ರಾಷ್ಟ್ರೀಯ ಚಿನ್ನದ ಪದಕ ವಿಜೇತ ವಾಫಿ ಅಬ್ದುಲ್ ಹಕೀಂ ಕರ್ನಾಟಕದ ಏಕೈಕ ಪ್ರತಿನಿಧಿ

ರಾಷ್ಟ್ರೀಯ ಚಿನ್ನದ ಪದಕ ವಿಜೇತ ವಾಫಿ ಅಬ್ದುಲ್ ಹಕೀಂ ಅವರು 5 ನೇ ವಯಸ್ಸಿನಲ್ಲಿ ಬ್ಯಾಕ್‌ಸ್ಟ್ರೋಕ್‌ನಿಂದ ಈಜಲು ಪ್ರಾರಂಭಿಸಿದರು ಮತ್ತು ನಂತರ ಎಲ್ಲಾ ಸ್ಟ್ರೋಕ್‌ಗಳನ್ನು ಕರಗತ ಮಾಡಿಕೊಂಡಿದ್ದಾರೆ. ಪ್ರತಿಯೊಂದರಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ಅವರು ಪ್ರಸ್ತುತ ದಿ ಯೆನೆಪೋಯ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾರೆ. ವಿದ್ಯಾರ್ಥಿ ವಾಫಿ ಶ್ರೀ ರಾಜೇಶ್ ಮತ್ತು ಶ್ರೀಮತಿ ಯಶೋದಾ ಅವರ ಮಾರ್ಗದರ್ಶನದಲ್ಲಿ ಬೆಳಿಗ್ಗೆ ತರಬೇತಿ ಪಡೆಯುತ್ತಿದ್ದಾರೆ. ಸಾಯಂಕಾಲ, ಅವರು ಜೈಹಿಂದ್ ಸ್ವಿಮ್ಮಿಂಗ್ ಕ್ಲಬ್‌ನೊಂದಿಗೆ ಮಂಗಳಾ ಸ್ಟೇಡಿಯಂ ಕಾರ್ಪೊರೇಷನ್ ಪೂಲ್‌ನಲ್ಲಿ ಅಭ್ಯಾಸ ಮಾಡುತ್ತಾರೆ. ಮುಖ್ಯ ತರಬೇತುದಾರ […]

Continue Reading

ಮಂಗಳೂರು ನಗರ ಪಾಲಿಕೆಯ ಟಿಡಿಆರ್ ದಂಧೆಯ ಕುರಿತು ನಗರಾಭಿವೃದ್ದಿ ಸಚಿವರಾದ ಬೈರತಿ ಸುರೇಶ್ ಅವರಿಗೆ ಬಹಿರಂಗ ಪತ್ರ

ಕರ್ನಾಟಕ ರಾಜ್ಯ ಸರಕಾರದ ನಗರಾಭಿವೃದ್ದಿ ಸಚಿವರಾದ ಗೌರವಾನ್ವಿತ ಬೈರತಿ ಸುರೇಶ್ ಅವರಿಗೆ ಪ್ರೀತಿ ಪೂರ್ವಕ ನಮಸ್ಕಾರ. ತಾವು ಆರೋಗ್ಯವಾಗಿದ್ದೀರಿ ಎಂದು ಭಾವಿಸುತ್ತೇವೆ. ಕರ್ನಾಟಕದ ಸಿದ್ದರಾಮಯ್ಯ ಸರಕಾರದಲ್ಲಿ ಪ್ರಥಮ ಹಂತದಲ್ಲೇ ಸಂಪುಟ ದರ್ಜೆಯ ಸಚಿವರಾಗಿ ನಗರಾಭಿವೃದ್ದಿ ಇಲಾಖೆಯ ಜವಾಬ್ದಾರಿಯನ್ನು ತಾವು ಹೊತ್ತಾಗ ಮಂಗಳೂರಿನಲ್ಲೂ ಸಂತಸ ವ್ಯಕ್ತವಾಗಿತ್ತು. ಬಿಜೆಪಿ ಆಡಳಿತದಲ್ಲಿ ಹಳಿತಪ್ಪಿರುವ, ಭ್ರಷ್ಟಾಚಾರದಲ್ಲಿ ಮುಳುಗಿರುವ ಮಂಗಳೂರು ನಗರ ಪಾಲಿಕೆಯ ಆಡಳಿತವನ್ನು ಸಂಪುಟದಲ್ಲಿ ಅತ್ಯಂತ ಪ್ರಭಾವಿಗಳು, ಮುಖ್ಯಮಂತ್ರಿಗಳ ಆಪ್ತರು, ಉತ್ಸಾಹಿಗಳು ಎಂದು ಭಾವಿಸಲಾದ ತಾವು ಹಳಿಗೆ ತರಬಲ್ಲಿರಿ ಎಂಬ ನಿರೀಕ್ಷೆ ಗರಿಗೆದರಿತ್ತು. […]

