ಮೂಲ ಶಿವಸೇನೆಯ ಹೆಸರು ಮತ್ತು ಬಿಲ್ಲು-ಬಾಣದ ಚಿಹ್ನೆಗಾಗಿ 2 ಸಾವಿರ ಕೋಟಿಗೂ ಮಿಗಿಲಾದ ಹಣಕಾಸು ಅವ್ಯವಹಾರ ನಡೆದಿದೆ ಎಂದು ಶಿವಸೇನೆಯ ಸಂಸದ ಸಂಜಯ್ ರಾವುತ್ ಭಾನುವಾರ ಮುಂಬೈನಲ್ಲಿ ಆರೋಪಿಸಿದ್ದಾರೆ.
ನನಗೆ ಖಚಿತ ಮಾಹಿತಿ ಸಿಕ್ಕಿದೆ,ನನಗೆ ವಿಶ್ವಾಸವಿದೆ, ಇದು ಕೇವಲ ಪ್ರಾಥಮಿಕ ಅಂಕಿ ಅಂಶ ಮಾತ್ರ. ಇದು ಶೇಕಡ 100ರಷ್ಟು ದೃಢ ಮಾಹಿತಿ. ಎಂದು ರಾವತ್ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.
ಇದು ದೇಶದ ಇತಿಹಾಸದಲ್ಲೇ ಹಿಂದೆಂದೂ ಕಂಡು ಕೇಳರಿಯದ ಸಂಗತಿ. ಇನ್ನೂ ಕೆಲವು ವಿಷಯಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ರಾವತ್ ಹೇಳಿದ್ದಾರೆ. ಸಂಜಯ್ ರಾವುತ್ ಆರೋಪಗಳಿಂದಾಗಿ ಭಾರತೀಯ ಚುನಾವಣಾ ಆಯೋಗದ ನಿರ್ಧಾರದ ಮೇಲೆ ಅನುಮಾನ ಮೂಡುವಂತಾಗಿದೆ.
ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಬಣಕ್ಕೆ ಮೂಲ ಶಿವಸೇನೆಯ ಹೆಸರು ಮತ್ತು ‘ಬಿಲ್ಲು-ಬಾಣ’ದ ಚಿಹ್ನೆಯನ್ನು ಮಂಜೂರು ಮಾಡಿ ಚುನಾವಣಾ ಆಯೋಗ ಇತ್ತೀಚೆಗೆ ಆದೇಶಿಸಿತ್ತು. ಇದರ ಹಿನ್ನೆಲೆಯಲ್ಲಿ ರಾವುತ್ ಈ ಹೇಳಿಕೆ ನೀಡಿದ್ದಾರೆ