರದ ಸಿಸಿಬಿ ಪೊಲೀಸರು ಬಂಧಿಸಿರುತ್ತಾರೆ. ಫರಾಜ್ @ ಮೊಹಮ್ಮದ್ ಫರಾಜ್, ಮದನಿನಗರ ದೇರಳಕಟ್ಟೆ. ಈತನ ವಿರುದ್ಧ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ, ಕೊಲೆಯತ್ನ, ಮಾದಕ ವಸ್ತು ಮಾರಾಟ, ಕಳವು ಹಾಗೂ ಕಾರಾಗೃಹದಲ್ಲಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಪ್ರಕರಣಗಳು ಸೇರಿ ಒಟ್ಟು ಸುಮಾರು 10 ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡು ನಂತರ ವಿಚಾರಣೆಗೆ […]

Continue Reading

ಅಂಬಾತನಯ ಮುದ್ರಾಡಿಯವರ ಸಂಸ್ಕರಣೆಯಲ್ಲಿ ಉಡುಪಿ ರಂಗಭೂಮಿಯು, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟಿನ ಸಹಯೋಗದಲ್ಲಿ, ನೀಡಲಿರುವ ಪುಸ್ತಕ ಪ್ರಶಸ್ತಿಗೆ ನಾಟಕ ವಿಮರ್ಶಾಕೃತಿಗಳಿಗೆ ಆಹ್ವಾನ

ಉಡುಪಿ : ಆದರ್ಶ ಅಧ್ಯಾಪಕ, ಕವಿ, ಲೇಖಕ, ಯಕ್ಷಗಾನ ಕಲಾವಿದ. ತಾಳಮದ್ದಳೆ ಅರ್ಥದಾರಿ, ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ಸಂಸ್ಕರಣೆಯಲ್ಲಿ ಉಡುಪಿ ರಂಗಭೂಮಿಯು, ಅಂಬಾತನಯ ಮುದ್ರಾಡಿಯವರ ಹೆಸರಿನ ಪುಸ್ತಕ ಪ್ರಶಸ್ತಿಯನ್ನು ಕಳೆದ ಎರಡು ವರ್ಷಗಳಿಂದ ನೀಡುತ್ತಾ ಬಂದಿದೆ. ‘ಅಂಬಾತನಯ ಮುದ್ರಾಡಿಯವರ ಸಂಸ್ಕರಣೆಯ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಸಹಯೋಗದ ಉಡುಪಿ ರಂಗಭೂಮಿ ಪುರಸ್ಕಾರ’ ಎಂದು ಕರೆಯಲ್ಪಡುವ ಈ ಪುಸ್ತಕ ಪ್ರಶಸ್ತಿಯು ಪ್ರತಿವರ್ಷ ಸಾರ್ವಜನಿಕ ಸಮಾರಂಭದಲ್ಲಿ ಪ್ರದಾನಗೊಳ್ಳಲಿದ್ದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಹದಿನೈದು ಸಾವಿರ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿರುತ್ತದೆ […]

Continue Reading

ಕಾನೂನು ಕೈಗೆತ್ತಿಕೊಂಡು ಅನೈತಿಕ ಗೂಂಡಾಗಿರಿ ನಡೆಸಿದ ಕೋಮುವಾದಿಗಳನ್ನು, ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಬೇಕು: ಶೇಖರ್ ಲಾಯಿಲ

ಉಜಿರೆ: ಸರ್ವಧರ್ಮದ ಭಾವೈಕ್ಯತೆಯಿಂದ ನಡೆದ ಉಜಿರೆಯ ಬ್ರಹ್ಮಕಲಶಕ್ಕೆ ಸ್ನೇಹಿತರ ಜೊತೆಗೂಡಿ ತೆರಳಿದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯ ಮೇಲೆ ಧರ್ಮದ ಹೆಸರಿನಲ್ಲಿ ಗೂಂಡಾಗಿರಿ ನಡೆಸಿದ ಸಂಘಪರಿವಾರದ ಅನೈತಿಕ ಪೋಲಿಸ್ ಗಿರಿ ಅತ್ಯಂತ ಖಂಡನೀಯ. ಸರ್ವಜನಾಂಗದ ಶಾಂತಿಯ ತೋಟವನ್ನು ಹಾಳುಗೇಡುವುವ ಸಂಘಪರಿವಾರದ ಕುತಂತ್ರ ಮತ್ತು ಶಾಸಕರ ದ್ವೇಷಕೋರತನದ ಭಾಗವಾಗಿ ಸಂಘಿ ಗೂಂಡಾಗಳು ಕಾನೂನು ಕೈಗೆತ್ತಿಕೊಂಡು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದೆ. ಉಜಿರೆ ಬ್ರಹ್ಮಕಲಶವು ಹಿಂದೂ , ಮುಸ್ಲಿಂ, ಕ್ರೈಸ್ತ ಸಮುದಾಯದ ಭಾವೈಕ್ಯತೆಗೆ ಸಾಕ್ಷಿಯಾಗಿತ್ತು. ಇದನ್ನು ಸಹಿಸದ ಸಂಘಪರಿವಾರ ಕಾರ್ಯಕ್ರಮಕ್ಕೆ […]

