ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳು ಕಡ್ಡಾಯವಾಗಿ ಮಾರ್ಚ್‌ 10 ನೇ ತಾರೀಕಿನೊಳಗೆ ಗ್ರಾಮ ಪಂಚಾಯತ್ ಸಭೆಯಲ್ಲಿ ಬಜೆಟ್ ಮಂಡಿಸಬೇಕು: ಖರ್ಗೆ

ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳೂ ಮುಂದಿನ ಆರ್ಥಿಕ ವರ್ಷದಲ್ಲಿ ವಿವಿಧ ರೀತಿಯಲ್ಲಿ ಲಭ್ಯವಾಗುವ ಅನುದಾನ ಹಾಗೂ ಕೈಗೊಳ್ಳಬೇಕಾದ ಅಭಿವೃದ್ಧಿ ಯೋಜನೆಗಳನ್ನೊಳಗೊಂಡಂತೆ ಗ್ರಾಮ ಪಂಚಾಯತಿ ಆಯವ್ಯಯ (ಪಂಚಾಯತ್‌ ಬಜೆಟ್) ಕಡ್ಡಾಯವಾಗಿ ತಯಾರಿಸಿ ಮಾರ್ಚ್‌ 10 ನೇ ತಾರೀಕಿನೊಳಗೆ ಗ್ರಾಮ ಪಂಚಾಯತಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಗ್ರಾಮ ಪಂಚಾಯತಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡುವ ಶಾಸನಬದ್ಧ ಅನುದಾನ, […]

Continue Reading

ಮಂಗಳೂರು ಮೂಲದ ಯುವಕರಿಂದ ಮಾಳಿಗನಾಡು ಅನಂತ ಹೆಬ್ಬಾರ್ ಮನೆಯಲ್ಲಿ ದರೋಡೆ

ತಡೆಯಲು ಬಂದ ಮಾಣಿ ಭಟ್ಟ ಎಂಬುವರ ಕೈ ಕಡಿದು 5 ಲಕ್ಷ ರೂ. ಮಾಂಗಲ್ಯ ಸರ ದೋಚಿದ್ದಾರೆ ಮೂಡಿಗೆರೆ: ಮನೆ ಮಾಲೀಕನನ್ನು ಬೆದರಿಸಿ ಮಂಗಳೂರು ಮೂಲದ ನಾಲ್ವರು ಯುವಕರು ದರೋಡೆ ಮಾಡಿದ ಘಟನೆ ನಡೆದಿದೆ. ರಾತ್ರಿ 8 ಗಂಟೆ ಸಮಯಕ್ಕೆ ಮನೆಗೆ ನುಗ್ಗಿದ ತಂಡ ಮನೆಯಲ್ಲಿ ಇದ್ದವರಿಗೆ ಖಾರದ ಪುಡಿ ಎರಚಿ ಡಕಾಯಿತಿ ನಡೆಸಲಾಗಿದೆ ಎನ್ನಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಾಳಿಗನಾಡು ಹೆಬ್ಬಾರಟ್ಟಿ ಗ್ರಾಮದ ಅನಂತ ಹೆಬ್ಬಾರ್ ಎಂಬುವರ ಮನೆಯಲ್ಲಿ ದರೋಡೆ ನಡೆದಿದೆ. ಮನೆ ಮಾಲೀಕ […]

Continue Reading

ವಕ್ಫ್ ಆಸ್ತಿಗಳ ಸಂರಕ್ಷಣೆ, ಅಭಿವೃದ್ಧಿಗೆ 100 ಕೋಟಿ, ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 200 ಕೋಟಿ ಘೋಷಣೆ

ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಉದ್ಯಮಶೀಲರು ಸ್ಥಾಪಿಸುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಹೊಸ ಘಟಕಗಳನ್ನು ಸ್ಥಾಪಿಸಲು ಹಾಗೂ ಅಸ್ತಿತ್ವದಲ್ಲಿರುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಘಟಕಗಳ ಉನ್ನತೀಕರಣಕ್ಕೆ KSFC ಮೂಲಕ ಪಡೆಯುವ 10 ಕೋಟಿ ರೂ.ವರೆಗಿನ ಸಾಲಕ್ಕೆ ಶೇ.6ರಷ್ಟು ಬಡ್ಡಿ ಸಹಾಯಧನ ನೀಡಲಾಗುವುದು. ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿ ತೊಡಗಿರುವ ಅಲ್ಪಸಂಖ್ಯಾತ ಫಲಾನುಭವಿಗಳ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ರೇಷ್ಮೆ ಇಲಾಖೆ ಮೂಲಕ ತರಬೇತಿ ಮತ್ತು ಕೆ.ಎಂ.ಡಿ.ಸಿ ಮೂಲಕ ಸಾಲ ಸೌಲಭ್ಯಗಳನ್ನು ನೀಡಲಾಗುವುದು. ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ […]

