ದುಡ್ಡು ಕೊಟ್ಟರೆ ಸಿಗುತ್ತೆ ಶುದ್ಧ ಗಾಳಿ.!, ಟ್ರೆಂಡ್ ಆಗುತ್ತಿದೆ ಶುದ್ಧವಾದ ಗಾಳಿ ನೀಡುವ ಚಿಕಿತ್ಸಾಲಯಗಳು

ದುಡ್ಡು.. ದುಡ್ಡು ಪ್ರಪಂಚದಲ್ಲಿ ದುಡ್ಡು ಇಲ್ಲದೆ ಏನೂ ನಡೆಯಲ್ಲ. ಕೊನೆಗೆ ದುಡ್ಡು ಇಲ್ಲದಿದ್ದರೆ ಒಳ್ಳೆಯ ಗಾಳಿ ಕೂಡ ಸಿಗಲ್ಲ ಎಂಬ ಸ್ಥಿತಿ ನಿರ್ಮಾಣವಾಗುತ್ತಿದೆ. ಅದರಲ್ಲೂ ದೇಶದ ಕೆಲವು ರಾಜಧಾನಿಗಳಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಾ ಇದ್ದು, ವಾತಾವರಣ ಮಾಲಿನ್ಯದಿಂದ ಆತಂಕ ಮೂಡಿಸುತ್ತಿದೆ. ಕೆಲವೇ ವರ್ಷಗಳ ಹಿಂದೆ ಮೆಟ್ರೋ ಪೊಲಿಟಿ ಸಿಟಿಗಳಲ್ಲಿ ಅತ್ಯಂತ ಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದ ಜನರಿಗೆ ಇದೀಗ ವಾಯು ಮಾಲಿನ್ಯದ ಪರಿಣಾಮ ದೊಡ್ಡ, ದೊಡ್ಡ ಆರೋಗ್ಯದ ಸಮಸ್ಯೆಗಳು ಎದುರಾಗುತ್ತಿವೆ. ಇಂತಹ ಸಂದರ್ಭದಲ್ಲೇ 4,000 ರೂಪಾಯಿ ಕೊಟ್ಟರೆ […]

Continue Reading

ಏಪ್ರಿಲ್ ಒಂದರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ (NHIA) ಟೋಲ್ ದರ ಏರಿಕೆಯ ಬಿಸಿ.!

ವಾಹನ ಸವಾರರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಗೆ ಬರುವ ಕರ್ನಾಟಕದ ಒಟ್ಟು 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರವನ್ನು ಹೆಚ್ಚಿಸಲಾಗಿದ್ದು, ಈ ಹೊಸ ದರಗಳು ಏಪ್ರಿಲ್ ಒಂದರಿಂದ ಜಾರಿಗೆ ಬರಲಿವೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸಂಚರಿಸುವವರಿಗೆ ಈ ದರ ಏರಿಕೆ ದೊಡ್ಡ ಹೊರೆಯಾಗಲಿದೆ. ಪ್ರತಿ ವರ್ಷ ಹಣದುಬ್ಬರ ಮತ್ತು ಸಗಟು ಬೆಲೆ ಸೂಚ್ಯಂಕವನ್ನು ಆಧರಿಸಿ ಟೋಲ್ ದರಗಳನ್ನು ಪರಿಷ್ಕರಿಸಲಾಗುತ್ತದೆ. ರಸ್ತೆಗಳ ನಿರ್ವಹಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಈ ಹೆಚ್ಚಳ ಅನಿವಾರ್ಯ ಎಂದು NHAI […]

Continue Reading

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭಾರೀ ಶಾಕ್ ನೀಡಲಿದೆ ಟಿಸಿಎಂ; ಬಿಗಿಯಾದ ಸ್ಪರ್ಧೆಯ ಭವಿಷ್ಯ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. 294 ಸ್ಥಾನಗಳ ಹೋರಾಟದಲ್ಲಿ ಟಿಎಂಸಿ ಮುನ್ನಡೆ ಸಾಧಿಸಿದೆ ಮತ್ತು ಬಿಜೆಪಿ ಹಿಂದಿದೆ ಎಂದು ಸಮೀಕ್ಷೆಯು ಭವಿಷ್ಯ ನುಡಿದಿದೆ. ಮ್ಯಾಟ್ರಿಜ್-ಐಎಎನ್‌ಎಸ್ ನಡೆಸಿದ ಅಭಿಪ್ರಾಯ ಸಮೀಕ್ಷೆಯು ಪಶ್ಚಿಮ ಬಂಗಾಳದಲ್ಲಿ ಬಿಗಿಯಾದ ಸ್ಪರ್ಧೆಯ ಭವಿಷ್ಯ ನುಡಿದಿದೆ. 294 ಸ್ಥಾನಗಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕಿಂತ ಹೆಚ್ಚಿನ ಮುನ್ನಡೆಯನ್ನು ಕಾಯ್ದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಸಮೀಕ್ಷೆಯ ಪ್ರಕಾರ, ಆಡಳಿತ ಪಕ್ಷವು ಮತ ​​ಹಂಚಿಕೆ ಮತ್ತು ಸ್ಥಾನಗಳಲ್ಲಿ ಸ್ಪಷ್ಟ ಮುನ್ನಡೆ ಸಾಧಿಸುವ ನಿರೀಕ್ಷೆಯಿದೆ, […]

