ವಜಾಗೊಂಡ ಪೊಲೀಸಪ್ಪನಿಂದ ಲೋಕಾಯುಕ್ತರ ಹೆಸರಿನಲ್ಲಿ ಹಣ ವಸೂಲಿ.!

ಅಧಿಕಾರಿಗಳೇ ಎಚ್ಚರ.. ವಸೂಲಿಗಾರ ಬಂದಾನು. ಕೆಲವು ಅಧಿಕಾರಿಗಳಿಗೆ ದೂರವಾಣಿ ಕರೆಯೊಂದು ಬರುತ್ತಿದ್ದು ಆ ಕರೆಯಲ್ಲಿ ನಾನು ಚಿಕ್ಕಮಗಳೂರು ಲೋಕಾಯುಕ್ತ ಅಧಿಕಾರಿ ನೋಡು ನಿನ್ನ ಬಗ್ಗೆ ದೂರು ಬಂದಿದೆ ಕೂಡಲೇ ಬಂದು ನಾನು ತಿಳಿಸಿದ ಅಕೌಂಟಿಗೆ ಹಣ ಹಾಕಿದರೇ ನೀನು ಸೇಫಾಗುತ್ತಿಯಾ. ಇಲ್ಲದಿದ್ದರೆ ಜೈಲಿಗೆ ಹೋಗುತ್ತಿಯಾ ಯಾವುದು ಬೇಕು ನಿನಗೆ ಎಂದು ವ್ಯಕ್ತಿಯೊಬ್ಬನಿಂದ ಪೋನ್ ಬಂದಾಕ್ಷಣ ಕಕ್ಕಾಬಿಕ್ಕಿಯಾದ ಅಧಿಕಾರಿಗಳು ಆ ವ್ಯಕ್ತಿ ಹೇಳಿದ ಅಕೌಂಟ್ ಗೆ ಹಣ ಹಾಕಿರುವ ಪ್ರಕರಣ ವರದಿಯಾಗಿದೆ. ಈ ಹಿಂದೆ ಶೃಂಗೇರಿ ಮತ್ತು ಕಡೂರು […]

Continue Reading

ನರೇಗಾ ಕಾಮಗಾರಿಯಲ್ಲಿ ಅವ್ಯವಹಾರ; ತನಿಖೆ ನಡೆಸಿ ದಂಡ ಹಾಕಿದ ಒಂಬಡ್ಸ್ ಮನ್

ಮೂಡಿಗೆರೆ : ತಾಲ್ಲೂಕಿನ ತರುವೆ ಗ್ರಾಮ ಪಂಚಾಯಿತಿಯಲ್ಲಿ 2023-24ನೇ ಸಾಲಿನಲ್ಲಿ ನರೇಗಾ ಕಾಮಗಾರಿಯಲ್ಲಿ ಅವ್ಯವಹಾರ ನಡದಿದೆ ಎಂದು ತರುವೆ ಗ್ರಾಮದ ಸಾಗರ್ ಎಂಬವರು ದೂರು ನೀಡಿದ ಹಿನ್ನಲೆಯಲ್ಲಿ ತನಿಖೆ ನಡೆಸಿದ ಒಂಬಡ್ಸ್‌ಮನ್ ಅಧಿಕಾರಿ ನಟರಾಜ ಪರಿಶೀಲನೆ ನಡೆಸಿ ಅವ್ಯವಹಾರ ನಡೆದಿದ್ದು ಸ್ಪಷ್ಟವಾದ ಕಾರಣ ಅಧ್ಯಕ್ಷರ ಸಹಿತ ಇಬ್ಬರು ಪಿಡಿಒಗಳು, ಕಛೇರಿಯ ಸಿಬ್ಬಂಧಿಗಳಿಬ್ಬರು ಮತ್ತು ನರೇಗಾ ಅಭಿಯಂತರರೋರ್ವರಿಗೆ ಹಾಗೂ ಕಾಯಕಬಂಧುಗಳಿಗೆ ದಂಢ ವಿಧಿಸಿ ಕ್ರಮ ಜರುಗಿಸುವಂತೆ ಆದೇಶ ನೀಡಿರುವ ಪ್ರಕರಣ ವರದಿಯಾಗಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಒಂಬಡ್ಸ್ […]