Continue Reading

ರಾಜ್ಯ ಕಾಂಗ್ರೆಸ್​ ಸರ್ಕಾರ, ಮೀನುಗಾರರ ರಕ್ಷಣೆಗೆ ಸಮುದ್ರ ಆಂಬ್ಯುಲೆನ್ಸ್​ ಯೋಜನೆಯನ್ನು ಬಜೆಟ್​ ಮಂಡನೆ ವೇಳೆ ಘೋಷಣೆ

ಮೀನುಗಾರರ ಮೇಲೆ ವಿಶೇಷ ಕಾಳಜಿ ವಹಿಸಿರುವ ರಾಜ್ಯ ಕಾಂಗ್ರೆಸ್​ಸರ್ಕಾರ, ಮೀನುಗಾರರ ರಕ್ಷಣೆಗೆಂದು ಸಮುದ್ರ ಆಂಬ್ಯುಲೆನ್ಸ್​ ಯೋಜನೆಯನ್ನು ಬಜೆಟ್​ ಮಂಡನೆ ವೇಳೆ ಘೋಷಣೆ ಮಾಡಿದೆ. ಇಂದು 15ನೇ ದಾಖಲೆ ಬಜೆಟ್​ ಮಂಡನೆ ಮಾಡಿದ ಮುಖ್ಯಮಂತ್ರಿಗಾಳಾದ ಸಿದ್ದರಾಮಯ್ಯನವರು, ಮೀನುಗಾರಿಕೆ ಕ್ಷೇತ್ರಕ್ಕೆ ವಿಶೇಷವಾಗಿ 3 ಸಾವಿರ ಕೋಟಿ ರೂಪಾಯಿ ಯೋಜನೆಯನ್ನು ಘೋಷಣೆ ಮಾಡಿದರು. ಸಮುದ್ರದಲ್ಲಿ ಮೀನುಗಾರಿಕೆಯನ್ನು ನೆಚ್ಚಿಕೊಂಡಿರುವ ಮೀನುಗಾರರ ರಕ್ಷಣೆಗೆ ವಿಶೇಷ ಗಮನ ವಹಿಸಲಾಗುವುದು. ಯಾವುದೇ ತುರ್ತು ಸಂದರ್ಭಗಳಲ್ಲಿ ಮೀನುಗಾರರ ಜೀವ ಉಳಿಸಲು ಅತ್ಯಾಧುನಿಕ ಸಮುದ್ರ ಆಂಬ್ಯುಲೆನ್ಸ್​ ಖರೀದಿ ಮಾಡಲಾಗುವುದು ಎಂದು […]

Continue Reading

ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹಿಸಿ, ಮುಖ್ಯಮಂತ್ರಿ, ಉಪ-ಮುಖ್ಯಮಂತ್ರಿ ಹಾಗೂ ಸಭಾಪತಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ನಿಯೋಗ

ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಅನಾದಿ ಕಾಲದಿಂದ ಮೂಲ ನಿವಾಸಿಗಳಾಗಿ ವಾಸಿಸುತ್ತಿರುವ, ದ್ರಾವಿಡ ತಮಿಳು ಮೂಲ ಆಧಾರಿತ ಪ್ರಸ್ತುತ ಕರಾವಳಿ ಜಿಲ್ಲೆಯಾದ್ಯಂತ ಅಗಾಧವಾಗಿ ವಾಸಿಸುತ್ತಿರುವ ಸುಮಾರು ಇಪ್ಪತ್ತೈದು ಲಕ್ಷಕ್ಕೂ ಮಿಕ್ಕಿ ಜನ ಸಂಖ್ಯೆಯನ್ನು ಹೊಂದಿರುವ ಬ್ಯಾರಿ ಜನಾಂಗದ ಶ್ರೆಯೋಬಿವೃದ್ದಿಗೆ ಕರ್ನಾಟಕ ರಾಜ್ಯ ಬ್ಯಾರಿ ಆಭಿವೃದ್ದಿ ನಿಗಮ ಸ್ಥಾಪಿಸಬೇಕೆಂದು ಒತ್ತಾಯಿಸಿ ಇಂದು ಪ್ರಮುಖ ಸಂಸ್ಥೆ ಮತ್ತು ಪ್ರಮುಖ ವ್ಯಕ್ತಿಗಳ ನಿಯೋಗವು ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಪ್ರಸ್ತಾವಿತ ಮನವಿಯನ್ನು ಸಲ್ಲಿಸಲಾಯಿತು. ಹಾಲಿ ಬ್ಯಾರಿ ಜನಾಂಗವನ್ನು ರಾಜ್ಯಾದ್ಯಂತ 95 […]

Continue Reading

ಲೋಕಸಭಾ ಚುನಾವಣೆ: ಶುಕ್ರವಾರ ಬಿಜೆಪಿಯಿಂದ 14 ಕ್ಷೇತ್ರಗಳ ಮೊದಲ ಪಟ್ಟಿ ರಿಲೀಸ್ ಸಾಧ್ಯತೆ.!

