ಲೋಕಸಭಾ ಚುನಾವಣೆ: 13 ಮಂದಿ ಹಾಲಿ ಸಂಸದರಿಗೆ ಕೋಕ್ ನೀಡಿ, ಹೊಸಬರಿಗೆ ಮಣೆಹಾಕಲು ಬಿಜೆಪಿ ಚಿಂತನೆ.!

ಲೋಕಸಭಾ ಚುನಾವಣೆ ಒಟ್ಟಿನಲ್ಲಿ 13 ಕ್ಷೇತ್ರಗಳಲ್ಲಿ ಬಿಜೆಪಿಯ ಹಾಲಿಗಳಿಗೆ ಟಿಕೆಟ್ ತಪ್ಪಲಿದ್ದು, ಬಹುತೇಕ ಹೊಸಬರಿಗೆ ಮಣೆಹಾಕಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಮಾಡಿದಂತೆ ಈ ಬಾರಿಯೂ ಪ್ರಯೋಗ ನಡೆಯಲಿದೆ. ಆದರೆ, ಮೊದಲೇ ಮಾಹಿತಿ ನೀಡಿ ಬಂಡಾಯ ಏಳದಂತೆ ನೋಡಿಕೊಂಡು ವ್ಯವಸ್ಥಿತವಾಗಿ ಟಿಕೆಟ್ ಪ್ರಕಟಿಸಲಿದೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಹಾಲಿ ಶಾಸಕರಿಗೆ ಕೋಕ್ ನೀಡಿ ಹೊಸಬರಿಗೆ ಮಣೆಹಾಕಿ ನಡೆಸಿದ್ದ ಪ್ರಯೋಗವನ್ನು ಲೋಕಸಭಾ ಚುನಾವಣೆಯಲ್ಲಿಯೂ ನಡೆಸಲು ಬಿಜೆಪಿ ಹೈಕಮಾಂಡ್ ಚಿಂತನೆಯಲ್ಲಿದೆ. 13 ಕ್ಷೇತ್ರಗಳಲ್ಲಿ ಹಾಲಿ ಸಂಸದರ […]

Continue Reading

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸದನದಿಂದ ಉಚ್ಛಾಟಿಸಲು ಲೋಕಸಭೆಯ ನೈತಿಕ ಸಮಿತಿ ಶಿಫಾರಸು

ನವದೆಹಲಿ: ಸದನದಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಲೋಕಸಭೆಯ ನೈತಿಕ ಸಮಿತಿಯು ಗುರುವಾರ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸದನದಿಂದ ಉಚ್ಛಾಟಿಸಲು ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್ ನೇತೃತ್ವದ ಸಮಿತಿಯು ಇಲ್ಲಿ ಸಭೆ ಸೇರಿ, ತನ್ನ ವರದಿಯನ್ನು ಅಂಗೀಕರಿಸಿ ಮಹುವಾರನ್ನು ಉಚ್ಚಾಟಿಸುವಂತೆ ಶಿಫಾರಸು ಮಾಡಿದೆ ಎನ್ನಲಾಗಿದೆ. ನೈತಿಕ ಸಮಿತಿಯ ಒಟ್ಟು 10 ಮಂದಿಯಲ್ಲಿ ಆರು ಸದಸ್ಯರು ವರದಿಯನ್ನು ಅಂಗೀಕರಿಸುವುದನ್ನು ಬೆಂಬಲಿಸಿದ್ದಾರೆ ಮತ್ತು ಉಳಿದ ನಾಲ್ವರು […]

Continue Reading

ತನಿಖಾ ಸಂಸ್ಥೆಗಳನ್ನು ಬಳಸಿ ಸರಕಾರ ಮಾಧ್ಯಮ ನಿಯಂತ್ರಿಸುವ ಗೋಜಿಗೆ ಹೋಗಬೇಡಿ: ಸುಪ್ರೀಂ ಕೋರ್ಟ್ ಕಿವಿಮಾತು

ಮಾಧ್ಯಮಗಳ ಕಾರ್ಯ ನಿರ್ವಹಣೆಗೆ ಮುಕ್ತ ಸ್ವಾತಂತ್ರ್ಯ ಇರಬೇಕು ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್, ಸರ್ಕಾರವು ಸುದ್ದಿ ಮಾಧ್ಯಮಗಳನ್ನು ನಿಯಂತ್ರಿಸುವ ಗೋಜಿಗೆ ಹೋಗಬಾರದು ಎಂದು ಸೂಚ್ಯವಾಗಿ ತಿಳಿಸಿದೆ. ಮಾಧ್ಯಮಗಳಿಗೆ ಮುಕ್ತ ಸ್ವಾತಂತ್ರ್ಯ ಕಲ್ಪಿಸಬೇಕು. ಪತ್ರಕರ್ತರ ಡಿಜಿಟಲ್ ಸಾಧನೆಗಳ ಪರಿಶೀಲನೆ ಹಾಗೂ ಜಪ್ತಿಗೆ ಮಾರ್ಗಸೂಚಿ ರಚನೆ ಕೋರಿ ಫೌಂಡೇಶನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠ “ಕಾನೂನು ಜಾರಿ ಹೊಣೆ ಹೊತ್ತ ಸಂಸ್ಥೆಗಳು […]