Continue Reading

ಇತಿಹಾಸದ ಅತ್ಯಂತ ಮಹತ್ವದ ತೀರ್ಪು; ಮನುಷ್ಯನಿಗೆ ಬದುಕುವ ಹಕ್ಕು ಇರುವಂತೆ, ಘನತೆಯಿಂದ ಸಾಯುವುದು ಮೂಲಭೂತ ಹಕ್ಕು”: ಸುಪ್ರೀಂ ಕೋರ್ಟ್

ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಅತ್ಯಂತ ಮಹತ್ವದ ತೀರ್ಪು. ಕಳೆದ ಹನ್ನೆರಡು ವರ್ಷಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಉತ್ತರ ಪ್ರದೇಶದ 32 ವರ್ಷದ ಯುವಕನಿಗೆ ‘ದಯಾಮರಣ’ ನೀಡಲು ಸುಪ್ರೀಂ ಕೋರ್ಟ್ ಬುಧವಾರದಂದು ಐತಿಹಾಸಿಕ ಆದೇಶ ಹೊರಡಿಸಿದೆ. ಇದು ಭಾರತದಲ್ಲಿ ಅಧಿಕೃತವಾಗಿ ದಯಾಮರಣಕ್ಕೆ ಅನುಮತಿ ನೀಡಿದ ಮೊದಲ ಪ್ರಕರಣವಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಈ ಯುವಕ, 12 ವರ್ಷಗಳ ಹಿಂದೆ ಕಟ್ಟಡವೊಂದರಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದನು. ಅಂದಿನಿಂದ ಆತ ಸಂಪೂರ್ಣವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಕೇವಲ ಯಂತ್ರೋಪಕರಣಗಳ ಸಹಾಯದಿಂದ ಜೀವ ಹಿಡಿದಿದ್ದನು. […]

Continue Reading

ರಿಸರ್ವ್ ಬ್ಯಾಂಕ್ 2026 ರ ಕರಡು ತಿದ್ದುಪಡಿ; ಸೈಬರ್ ವಂಚಕರಿಗೆ ಇನ್ನು ಸುಲಭವಲ್ಲ. RBI ಹೊಸ ರೂಲ್ಸ್

ರಿಸರ್ವ್ ಬ್ಯಾಂಕ್ 2026 ರ ಕರಡು ಮೂರನೇ ಹೊಸ ತಿದ್ದುಪಡಿ ನಿರ್ದೇಶನಗಳನ್ನು ಬಿಡುಗಡೆ ಮಾಡಿದೆ, ಇದು ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟುಗಳಲ್ಲಿ ವಂಚನೆಯನ್ನು ಎದುರಿಸುತ್ತಿರುವ ಗ್ರಾಹಕರಿಗೆ ಬಲವಾದ ಸುರಕ್ಷತಾ ಕ್ರಮಗಳನ್ನು ಪ್ರಸ್ತಾಪಿಸುತ್ತದೆ. ಇದು ಪ್ರಾಥಮಿಕವಾಗಿ ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಡೆಬಿಟ್, ಕ್ರೆಡಿಟ್ ಕಾರ್ಡ್ ವಹಿವಾಟುಗಳು ಮತ್ತು ATM ವಹಿವಾಟುಗಳು ಸೇರಿದಂತೆ ಡಿಜಿಟಲ್ ಬ್ಯಾಂಕಿಂಗ್ ವಹಿವಾಟುಗಳಲ್ಲಿನ ವಂಚನೆಯಿಂದ ಬ್ಯಾಂಕ್ ಗ್ರಾಹಕರನ್ನು ರಕ್ಷಿಸುತ್ತದೆ. ಕರಡು ನಿರ್ದೇಶನಗಳು ಜುಲೈ ಒಂದು 2026 ಅಥವಾ ನಂತರ ನಡೆಸಿದ ವಹಿವಾಟುಗಳಿಗೆ ಅನ್ವಯಿಸುತ್ತವೆ. ಸಣ್ಣ ಮಟ್ಟದ […]

Continue Reading

ನರೇಂದ್ರ ಮೋದಿಯವರು ಕಟ್ಟಿರುವ ಬಿಜೆಪಿ ಕೋಟೆಗೆ ಮುಂದಿನ ಅಧಿಪತಿ ಯಾರು.? ನಮೋ ಸಾಮ್ರಾಜ್ಯದ ಉತ್ತರಾಧಿಕಾರಿ ಪಟ್ಟ ಯಾರಿಗೆ.?