Continue Reading

ಕುರಿಗಳನ್ನು ಕಾರಿಗೆ ತುಂಬಿಸಿ ಕಳ್ಳತನ ಮಾಡುತ್ತಿದ್ದ ಖದೀಮರು; ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ನಾಗರಿಕರು

ರಸ್ತೆಬದಿಯಲ್ಲಿ ಮೇಯುತ್ತಿದ್ದ ಕುರಿಗಳನ್ನು ರಾಜಾರೋಷವಾಗಿ ಕಾರಿಗೆ ತುಂಬಿಸಿ ಕದ್ದೊಯ್ಯುತ್ತಿದ್ದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ಅತ್ತಿಗೆರೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ಮೇಯುತ್ತಿದ್ದ ಕುರಿಗಳನ್ನು ಕಳ್ಳತನ ಮಾಡಿ ಅಪಹರಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಭದ್ರಾವತಿಯ ಜಬೀವುಲ್ಲಾ ಮತ್ತು ಕುಟುಂಬದವರು ಕಾರಲ್ಲಿ ಸಂಚರಿಸುವಾಗ ಕೊಟ್ಟಿಗೆಹಾರದ ಅತ್ತಿಗೆರೆ ಬಳಿ ಸಮೀಪ ಮೇಯುತ್ತಿದ್ದ ಕುರಿಮಂದೆಯನ್ನು ಕಂಡು ಕುರಿಗಳನ್ನು ಕಳ್ಳತನ ಮಾಡುವ ಉದ್ದೇಶದಿಂದ ಕಾರು ನಿಲ್ಲಿಸಿ ಐದು ಕುರಿಗಳನ್ನು ಹಿಡಿದು ಕಾರಿಗೆ ತುಂಬಿಸಿದ್ದಾರೆ. […]

Continue Reading

ಗುಜುರಿಗೆ ಪಶು ಔಷಧಿಗಳು. ಪತ್ರಕರ್ತರನ್ನು ಕಂಡು ದಂಗಾದ ಪಶು ವೈಧ್ಯರು.! ಗುಜುರಿ ತುಂಬಲು ಬಂದ ಆಟೋವನ್ನು ವಾಪಾಸು ಕಳಿಸಿದ ವೈಧ್ಯ ಮಹಾಶಯ

ಮೂಡಿಗೆರೆ :ಸರ್ಕಾರದಿಂದ ಬಂದಂತಹ ಸಿರಿಂಜ್ ಔಷಧಿಗಳನ್ನು ಉಚಿತವಾಗಿ ಕೊಡುವ ಬದಲು ಗುಜುರಿಗೆ ಹಾಕಲು ಸಿದ್ದರಿರುವಾಗ ಪತ್ರಕರ್ತರನ್ನು ಕಂಡ ವೈಧ್ಯರು ಬೆಚ್ಚಿ ಬಿದ್ದ ಪ್ರಕರಣ ವರದಿಯಾಗಿದೆ. ಮೂಡಿಗೆರೆ ಪಶುವೈದ್ಯ ಇಲಾಖೆಗೆ ಸರ್ಕಾರದಿಂದ ಬಂದಂತಹ ಸಿರಿಂಜ್ ಔಷಧಿಗಳನ್ನು ಉಚಿತವಾಗಿ ಕೊಡುವ ಬದಲು ಕೆಲವು ಔಷಧಿ ಅಂಗಡಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವ ಪಶು ವೈಧ್ಯರು. ಪ್ರಾಣಿಗಳಿಗೆ ಅವುಗಳ ಮಾಲೀಕರಿಂದ ಸಿರಿಂಜ್ ಸೇರಿದಂತೆ ಅದಕ್ಕೆ ಬೇಕಾಗುವಂತಹ ಔಷಧಿಗಳನ್ನು ಚೀಟಿಯಲ್ಲಿ ಬರೆದುಕೊಟ್ಟು, ತಾವು ತಿಳಿಸಿದ ಅಂಗಡಿಯಿಂದ ತರಿಸಿ ನೀಡುತ್ತಿರುವ ವಿಚಾರ ಕೆಲವು ತಿಂಗಳುಗಳಿಂದ ನಡೆಯುತ್ತಿದೆ […]

