ಜಿಲ್ಲಾದ್ಯಂತ ಆಟೋ ರಿಕ್ಷಾ’ಗಳಿಗೆ ಹೊಸ ನಿಯಮ ಜಾರಿ :ಫೆ. 20ರೊಳಗೆ ರಿಕ್ಷಾಗಳ ಬಣ್ಣ ಬದಲಾಯಿಸಲು ಆದೇಶ

ಕರಾವಳಿ

ಆಟೋ ರಿಕ್ಷಾ’ಗಳಿಗೆ ಹೊಸ ನಿಯಮ ಜಾರಿ. ಜಿಲ್ಲೆಯಲ್ಲಿರುವ ಎಲ್ಲ ವಿಧದ ಆಟೋ ರಿಕ್ಷಾಗಳಿಗೆ (ಇ-ಆಟೋ ರಿಕ್ಷಾಗಳು ಒಳಗೊಂಡಂತೆ) ಮೆಥನಾಲ್‌ ಮತ್ತು ಇಥನಾಲ್‌ ಇಂಧನ ಬಳಸಿ ಸಂಚರಿಸುವ ಆಟೋರಿಕ್ಷಾ ಒಳಗೊಂಡಂತೆ ಆಟೋ ರಿಕ್ಷಾದ ಮಧ್ಯ ಭಾಗ ದಿಂದ ಕೆಳಗಡೆ ಕಪ್ಪು ಬಣ್ಣವನ್ನು ಪೂರ್ತಿಯಾಗಿ ಬಳಿಯಬೇಕು.
ಆಟೋ ರಿಕ್ಷಾದ ಮಧ್ಯ ಭಾಗದಿಂದ ಮೇಲೆ ಹಳದಿ ಬಣ್ಣವನ್ನು ಬಳಿಯಬೇಕು. ಇದು ವಲಯ 1 ಮತ್ತು ವಲಯ 2 ಕ್ಕೂ ಅನ್ವಯವಾಗುತ್ತದೆ.

ವಲಯ 1ಕ್ಕೆ ಚೌಕಾಕೃತಿ ಆಕಾರದ ಆಕಾಶ ನೀಲಿ ಬಣ್ಣ, ವಲಯ 2ಕ್ಕೆ ವೃತ್ತಾಕಾರದ ಹಳದಿ ಬಣ್ಣದ ಸ್ಟಿಕ್ಕರ್‌/ಗುರುತಿನ ಸಂಖ್ಯೆಯನ್ನು ಪೊಲೀಸ್‌ ಇಲಾಖಾ ವತಿಯಿಂದ ಪಡೆದು ಅಂಟಿಸಿಕೊಳ್ಳಬೇಕು. ಫೆ. 20 ಕೊನೆಯ ದಿನವಾಗಿದೆ ಎಂದು ಎಲ್ಲಾ ಆಟೋ ಚಾಲಕರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.