Continue Reading

ಶೀಘ್ರದಲ್ಲೇ ಮೊಬೈಲ್ ಚಂದಾದಾರರಿಗೆ ವಿಶಿಷ್ಟ ಐಡಿ ಸಂಖ್ಯೆ; ಮೊಬೈಲ್ ಗೂ ಬಿತ್ತು ಲಾಕ್.!

ಭಾರತ ಸರಕಾರ ಶೀಘ್ರದಲ್ಲೇ ಮೊಬೈಲ್ ಚಂದಾದಾರರಿಗೆ ವಿಶಿಷ್ಟ ಐಡಿ ಸಂಖ್ಯೆಯನ್ನು ನೀಡಲಿದೆ. ಈ ಐಡಿ ಸಂಖ್ಯೆಯು ಒಂದು ರೀತಿಯಲ್ಲಿ ಗುರುತಿನ ಚೀಟಿಯಂತೆ ಕಾರ್ಯನಿರ್ವಹಿಸುತ್ತದೆ, ಇದು ನಮ್ಮಪ್ರಾಥಮಿಕ ಮತ್ತು ಆಡ್-ಆನ್ ಫೋನ್ ಸಂಪರ್ಕಕ್ಕೆ ಸಂಬಂಧಿಸಿದ ಎಲ್ಲದರ ಬಗ್ಗೆ ಮಾಹಿತಿಯನ್ನು ಹೊಂದಿರುತ್ತದೆ. ನೀವು ಎಷ್ಟು ಫೋನ್ ಗಳನ್ನು ಬಳಸುತ್ತೀರಿ, ನಿಮ್ಮ ಬಳಿ ಎಷ್ಟು ಸಿಮ್ ಕಾರ್ಡ್ ಗಳಿವೆ, ಯಾವ ಸಿಮ್ ಎಲ್ಲಿ ಸಕ್ರಿಯವಾಗಿದೆ ಮತ್ತು ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳನ್ನು ನೀಡಲಾಗಿದೆ. ದಿ ಫೈನಾನ್ಷಿಯಲ್ ಎಕ್ಸ್ಪ್ರೆಸ್ನ ವರದಿಯ […]

Continue Reading

ಮಧ್ಯ ಪ್ರದೇಶ ಚುನಾವಣೆ: ಕಾಂಗ್ರೆಸ್ ಪಕ್ಷ 120-130 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅಧಿಕಾರಕ್ಕೆ

ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. 2024ರ ಲೋಕಸಭಾ ಚುನಾವಣೆಗೂ ಮುನ್ನ ನಡೆಯುತ್ತಿರುವ 5 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶ ಸಹ ಒಂದು. ಕಾಂಗ್ರೆಸ್ ಮತ್ತು ಬಿಜೆಪಿ ಎದುರಾಳಿಗಳು. ನವೆಂಬರ್ 17ರಂದು ಚುನಾವಣೆ ನಡೆಯುತ್ತಿದೆ. ಡಿಸೆಂಬರ್ 3ರಂದು ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದೆ. ರಾಜ್ಯದಲ್ಲಿ ಹಾಲಿ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲಿ ವಿವಿಧ ಸಂಸ್ಥೆಗಳು ಚುನಾವಣಾ ಸಮೀಕ್ಷೆಯನ್ನು ನಡೆಸುತ್ತಿವೆ. ನಡೆಸಿದ ಚುನಾವಣಾ ಸಮೀಕ್ಷೆ ಫಲಿತಾಂಶ ಪ್ರಕಟವಾಗಿದೆ. ರಾಜ್ಯದ ಪ್ರತಿಪಕ್ಷವಾದ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ. […]

Continue Reading

ಪತ್ನಿ ಬ್ಯೂಟಿ ಪಾರ್ಲರ್ ಗೆ ತೆರಳುತ್ತಿದ್ದಾಳೆ ಎಂದು ಹೆಂಡತಿಗೆ ತ್ರಿವಳಿ ತಲಾಕ್.!

