ಕೂಡ್ಲಿಗಿ: ಪ.ಪೂ.ಕಾಲೇಜು ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಿಸುವ ಸುವರ್ಣಾವಕಾಶ ಕಲ್ಪಿಸಿದ ಶಾಸಕ ಡಾ. ಎನ್. ಟಿ. ಶ್ರೀನಿವಾಸ್

ರಾಜ್ಯ

ಕೂಡ್ಲಿಗಿ ಪಟ್ಟಣದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ, ಪಿಯುಸಿ ತರಗತಿಯ ವಿದ್ಯಾರ್ಥಿಗಳು ಪ್ರಸ್ತುತ ಬೆಳಗಾವಿಯ ಸುವರ್ಣ ಸೌಧದಲ್ಲಿ, ಜರುಗುತ್ತಿರುವ ಚಳಿಗಾಲದ ಅಧಿವೇಶನವನ್ನು ಖುದ್ದು ನೇರವಾಗಿ ವೀಕ್ಷಿಸುವ ಸುವರ್ಣಾವಕಾಶವನ್ನು, ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು ಕಲ್ಪಿಸಿ ಕೊಟ್ಟಿದ್ದಾರೆ. ಶಾಸಕರು ಒಟ್ಟು 200 ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಿಸುವ ಸುವರ್ಣಾವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಅಧಿವೇಶನ ಆರಂಭಗೊಂಡ ಎರಡನೇ ದಿನವಾದ, ಡಿಸೆಂಬರ್10ರಂದು ಕೂಡ್ಲಿಗಿಯ ಸ.ಸಂ.ಪ.ಪೂ.ಕಾಲೇಜಿನ ಪಿಯುಸಿ ತರಗತಿಯ 54 ವಿದ್ಯಾರ್ಥಿಗಳು. ಸುವರ್ಣ ಸೌಧದಲ್ಲಿ ಜರುಗುವ ಅಧಿವೇಶನವನ್ನು, ಖುದ್ದು ವೀಕ್ಷಿಸಿ ಕಣ್ತುಂಬಿಸಿಕೊಂಡಿದ್ದಾರೆ. ಅಧಿವೇಶನ ಮುಗಿಯುವುದರೊಳಗಾಗಿ, ಇನ್ನುಳಿದ ವಿದ್ಯಾರ್ಥಿಗಳು ಅಧಿವೇಶನವನ್ನು ವೀಕ್ಷಿಸುವ ವ್ಯವಸ್ಥೆ ಮಾಡಿದ್ದಾರೆ.

ಅಧಿವೇಶನ ವೀಕ್ಷಣೆಗೆ ವಿದ್ಯಾರ್ಥಿಗಳು ಬೆಳಗಾವಿಗೆ ತೆರಳಲು ಶಾಸಕರು ಸಾರಿಗೆ ಸಂಸ್ಥೆಯ ಬಸು ಕಾಯ್ದಿರಿಸಿ ಕ್ರಮ ಜರುಗಿಸಿದ್ದಾರೆ. ಬೆಳಗಾವಿ ಸುವರ್ಣ ಸೌಧಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯುವ, ಹಾಗೂ ಕರೆತರುವ ಮೇಲ್ವಿಚಾರಣೆಗೆ. ಸ.ಸಂಪ.ಪೂ.ಕಾಲೇಜಿನ ಪ್ರಾಚಾರ್ಯರಾದ ಟಿ.ಕೊತ್ಲಮ್ಮರವರು, ಅಗತ್ಯ ಭೋದಕ ಭೋದಕೇತರ ಸಿಬ್ಬಂದಿ ನಿಯೋಜಿಸಿ ಕ್ರಮ ಜರುಗಿಸಿದ್ದಾರೆ.

