ಗೋವುಗಳ ಕಳ್ಳಸಾಗಾಟ ಸುಳ್ಳು ಆರೋಪ; ಪೊಲೀಸ್ ಸಿಬ್ಬಂದಿ ಸೇರಿ ಗೋ ರಕ್ಷಕರ ವಿರುದ್ಧ ಎಫ್ಐಆರ್ ದಾಖಲಿಸಲು ನ್ಯಾಯಾಲಯ ಆದೇಶ
ಗೋವುಗಳ ಕಳ್ಳಸಾಗಾಟ ನಡೆಸುತ್ತಿದ್ದಾರೆ ಎಂಬ ಸುಳ್ಳು ದೂರಿನಲ್ಲಿ ಇಬ್ಬರನ್ನು ಸಿಲುಕಿಸಿದ ಪ್ರಕರಣ ಸಂಬಂಧ ಮೂವರು ಪೊಲೀಸ್ ಸಿಬ್ಬಂದಿ ಮತ್ತು ‘ಗೋ ರಕ್ಷಕ’ ಸೇರಿ ಇತರ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲು ಗುಜರಾತ್ನ ನ್ಯಾಯಾಲಯವೊಂದು ಆದೇಶಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪರ್ವೇಜ್ ಅಹಮ್ಮದ್ ಮಾಳವೀಯ ಅವರು ಮಂಗಳವಾರ, ಗೋವುಗಳ ಮಾಲೀಕ ಇಲಿಯಾಸ್ ದೇವಾಳ್ ಮತ್ತು ಚಾಲಕ ನಾಜಿರ್ ಮಲಿಕ್ ಅವರನ್ನು ಖುಲಾಸೆಗೊಳಿಸಿದರು. ಆರೋಪಿಗಳು ಗೋವುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದರು ಎಂದು ಸಾಬೀತು ಮಾಡುವ ಯಾವುದೇ ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್ ಒದಗಿಸಿಲ್ಲ ಎಂದು […]
Continue Reading