ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಗ್ರಾಮ ಪಂಚಾಯತ್ ಎದುರು ವ್ಯಕ್ತಿಯೊಬ್ಬರ ಶವ ಸಂಶಯಾಸ್ಪದವಾಗಿ ಪತ್ತೆಯಾಗಿದೆ. ಮೃತಪಟ್ಟವರನ್ನು ಗಂಜಿಮಠ ಗಾಂಧಿನಗರ ನಿವಾಸಿ ಸುರೇಶ್ ಗೌಡ(35) ಗುರುತಿಸಲಾಗಿದೆ. ಆದಿತ್ಯವಾರ ಪಂಚಾಯತ್ ಗೆ ರಜೆ ಇದ್ದ ಕಾರಣ ಘಟನೆ ಬೆಳಕಿಗೆ ಬಂದಿರಲಿಲ್ಲ. ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಬಜಪೆ ಪೊಲೀಸರು ಆಗಮಿಸಿ ಶವ ಮಹಜರು ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತದೇಹದ ರಕ್ತ ಸ್ರಾವಾಗಿದ್ದು ಸಂಶಯ ಮೂಡಿಸಿದೆ. ಸುರೇಶ್ ಗೌಡ ವಿಪರೀತ ಕುಡಿತದ ಚಟ ಹೋಂದಿದ್ದು ಇದು ಆಕಸ್ಮಿಕ ಸಾವೇ ಅಥವಾ ಕೊಲೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ.