Continue Reading

ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳ ಹೆಸರನ್ನು ಬದಲಾವಣೆಗೆ ಮುಂದಾದ ಕೇಂದ್ರ ಸರಕಾರ

ಕರ್ನಾಟಕದ ನಾಲ್ಕು ವಿಮಾನ ನಿಲ್ದಾಣಗಳ ಹೆಸರನ್ನು ಬದಲಾವಣೆ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಈ ಸಂಬಂಧ ನಾಗರಿಕ ವಿಮಾನಯಾನ ಸಚಿವಾಲಯವು ಕರ್ನಾಟಕದಲ್ಲಿರುವ ನಾಲ್ಕು ವಿಮಾನ ನಿಲ್ದಾಣಗಳಿಗೆ ಗಣ್ಯ ವ್ಯಕ್ತಿಗಳ ಹೆಸರನ್ನು ಇಡುವಂತೆ ರಾಜ್ಯ ಸರ್ಕಾರದಿಂದ ಮನವಿಯನ್ನು ಸ್ವೀಕರಿಸಿದೆ. ವಿಜಯಪುರ ವಿಮಾನ ನಿಲ್ದಾಣ, ಹುಬ್ಬಳ್ಳಿ ವಿಮಾನ ನಿಲ್ದಾಣ, ಬೆಳಗಾವಿ ವಿಮಾನ ನಿಲ್ದಾಣ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣ. ಇವುಗಳಿಗೆ ರಾಜ್ಯ ಸರ್ಕಾರದ ಪ್ರಸ್ತಾವಿತ ಹೆಸರುಗಳು ಜಗಜ್ಯೋತಿ ಬಸವೇಶ್ವರ ವಿಮಾನ ನಿಲ್ದಾಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಮಾನ ನಿಲ್ದಾಣ, ಕಿತ್ತೂರು […]