ನರೇಂದ್ರ ಮೋದಿಯವರು ಕಟ್ಟಿರುವ ಬಿಜೆಪಿ ಕೋಟೆಗೆ ಮುಂದಿನ ಅಧಿಪತಿ ಯಾರು.? ನಮೋ ಸಾಮ್ರಾಜ್ಯದ ಉತ್ತರಾಧಿಕಾರಿ ಪಟ್ಟ ಯಾರಿಗೆ ಸಿಗಲಿದೆ.? ಎಂಬ ಚರ್ಚೆ ಈಗ ರಾಜಕೀಯ ವಲಯದಲ್ಲಿ ಪ್ರಾರಂಭವಾಗಿದೆ‌. ಮೋದಿ ಉತ್ತರಾಧಿಕಾರಿಯ ರೇಸ್‌ನಲ್ಲಿ ಅತೀ ಹೆಚ್ಚು ಕೇಳಿ ಬರುತ್ತಿರುವ ಹೆಸರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರದ್ದು. ನಂತರ ಬಿಜೆಪಿಯ ಸಾರಥ್ಯ ವಹಿಸುವ ಸಾಮರ್ಥ್ಯವಿರುವ ಮತ್ತೊಬ್ಬ ಪ್ರಭಾವಿ ನಾಯಕ ಅಮಿತ್ ಶಾ. ಮೋದಿಯವರ ‘ಬಲಗೈ ಬಂಟ’ ಎಂದೇ ಕರೆಸಿಕೊಳ್ಳುವ ಅಮಿತ್ ಶಾ ಕೂಡ ರೇಸ್ ನಲ್ಲಿ ಇದ್ದಾರೆ. […]

Continue Reading

ನ್ಯಾಯಾಧೀಶರಿಗೂ ಬಂತು ಆಯೋಗದ ನೋಟಿಸ್; ಆರ್‌ಟಿಐ ಮುಂದೆ ಇನ್ನು ಯಾರೂ ಅತೀತರಲ್ಲ!

​ನ್ಯಾಯಾಧೀಶರೇ ಆಗಿರಲಿ, ಇಲ್ಲವೇ ಜಿಲ್ಲಾಧಿಕಾರಿಗಳೇ ಆಗಿರಲಿ, ಮಾಹಿತಿ ಹಕ್ಕು ಕಾಯಿದೆ ಮುಂದೆ ಯಾರೂ ದೊಡ್ಡವರಲ್ಲ. ಇದನ್ನು ಗುಜರಾತ್ ಮಾಹಿತಿ ಆಯೋಗವು (GIC) ಮತ್ತೊಮ್ಮೆ ಸಾಬೀತುಪಡಿಸಿದೆ. ಮೆಹಸಾನಾ ಜಿಲ್ಲೆಯ ಮುಖ್ಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಮಾಹಿತಿ ನೀಡಲು ವಿಳಂಬ ಮಾಡಿದ್ದಕ್ಕಾಗಿ, ಗುಜರಾತ್ ಮಾಹಿತಿ ಆಯೋಗವು ಅವರಿಗೆ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿದೆ. ​ನಿಗದಿತ ಹೊತ್ತಿನಲ್ಲಿ ಮಾಹಿತಿ ನೀಡದಿದ್ದರೆ, ಸೆಕ್ಷನ್ 20 ರ ಅಡಿಯಲ್ಲಿ ನಿಮ್ಮ ಮೇಲೆ ಯಾಕೆ ಶಿಸ್ತು ಕ್ರಮ ಜರುಗಿಸಬಾರದು […]

Continue Reading

ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕಡ್ಡಾಯ: ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು

