ಮಂಗಳೂರು ಉತ್ತರ: ಸದ್ಯಕ್ಕೆ ಬಿಜೆಪಿಯ ಫೈರ್‌ಬ್ರಾಂಡ್ ಭರತ್ ಶೆಟ್ಟಿ ಇಲ್ಲಿನ ಶಾಸಕರು. ಈ ಕ್ಷೇತ್ರದ ವಿಶೇಷ ಏನೆಂದರೆ ಇಲ್ಲಿ ಒಮ್ಮೆ ಕಾಂಗ್ರೇಸ್ ಗೆದ್ದರೆ,ಮತ್ತೊಮ್ಮೆ ಬಿಜೆಪಿ ಗೆಲುವು ಸಾಧಿಸುತ್ತಾ ಬರುತ್ತಿದೆ. 1957,1958 ರಲ್ಲಿ ಕಾಂಗ್ರೇಸ್ ಪಕ್ಷದ ಪಿ.ಆರ್. ಕರ್ಕೇರ ಹಾಗೂ ಕೆ. ದೂಮಪ್ಪ ಶಾಸಕರಾಗಿದ್ದರು. ಆದರೆ 1962,1967 ರಲ್ಲಿ ಪ್ರಜಾ ಸೋಷಲಿಸ್ಟ್ ಪಾರ್ಟಿಯ ಸಂಜೀವನಾಥ್ ಐಕಳ ಹಾಗೂ ಡಿ.ಪಿ. ಐತಾಳ್ ಗೆದ್ದು ಬಂದರು. ಇನ್ನು 1922ರಲ್ಲೂ ಬಿ.ಸುಬ್ಬಯ್ಯ ಶೆಟ್ಟಿ ಗೆಲ್ಲುವುದರ ಮೂಲಕ ಈ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ತನ್ನ ವಶಪಡಿಸಿತು.
1978 ರಲ್ಲಿ ಕೂಡಾ ಸುಬ್ಬಯ್ಯ ಶೆಟ್ಟಿ ಪುನಃ ಗೆದ್ದು ಬಂದರು. ಆದರೆ 1983 ರಲ್ಲಿ ಜನತಾ ಪಕ್ಷದ ಲೋಕಯ್ಯ ಶೆಟ್ಟಿ ಶಾಸಕರಾಗಿ ಆಯ್ಕೆಯಾದರು. 1985 ಮತ್ತು 1989 ರಲ್ಲಿ ಮತ್ತೆ ಈ ಕ್ಷೇತ್ರ ಕಾಂಗ್ರೆಸ್ಸಿನ ಪಾಲಾಯಿತು. ಎನ್.ಎಮ್. ಅಡ್ಯಂತಾಯ ಮತ್ತು ವಿಜಯಕುಮಾರ್ ಶೆಟ್ಟಿ ಗೆದ್ದು ಶಾಸಕರಾದರು.
1994 ರಲ್ಲಿ ಕುಂಬ್ಳೆ ಸುಂದರ್ ರಾವ್ ಬಿಜೆಪಿಯಿಂದ ಗೆದ್ದು ಬಂದರು. 1998 ರಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಜಯಕುಮಾರ್ ಶೆಟ್ಟಿ ಶಾಸಕರಾಗಿ ಆಯ್ಕೆಯಾದರು.2004 ಮತ್ತು 2008 ರಲ್ಲಿ ಈ ಕ್ಷೇತ್ರವನ್ನು ಬಿಜೆಪಿಯ ಕೃಷ್ಣ ಜೆ.ಪಾಲೆಮಾರ್ ಗೆಲ್ಲುವ ಮೂಲಕ ಬಿಜೆಪಿಯ ಶಾಸಕರಾಗಿ ಆಯ್ಕೆಯಾದರು. 2013 ರಲ್ಲಿ ಈ ಕ್ಷೇತ್ರವನ್ನು ಕಾಂಗ್ರೇಸ್ ಪಕ್ಷದಿಂದ ಸ್ಪರ್ದಿಸಿದ ಮೊಹಿದ್ದೀನ್ ಬಾವರವರು ವಿಜಯಗಳಿಸಿ ಶಾಸಕರಾಗಿ ಆಯ್ಕೆಯಾದರು. 2018ರಲ್ಲಿ ಮೊಹಿದ್ದೀನ್ ಬಾವರವರು ಸೋಲುಂಡು ಬಿಜೆಪಿಯಿಂದ ಸ್ಪರ್ಧಿಸಿದ ಭರತ್ ಶೆಟ್ಟಿ ಜಯಗಳಿಸುವ ಮೂಲಕ ಈ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಸರಿ-ಸುಮಾರು 26,000 ಮತಗಳ ಅಂತರದಿಂದ ಭರತ್ ಶೆಟ್ಟಿ ಜಯಗಳಿಸಿದರು.
