ಬಜಪೆ ಸ್ವಾಮಿಲಪದವು ಎಂಬಲ್ಲಿ ದಿನಾಂಕ 28-03-2024 ರಂದು ಮುಂಜಾನೆ 4:00 ಗಂಟೆ ಸಮಯಕ್ಕೆ ಬಜಪೆ ಠಾಣೆಯ ಎಎಸ್‌ಐ ರಾಮ ಪೂಜಾರಿ ಮತ್ತು ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುತ್ತಿರುವಾಗ KA 70 H 4373 ದ್ವಿಚಕ್ರ ವಾಹನದಲ್ಲಿ ಅತೀ ವೇಗವಾಗಿ ಬರುತ್ತಿದ್ದನ್ನು ಗಮನಿಸಿ, ಆ ದ್ವಿಚಕ್ರ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದಾಗ ದ್ವಿಚಕ್ರ ಸವಾರನು ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಆತನನ್ನು ಅಡ್ಡ ಹಾಕಿ ಹಿಡಿದು, ದಾಖಲೆಗಳನ್ನು ಪರಿಶೀಲಿಸಿದಾಗ ಸದ್ರಿ ವಾಹನಕ್ಕೆ ಯಾವುದೇ ದಾಖಲೆ ಪತ್ರ ಇಲ್ಲದಿದ್ದು, ಈತನ ನಡವಳಿಕೆಯಿಂದ ಇನ್ನಷ್ಟು ಸಂಶಯಗೊಂಡು ಹೆಚ್ಚಿನ ವಿಚಾರಣೆ ನಡೆಸಿದಾಗ ಈತನು ಉಡುಪಿ ಮೂಲದ ಪ್ರಹ್ಲಾದ್, ತಂದೆ ಶೀನ ಪೂಜಾರಿ, ಹೈರೋಡಿ ಸಾಸ್ತಾನ ಕುಂದಾಪುರ, ಉಡುಪಿ ಜಿಲ್ಲೆಯ ನಿವಾಸಿ ಎಂದು ತಿಳಿದು, ಮತ್ತಷ್ಟು ವಿಚಾರಿಸಿದಾಗ ಈತನು ಈ ದ್ವಿಚಕ್ರ ವಾಹನವನ್ನು ಬಂಟ್ವಾಳದ ಮೆಲ್ಕಾರ್ ಎಂಬಲ್ಲಿಂದ ಕಳವು ಮಾಡಿರುದಾಗಿ ಒಪ್ಪಿಕೊಂಡಿದ್ದು, ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಪ್ರಹ್ಲಾದನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈತನ ವಿರುದ್ಧ ಈ ಹಿಂದೆ ಕುಂದಾಪುರ ಪೊಲೀಸ್ ಠಾಣೆ, ಮಂಗಳೂರು ಉತ್ತರ ಪೊಲೀಸ್ ಠಾಣೆ, ಕೋಟ ಪೊಲೀಸ್ ಠಾಣೆ, ಬ್ರಹ್ಮಾವರ ಪೊಲೀಸ್ ಠಾಣೆ, ಉಡುಪಿ ನಗರ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಹಾಗೂ ದ್ವಿಚಕ್ರ ವಾಹನಗಳ ಕಳ್ಳತನಕ್ಕೆ ಸಂಬಂದಪಟ್ಟಂತೆ ಹಲವು ಪ್ರಕರಣಗಳು ದಾಖಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡಿರುತ್ತಾನೆ. ಆರೋಪಿ ಪ್ರಹ್ಲಾದನಿಂದ ಸ್ವಾಧೀನಪಡಿಸಿಕೊಂಡ ಬೈಕಿನ ಮೊತ್ತ ಅಂದಾಜು ಒಂದು ಲಕ್ಷ ರೂಪಾಯಿ ಬೆಲೆಬಾಳುದ್ದಾಗಿರುತ್ತದೆ. ಆರೋಪಿ ಪ್ರಹ್ಲಾದನಿಗೆ ಮಾನ್ಯ ನ್ಯಾಯಾಲಯ ನ್ಯಾಯಾಂಗ ಬಂಧನವಿಧಿಸಿದೆ.

ಮಾನ್ಯ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ರವರ ಆದೇಶದಂತೆ ಉಪ ಪೊಲೀಸ್ ಆಯುಕ್ತರಾದ ಸಿದಾರ್ಥ ಗೋಯಲ್. ದಿನೇಶ್ ಕುಮಾರ್ ಹಾಗೂ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಮನೋಜ್ ಕುಮಾರ್ ನಾಯ್ಕ ರವರ ನಿರ್ದೇಶನದಂತೆ ಆರೋಪಿಗಳ ಪತ್ತೆ ಕಾರ್ಯದಲ್ಲಿ ಬಜಪೆ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ನಂದೀಶ್ವರ್ ಬಿ ಕುಂಬಾರ. ಪಿ.ಎಸ್.ಐ ಗುರಪ್ಪ ಕಾಂತಿ, ರೇವಣ ಸಿದ್ದಪ್ಪ, ರವಿ ಎನ್ ಎನ್, ಶ್ರೀಮತಿ ಶೋಭ ಆರ್, ಎಎಸ್‌ಐ ರಾಮ ಪೂಜಾರಿ ಹಾಗೂ ಸಿಬ್ಬಂದಿಗಳಾದ ಸುಜನ್, ಪುರುಷೋತ್ತಮ, ರಶೀದ್ ಶೇಖ, ಬಸವರಾಜ್ ಪಾಟೀಲ್, ಪ್ರಕಾಶ್ ಚಿದಾನಂದ, ರವರುಗಳು ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