ಭಾರತದಲ್ಲಿ ತ್ರಿವಳಿ ತಲಾಖ್ ಕಾನೂನು ಬಾಹಿರ ಎಂಬ ಕಾನೂನು ಜಾರಿಯಲ್ಲಿದ್ದರೂ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ಕೊಟ್ಟಿದ್ದಾನೆ. ಸೌದಿ ಅರೇಬಿಯಾ ದೇಶದಲ್ಲಿ ಇದ್ದ ಪತಿರಾಯ, ಹೆಂಡತಿಗೆ ವಿಡಿಯೋ ಕಾಲ್ ಮೂಲಕವೇ ಮೂರು ಬಾರಿ ತಲಾಖ್ ಎಂದು ಹೇಳಿ ಸಂಬಂಧ ಕಡಿದುಕೊಂಡಿದ್ದಾನೆ. ಪತ್ನಿ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದಳು ಅನ್ನೋ ಕಾರಣಕ್ಕೆ ಪತಿ ಮಹಾಶಯ ಆಕೆಗೆ ತ್ರಿವಳಿ ತಲಾಖ್ ಕೊಟ್ಟಿದ್ಧಾನೆ. ಆಕೆ ಬ್ಯೂಟಿ ಪಾರ್ಲರ್‌ಗೆ ಹೋಗಿ ತನ್ನ ಹುಬ್ಬುಗಳನ್ನು ಸರಿಪಡಿಸಿಕೊಂಡಿದ್ದಳು. ಇದೊಂದೇ ಕಾರಣಕ್ಕೆ ಪತಿರಾಯ ಸಿಟ್ಟಿಗೆದ್ದಿದ್ದಾನೆ. […]

Continue Reading

ಸಂಜೆ 6 ರಿಂದ ರಾತ್ರಿ 9 ರ ನಡುವಿನ ಸಮಯದಲ್ಲಿ ದೇಶಾಧ್ಯಂತ 94,009 ರಸ್ತೆ ಅಪಘಾತಗಳು ಸಂಭವಿಸಿ, 1,68,491 ಮಂದಿ ಮೃತಪಟ್ಟಿದ್ದಾರೆ

2022ರ ವರ್ಷದ ಸಂಜೆ 6ರಿಂದ ರಾತ್ರಿ 9 ಗಂಟೆಯ ನಡುವಿನ ಸಮಯದಲ್ಲಿ ದೇಶಾಧ್ಯಂತ 94,009 ರಸ್ತೆ ಅಪಘಾತಗಳು ಸಂಭವಿಸಿದೆ. ಇದು ಒಟ್ಟು ಅಪಘಾತ ಪ್ರಕರಣದ ಶೇ 20ರಷ್ಟು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ವರದಿ ಹೇಳಿದೆ. ಮಧ್ಯರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆಗೆ ಅತೀ ಕಡಿಮೆ ರಸ್ತೆ ಅಪಘಾತ ಪ್ರಕರಣಗಳು ಸಂಭವಿಸಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ 2022ರಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿ ಒಟ್ಟು 4,61,312 ರಸ್ತೆ ಅಪಘಾತಗಳು ಸಂಭವಿಸಿವೆ. […]

Continue Reading

ಪರ-ಪುರುಷನ ಜತೆ ಮಲಗು ಎಂದು ಕೋಣೆಗೆ ಕಳಿಸಿದ್ದಳು

ಸಿನಿಮಾದ ಮೂಲಕ ಸಿನಿಮಾಕ್ಕೆ ರಂಗ ಪ್ರವೇಶ ಮಾಡಿದ ಶಕೀಲಾ ತನ್ನ ಬಾಲ್ಯದ ಕಹಿ ನೆನಪುಗಳನ್ನು ಹೇಳಿಕೊಂಡಿದ್ದಾರೆ. ಹೆತ್ತ ತಾಯಿ ಎಲ್ಲರಿಗೂ ದೇವರು.ಆದರೆ ನನಗೆ ಮಾತ್ರ ಅಲ್ಲ.ಹಣಕ್ಕಾಗಿ ಸಿಕ್ಕ ಸಿಕ್ಕ ಗಂಡಸರ ಜೊತೆ ಮಲಗಿಸಿದ್ದಾಳೆ ಎಂದು ತನ್ನ ಮನದಾಳದ ನೋವನ್ನು ಹೇಳಿಕೊಂಡಿದ್ದಾರೆ. ತಾಯಿಯ ಕಣ್ಣಿಗೆ ತನ್ನ ಎಲ್ಲಾ ಮಕ್ಕಳೂ ಒಂದೇ. ಆದರೆ ಚಿಕ್ಕಂದಿನಿಂದಲೇ ನನ್ನನ್ನು ಬೇರೆ ರೀತಿಯಲ್ಲಿಯೇ ಟ್ರೀಟ್‌ ಮಾಡುತ್ತಿದ್ದಳು. ಅದು ನನ್ನ ಗಮನಕ್ಕೂ ಬಂದಿತ್ತು. ಕೈತುಂಬ ಹಣ ಗಳಿಸುತ್ತಿರುವಾಗಲೂ ಅದು ಹಾಗೆಯೇ ಮುಂದುವರಿದಿತ್ತು. ನಾನು ಆಗಿನ್ನೂ ಸಿನಿಮಾಕ್ಕೆ […]

