ಕೊಲ್ಲುವುದು ನಮ್ಮ ಧರ್ಮವಲ್ಲ; ಬದುಕಿಸುವುದೇ ನಮ್ಮ ಧರ್ಮ: ಜಾತಿ-ಮತ ನೋಡದೆ ಮನುಷ್ಯತ್ವದ ಪಾಠ ಹೇಳಿಕೊಡುತ್ತಿರುವ ಪಾಣೆಮಂಗಳೂರಿನ ಮುಸ್ಲಿಮರು

ನೇತ್ರಾವತಿ ನದಿಗೆ ಹಾರಿದಾತನನ್ನು ರಕ್ಷಿಸಲು ಸತತ ಐದು ಗಂಟೆ ಪ್ರಯತ್ನಪಟ್ಟರು. ವಿಧಿಯಾಟವೇ ಬೇರೆಯಾಗಿತ್ತು. ಮೃತದೇಹವನ್ನು ಮೇಲಕ್ಕೆತ್ತಿದರು ಅದು ಪಾಣೆಮಂಗಳೂರಿನ ಮುಸ್ಲಿಮರು. ಕೊಲ್ಲುವುದು ನಮ್ಮ ಧರ್ಮವಲ್ಲ, ಬದುಕಿಸುವುದೇ ನಮ್ಮ ಧರ್ಮ ಎಂದು ಸಾರಿದವರು. ಆತ್ಮಹತ್ಯೆಗೈಯಲು ನೇತ್ರಾವತಿ ನದಿಗೆ ಹಾರಿದರೇ ಕ್ಷಣಾರ್ಧದಲ್ಲೇ ಅವರನ್ನು ಬದುಕಿಸಲು ಇಲ್ಲೊಂದು ಮುಸ್ಲಿಮರ ತಂಡವಿದೆ. ಕೊನೆಗೂ ಬದುಕಿಸಲಾಗದಿದ್ದರೂ ಮೃತದೇಹವನ್ನು ಮೇಲಕ್ಕೆತ್ತಿ ಅದಕ್ಕೊಂದು ಗೌರವಯುತ ಸಂಸ್ಕಾರಕ್ಕೆ ಇಲ್ಲಿನ ಮುಸ್ಲಿಮರು ಕಾರಣರಾಗುತ್ತಿದ್ದಾರೆ. ಸಾಯಲು ಹೋದ ನೂರಾರು ಮಂದಿಯನ್ನು ಬದುಕಿಸಿದ್ದಾರೆ. ಅದೇ ರೀತಿ ಜೀವದ ಹಂಗು ತೊರೆದು ನೂರಾರು ಮೃತದೇಹಗಳನ್ನು […]

Continue Reading

ಪಾಣೆಮಂಗಳೂರು ನೇತ್ರಾವತಿ ಸೇತುವೆಯಲ್ಲಿ ಬೈಕ್ ಜೊತೆ ಮೊಬೈಲ್, ಚಪ್ಪಲಿ ಪತ್ತೆ..ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ನಾಪತ್ತೆ..ತೀವ್ರ ಶೋಧ..

ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಬೈಕ್, ಚಪ್ಪಲಿ, ಮೊಬೈಲ್ ಫೋನ್ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಪುತ್ತೂರು ನಗರಸಭೆಯ ಕೌನ್ಸಿಲರ್ ನೆಲ್ಲಿಕಟ್ಟೆ ರಮೇಶ್ ರೈ ಅವರದ್ದೆಂದು ತಿಳಿದುಬಂದಿದೆ. ತನ್ನ ಸೊತ್ತುಗಳನ್ನು ಸೇತುವೆಯಲ್ಲಿಟ್ಟು ರಮೇಶ್ ರೈ ನೇತ್ರಾವತಿ ನದಿಗೆ ಹಾರಿದ್ದಾರೆ ಎಂಬ ಬಲವಾದ ಸಂಶಯ ಮೂಡಿಬಂದಿದೆ. ಇದೀಗ ಸೇತುವೆಯಲ್ಲಿ ಭಾರಿ ಜನ ಜಮಾಯಿಸಿದ್ದು ನೇತ್ರಾವತಿ ನದಿಯಲ್ಲಿ ಹುಡುಕಾಟ ಆರಂಭವಾಗಿದೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ರಮೇಶ್ ರೈ ಅವರು ಜಯಗಳಿಸಿದ್ದರು‌. […]

Continue Reading

ಸೋಷಿಯಲ್ ಮೀಡಿಯಾಗಳಲ್ಲಿ ಪರಾಕ್ರಮ ತೋರಿಸುತ್ತಿದ್ದ ಐವರು ಖಾಕಿ ಬಲೆಗೆ: ವಿದೇಶದಲ್ಲಿ ಕೂತು ದ್ವೇಷ ಪೋಸ್ಟ್ ಹಾಕಿದರೂ ಖಾಕಿ ಡ್ರಿಲ್ ಖಂಡಿತ

