ಸುಳ್ಳು ದಾಖಲೆ ನೀಡಿ ವಂಚಿಸಿದ ಸಹ ಶಿಕ್ಷಕಿ ಭಾರತಿ ಪ್ರಕರಣ; ತನಿಖೆಗೆ ಸೂಚಿಸಿದ ಜಿ.ಪಂ. ಸಿಇಓ

ರಾಜ್ಯ

ಮೂಡಿಗೆರೆ : ವೈದ್ಯಕೀಯ ಮರು ವೆಚ್ಚ ಪಾವತಿಯಲ್ಲಿ ಸುಳ್ಳು ದಾಖಲೆ ನೀಡಿ 3.40 ಲಕ್ಷ ರೂ ವಂಚಿಸಿದ ಪ್ರಕರಣ ವಾರಪತ್ರಿಕೆಯಲ್ಲಿ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾ ಪಂಚಾಯತ್ ಸಿಇಒ ಡಾ.ಗೋಪಾಲಕೃಷ್ಣ ಅವರು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಕ ಅಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಹ ಶಿಕ್ಷಕಿಯ ಸಂಪೂರ್ಣ ದಾಖಲೆಗಳನ್ನು ಕೂಡಲೆ ತಮಗೆ ಒಪ್ಪಿಸುವಂತೆ ಮತ್ತು ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ.

ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಕಛೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಹಠಾತ್ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರು ಸಿಇಒ ಅವರನ್ನು ವೈಧ್ಯಕೀಯ ಮರು ವೆಚ್ಚ ಪಾವತಿಯಲ್ಲಿ ಆಗಿರುವ ಅಕ್ರಮದಲ್ಲಿ ಕಡೂರು ತಾಲ್ಲೂಕಿನ ಸಖರಾಯಪಟ್ಟಣದ ಗ್ರೇಡ್ 2 ತಹಶೀಲ್ದಾರ, ಚಿಕ್ಕಮಗಳೂರು ತಾಲ್ಲೂಕಿನ ಗ್ರೇಡ್ 2 ತಹಸೀಲ್ದಾರ್, ಮೂಡಿಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ರಾಜ್ ಹಾಗೂ ಕಚೇರಿಯ ಸಿಬ್ಬಂಧಿಗಳು ಮತ್ತು ಮೂಡಿಗೆರೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಹರ್ಷಕುಮಾರ್ ಹಾಗೂ ಸಿಬ್ಬಂದಿಗಳು ಹಾಲೂರಿನ ಸಹ ಶಿಕ್ಷಕಿ ಭಾರತಿ ಎಂ.ಪಿ. ಅವರೊಂದಿಗೆ ಶಾಮಿಲಾಗಿ ಅಕ್ರಮ ದಾಖಲೆಗಳನ್ನು ಒದಗಿಸಿ ಸರ್ಕಾರಕ್ಕೆ ರೂ 3.40 ಲಕ್ಷ ವಂಚಿಸಿದ್ದು, ಇದರಲ್ಲಿ ಜಿಲ್ಲಾ ವೈಧ್ಯಾಧಿಕಾರಿಗಳು ಬಾಗಿಯಾಗಿರುವ ಬಗ್ಗೆ ಸಿಇಒ ಗಮನಕ್ಕೆ ತಂದಾಗ, ವಿವರಣೆ ಕೇಳಿ ಬೆಚ್ಚಿ ಬಿದ್ದ ಸಿಇಓ ಡಾ.ಗೋಪಾಲಕೃಷ್ಣ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ದಾಖಲೆಗಳನ್ನು ಒದಗಿಸುವಂತೆ ಮತ್ತು ತನಿಖೆ ನಡೆಸುವಂತೆ ಸೂಚಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿಮ್ಮ ಸಿಆರ್‌ಪಿಗಳು ಶಾಲೆ ಪ್ರಾರಂಭವಾದ ನಂತರ ಮುಖ್ಯ ರಸ್ತೆಯಲ್ಲಿ ಓಡಾಡಿಕೊಂಡು ಕಾಲ ಕಳೆಯುತ್ತಿದ್ದಾರೆ ಎಂಬ ಮಾಹಿತಿ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಸಮಯ ಪಾಲನೆ ಮಾಡದೆ ಏಕಾಏಕಿ ತಿರುಗಾಡುತ್ತಾ ಕಾಲ ವ್ಯರ್ಥ ಮಾಡುವ ಸಿಆರ್‌ಪಿಗಳ ಅವಶ್ಯಕತೆ ಇಲ್ಲಾ. ಅಂತಹವರ ವಿರುದ್ದ ವರದಿ ನೀಡುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಚಿಕ್ಕಮಗಳೂರು ಉಪವಿಭಾಗಾಧಿಕಾರಿ, ಮೂಡಿಗೆರೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ನರೇಗಾ ಸಹಾಯಕ ನಿರ್ದೆಶಕರು, ಪಂಚಾಯತ್ ರಾಜ್ ಸಹಾಯಕ ನಿರ್ದೆಶಕರು ಉಪಸ್ಥಿತರಿದ್ದರು.