ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಚೈತ್ರ ಕುಂದಾಪುರ ಟಿಕೆಟ್ ಡೀಲ್ ಪ್ರಕರಣದ ಬಿಸಿ ಆರುವ ಮುನ್ನವೇ ಮತ್ತೊಂದು ಕೋಟಿ ರೂಪಾಯಿ ಟಿಕೆಟ್ ಡೀಲ್ ನಡೆದಿರುವ ಆರೋಪ ಕೇಳಿಬಂದಿದೆ. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ 2.3 ಕೋಟಿ ವಂಚನೆ ಮಾಡಿರುವ ಆರೋಪದಡಿ ಪುತ್ತೂರು ಮೂಲದ ಬಿಜೆಪಿಯ ಸ್ಥಳೀಯ ಮುಖಂಡನ ವಿರುದ್ಧ ದೂರು ದಾಖಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೆಸರು ಹೇಳಿಕೊಂಡು ಟಿಕೆಟ್ ಕೊಡಿಸೋದಾಗಿ ವಂಚನೆ ಮಾಡಿದ್ದಾರೆ. ವಿಜಯಪುರದ ರೇವಣ್ಣ ಸಿದ್ದಪ್ಪ, ಪುತ್ತೂರಿನ ಶೇಖರ್ ಎನ್.ಪಿ ವಿರುದ್ಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಿದ್ದಲಿಂಗಪ್ಪ ಎಂಬ ವ್ಯಕ್ತಿಗೆ ವಿಜಯನಗರ ಜಿಲ್ಲೆಯ ಹರಿಗಬೊಮ್ಮನ ಹಳ್ಳಿಯ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಎಂ. ಎಲ್. ಎ. ಟಿಕೆಟ್ ಕೊಡಿಸುವುದಾಗಿ ನಂಬಿಸಿ, ಪುತ್ತೂರು ಮೂಲದ ರಾಜ್ ಶೇಖರ್ ತನ್ನ ಖಾತೆಗೆ ಎರಡು ಕೋಟಿಗೂ ಅಧಿಕ ಹಣ ವರ್ಗಾವಣೆ ಮಾಡಿಸಿಕೊಂಡು, ಸುಮಾರು ಒಟ್ಟು 2.55 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ, ಇದೀಗ ವಿಜಯನಗರ ಉಪವಿಭಾಗದ ಕೊತ್ತೂರು ಪೋಲೀಸ್ ಠಾಣೆಯಲ್ಲಿ IPC 1860 ( U/s, 420, 506, 34 ) ಅಡಿ 19/10/2023 ರಂದು ಪ್ರಕರಣ ದಾಖಲಾಗಿದೆ.