ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣದ ಆರೋಪಿಯಾದ, ಬಂಟ್ವಾಳ ತಾಲೂಕು, ಕುಕ್ಕಾಜೆ ಮಂಚಿ ಗ್ರಾಮದ, ಕಂಚಿಲ ಮನೆ ನಿವಾಸಿ ಅಬುಸಾಲಿ ಎಂಬಾತನು, ಸರಿ-ಸುಮಾರು 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ದಿನಾಂಕ: 29.03.2024 ರಂದು ಬಂಟ್ವಾಳ ನಗರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ರಾಮಕೃಷ್ಣ ರವರ ನೇತ್ರತ್ವದಲ್ಲಿ ಹೆಚ್ ಸಿ ರಾಜೇಶ್ ಎಸ್, ಹೆಚ್ ಸಿ ಗಣೇಶ್ ಏನ್ ರವರುಗಳ ತಂಡ ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆ ಎಂಬಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿವಲ್ಲಿ ಯಶಸ್ವಿಯಾಗಿರುತ್ತಾರೆ.