ವಿದ್ಯಾರ್ಥಿಗಳಿಂದ ಶಾಸಕರಿಗೆ ಧನ್ಯವಾದ

ಅಧಿವೇಶನದ ದೃಶ್ಯಾವಳಿಯನ್ನು, ನಾವು ಕೇವಲ ಮೊಬೈಲ್, ಟೀವಿ ಗಳಲ್ಲಿ ವೀಕ್ಷಿಸುತ್ತಿದ್ದೆವು. ನಮ್ಮ ಹೆಮ್ಮೆಯ ಶಾಸಕರಾದ ಡಾ.ಎನ್.ಟಿ.ಶ್ರೀನಿವಾಸ್ ರವರು, ಅಧವೇಶನ್ನು ನಾವು ಖುದ್ದು ವೀಕ್ಷಿಸುವ ಸುವರ್ಣಾವಕಾಶ ಕಲ್ಪಿಸಿದ್ದಾರೆ. ನಾವು ಅಧಿವೇಶನದ ಕಲಾಪವನ್ನು ಖುದ್ದು ವೀಕ್ಷಿಸಿ ಪುಳಕಿತರಾದೆವು, ಮತ್ತು ಅಧಿವೇಶನವನ್ನು ವೀಕ್ಷಿಸಲು, ಸುವರ್ಣ ಸೌಧದ ಪ್ರವೇಶಿದನ್ನ ಗಮನಿಸಿದ. ನಮ್ಮ ಶಾಸಕರು ಕೂಡಲೇ ನಮ್ಮ ಬಳಿ ದಾವಿಸಿದರು, ಜೊತೆಗೆ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರನ್ನು ನಾವಿರುವೆಡೆಗೆ ಕರೆತಂದರು. ನಮ್ಮನ್ನೆಲ್ಲ ಖುದ್ದು ಶಾಸಕರೇ ಸಚಿವರಿಗೆ ಪರಿಚಯಿಸಿಕೊಟ್ಟರು, ಮತ್ತು ಅವರೊಂದಿಗೆ ಕೆಲ ಹೊತ್ತು ಪ್ರಮುಖವಾದ ವಿಷಯಗಳ ಕುರಿತು ಚರ್ಚೆ ಮಾಡಿದೆವು. ತದನಂತರವೂ ಕೂಡ ನಮ್ಮ ಶಾಸಕರು ವಿವಿದ ಕ್ಷೇತ್ರಗಳ ಶಾಸಕರನ್ನು ಹಾಗೂ ವಿವಿದ ಇಲಾಖೆಗಳ ಸಚಿವರನ್ನು ಪರಿಚಯಿಸಿದರು. ಅಲ್ಲದೇ ಶಾಸಕರು ಅಧಿವೇಶನದಲ್ಲಿ ಶೂನ್ಯ ವೇಳೆಯ ತಮ್ಮ ಅಮೂಲ್ಯವಾದ ಸಮಯವನ್ನು ಬಹು ಸಂತೋಷದಿಂದ ಉತ್ಸುಕತೆಯಿಂದ ನಮ್ಮೊಂದಿಗೆ ಹಂಚಿಕೊಂಡರು. ಶಾಸಕರಾಗಿದ್ದೂ ಕೂಡ ನಮ್ಮೊಂದಿಗೆ ತೋರಿದ ಪ್ರೀತಿ ಅವರ ಸರಳತೆ, ನಮ್ಮ ಬಗ್ಗೆ ಇರುವ ಕಾಳಜಿ. ಅವರು ನಮಗೆ ತೋರಿದ ಮಮತೆ ವಾತ್ಸಲ್ಯಕ್ಕೆ, ನಾವು ಚಿರಋಣಿಗಳು. ಈ ಅಮೂಲ್ಯ ಕ್ಷಣಗಳನ್ನು, ನಾವು ಜೀವನದಲ್ಲಿ ಮರೆಯಲಾರದಂತಹ ಅತ್ಯಮೂಲ್ಯ ಕ್ಷಣಗಳಾಗಿವೆ. ಸುವರ್ಣ ಸೌಧದಲ್ಲಿ ಅಧಿವೇಶನ ವೀಕ್ಷಿಸಿದ ಅಮೂಲ್ಯ ಸಮಯ, ಹಾಗೂ ನಮ್ಮ ಶಾಸಕರು ನಮಗೆ ತೋರಿದ ವಾತ್ಸಲ್ಯ ಭರಿತ ಆತಿಥ್ಯ.

ವಿದ್ಯಾರ್ಥಿಗಳಾದ ನಾವು ನಮ್ಮ ಜೀವನದಲ್ಲಿ, ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದಾಗಿದೆ. ಇದನ್ನ ವ್ಯವಸ್ಥೆ ಮಾಡಿದ ನಮ್ಮ ಹೆಮ್ಮೆಯ ಶಾಸಕರಾದ ಡಾ ಎನ್.ಟಿ.ಶ್ರೀನಿವಾಸ್ ರವರಿಗೆ. ಅನಂತಾನಂತ ವಂದನೆಗಳು ಅಭಿನಂದನೆಗಳು ಎಂದು, ವಿದ್ಯಾರ್ಥಿಗಳು ಭಾವುಕರಾಗಿ ಅನುಭವ ಹಂಚಿಕೊಂಡಿದ್ದಾರೆ.

ವಿ.ಜಿ.ವೃಷಭೇಂದ್ರ ಕೂಡ್ಲಿಗಿ