Continue Reading

ಮೂಡಾ, ವಾಲ್ಮೀಕಿ ಕರ್ಮಕಾಂಡದ ಬೆನ್ನಲ್ಲೇ ‘ನರ್ಸಿಂಗ್’ ಕರ್ಮಕಾಂಡ; ಪ್ರಭಾವಿಗಳ ಹೆಸರು ಥಳುಕು

ಪ್ರಧಾನಿ, ಕೇಂದ್ರ ಗೃಹ ಸಚಿವರಿಗೆ ದೂರು ನೀಡಿದ ಸೋನಿಯಾ. ರಾಜೀವ್ ಗಾಂಧಿ ವಿವಿ ಸಿಂಡಿಕೇಟ್ ಸದಸ್ಯರಾಗಲು ಲಕ್ಷಾಂತರ ರೂ ಲಂಚ .! ಬೆಂಗಳೂರು (ನವದೆಹಲಿ): ಮೂಡಾ ಅಕ್ರಮ, ವಾಲ್ಮಿಕಿ ನಿಗಮದ ಕರ್ಮಕಾಂಡಗಳು ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿರುವಾಗಲೇ ಇದೀಗ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ (RGUHS) ವ್ಯಾಪ್ತಿಯಲ್ಲೂ ಭಾರೀ ಅಕ್ರಮ ನಡೆದಿದೆಯೆಂದು ಪ್ರಭಾವಿಗಳ ಹೆಸರು ಉಲ್ಲೇಖಿಸಿ ದೂರು ನೀಡಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಸಿಂಡಿಕೇಟ್ ಸದಸ್ಯರಾಗಲು ಲಕ್ಷಾಂತರ ರೂಪಾಯಿ ಡೀಲ್ ಕುದುರಿಸಬೇಕಿದ್ದು, ಆ ಹಣ ವಸೂಲಿಗಾಗಿ […]

Continue Reading

ಸಂಚಾರ ನಿಯಮ ಉಲ್ಲಂಘನೆ ವಿರುದ್ದ ಪೊಲೀಸರಿಂದ ವಿಶೇಷ ಕಾರ್ಯಾಚರಣೆ

ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡಿದರೆ BSN 281 ಅಡಿಯಲ್ಲಿ, 184 IMV ಕಾಯ್ದೆಯಡಿ FIR ದಾಖಲು ಬೆಂಗಳೂರು: ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಘಟಕಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಚರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಮುಖ್ಯವಾಗಿ ಅಪಘಾತಕ್ಕೆ ಕಾರಣವಾಗಿರುವ ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ ಎಲ್​ಇಡಿ ಲೈಟ್​ ಅಳವಡಿಸಿರುವ ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ರಾಜ್ಯಾದ್ಯಂತ ವಿಶೇಷ ಕಾರ್ಯಚರಣೆ ನಡೆಸಲಾಗಿದೆ. ಇದರ ಜೊತೆಗೆ ಇದೀಗ ವಿರುದ್ಧ ದಿಕ್ಕಿನಲ್ಲಿ ವಾಹನ […]

Continue Reading

ನಕಲಿ ವೈದ್ಯರ ಹಾವಳಿ ತಡೆಗೆ ರಾಜ್ಯ ಸರ್ಕಾರದ ಮಹತ್ವದ ಕ್ರಮ; 25 ಲಕ್ಷದವರೆಗೆ ದಂಡ, 3 ವರ್ಷ ಶಿಕ್ಷೆ.

ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ತಡೆಗೆ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ನಕಲಿ ವೈದ್ಯರೆಂದು ಕಂಡುಬಂದರೆ ರೂಪಾಯಿ 25 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ವಿಧಾನ ಮಂಡಲ ಕಲಾಪದಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವ ದಿನೇಶ್‌ ಗುಂಡೂರಾವ್‌, ರಾಜ್ಯದಲ್ಲಿ ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಕನಿಷ್ಠ 3 ವರ್ಷ ಜೈಲು ಶಿಕ್ಷೆಯಾಗುವಂತೆ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗುತ್ತಿದೆ. ನಕಲಿ ವೈದ್ಯರ ಹಾವಳಿ ತಡೆಗೆ ಅಲೋಪತಿ ಆಸ್ಪತ್ರೆಗಳು ನೀಲಿ […]

Continue Reading

ಸಾರ್ವಜನಿಕ ಸ್ಥಳದಲ್ಲಿ ತೂರಾಡುತ್ತಿದ್ದ ಡ್ರಗ್ಸ್ ವ್ಯಸನಿಗಳ ಹಿಡಿದು ಬಂಟ್ವಾಳ ಪೊಲೀಸರ ವಶಕ್ಕೆ ಒಪ್ಪಿಸಿದ ಸ್ಥಳೀಯರು