ಭಾರತದ ಸುಪ್ರೀಂ ಕೋರ್ಟ್ ಇತ್ತೀಚೆಗೆ ‘ಪರಮ್ ವೀರ್ ಸಿಂಗ್ ಸೈನಿ ವಿರುದ್ಧ ಬಲ್ಜಿತ್ ಸಿಂಗ್ ಮತ್ತು ಇತರರು’ ಪ್ರಕರಣದಲ್ಲಿ (ವಿಶೇಷ ಮೇಲ್ಮನವಿ ಅರ್ಜಿ ಕ್ರಿಮಿನಲ್ ಸಂಖ್ಯೆ 3543/2020) ಪೊಲೀಸ್ ಠಾಣೆಗಳಲ್ಲಿ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ತೀರ್ಪನ್ನು ನೀಡಿದೆ. ದೇಶದಾದ್ಯಂತ ಅಪರಾಧ ಸ್ಥಳಗಳಲ್ಲಿ ಮತ್ತು ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮತ್ತು ಸೆಕ್ಷನ್ 161 ಸಿಆರ್‌ಪಿಸಿ ಹೇಳಿಕೆಗಳ ಆಡಿಯೋ-ವಿಡಿಯೋ ರೆಕಾರ್ಡಿಂಗ್ ಮಾಡುವ ಪ್ರಮುಖ ಕಾನೂನು ವಿಚಾರವನ್ನು ಈ ಪ್ರಕರಣವು […]

Continue Reading

ಅಧಿಕಾರದ ಜಟಾಪಟಿಯ ನಡುವೆ, ಮೊದಲ ಬಾರಿಗೆ ಆಯ್ಕೆಯಾದ ಯುವ ಶಾಸಕರು, ಹಿರಿಯ ಶಾಸಕರು ಸಿಡಿದೆದ್ದು ಪಕ್ಷದ ಹೈಕಮಾಂಡ್‌ ಗೆ ಪತ್ರ ಬರೆದು ಹೊಸ ಸಂಚಲನ

ಅಧಿಕಾರ ಹಂಚಿಕೆಯ ಜಟಾಪಟಿಯ ನಡುವೆಯೇ ಕಾಂಗ್ರೆಸ್ ನಲ್ಲಿ ಮೊದಲ ಬಾರಿಗೆ ಆಯ್ಕೆಯಾದವರು ಹಾಗೂ ಹಿರಿಯ ಶಾಸಕರು ಪಕ್ಷದ ಹೈಕಮಾಂಡ್‌ ನಾಯಕರಿಗೆ ಪತ್ರ ಬರೆದಿದ್ದು ಸಂಚಲನ ಸೃಷ್ಟಿಸಿದ್ದಾರೆ. ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಿಡಿದೆದ್ದಿರುವ ಶಾಸಕರು ನೇರವಾಗಿ ರಾಹುಲ್‌ ಗಾಂಧಿ, ಸುರ್ಜೇವಾಲಾ ಹಾಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರಿಗೂ ಪತ್ರ ಬರೆದು ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಸಂಪುಟ ಪುನರ್‌ ರಚನೆಯ ವಿಚಾರದಲ್ಲಿ ಹೈಕಮಾಂಡ್‌ನ ವಿಳಂಬಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಯುವ ಶಾಸಕರಿಗೆ ಅದರಲ್ಲೂ ಮೊದಲ […]

Continue Reading

ಮಕ್ಕಳ ಅಶ್ಲೀಲ ವಿಡಿಯೋ; ಇಂಟರ್ ಪೋಲ್ ಮೂಲಕ ಬೆಳಕಿಗೆ ಬಂದ ಕೃತ್ಯ, 47 ದೇಶಗಳಲ್ಲಿ ಮಾರಾಟ, ಎಂಜಿನಿಯರ್ ದಂಪತಿಗಳಿಗೆ ಗಲ್ಲು.

ಲೈಂಗಿಕ ಅಪರಾಧ ಸೇರಿದಂತೆ 33 ಮಕ್ಕಳ ಮೇಲೆ ಘೋರ ಅಪರಾಧಗಳನ್ನು ಎಸಗಿದ ದಂಪತಿಗೆ ಉತ್ತರ ಪ್ರದೇಶದ ಪೋಕ್ಸೋ ವಿಚಾರಣಾ ನ್ಯಾಯಾಲಯ ಶುಕ್ರವಾರ ಮರಣದಂಡನೆ ವಿಧಿಸಿದೆ. ನೀರಾವರಿ ಇಲಾಖೆಯ ಮಾಜಿ ಜೂನಿಯರ್ ಎಂಜಿನಿಯರ್ ರಾಮ್‌ಭವನ್‌ ಮತ್ತು ಆತನ ಪತ್ನಿ ದುರ್ಗಾವತಿಗೆ ಉತ್ತರ ಪ್ರದೇಶದ ಬಾಂದಾದಲ್ಲಿನ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಅಡಿಯ ವಿಶೇಷ ನ್ಯಾಯಾಧೀಶರು ಮರಣ ದಂಡನೆ ವಿಧಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೊ ಕಾಯ್ದೆಯಡಿ ವಿವಿಧ ಅಪರಾಧಗಳಿಗಾಗಿ ಆರೋಪಿಗಳಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಕೇಂದ್ರ […]

Continue Reading