ರಾಜ್ಯದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳನ್ನ ನೀಡುವ ಮೂಲಕ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಕೇವಲ ಐದು ಗ್ಯಾರಂಟಿಗಳನ್ನ ಮಾತ್ರ ನೀಡುವುದಿಲ್ಲ. ಇನ್ನು ಮುಂದೆ ಬಡವರಿಗೆ ಸಾರ್ವಜನಿಕರಿಗೆ ಮೇಲಿಂದ ಮೇಲೆ ಗ್ಯಾರಂಟಿಗಿಂತಲೂ ಈಗಿನ ಸರ್ಕಾರದ ಸೌಲಭ್ಯಗಳನ್ನ ಹಾಗೂ ಜನರಿಗೆ ಸೌಕರ್ಯಗಳನ್ನ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯ ನಿರ್ವಹಿಸುತ್ತದೆ ಎಂದು ಜಮೀರ್ ಅಹಮದ್ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಾಗು ಕೇಂದ್ರ ಸರ್ಕಾರ ಇರಲು ಸ್ವಂತ ಮನೆ ಇಲ್ಲದವರಿಗೆ ಹಾಗೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರಿಗೆ ಮೇಲಿಂದ ಮೇಲೆ ಹೊಸ ಯೋಜನೆಯನ್ನ ಜಾರಿಗೊಳಿಸುತ್ತಿದೆ.
ರಾಜ್ಯದ ವಸತಿ ಸಚಿವರಾದ ಜಮೀರ್ ಅಹಮದ್ ಅವರು ರಾಜ್ಯಾದ್ಯಂತ ಇರುವ ಎಲ್ಲಾ ಗ್ರಾಮೀಣ ಭಾಗ ಹಾಗು ನಗರ ಭಾಗ ನಿವಾಸಿಗಳಿಗೆ ಅದರಲ್ಲಿಯೂ ಸ್ವಂತ ಮನೆ ಇಲ್ಲದ ಬಡ ಕುಟುಂಬಗಳಿಗೆ ಸಿಹಿ ಸುದ್ದಿ ನೀಡುವ ಮೂಲಕ ನಾವು ಕೂಡ ನಮ್ಮ ಕಾಂಗ್ರೆಸ್ ಸರ್ಕಾರದ ಜಾಗೃತಿ ಮೂಡಿಸುವ ಮೂಲಕ ಹಿಂದಿನ ಸರ್ಕಾರದ ನೆನಪು ಕೂಡ ಬರದಂತೆ ಅಷ್ಟು ಒಳ್ಳೆಯ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದು. ಇದೀಗ ವಸತಿ ರಹಿತರಿಗೆ ನೀಡಿರುವ ಮಾಹಿತಿ, ಬಡವರಿಗೆ ನಿರ್ಮಿಸಿದ ವಸತಿ ಯೋಜನೆಗಳನ್ನ ನಿಗದಿತ ಕಾಲ ಮಿತಿಯ ಒಳಗೆ ಪೂರ್ಣ ಗೊಳಿಸುವಂತೆ ವಸತಿ ಸಚಿವ ಜಮೀರ್ ಅಹಮದ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಸತಿ ಇಲಾಖೆ ವ್ಯಾಪ್ತಿಗೆ ಬರುವ ರಾಜೀವ್ ಗಾಂಧಿ ವಸತಿ ನಿಗಮದ ಪ್ರಗತಿ ಪರಿಶೀಲನೆ ನಡೆಸಿದ ಅವರು ಬಡವರಿಗೆ ರೂಪಿಸಿದ ವಸತಿ ಯೋಜನೆಗೆ ನಿಗದಿತ ಕಾಲಮಿತಿ ಹಾಕಿಕೊಂಡು ಅದನ್ನ ಪೂರ್ಣ ಗೊಳಿಸಿದ ನಂತರ ಮತ್ತೊಂದು ಯೋಜನೆ ಪೂರ್ಣ ಗೊಳಿಸುವಂತೆ ಹೇಳಿದ್ದಾರೆ. ನಿಗದಿತ ಅವಧಿ ಒಳಗೆ ಈ ಯೋಜನೆ ಪೂರ್ಣಗೊಳ್ಳದಿದ್ದರೆ ಬಡವರಿಗೆ ವಸತಿ ಕಲ್ಪಿಸಲು ಉದ್ದೇಶ ಈಡೇರುವುದಿಲ್ಲ. ಹೀಗಾಗಿ ಮಿತಿಯೊಳಗೆ ಜಾರಿಗೆ ಕೈಕೊಳ್ಳಬೇಕು ವಿಳಂಬವನ್ನ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದಿದ್ದಾರೆ. ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಕಲ್ಪಿಸುವ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಪೂರ್ತಿಯಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ಆರಂಭಿಕ ಹಣ ಪಾವತಿಸಿದ ಅರ್ಜಿದಾರರಿಗೆ, ಫಲಾನುಭವಿಗಳಿಗೆ ಇನ್ನು ಮನೆ ಕೊಟ್ಟಿಲ್ಲ, ಆದ್ದರಿಂದ ಈ ನಿಟ್ಟಿನಲ್ಲಿ ಬೇಗ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