ಮಂಗಳೂರು ನಗರದ ಬಾವುಟಗುಡ್ಡೆ ಸೈಂಟ್ ಅಲೋಶಿಯಸ್ ಕಾಲೇಜಿನ ಬಳಿ ಶಾಮೀರ್ ಹಾಗೂ ಇಬ್ರಾಹಿಂ ಫಾಹೀಮ್ ಎಂಬವರನ್ನು ದಿನಾಂಕ 23-08-2023 ರಂದು ತಾಬೀಶ್ ಹಾಗೂ ಆತನ ಸಹಚರರು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಹಲ್ಲೆ ನಡೆಸಿದ ಬಗ್ಗೆ ಇಬ್ರಾಹಿಂ ಫಾಹೀಮ್ ಎಂಬವರು ದೂರು ನೀಡಿದಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ನಂಬ್ರ 95/2023 ಕಲಂ 323, 324, 341, 363, 506 ರ ಜೊತೆಗೆ 149 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.
ಉಪ್ಪಳ ಮೂಲದ ವಿದ್ಯಾರ್ಥಿಯನ್ನು ಅಡ್ಯಾರ್ ಕಣ್ಣೂರು ಪ್ಲ್ಯಾಟ್ ವೊಂದರಲ್ಲಿ ಕೂಡಿಹಾಕಿ ನಿರಂತರ ಚಿತ್ರ ಹಿಂಸೆ ನೀಡಿ, ಥಳಿಸಿರುವ ಭೀಭತ್ಸ ಘಟನೆಯ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಆಯುಕ್ತರು ಮಂಗಳೂರು ಇವರ ನಿರ್ದೇಶನದಂತೆ,ಕಾನೂನು ಸುವ್ಯವಸ್ಥೆ ಉಪ ಪೊಲೀಸ್ ಆಯುಕ್ತರು ಮಂಗಳೂರು, ಉಪ ಪೊಲೀಸ್ ಆಯುಕ್ತರು ಅಪರಾಧ ಮತ್ತು ಸಂಚಾರ ಮಂಗಳೂರು ನಗರ ಮತ್ತು ಸಹಾಯಕ ಪೊಲೀಸ್ ಆಯುಕ್ತರು ಕೇಂದ್ರ ಉಪವಿಭಾಗ ಮಂಗಳೂರು ಇವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ತಕ್ಷಣ ಕಾರ್ಯಾಚರಿಸಿ ಪಾಣೆಮಂಗಳೂರು ಆಲಡ್ಕದ 19 ವರ್ಷ ಪ್ರಾಯದ ಇಬ್ರಾಹಿಂ ತಾಬೀಶ್, ಗೂಡಿನಬಳಿಯ 19 ವರ್ಷ ಪ್ರಾಯದ ಅಬ್ದುಲ್ ಹನ್ನಾನ್ ಯಾನೆ ಹನ್ನಾನ್, ನಂದಾವರ ಕೋಟೆ ನಿವಾಸಿ 19 ವರ್ಷ ಪ್ರಾಯದ ಮೊಹಮ್ಮದ್ ಶಕೀಫ್, ಬಡ್ಡಕಟ್ಟೆ ನಿವಾಸಿ 19 ವರ್ಷ ಪ್ರಾಯದ ಮೊಹಮ್ಮದ್ ಶಾಯಿಕ್, ಬಜಾಲ್ ಫೈಸಲ್ ನಗರದ ಯು.ಪಿ ತನ್ವೀರ್, ಅಬ್ದುಲ್ ರಶೀದ್, ಗೂಡಿನಬಳಿ ಮನ್ಸೂರ್ ಎಂಬ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.