ಇನ್ನಾದರೂ ಯುವ ಸಮೂಹ ಎಚ್ಚೆತ್ತುಕೊಳ್ಳಿ ಈಗಿನವರದ್ದು ಏನಿದ್ದರೂ 5G ಜಮಾನ. ಸೋಷಿಯಲ್ ಮೀಡಿಯಾಗಳಲ್ಲಿ ನಕಲಿ ಪೇಜ್ ಸೃಷ್ಟಿಸಿ ಬೆದರಿಕೆ, ದ್ವೇಷ ಬಿತ್ತುವ ಪೋಸ್ಟ್ ಹಾಕಿ ಪೌರುಷ ತೋರಿಸುತ್ತಾರೆ. ಬಹುತೇಕ ಯುವ ಸಮೂಹ ಇಂತಹ ಪರಾಕ್ರಮದಲ್ಲೇ ನಿರತರಾಗಿರುತ್ತಾರೆ. ಇವರು ಹಾಕುವ ಒಂದು ಪೋಸ್ಟ್ ಸ್ವಾಸ್ಥ್ಯ ಸಮಾಜವನ್ನು ಕೆಡಿಸಿಬಿಡುತ್ತದೆ. ಧರ್ಮ ದಂಗಲ್ ಗೂ ಕಾರಣವಾಗಿ ಬಿಡುತ್ತದೆ. ಕೆಲವರು ವಿದೇಶಗಳಲ್ಲೂ ಕೂತು ನಮ್ಮದು ಸೇಫ್ ಜಾಗ ಅಂತ ತಿಳಿದುಕೊಂಡು ದ್ವೇಷ ಬಿತ್ತುವ ಪೋಸ್ಟ್ ಹಂಚುತ್ತಾರೆ . ನಿಮ್ಮ ಈ ಅತಿರೇಕದ ವರ್ತನೆ […]

Continue Reading

ಕೊಳತ್ತಮಜಲು ಅಬ್ದುಲ್ ರಹಿಮಾನ್ ಹತ್ಯೆ: ಭರತ್ ಕುಮ್ದೇಲ್ ಸಹಚರ ಅರೆಸ್ಟ್

ಸುಹಾಸ್ ಶೆಟ್ಟಿ ಹತ್ಯೆ ಕೇಸ್: ಆರೋಪಿಗಳಿಗೆ ಆಶ್ರಯ ನೀಡಿದ ಮುಝಮ್ಮಿಲ್ ತಂದೆಯ ಬಂಧನ ಕೊಳತ್ತಮಜಲು ಅಬ್ದುಲ್ ರಹಿಮಾನ್ ಹತ್ಯೆ ಕೇಸಿಗೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಮಾಹಿತಿಗಳನ್ನು ಕಲೆ ಹಾಕುತ್ತಿದ್ದು, ತೆಂಕಬೆಳ್ಳೂರು ನಿವಾಸಿ ಅಭಿನ್ ರೈ, ಬಡಗಬೆಳ್ಳೂರು ನಿವಾಸಿ ತೇಜಾಕ್ಷ ಎಂಬಿಬ್ಬರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಾಗಿರುವ ಅಭಿನ್ ರೈ 2017 ಜೂನ್ 21 ರಂದು ನಡೆದ ಕಲಾಯಿ ಅಶ್ರಫ್ ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿದ್ದ. ಈತ ಭರತ್ ಕುಮ್ದೇಲ್ ಪ್ರಮುಖ ಸಹಚರನಾಗಿದ್ದಾನೆ. ರಹಿಮಾನ್ ಹತ್ಯೆ ಅಶ್ರಫ್ ಕಲಾಯಿ […]

Continue Reading

ನಳಿನ್ ಗೆ ಠಕ್ಕರ್..ಭಟ್ರ ‘ರಿಪಬ್ಲಿಕ್’.. ಕಲ್ಲಡ್ಕ ಫ್ಲೈ ಓವರ್: ಸರಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಗಾಢ ನಿದ್ರೆಯಲ್ಲಿ..?