ಬಂಟ್ವಾಳ: ಠಾಣಾ ವ್ಯಾಪ್ತಿಯ ಕುಕ್ಕಾಜೆ ಪೇಟೆಯ ಸಾರ್ವಜನಿಕ ಸ್ಥಳದಲ್ಲಿ ಡ್ರಗ್ಸ್ ನಶೆಯಲ್ಲಿ ತೂರಾಡುತ್ತಾ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದ ಮೂವರು ಯುವಕರನ್ನು ಸ್ಥಳೀಯರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.ಕುಕ್ಕಾಜೆ ಪೇಟೆಯಲ್ಲಿ ಬೆಳ್ಳಂಬೆಳಗ್ಗೆಯೇ ನಂದಾವರ, ಲೊರೆಟ್ಟೊಪದವು ಮತ್ತು ಕುಕ್ಕಾಜೆಯ ಮೂವರು ಯುವಕರು ಡ್ರಗ್ ನಶೆಯಲ್ಲಿ ತೇಲಾಡುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರು. ಕೆಲದಿನಗಳ ಹಿಂದಷ್ಟೇ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ನಾರ್ಶ KPಬೈಲಿನ ಮನೆಯೊಂದರಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದಾಗ ಸಾರ್ವಜನಿಕರು ಸುತ್ತುವರಿದು ತರಾಟೆಗೆ ತೆಗೆದುಕೊಂಡಿದ್ದರು. ವಿಟ್ಲ ಪೊಲೀಸರು ಬರುವಷ್ಟರಲ್ಲಿ ಸ್ಥಳದಿಂದ […]

Continue Reading

ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯದ ಈ ಚಕ್ರವು ನಮ್ಮ ರಾಜ್ಯದ ಮೂಲಸೌಕರ್ಯವನ್ನು ಹಾಳುಮಾಡಿದೆ.

ಶಿರೂರು ಭೂಕುಸಿತ: ಹೊಣೆಗಾರಿಕೆ ಮತ್ತು ಕ್ರಮಕ್ಕಾಗಿ ಹೃದಯಪೂರ್ವಕ ಮನವಿ ✍️. ಇಸ್ಮಾಯಿಲ್. ಎಸ್, ವಕೀಲರು ಕಳೆದ ಮಂಗಳವಾರ ಬೆಳಗ್ಗೆ ಅಂಕೋಲಾ ಬಳಿಯ ಪ್ರಶಾಂತವಾದ ಶಿರೂರು ಗ್ರಾಮವು ಹತಾಶೆ ಹಾಗೂ ಕಣ್ಣೀರಿನ ಆಗರವಾಗಿ ಮಾರ್ಪಟ್ಟಿತ್ತು. ಮಾನವ ನಿರ್ಮಿತ ಭೂಕುಸಿತವು ಕನಿಷ್ಠ ಹತ್ತು ಜನರನ್ನು ಮತ್ತು ಹಲವಾರು ವಾಹನಗಳನ್ನು ನೆಲ-ಜಲ ಸಮಾಧಿ ಮಾಡಿತು, ಇಡೀ ಊರಿಗೆ ಊರೇ ಛಿದ್ರಗೊಂದು, ಜನ ಜಾನುವಾರುಗಳನ್ನು ಕಣ್ಣೀರಿನ ಕಡಲಲ್ಲಿ ಮುಳುಗಿಸಿದೆ. ಭೂ ಕುಸಿತಕ್ಕೆ ಬಲಿಯಾದವರಲ್ಲಿ, ಐವರು ಒಂದೇ ಕುಟುಂಬದವರು NH 66 ರ ಪಕ್ಕದಲ್ಲಿ […]

Continue Reading

ಮುಸ್ಲೀಮರನ್ನು ಕಟಕಟೆಯಲ್ಲಿ ನಿಲ್ಲಿಸಿದ್ರಾ ಪುರುಷೋತ್ತಮ ಬಿಳಿಮಲೆ.?