ಲೋಕಸಭಾ ಚುನಾವಣೆಗೆ ದಿ‌ನ ಹತ್ತಿರ ಬರುತ್ತಿದ್ದಂತೆ ರಾಜ್ಯದ ಮೊದಲ‌ ಸುತ್ತಿನ ಅಭ್ಯರ್ಥಿಗಳ ಪಟ್ಟಿ ಸಿದ್ದಗೊಂಡಿರುವ ಮಾಹಿತಿ ಹೊರಬಿದ್ದಿದೆ. ಯಡಿಯೂರಪ್ಪ ಬಣ ರೆಡಿ ಮಾಡಿರುವ ಪಟ್ಟಿ ಬುಧವಾರ ದೆಹಲಿ ಹೈಕಮಂಡ್ ಅಂಗಳಕ್ಕೆ ಹೋಗಲಿದ್ದು ಶುಕ್ರವಾರದೊಳಗೆ ಫೈನಲಾಗುವ ಸಾಧ್ಯತೆ ಇದೆ ಎಂದ ಮೂಲಗಳಿಂದ ತಿಳಿದು ಬಂದಿದೆ. ಸರಿ-ಸುಮಾರು 14 ಲೋಕಸಭಾ ಕ್ಷೇತ್ರದ ಪಟ್ಟಿ ರೆಡಿಯಾಗಿದ್ದು, ಉಳಿದ ಪಟ್ಟಿಯಲ್ಲಿ ಜೆಡಿಎಸ್ ಪಾಲು ಎಷ್ಟಿರಬಹುದೆಂದು ಸ್ಪಷ್ಟವಾಗಲಿದೆಂಬ ಮಾಹಿತಿ ಜೆಡಿಎಸ್ ಮೂಲದಿಂದ ಸ್ಪೋಟಗೊಂಡಿದೆ. ದೆಹಲಿ ಅಂಗಳದಲ್ಲಿ ರಾಜ್ಯ ರೆಡಿ ಮಾಡಿರುವ ಪಟ್ಟಿಯ‌ ಬದಲಾವಣೆ, ಸೇರ್ಪಡೆ […]

Continue Reading

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೆಚ್ಚದ ಬೋರ್ಡ್‌ ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು

ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೆಚ್ಚದ ಬೋರ್ಡ್‌ ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಎಚ್ಚರಿಕೆ ನೀಡಿದ್ದಾರೆ.ಈ ಕುರಿತು ಸಚಿವ ಶರಣಪ್ರಕಾಶ್‌ ಪಾಟೀಲ್‌ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಚಿಕಿತ್ಸೆಯ ವೆಚ್ಚದ ಬೋರ್ಡ್‌ ಗಳನ್ನು ಕಡ್ಡಾಯವಾಗಿ ಹಾಕಬೇಕು.ಇದರಿಂದ ಸುಲಿಗೆಯನ್ನು ತಪ್ಪಿಸಲು ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ನೀಡುವ ವೆಚ್ಚದ ಕುರಿತು ಸರಿಯಾದ ಮಾಹಿತಿಯನ್ನು ರೋಗಿಗಳಿಗೆ ಮತ್ತು ರೋಗಿಯ ಸಂಬಂಧಿಗಳಿಗೆ ತಿಳುವಳಿಕೆ ನೀಡಿ, ತದನಂತರ ಚಿಕಿತ್ಸೆ ಆರಂಭಿಸಬೇಕು ಎಂದು ಹೇಳಿದ್ದಾರೆ.

Continue Reading

ಖಾಯಂ ಭಾಗ್ಯಜ್ಯೋತಿಗೆ ಡಿ-ಲಿಂಕ್ ಆಯ್ಕೆ ಮಾಡಿ, ಹೊಸ ಬಾಡಿಗೆ ಮನೆಯ ಆರ್ ಆರ್ ಸಂಖ್ಯೆಗೆ ನೋಂದಣಿ ಸೌಲಭ್ಯ