ಸುಮಾರು 2018 ರವರೆಗೆ ಈ ಕ್ಷೇತ್ರವು ಸುರತ್ಕಲ್ ವಿಧಾನ ಸಭಾ ಕ್ಷೇತ್ರ ಎಂದು ಗುರುತಿಸಲಾಗುತ್ತಿತ್ತು. ಆದರೆ “ಡಿ ಎಲಿಮಿನೇಶನ್” ಆದ ನಂತರ ಮಂಗಳೂರು ಉತ್ತರವಾಗಿ ಬದಲಾಯಿತು. ಉತ್ತರ ಕ್ಷೇತ್ರದಲ್ಲಿ ಶೇಕಡಾ 67.18 ರಷ್ಟು ಹಿಂದು ಮತಧಾರರು, 24.04% ರಷ್ಟು ಮುಸ್ಲಿಂ ಹಾಗೂ 8.2 ರಷ್ಟು ಕ್ರೃೆಸ್ತ ಮತದಾರರು ಇರುವ ಕ್ಷೇತ್ರವಾಗಿದೆ ಮಂಗಳೂರು ಉತ್ತರ.
ಈ ಬಾರಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವುದು ಬಹುತೇಕ ಖಚಿತವಾದಂತೆ ತೋರುತ್ತಿದೆ. ಬಿಜೆಪಿಯಿಂದ ಹಾಲಿ ಶಾಸಕರಾದ ಭರತ್ ಶೆಟ್ಟಿ, ಕಾಂಗ್ರೆಸ್ ನಿಂದ ಯುವ ಮುಖ ಇನಾಯತ್ ಅಲಿ ಹಾಗೂ ಜೆಡಿಎಸ್ ನಿಂದ ಮೊಹಿದ್ದೀನ್ ಬಾವಾ ಕಣಕ್ಕಿಳಿದಿರುವುದು ಉತ್ತರದ ಒಟ್ಟಾರೆ ಲೆಕ್ಕಾಚಾರವನ್ನೇ ಬದಲಾಯಿಸಿದೆ.
ಕೃಷ್ಷ ಜೆ ಪಾಲೆಮಾರ್ ಹೊರತು (ಸುರತ್ಕಲ್ ಕ್ಷೇತ್ರ,ನಂತರ ಮಂಗಳೂರು ಉತ್ತರ) ಮಂಗಳೂರು ಉತ್ತರದಲ್ಲಿ ಒಮ್ಮೆ ಗೆದ್ದವರು ಮತ್ತೊಂದು ಬಾರಿ ಚುನಾವಣೆಯಲ್ಲಿ ಸೋತ ಇತಿಹಾಸವೇ ಇದೆ. ಆದರೆ ಈ ಬಾರಿ ಭರತ್ ಶೆಟ್ಟಿ ಅದನ್ನು ಮುರಿದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುತ್ತಾರೋ..? ಅಥವಾ ಕೊನೆ ಕ್ಷಣದಲ್ಲಿ ಭರತ್ ಶೆಟ್ಟಿ ಯವರನ್ನು ಕಟ್ಟಿಹಾಕಲಾಗುತ್ತೊ ಅನ್ನುವುದನ್ನು ಕೊನೆ ಕ್ಷಣದವರೆಗೂ ಕಾದು ನೋಡಬೇಕಾಗಿದೆ.