Continue Reading

ಲೈಂಗಿಕ ಕಾರ್ಯಕರ್ತರ ವಿರುದ್ಧ ಪೊಲೀಸ್ ದೌರ್ಜನ್ಯ ಪ್ರಕರಣ; ರಾಜ್ಯ ಸರಕಾರದಿಂದ ಪರಿಹಾರ ವಿತರಣೆ: ಪಿಯುಸಿಎಲ್ ಸ್ವಾಗತ

ಪಿಯುಸಿಎಲ್-ಕರ್ನಾಟಕವು ಮಹಿಳಾ ಮತ್ತು ತೃತೀಯಲಿಂಗಿ ಲೈಂಗಿಕ ಕಾರ್ಯಕರ್ತರ ಮೇಲಿನ ದೌರ್ಜನ್ಯಕ್ಕೆ ಶಿಕ್ಷೆಯನ್ನು ಕೊನೆಗೊಳಿಸುವ ಐತಿಹಾಸಿಕ ಮೊದಲ ಹೆಜ್ಜೆಯಾಗಿ ಪೊಲೀಸ್ ದೌರ್ಜನ್ಯವನ್ನು ಎದುರಿಸಿದ ಲೈಂಗಿಕ ಕಾರ್ಯಕರ್ತರಿಗೆ ಪರಿಹಾರ ನೀಡುವುದುನ್ನು ಸ್ವಾಗತಿಸಿದೆ. ಪಿಯುಸಿಎಲ್ ಕರ್ನಾಟಕವು, ರಾಜ್ಯ ಮಾನವ ಹಕ್ಕು ಆಯೋಗದ ಆದೇಶದ ಅನುಸಾರವಾಗಿ, ಪೊಲೀಸ್ ಅಧಿಕಾರಿಗಳು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವುದಿಲ್ಲ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಾರ್ಯಕರ್ತೆಯರು ಮತ್ತು ತೃತೀಯ ಲಿಂಗಿಗಳನ್ನು ಥಳಿಸುವುದಿಲ್ಲ ಎಂದು ನ್ಯಾಯಸಮ್ಮತವಾದ ನಿರೀಕ್ಷೆಯನ್ನು ಹೊಂದಿದೆ. ಪೊಲೀಸ್ ಸಂವೇದನಾ ತರಬೇತಿಗಳನ್ನು ನಡೆಸುವ […]

Continue Reading

ಸುಳ್ಳು ದಾಖಲೆ ನೀಡಿ ವಂಚಿಸಿದ ಸಹ ಶಿಕ್ಷಕಿ ಭಾರತಿ ಪ್ರಕರಣ; ತನಿಖೆಗೆ ಸೂಚಿಸಿದ ಜಿ.ಪಂ. ಸಿಇಓ

ಮೂಡಿಗೆರೆ : ವೈದ್ಯಕೀಯ ಮರು ವೆಚ್ಚ ಪಾವತಿಯಲ್ಲಿ ಸುಳ್ಳು ದಾಖಲೆ ನೀಡಿ 3.40 ಲಕ್ಷ ರೂ ವಂಚಿಸಿದ ಪ್ರಕರಣ ವಾರಪತ್ರಿಕೆಯಲ್ಲಿ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾ ಪಂಚಾಯತ್ ಸಿಇಒ ಡಾ.ಗೋಪಾಲಕೃಷ್ಣ ಅವರು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಕ ಅಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಹ ಶಿಕ್ಷಕಿಯ ಸಂಪೂರ್ಣ ದಾಖಲೆಗಳನ್ನು ಕೂಡಲೆ ತಮಗೆ ಒಪ್ಪಿಸುವಂತೆ ಮತ್ತು ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ. ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಕಛೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಹಠಾತ್ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರು […]