Continue Reading

ಕಾಂಗ್ರೆಸ್ ಬಣ ರಾಜಕೀಯ: ಹೈಕಮಾಂಡ್ ಗರಂ; ಸಿಎಂ ಮತ್ತು ಡಿಸಿಎಂ ಗೆ ಕ್ಲಾಸ್, ಶಿಸ್ತು ಮೀರಿ ಮಾತನಾಡಿದರೆ ಯಾರೇ ಆದರೂ ಕಠಿಣ ಕ್ರಮ

ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ನೆರೆಯ ತೆಲಂಗಾಣದ ಚುನಾವಣಾ ಕೆಲಸ ಮುಗಿಸಿ ಬೆಂಗಳೂರಿಗೆ ಆಗಮಿಸಿದ್ದರು. ಬುಧವಾರದಂದು ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಜತೆಗೆ ಸಭೆ ನಡೆಸಿದರು. ಹೈಕಮಾಂಡ್ ಅಂಗಳದ ಆಂತರಿಕ ಮಾತುಕತೆಗಳು ಸಾರ್ವಜನಿಕ ಚರ್ಚೆಗೆ ವಸ್ತುವಾಗಿದೆ. ಬೆಂಬಲಿಗ ಸಚಿವ, ಶಾಸಕರನ್ನು ಮಾತನಾಡಲು ಬಿಟ್ಟು ಮುಗುಮ್ಮಾಗಿ ಉಳಿದಿದ್ದೀರಿ ಎಂದು ಸಿಎಂ ಮತ್ತು ಡಿಸಿಎಂ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಣ ತಾಕಲಾಟ ಹೆಚ್ಚಿ, ಪಕ್ಷ ಮತ್ತು ಸರಕಾರದ ವರ್ಚಸ್ಸು ಹಾಳಾಗುತ್ತಿದೆ. ಮಹಾರಾಷ್ಟ್ರ ಮಾದರಿಯಲ್ಲಿ […]

Continue Reading

ಎಲ್ ಪಿ ಜಿ ಬಳಕೆದಾರರಿಗೆ ಶಾಕ್ ನೀಡಿದ ಕೇಂದ್ರ ಸರಕಾರ; ಸಿಲಿಂಡರ್ ಬೆಲೆ 101 ರೂಪಾಯಿ ಏರಿಕೆ

ನರೇಂದ್ರ ಮೋದಿ ಸರ್ಕಾರವು ಇಂದು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 101.50 ರೂಪಾಯಿಗಳಷ್ಟು ಹೆಚ್ಚಿಸಿದೆ. ಅಲ್ಲದೆ, ಇದು ತಕ್ಷಣವೇ ಜಾರಿಗೆ ಬರುವಂತೆ ಆದೇಶ ನೀಡಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಈಗ ಮುಂಬೈನಲ್ಲಿ 1,785.50 ರೂ.ಗಳಾಗಿರುತ್ತದೆ, ಇದು ಮೆಟ್ರೋಪಾಲಿಟನ್ ನಗರಗಳಲ್ಲಿ ಅತ್ಯಂತ ಅಗ್ಗವಾಗಿದೆ. ಇದು ಚೆನ್ನೈನಲ್ಲಿ ಅತ್ಯಂತ ದುಬಾರಿಯಾಗಿದ್ದು ಇದರ ಬೆಲೆ 1,999.50 ರೂ. ದೆಹಲಿಯಲ್ಲಿ 1,833 ರೂ.ಗೆ ಮಾರಾಟವಾಗಲಿದೆ ಮತ್ತು ಕೋಲ್ಕತ್ತಾದಲ್ಲಿ ಸಿಲಿಂಡರ್‌ಗಳು 1,943 ರೂ. ಲಭ್ಯವಾಗಲಿದೆ. ಮನೆ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯು ನವದೆಹಲಿಯಲ್ಲಿ 903 […]

Continue Reading