ನಮಗೆ ಅಮ್ಮ ಬೇಕು, ದಯಮಾಡಿ ಅಮ್ಮನನ್ನು ಉಳಿಸಿಕೊಡಿ

ಕರಾವಳಿ

ಕೈ ಮುಗಿದು ಬೇಡುತ್ತಿರುವ 6ನೇ ತರಗತಿಯಲ್ಲಿ ಕಲಿಯುತ್ತಿರು ಬಾಲಕಿ ವಿತೀತಾ

ಹೊಟ್ಟೆಯಲ್ಲಿ ಗಡ್ಡೆ ಕ್ಯಾನ್ಸರ್ ಗೊಳಗಾಗಿರುವ ನನ್ನ ಅಮ್ಮನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣ ಬೇಕಾಗುತ್ತದೆ. ಅಮ್ಮನ ಪ್ರಾಣ ಉಳಿಸಲು ನೆರವಾಗಿ ಎಂದು ಎಳೆಯ ಪ್ರಾಯದಲ್ಲೇ ತಂದೆಯನ್ನು ಕಳೆದುಕೊಂಡಿರುವ 11 ರ ಹರೆಯದ ಬಾಲಕಿ ವಿತೀತಾ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ತಾಲೂಕು ಸಂಚಾಲಕರಿಗೆ ಮನಕಲಕುವ ಪತ್ರ ಬರೆದಿದ್ದಾಳೆ.

ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಕೊರಂದಡಿ ಮನೆ ನಿವಾಸಿ ದಿ. ವಾಸಪ್ಪ ಎಂಬವರ ಪುತ್ರಿ ವಿತೀತಾ ಎಂಬವರೇ ಈ ರೀತಿ ಪತ್ರ ಬರೆದು ಸಹಾಯಯಾಚಿಸಿರುವ ಬಾಲಕಿ.
ನಾನು ನನ್ನ ತಂದೆಯನ್ನು ಹಲವು ವರ್ಷಗಳ ಹಿಂದೆಯೇ ಮರ ಮೈ ಮೇಲೆ ಬಿದ್ದು ಕಳೆದುಕೊಂಡಿದ್ದೇನೆ.

ನಾನು ಕಣಿಯೂರು ಶಾಲೆಯಲ್ಲಿ 6 ನೇ ತರಗತಿಯಲ್ಲಿ ಓದುತ್ತಿದ್ದರೆ, ನನ್ನ ಸಹೋದರ 2 ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ನನ್ನ ಅಮ್ಮ ಪದ್ಮುಂಜ ಪ್ರೌಢ ಶಾಲೆಯಲ್ಲಿ ಬಿಸಿಯೂಟ ಸಿಬ್ಬಂದಿಯಾಗಿ ದುಡಿದು ನಮ್ಮನ್ನು ಸಾಕುತ್ತಿದ್ದರು.

ಇದ್ದಕ್ಕಿದ್ದಂತೆ ಅವರಿಗೆ ಹೊಟ್ಟೆಯೊಳಗೆ ನೋವು ಕಾಣಿಸಿಕೊಂಡಾಗ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಪರಿಶೀಲಿಸಿದಾಗ ಅದು ಗಡ್ಡೆ ಕ್ಯಾನ್ಸರ್ ಎಂದು ತಿಳಿಯಿತು. ಎಲ್ಲೆಲ್ಲಿಂದಲೂ ಹಣ ಒಟ್ಟುಗೂಡಿಸಿ 3-4. ಲಕ್ಷ ರೂ. ವ್ಯಯಿಸಿ ಚಿಕಿತ್ಸೆ ಮಾಡಲಾಯಿತು. ಇದೀಗ ಮತ್ತೆ ರೋಗ ಉಲ್ಬಣಿಸಿ ಅಮ್ಮ ಹಾಸಿಗೆ ಹಿಡಿದಿದ್ದಾರೆ. ಇದೀಗ ಮತ್ತೆ ಆಪರೇಷನ್ ಆಗಬೇಕೆಂದು ಹೇಳಿದ್ದು ಚಿಕಿತ್ಸೆ ಪಡೆಯಬೇಕಾಗಿದೆ. ಇದಕ್ಕೆ ಇನ್ನೂ 4-5 ಲಕ್ಷ ರೂ. ಅಗತ್ಯವಿದೆ ಎಂದಿದ್ದಾರೆ. ಆದ್ದರಿಂದ ಡಿಎಸ್ಎಸ್ ಸಂಘಟನೆ ಮತ್ತು ಸಾರ್ವಜನಿಕರು ನೆರವಾಗಬೇಕು ಎಂದು ಆಕೆ ಭಿನ್ನವಿಸಿಕೊಂಡಿದ್ದಾಳೆ.

ಸಹಾಯ ಮಾಡಬಯಸುವವರು ಅವರ ಖಾತೆ ಸಂಖ್ಯೆ ಅಥವಾ ದೂರವಾಣಿ ಮೂಲಕ ಸಂಪರ್ಕಿಸಬಹುದು.

Mob: 7760422885
Vinaya
AC No. 1599101010052
IFSC CODE:
CNRB 0001599
CANARA BANK PADMUNJA
PHON; 7760422885