ಕನ್ನಡ ಓದಲು-ಬರೆಯಲು ಬಾರದ ಲಕ್ಷಾಂತರ ಜನ ಕರ್ನಾಟಕದಲ್ಲಿದ್ದಾರೆ. ಅದರಲ್ಲಿ ಮುಸ್ಲೀಮರ ಸಂಖ್ಯೆ ಅತ್ಯಲ್ಪ ಪ್ರಮಾಣದ್ದು. ಕನ್ನಡ ಮಾಧ್ಯಮ ಶಾಲೆ-ಕಾಲೇಜುಗಳಲ್ಲಿ ಶಿಕ್ಷಣ ಪಡೆಯದೇ ಇರುವುದೇ ಹೊರತು ಮದರಸಾವಲ್ಲ. ✍️. ನವೀನ್ ಸೂರಿಂಜೆ, ಪತ್ರಕರ್ತರು ಮದರಸಾದಲ್ಲಿ ‘ಕನ್ನಡ ಕಲಿಕೆ’ ಎಂಬ ಸರ್ಕಾರಿ ಕಾರ್ಯಕ್ರಮ ಯೋಜನೆಯನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರ ಯಾಕೆ ಕೈಬಿಟ್ಟಿತು ಎಂಬುದನ್ನು ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆಯವರು ಸ್ಪಷ್ಟವಾಗಿ ಹೇಳಬೇಕಿತ್ತು. “ವಿರೋಧ ಪ್ರಕಟವಾದ್ದರಿಂದ ಆ ವಿಷಯವನ್ನು ಕೈ ಬಿಡಲಾಗಿದೆ” ಎಂದು ಹೇಳಿ ಸುಮ್ಮನಾದರೆ “ಇದು ಅತಿಯಾಯ್ತು. ಕನ್ನಡ ಕಲಿಯುವುದಕ್ಕೂ ಮುಸ್ಲೀಮರ […]

Continue Reading

ಮದರಸಾಕ್ಕೆ ‘ನುಗ್ಗುವ ಸರ್ಕಾರಿ ಕನ್ನಡ ಕಾಳಜಿ’ಯ ಅಪಾಯಗಳು.!

ಮುಸ್ಲೀಮರಿಗೆ ಕನ್ನಡ ಬರಲ್ಲ ಎನ್ನುವುದಕ್ಕೂ ಮದರಸಾಕ್ಕೂ ಏನು ಸಂಬಂಧ.? ಕನ್ನಡ ಬಾರದೇ ಇದ್ದಾರೆ ಅದಕ್ಕೆ ಕಾರಣ ಶಿಕ್ಷಣದ ಕೊರತೆಯೇ ಹೊರತು ಮದರಸವಲ್ಲ. ✍️. ನವೀನ್ ಸೂರಿಂಜೆ,ಪತ್ರಕರ್ತ ‘ಮದರಸದಲ್ಲಿ ಕನ್ನಡ ಜಾರಿ’ ಇದು ಸರಕಾರವೊಂದು ಮಾಡಬೇಕಾದ ಆಧ್ಯತೆಯ ಕೆಲಸವಲ್ಲ. ಮದರಸ ಮಾತ್ರವಲ್ಲ, ಸಂಸ್ಕೃತ ವೇದ ಪಾಠ ಶಾಲೆ, ಕ್ರಿಶ್ಚಿಯನ್ನರ ಅಡಾರೇಷನ್ ಸೆಂಟರ್ ಗಳಲ್ಲೂ ಕನ್ನಡ ಕಡ್ಡಾಯ ಮಾಡುವುದು ಸರ್ಕಾರಿ ಪ್ರಾಧಿಕಾರದ ಕೆಲಸವಲ್ಲ. ಮುಸ್ಲೀಮರ ಮೇಲಿನ ಸಾವಿರಾರು ಆರೋಪಗಳಿಗೆ ಮದರಸಾ ಕಾರಣವಾಗಿರುವಂತೆ ಮುಸ್ಲೀಮರಿಗೆ ಕನ್ನಡ ಬರಲ್ಲ ಎಂಬ ಆರೋಪಕ್ಕೂ ಮದರಸಾವೇ […]

Continue Reading