ಕರಾವಳಿಯಲ್ಲಿ ಅನಧಿಕೃತ ಸರಕಾರ ಏನಾದರೂ ಅಸ್ತಿತ್ವದಲ್ಲಿದೆಯೋ ಅನ್ನುವ ಪ್ರಶ್ನೆ ಪದೇ ಪದೇ ಕಾಡುತ್ತಿದೆ. ಇದಕ್ಕೆ ಕಾರಣ ಸೋಮವಾರದಂದು ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾದ ನೂತನ ಮೇಲ್ಸೆತುವೆಯನ್ನು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸಿದ್ದಾರೆ. ಪೂಜೆ ಮಾಡಿ, ಭಾಷಣ ಮಾಡಿ, ಜೈ ಶ್ರೀರಾಮ್ ಘೋಷಣೆ ಕೂಗಿ ಪ್ಲೈ ಓವರ್ ಗೆ ಚಾಲನೆ ನೀಡಿದ್ದಾರೆ. ಮಾತ್ರವಲ್ಲ ಈ ಪ್ಲೈ ಓವರ್ ಗೆ ಶ್ರೀರಾಮ ಅಂತ ಹೆಸರಿಟ್ಟಿದ್ದಾರೆ. ಅಷ್ಟಕ್ಕೂ ಕಲ್ಲಡ್ಕ ಫ್ಲೈ ಓವರ್ ಉದ್ಘಾಟನೆ ಮಾಡಲು ಕಲ್ಲಡ್ಕ […]

Continue Reading

ನಿರುಪಯುಕ್ತ ಕಿಂಡಿ ಅಣೆಕಟ್ಟಿನಿಂದ ಕೃಷಿ ಜಮೀನು ಸರ್ವನಾಶ. ಅಧಿಕಾರಿಗಳ, ಬಂಟ್ವಾಳ ಶಾಸಕರ ನಿರ್ಲಕ್ಷ್ಯ.

ಜಮೀನು ರಕ್ಷಣೆಗಾಗಿ ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿರುವ 84 ವರ್ಷದ ವೃದ್ಧೆ ಶಕುಂತಳಾ ಶೇಖ. ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಕಿಂಡಿ ಅಣೆಕಟ್ಟು ಒಂದೇ ವರ್ಷದಲ್ಲಿ ಕುಸಿದು ಹೊಳೆ ಬದಿಯ ಕೃಷಿ ಜಮೀನು ಭಾರಿ ಪ್ರಮಾಣದಲ್ಲಿ ಕೊಚ್ಚಿ ಹೋಗುತ್ತಿದೆ. ತನ್ನ ಜಮೀನು ರಕ್ಷಿಸುವುದಕ್ಕಾಗಿ 84ವರ್ಷದ ವಯೋವೃದ್ಧೆ ಮಹಿಳೆ ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಕೊಳ್ನಾಡು ಗ್ರಾಮದ ಪೀಲ್ಯಡ್ಕ ನಿವಾಸಿ ಶಕುಂತಳಾ ಶೇಖ(84)ತನ್ನ ಜಮೀನು ಉಳಿಸುವುದಕ್ಕಾಗಿ ವಿವಿಧ ಇಲಾಖೆಗಳಿಗೆ ಅಲೆದಾಡುತ್ತಿರುವ ವೃದ್ಧೆ. ಕೊಳ್ನಾಡು ಗ್ರಾಮದ ಸ.ನಂ.157/6ರ […]

Continue Reading

ಅಬ್ದುಲ್‌ ರಹಿಮಾನ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಕರೆತಂದು, ಸ್ಥಳ ಮಹಜರು ನಡೆಸಿದ ಬಂಟ್ವಾಳ ಪೊಲೀಸರು

ಕೊಳ್ತಮಜಲು: ಇರಾ ಕೋಡಿಯಲ್ಲಿ ಮೇ 27ರಂದು ಸಂಜೆ ನಡೆದ ಪಿಕಪ್‌ ಚಾಲಕ ಅಬ್ದುಲ್‌ ರಹಿಮಾನ್‌ ಕೊಲೆ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬೆಳ್ತಂಗಡಿಯ ನಾಲ್ಕು ಸ್ಥಳಗಳಿಗೆ ಸೋಮವಾರ ಕರೆತಂದು ಮಹಜರು ನಡೆಸಿದ್ದಾರೆ. ಪ್ರಕರಣ ಸಂಬಂಧ ಐವರನ್ನು ಬಂಧಿಸಿ ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸ್‌ ಆರೋಪಿಗಳು ಓಡಾಡಿದ ವಿವಿಧ ಸ್ಥಳಗಳಿಗೆ ತೆರಳಿ ಮಹಜರು ಪ್ರಕ್ರಿಯೆ ಆರಂಭಿಸಿದ್ದಾರೆ. ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಮುಂಡರ ಕೋಡಿ ನಿವಾಸಿ ದೀಪಕ್‌ ಮತ್ತು ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಸುಮಿತ್‌ ಆಚಾರ್ಯ […]

Continue Reading

ತಿರುವೈಲ್, ನಾಲ್ಯಪದವು, ಹಳೆಕೋಟೆ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ: ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಆರ್ ಈಶ್ವರ ಭಾಗಿ

