2019 ರ ಲೋಕಸಭೆ ಚುನಾವಣೆಗೆ ಮುನ್ನ, ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಸುಮಾರು 2 ರಿಂದ 3 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಯತ್ನಿಸಿತ್ತು. ಆದರೆ ಇದಕ್ಕೆ ಆರ್ ಬಿ ಐ ಅನುಮತಿಸಿರಲಿಲ್ಲ ಎಂದು 2018 ರಲ್ಲಿ ಆರ್ ಬಿಐ ಡೆಪ್ಯುಟಿ ಗೌವರ್ನರ್ ಆಗಿದ್ದ ವಿರಳ್ ಆಚಾರ್ಯ ಹೇಳಿದ್ದಾರೆ.
“ಸಾರ್ವತ್ರಿಕ ಚುನಾವಣೆಗಳ ಪೂರ್ವಭಾವಿಯಾಗಿ ವೆಚ್ಚಗಳನ್ನು ಪೂರೈಸಲು 2-3 ಲಕ್ಷ ಕೋಟಿ ರೂಪಾಯಿಗಳನ್ನು ಹೊರತೆಗೆಯಲು ಕೆಲವು ಅಧಿಕಾರಿಗಳು ಯೋಜಿಸಿದ್ದರು. ಆದರೆ ಈ ಪ್ರಯತ್ನವನ್ನು ಆರ್ ಬಿಐ ಕಟುವಾಗಿ ವಿರೋಧಿಸಿತ್ತು. ರಿಸರ್ವ್ ಬ್ಯಾಂಕ್ ಗೆ ನಿರ್ದೇಶನ ನೀಡುವ ಸಂಬಂಧ ಕೇಂದ್ರ ಸರಕಾರವು ಎಂದಿಗೂ ಬಳಕೆಯಾಗದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯಿದೆಯ ಸೆಕ್ಷನ್ 7 ಕೂಡ ಬಳಸಲು ಮುಂದಾಗಿತ್ತು’ ಎಂದು ಆಚಾರ್ಯ ಹೇಳಿಕೊಂಡಿದ್ದಾರೆ. ಈ ವಿಷಯವನ್ನು ವಿರಳ್ ಅವರು 2020 ರಲ್ಲಿ ಪ್ರಕಟವಾದ ತಮ್ಮ ಪುಸ್ತಕದ ಹೊಸ ಆವೃತ್ತಿಯಲ್ಲಿ ನಮೂದಿಸಿದ್ದಾರೆ.