ಹಾಸ್ಟೇಲ್ ಸೌಲಭ್ಯಕ್ಕೆ ಕಮ್ಯೂನಿಟಿ ಸೆಂಟರನ್ನು ಸಂಪರ್ಕಿಸಲು ಜನಾಬ್ ಜಿ.ಎ ಬಾವಾ ವಿನಂತಿ
ಬೆಂಗಳೂರಿನಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ ಮುಸ್ಲಿಂ ಮಹಿಳೆಯರ ಅನುಕೂಲಕ್ಕಾಗಿ ಹಮೀದ್ ಷಾ ಕಾಂಪ್ಲೆಕ್ಸ್ ಟ್ರಸ್ಟ್ ನಿರ್ಮಿಸಿದ ಭವ್ಯ ಸೌಲಭ್ಯಪೂರ್ಣ ಹಾಸ್ಟೇಲ್ ನಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ವಸತಿ ಸೌಲಭ್ಯ ನೀಡಲಾಗುತ್ತಿದೆ. ಸುಸಜ್ಜಿತವಾಗಿ ನಿರ್ಮಿಸಿರುವ, ಸುರಕ್ಷೆಗೆ ಪ್ರಮುಖ ಆಧ್ಯತೆ ನೀಡಿರುವ ಈ ಇಸ್ಲಾಮಿಕ್ ವಾತಾವರಣದ ಹಾಸ್ಟೇಲ್ ನಲ್ಲಿ ಅತ್ಯುತ್ತಮ ಆಹಾರ ಒದಗಿಸಲಾಗುತ್ತಿದೆ.
ಬೆಂಗಳೂರೆಂಬ ಮಾಯಾನಗರಿಯಲ್ಲಿ ಮುಸ್ಲಿಂ ಯುವತಿಯರಿಗೆ ಅತ್ಯುತ್ತಮ ಆಶ್ರಯ ತಾಣವಾಗಿರುವ ಹಮೀದ್ ಷಾ ಹಾಸ್ಟೇಲ್ ಮಹಾನಗರದ ಹೃದಯಭಾಗದಲ್ಲಿ ಇರುವುದರಿಂದ ಯುವತಿಯರಿಗೆ ಎಲ್ಲಾ ಭಾಗಕ್ಕೂ ಇಲ್ಲಿಂದ ಸಂಪರ್ಕ ಸಾಧಿಸಬಹುದಾಗಿದೆ
ಜನಾಬ್ ಜಿ.ಎ ಬಾವಾ ಅವರ ನೇತೃತ್ವದಲ್ಲಿ ವಕ್ಪ್ ನ ಆಸ್ತಿಯಲ್ಲಿ ನಿರ್ಮಿಸಿರುವ ಈ ಸೌಲಭ್ಯಪೂರ್ಣ ಹಾಸ್ಟೇಲ್ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತಿದ್ದು ವಿದ್ಯಾರ್ಥಿನಿಯರ ದಿನಚರಿ ಮತ್ತು ಚಟುವಟಿಕೆಯಲ್ಲಿ ನಿಗಾ ಇರಿಸಿಕೊಂಡು ಕಾರ್ಯ ನಿರ್ವಹಿಸುತ್ತದೆ. ನಮಾಝ್ ಕೊಠಡಿ,ಸ್ಟಡೀ ರೂಂ ಸೇರಿದಂತೆ ಅತ್ಯುತ್ತಮ ಹಾಸ್ಟೇಲ್ ರೂಂ ನ ಸೌಲಭ್ಯ ಇಲ್ಲಿ ಒದಗಿಸಲಾಗಿದೆ.
ಹಮೀದ್ ಷಾ ಕಾಂಪ್ಲೆಕ್ಸ್ ನ ಮಸೀದಿಯ ಸಮೀಪವೇ ಇರುವ ಈ ಹಾಸ್ಟೇಲ್ ನ ಕೊಠಡಿಯಲ್ಲಿ ಯುವತಿಯರಿಗೆ ಕಲಿಯಲು ಹಾಗೂ ವಿಶ್ರಾಂತಿ ಪಡೆಯಲು ಮನೆಯ ವಾತಾವರಣವನ್ನೇ ನಿರ್ಮಿಸಿ ಕೊಡಲಾಗಿದೆ.
ಕಮ್ಯೂನಿಟಿ ಸೆಂಟರ್ ನ ಶೈಕ್ಷಣಿಕ ಯೋಜನೆಯ ರುವಾರಿಯಲ್ಲಿ ಒಬ್ಬರಾಗಿರುವ ಜನಾಬ್ ಜಿ.ಎ ಬಾವಾರವರು ಕಳೆದ ಒಂದು ವರ್ಷದಿಂದ ಇಲ್ಲಿ ಕಮ್ಯೂನಿಟಿ ಸೆಂಟರಿನ ಹಲವು ವಿದ್ಯಾರ್ಥಿನಿಯರಿಗೆ ಉಚಿತ ಹಾಸ್ಟೇಲ್ ಸೌಲಭ್ಯ ನೀಡಿ ಸಹಕರಿಸುತ್ತಿದ್ದು ಅದೇ ರೀತಿ ಜಿಲ್ಲೆಯ ಯಾವುದೇ ಭಾಗದ ಯುವತಿಯರು ಬೆಂಗಳೂರಿನಲ್ಲಿ ಉಧ್ಯೋಗ, ಶಿಕ್ಷಣ ಪಡೆಯುತ್ತಿದ್ದರೆ ಅವರಿಗೆ ಸೌಲಭ್ಯಪೂರ್ಣ ಹಾಸ್ಟೇಲ್ ಬೇಕಿದ್ದರೆ ಕಮ್ಯೂನಿಟಿ ಸೆಂಟರನ್ನು ಸಂಪರ್ಕಿಸಲು ತಿಳಿಸಿರುತ್ತಾರೆ.