ನಗರ ಅಪರಾಧ ಪತ್ತೆ ದಳಕ್ಕೆ ಹೊಸದಾಗಿ ಸೃಷ್ಟಿಸಲಾದ ಸಹಾಯಕ ಆಯುಕ್ತ (ಎಸಿಪಿ) ಹುದ್ದೆಗೆ ಕೇಂದ್ರ ಉಪ-ವಿಭಾಗದಲ್ಲಿದ್ದ ಪರಮೇಶ್ವರ ಹೆಗಡೆ ಅವರನ್ನು ನಿಯುಕ್ತಿ ಗೊಳಿಸಲಾಗಿದೆ.
ಕೇಂದ್ರ ಉಪವಿಭಾಗಕ್ಕೆ ಪಣಂಬೂರು ಉಪ ವಿಭಾಗದ ಸಹಾಯಕ ಆಯುಕ್ತ ಮಹೇಶ್ ಕುಮಾರ್ ಎಸ್ ಅವರನ್ನು ವರ್ಗಾಯಿಸಲಾಗಿದೆ. ದಕ್ಷಿಣ ಉಪ-ವಿಭಾಗದ ಸಹಾಯಕ ಆಯುಕ್ತ ದಿನಕರ ಶೆಟ್ಟಿ ಅವರನ್ನು ಬೀದರ್ ಉಪ-ವಿಭಾಗಕ್ಕೆ ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಉತ್ತರ ಹಾಗೂ ದಕ್ಷಿಣ ಉಪ-ವಿಭಾಗಗಳಿಂದ ತೆರವಾದ ಸ್ಥಾನಕ್ಕೆ ಯಾರನ್ನು ನಿಯೋಜಿಸಿಲ್ಲ.
ಪಿ.ಎ ಹೆಗಡೆಯವರು ಈ ಹಿಂದೆ ಬಂದರ್ ಠಾಣೆಯಲ್ಲಿ ಕಾರ್ಯನಿರ್ವಹಿಸಿ ತದನಂತರ ಇಲ್ಲಿಂದ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರು. ಇವರು ಬಡವರ ಶೋಷಿತರ, ದೀನ-ದಲಿತರ ಪಾಲಿಗೆ ಅಭಯ ನೀಡಿ ನ್ಯಾಯ ದೊರಕಿಸಿಕೊಡುವ ಖಢಕ್ಕ್ ಅಧಿಕಾರಿ ಪಿ.ಎ ಹೆಗಡೆ.ಸಮಾಜ ಭಾಹಿರ ಚಟುವಟಿಕೆದಾರರ, ಕಳ್ಳಕಾಕರ, ಭ್ರಷ್ಟರ ಚಳಿ ಬಿಡಿಸಿದ ಸೂಫರ್ ಕಾಪ್ ಅಧಿಕಾರಿ.ಮಂಗಳೂರು ಸಿಸಿಬಿಯಲ್ಲಿ ಇನ್ನೂ ಉತ್ತಮ ಕೆಲಸ ಕಾರ್ಯ ನಿರ್ವಹಿಸಿ,ಪೊಲೀಸ್ ಇಲಾಖೆಗೂ ಉತ್ತಮ ಹೆಸರು ತರಲಿ.
