ಕರ್ನಾಟಕ ರಾಜ್ಯದಲ್ಲಿ ಈಗ ವಿಧಾನಸಭಾ ಚುನಾವಣಾ ಕಾವು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಈ ಬಾರಿ ಸರ್ಕಾರ ನಮ್ಮದೇ ಎನ್ನುತ್ತಿವೆ. ಆದರೆ ಸಮೀಕ್ಷೆಗಳಂತೂ ಅತಂತ್ರ ವಿಧಾನಸಭೆಯ ಸುಳಿವು ನೀಡುತ್ತಿವೆ.ಒಂದು ಸಮೀಕ್ಷೆ ಕಾಂಗ್ರೆಸ್‍ಗೆ ಸರಳ ಬಹುಮತ ಸಿಗಬಹುದು ಎನ್ನುತ್ತಿದ್ದರೆ, ಮತ್ತೊಂದು ಬಿಜೆಪಿಗೆ ಜೈ ಎನ್ನುತ್ತಿದೆ. ಆದರೆ ಬಹುತೇಕ ಸಮೀಕ್ಷೆಗಳು ಅತಂತ್ರ ವಿಧಾನಸಭೆ ನಿರ್ಮಾಣವಾಗಿ ಜೆಡಿಎಸ್‍ಗೆ ಅವಕಾಶ ಸಿಗುವ ಸಾಧ್ಯತೆಗಳತ್ತ ಬೊಟ್ಟು ಮಾಡುತ್ತಿವೆ.
ಈ ಹಂತದಲ್ಲಿ ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಕರ್ನಾಟಕವನ್ನು ಕೈವಶ ಮಾಡಿಕೊಳ್ಳಲು ಹಲವು ತಂತ್ರಗಾರಿಕೆಗಳನ್ನು ನಡೆಸುತ್ತಿದೆ. ರಾಜ್ಯದ ಚುನಾವಣಾ ಅಖಾಡದಲ್ಲಿ ಬಿಜೆಪಿ ಗೆಲುವಿಗೆ ಪೂರಕ ಆಗಬಲ್ಲ ಹಲವು ಸಂಗತಿಗಳು, ಬೆಳವಣಿಗೆಗಳು ಕಾಣ ಸಿಗುತ್ತಿವೆ.ಆಡಳಿತಾರೂಢ ಬಿಜೆಪಿ ಜಾತಿ ಸಮೀಕರಣ ವಿಚಾರದಲ್ಲಿ ವಿರೋಧ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದಿದೆ. ರಾಜ್ಯದ ಬಹುಸಂಖ್ಯಾತ ಲಿಂಗಾಯತ ಮತಗಳನ್ನು ಸೆಳೆಯುವ ಮಹತ್ತರ ಜವಾಬ್ದಾರಿಯನ್ನು ಮಾಜಿ ಸಿಎಂ ಯಡಿಯೂರಪ್ಪ ತೆಗೆದುಕೊಂಡಿದ್ದಾರೆ.