Continue Reading

ಫಾರ್ಚೂನರ್ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ದನ ಸಾಗಾಟ: ಆರೋಪಿಗಳು ಪರಾರಿ, ಸ್ವತ್ತು ವಶ, ಪ್ರಕರಣ ದಾಖಲು

ಎಡಪದವು ಸಾಸ್ತಾವು ದೇವಸ್ಥಾನದ ಬಳಿ ಫಾರ್ಚೂನರ್ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ನಾಲ್ಕು ದನಗಳನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದಾಗ ಬಜಪೆ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಆರೋಪಿಗಳು ಸ್ಥಳದಿಂದ ಪರಾರಿಯಾಗಿರುತ್ತಾರೆ. ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್ 18 ರಂದು ಮುಂಜಾನೆ 4:45 ರ ವೇಳೆಗೆ ಎಡಪದವು ಗ್ರಾಮದ ಸಾಸ್ತಾವು ದೇವಸ್ಥಾನದ ಬಳಿ ದನಕಳವು ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬಜಪೆ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ಫಾರ್ಚೂನರ್ […]

Continue Reading

ಕೆ.ಎಂ ಇಬ್ರಾಹಿಂ ಮಾಸ್ಟರ್ ಎಂಬ ಸಮುದಾಯದ ದ್ವನಿ; ಸರ್ವದರ್ಮೀಯರ ದೋತಕ– ಕೆ.ಎಂ. ಇಬ್ರಾಹಿಂ ಮಾಸ್ಟರ್ ಅವರ ರಾಜಕೀಯ ಪಯಣ

ಕೆ.ಎಂ ಇಬ್ರಾಹಿಂ ಮಾಸ್ಟರನ್ನು ಚಿವುಟಿದ ಬಂಟ್ವಾಳದ ಜಾತ್ಯತೀತ ಎಂಬ ಹಣೆಪಟ್ಟಿಯ ನಾಯಕ ಯಾರು? ಎಂಬ ಪ್ರಶ್ನೆಗಳು ಇನ್ನೂ ಚರ್ಚೆಯಾಗುತ್ತಿವೆ ಕೆ.ಎಂ.ಇಬ್ರಾಹಿಂ ಮಾಸ್ಟರ್ ಎಂಬ ಸಮುದಾಯದ ದ್ವನಿ, ಸರ್ವದರ್ಮೀಯರ ಪ್ರೀತಿಯ ದೋತಕ ಎಂದೇ ಗುರುತಿಸಿಕೊಂಡ ನಾಯಕತ್ವ ವಿಟ್ಲ ಪ್ರದೇಶದಲ್ಲಿ ವಿಶಿಷ್ಟ ಗುರುತು ಮೂಡಿಸಿತು. ಧರ್ಮ, ಜಾತಿ, ವರ್ಗ ಭೇದಗಳನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಅವರಲ್ಲಿತ್ತು. ಅವರ ಸೌಹಾರ್ದ ರಾಜಕೀಯವೇ ಜನಮನ ಗೆದ್ದ ಪ್ರಮುಖ ಅಸ್ತ್ರವಾಗಿತ್ತು. ವಿಟ್ಲ ಪೇಟೆಯ ಪರಿವರ್ತನೆಗೆ ಚಾಲನೆವಿಟ್ಲ ಪೇಟೆಯೆಂಬ ಇಕ್ಕಟ್ಟಿನ ರಸ್ತೆಯನ್ನು ಖಾಸಗೀತ್ವದ ಕಾಲಘಟ್ಟದಲ್ಲಿ […]

Continue Reading

ಇನ್ಸ್ ಪೆಕ್ಟರ್ ಸಂದೇಶ್ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪ ನಿರಾಧಾರ; ಲಂಚ, ದುಷ್ಕೃತ್ಯದ ಬಗ್ಗೆ ಸುಳ್ಳಾರೋಪ; ಇಲಾಖೆ ತನಿಖೆಯಿಂದ ಸಾಬೀತು

ಫೋನ್ ಸಂಭಾಷಣೆಯಲ್ಲಿ ಅಸಭ್ಯ ವರ್ತನೆ: ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಸಸ್ಪೆಂಡ್ ಭಾರೀ ಚರ್ಚೆಗೆ ಕಾರಣವಾಗಿದ್ದ ಮೂಡಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ಬಿ.ಜಿ . ಅವರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದನ್ನು ಆಡಿಯೋ ಮತ್ತು ವಿಡಿಯೋಗಳು ದೃಢಪಡಿಸುವುದರಿಂದ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಇನ್ ಸ್ಪೆಕ್ಟರ್ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಉತ್ತರ […]

Continue Reading