Continue Reading

ಕಾಸರಗೋಡು ಖಾಸಗಿ ಬಸ್ ಪಲ್ಟಿ, ಚಾಲಕ ಸಾವು; 20 ಮಂದಿ ಗಾಯ

ಕಾಸರಗೋಡು ಪೆರಿಯ ರಸ್ತೆಯಲ್ಲಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಚಾಲಕ ಸಾವನ್ನಪ್ಪಿದ್ದಾನೆ. ಇಪ್ಪತ್ತು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮಂಗಳೂರಿನಿಂದ ಕಣ್ಣೂರಿಗೆ ಹೋಗುತ್ತಿದ್ದ ಮೆಹಬೂಬ್ ಬಸ್ ಅಪಘಾತಕ್ಕೀಡಾಗಿದೆ. ಗಾಯಾಳುಗಳನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಕಾಸರಕೋಟ್ ಮಧೂರು ರಾಮನಗರ ಮೂಲದ ಚೇತನ್ ಕುಮಾರ್ (37) ಮೃತ ವ್ಯಕ್ತಿ. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತ […]

Continue Reading

ಅಲೆಮಾರಿ ಶಿಳ್ಳೆಕ್ಯಾತ ಸಮುದಾಯಕ್ಕೆ ಮೀನು ಹಿಡಿಯಲು ನಿರ್ಬಂಧ, ದೌರ್ಜನ್ಯ ಎಸಗಿದವರ ಮೇಲೆ ಕ್ರಮಕ್ಕೆ ಒತ್ತಾಯ: ಸಂತೋಷ್ ಬಜಾಲ್

ಕುಂದಾಪುರ: ಕುಂದಾಪುರ ತಾಲೂಕಿನ ಗುಲ್ವಾಡಿ ಅಣೆಕಟ್ಟು ಬಳಿ ನದಿ ತೀರದಲ್ಲಿ ಕಳೆದ 40 ವರುಷಗಳಿಂದ ತೆಪ್ಪದ ಮೂಲಕ ಮೀನುಹಿಡಿದು ಜೀವಿಸುತ್ತಿರುವ ಅಲೆಮಾರಿ ಶಿಳ್ಳೆಕ್ಯಾತ (ಬುಡಕಟ್ಟು) ಸಮುದಾಯಕ್ಕೆ ಸೇರಿದ 6 ಕುಟುಂಬಗಳಿಗೆ ಕಳೆದ ಕೆಲವು ದಿನಗಳಿಂದ ಸ್ಥಳೀಯ ಕೆಲವೊಂದು ವ್ಯಕ್ತಿಗಳು ಮೀನು ಹಿಡಿಯಲು ನಿರ್ಬಂಧ ಹೇರಿ ನಿರಂತರ ದೌರ್ಜನ್ಯ ನಡೆಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತ ಮತ್ತು ಮೀನುಗಾರಿಕಾ ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಕರಾವಳಿ ವೃತ್ತಿನಿರತ ಅಲೆಮಾರಿ (ಶಿಳ್ಳೆಕ್ಯಾತ) ಹಕ್ಕುಗಳ ಸಮಿತಿಯ ಗೌರವಾಧ್ಯಕ್ಷರು, ಡಿವೈಎಫ್ಐ ರಾಜ್ಯ ಮುಖಂಡರಾದ ಸಂತೋಷ್ ಬಜಾಲ್ […]

Continue Reading

ಕಾಂಗ್ರೆಸ್ ಗೆ ‘ಕೈ’ ಕೊಟ್ಟು ಬಿಜೆಪಿ ಸೇರಿದ ಶೆಟ್ಟರ್ ಸ್ಥಿತಿ ಅಧೋಗತಿ.. ಬಾಣಲೆಯಿಂದ ಬೆಂಕಿಗೆ.!