ರಾಜ್ಯ ಸರಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ವಿದ್ಯುತ್ ಯೋಜನೆಯ ನಿಯಮಾವಳಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಬಾಡಿಗೆ ಮನೆಯಲ್ಲಿರುವ ಯೋಜನೆ ಫಲಾನುಭವಿಗಳಿಗೆ ಡಿ ಲಿಂಕ್ ಆಯ್ಕೆ ನೀಡಲಾಗಿದೆ. ಗೃಹಜ್ಯೋತಿ ಯೋಜನೆ ಫಲಾನುಭವಿಗಳು ಇನ್ನು ಮುಂದೆ ಬಾಡಿಗೆ ಮನೆ ಬದಲಾವಣೆ ಮಾಡಿದರೆ ಚಿಂತಿಸಬೇಕಿಲ್ಲ. ಮನೆ ಬದಲಾಯಿಸಿದವರು ಕೂಡಲೇ ಹಳೆ ಮನೆಯ ವಿಳಾಸದ ವಿದ್ಯುತ್ ಸಂಪರ್ಕವನ್ನು ರದ್ದುಪಡಿಸಿ, ಹೊಸ ಮನೆಯ ವಿಳಾಸಕ್ಕೆ ಯೋಜನೆಯ ಫಲ ಪಡೆಯಬಹುದು. ಇದಕ್ಕಾಗಿ ಇಂಧನ ಇಲಾಖೆಯು ಡಿ ಲಿಂಕ್ ಆಯ್ಕೆ ನೀಡಿದೆ. ಗೃಹಜ್ಯೋತಿ ಯೋಜನೆ […]

Continue Reading

ಸಂಬಂಧಿ ಮಹಿಳೆಯನ್ನು ಹತ್ಯೆ ಮಾಡಿ, ಶವದೊಂದಿಗೆ ಸಂಬೋಗ; ಅಪ್ರಾಪ್ತ ಬಾಲಕ ಸೇರಿ ಇಬ್ಬರ ಬಂಧನ

ತನ್ನದೇ ಸಂಬಂಧಿ ಮಹಿಳೆಯನ್ನು ಹತ್ಯೆ ಮಾಡಿ ನಂತರ ಅ ಶವದೊಂದಿಗೆ ಸಂಬೋಗ ನಡೆಸಿದ ಆರೋಪದ ಮೇಲೆ ಛತ್ತೀಸ್‍ಗಢದ ಬಲರಾಮ್‍ಪುರ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್‍ಪುರ ಠಾಣೆ ವ್ಯಾಪ್ತಿಯ ಪರಸಗುಡಿ ಹರಿತ್ಮಾ ಗ್ರಾಮದ ಕಾಡಿನಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತ ವಯಸ್ಕ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. 17 ವರ್ಷ ವಯಸ್ಸಿನ ಅಪ್ರಾಪ್ತ ಮಹಿಳೆಯ ಪತಿಯ ಸಹೋದರನಾಗಿದ್ದು, ಮತ್ತೊಬ್ಬ ಆರೋಪಿ ಸಂತ್ರಸ್ತೆಯ ಸಂಬಂಧಿ ಎಂದು ಗುರುತಿಸಲಾಗಿದೆ. ಮಹಿಳೆ ಮತ್ತು ಆಕೆಯ ಪತಿ ಕೆಲಸದ ನಿಮಿತ್ತ ಪರ್ಸಗುಡಿಯಿಂದ […]

Continue Reading

‘ಕೊಂಕಣಿ ಸಾಹಿತ್ಯ ಅಕಾಡೆಮಿ’ ಹುದ್ದೆಗಳನ್ನು ಮಾರಾಟ ಮಾಡಬೇಡಿ, ಅರ್ಹರನ್ನೇ ನೇಮಕ ಮಾಡಿ’; ಪತ್ರ ಸೃಷ್ಟಿಸಿದ ಸಂಚಲನ

ಬೆಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ-ಸದಸ್ಯರ ಹುದ್ದೆ ಮಾರಾಟವಾಗುತ್ತಿದೆಯಾ? ಈ ರೀತಿಯ ನಡೆ ರಾಜಕಾರಣಿಗಳ ಹಿಂಬಾಲಕರಿಂದ ನಡೆಯುತ್ತಿದೆಯೇ? ಈ ರೀತಿಯ ಸಂಶಯವೊಂದು ಸಾಮಾಜಿಕ ಹೋರಾಟಗಾರ ಆಲ್ವಿನ್ ಮೆಂಡೋನ್ಸಾ ಅವರ ಪತ್ರದಿಂದ ಬೆಳಕಿಗೆ ಬಂದಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಗಾಡಿಗೆ ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ನೇಮಕ ಮಾಡುವ ಪ್ರಯತ್ನ ರಾಜಕೀಯ ನಾಯಕರಿಂದ ನಡೆಯುತ್ತಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಶಕ್ತಿ ತುಂಬುವ ಅಕಾಡೆಮಿಗೆ ಸಾರಸ್ವತ ಕ್ಷೇತ್ರಗಳ ಪ್ರಮುಖರನ್ನೇ ನೇಮಕ ಮಾಡಬೇಕೆಂದು ಒತ್ತಾಯಿಸಿ ಪತ್ರಕರ್ತರೂ ಆದ ಆಲ್ವಿನ್ ಮೆಂಡೋನ್ಸಾ […]

Continue Reading