ಮಳೆಯ ಕಾರಣದಿಂದ ಮೇ ಅಂತ್ಯಕ್ಕೆ ಆರಂಭಗೊಳ್ಳಬೇಕಿದ್ದ ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷ ಜೂನ್ 2 ರಂದು ಆರಂಭವಾಗಿದ್ದು , ರಾಜ್ಯದಾದ್ಯಂತ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಿದವು. ಇದರ ಭಾಗವಾಗಿ ಮಂಗಳೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಿರುವೈಲ್, ನಾಲ್ಯಪದವು ಸರಕಾರಿ ಶಾಲೆ ಹಾಗೂ ಉಳ್ಳಾಲದ ಹಳೆ ಕೋಟೆ ಸೈಯದ್ ಮದನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಆರ್ ಈಶ್ವರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸರ್ಕಾರಿ ಹಿರಿಯ […]

Continue Reading

ಕುಪ್ಪೆಪದವು: ನಿವೇಶನ ಸಂತ್ರಸ್ತರ ಅನಿರ್ಧಿಷ್ಟಾವಧಿ ಧರಣಿ ನಾಲ್ಕನೇ ದಿನಕ್ಕೆ

ಇ ಒ, ತಹಶೀಲ್ದಾರ್ ರವರ ಭರವಸೆಗೆ ಜಗ್ಗದೆ, ಸತತವಾಗಿ ಸುರಿಯುತ್ತಿರುವ ಮಹಾಮಳೆಯನ್ನೂ ಲೆಕ್ಕಿಸದೆ ಧರಣಿ ಮುಂದುವರಿಸಿದ ಸಂತ್ರಸ್ತರು ಮಂಗಳೂರು ತಾಲೂಕಿನ ಗುರುಪುರ ಹೋಬಳಿಯ ಕುಪ್ಪೆಪದವು ಗ್ರಾಮದಲ್ಲಿ ಸ್ವಂತ ಮನೆ, ಸ್ವಂತ ಭೂಮಿ ಇಲ್ಲದ ನೂರಾರು ಬಡ ಕುಟುಂಬಗಳು ದಶಕದಿಂದ ನಿವೇಶನಕ್ಕಾಗಿ ಕುಪ್ಪೆಪದವು ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದರು. ಆರು ವರ್ಷಗಳ ಹಿಂದೆ ಚುನಾವಣಾ ಪೂರ್ವದಲ್ಲಿ ಬಹಳ ತರಾತುರಿಯಿಂದ ಶಾಸಕ ಭರತ್ ಶೆಟ್ಟಿ 97 ಕುಟುಂಬಗಳಿಗೆ ನಿವೇಶನ ತೋರಿಸಿ ಹಕ್ಕು ಪತ್ರ ವಿತರಿಸಿದರು. ಆದರೆ, ಹಕ್ಕುಪತ್ರ […]

Continue Reading

ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ ಹಿಂಸೆ ಹರಡುವವರಿಗೆ ಎಫ್ ಐ ಆರ್ ಭಾಗ್ಯ

ಕಲ್ಲಡ್ಕ ಭಟ್ರು ಮೇಲೂ ಬಿತ್ತು ಕೇಸು..ಕಡಬ ಠಾಣೆಗೆ ಅಕ್ರಮ ಪ್ರವೇಶಗೈದ 15 ಸಂಘಪರಿವಾರ ಕಾರ್ಯಕರ್ತರ ಮೇಲೂ ಎಫ್ ಐ ಆರ್ ಕೋಮು ಅಶಾಂತಿಯ ಕುಲುಮೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳ ಸರಣಿ ಬೇಟೆ ಅಶಾಂತಿಯನ್ನು ಹತ್ತಿಕ್ಕುವಲ್ಲಿ ಪೂರಕವಾಗುತ್ತಿದೆ. ಹಿಂಸೆ ಹರಡುವವರಿಗೆ ಮುಲಾಜಿಲ್ಲದೆ ಎಫ್ ಐ ಆರ್ ದಾಖಲಿಸುತ್ತಿದ್ದಾರೆ. ಇದರಿಂದ ಹಿಂಸೆ ಹರಡುವವರ ಜಂಘಾಬಲ ಹುಡುಗಿ ಹೋಗುವಂತಾಗಿದೆ. ಮಂಗಳೂರಿನ ಜನತೆ ಇದೀಗ ರಾಜಕಾರಣಿಗಳಲ್ಲಿ ಭರವಸೆ ಇಟ್ಟಿಲ್ಲ. ಬದಲಾಗಿ ಇಬ್ಬರು ದಕ್ಷ ಪೊಲೀಸ್ ಅಧಿಕಾರಿಗಳ ಮೇಲೆ ಭರಪೂರ […]

Continue Reading