ಲೋಕಸಭಾ ಚುನಾವಣೆ ಹಿನ್ನೆಲೆ ಬೆಳಗಾವಿ ಕ್ಷೇತ್ರದಿಂದ ಜಗದೀಶ್‌ ಶೆಟ್ಟರ್‌ ಅವರು ಸ್ಪರ್ಧಿಸುತ್ತಾರೆ ಎಂಬುದು ಇನ್ನೇನು ಖಚಿತಪಡಿಸುವಾಗಲೇ ಒಂದು ಟ್ವಿಸ್ಟ್‌ ಸಿಕ್ಕಿದೆ ಇದೀಗ ಬೆಳಗಾವಿಯ ಪಂಚಮಸಾಲಿ ಸಮುದಾಯಕ್ಕೆ ಟಿಕೇಟ್‌ ನೀಡುವಂತೆ ಒತ್ತಡ ಹಾಕಲಾಗುತ್ತಿದೆ.ಹಾವೇರಿ ಮತ್ತು ಧಾರವಾಡ ಕ್ಷೇತ್ರದಲ್ಲಿ ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ ಬೆಳಗಾವಿಯಿಂದ ಸ್ಪರ್ಧಿಸುವ ಆಫರ್ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದರು. ಹಾಗೂ ಬೆಳಗಾವಿಯಲ್ಲೂ ಆಹ್ವಾನ ನೀಡಿದ್ದಾರೆ ಎಂದು ಹೇಳಿಕೊಂಡಿದ್ದರು ಆದರೆ ಈಗ ಕ್ಷಣದಲ್ಲಿ ಅವರ ಕೈಯಿಂದ ಟಿಕೇಟ್‌ […]

Continue Reading

ಬಿ ಎಸ್ ವೈ ಸೇರಿ ಹಲವು ಐಪಿಎಸ್ ಅಧಿಕಾರಿಗಳ, ರಾಜಕಾರಣಿಗಳ, ಉದ್ಯಮಿಗಳ ಮೇಲೂ ದೂರು ನೀಡಿದ್ದಾರಂತೆ ಅ ಮಹಿಳೆ.

ಬಿಎಸ್ ಯಡಿಯೂರಪ್ಪರವರ ಮೇಲೆ ಮಹಿಳೆ ಒಬ್ಬರು ತನ್ನ‌ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ದಾಖಲಿಸಿದ್ದಾರೆ. ದೂರು ನೀಡಿರೋ‌ ಮಹಿಳೆ ಇದೇ ಮೊದಲ ಬಾರಿಗೆ ಠಾಣೆ‌ ಮೆಟ್ಟಿಲೇರಿಲ್ಲ. ಈ ಹಿಂದೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಭಾಸ್ಕರ್ ರಾವ್, ಅಲೋಕ್ ಕುಮಾರ್ , ಹಿರಿಯ ರಾಜಕಾರಣಿ ಉಗ್ರಪ್ಪ ಸೇರಿದಂತೆ ಹಲವು ಉದ್ಯಮಿಗಳು ಮತ್ತು ವ್ಯಕ್ತಿಗಳ ಮೇಲೆ ಈ‌ ಮಹಿಳೆ ದೂರು ನೀಡಿದ್ದಾರೆ. ಮಾಜೀ ಮುಖ್ಯಮಂತ್ರಿ ಮನೆಗೆ ಸಹಾಯ ಕೇಳಿಕೊಂಡು ಹೋದಾಗ ಬಿಎಸ್ ಯಡಿಯೂರಪ್ಪ ಖುದ್ದು ಕಮಿಷನರ್ […]

Continue Reading