ಅತೀ ಹೆಚ್ಚು ಭ್ರಷ್ಟಾಚಾರಿಗಳು ಬಿಜೆಪಿಯಲ್ಲಿ.! ನಾ ಕಾವುಂಗ.. ನಾ ಕಾನೇದೂಂಗ..

ರಾಷ್ಟ್ರೀಯ

ಭ್ರಷ್ಟಾಚಾರಿಗಳನ್ನು ಸುಮ್ಮನೆ ಬಿಡಲ್ಲ, ಅವರು ಲೂಟಿ ಹೊಡೆದಿರುವ ಒಂದೊಂದು ನಯಾಪೈಸೆಯನ್ನು ವಾಪಸ್‌ ಜನರಿಗೆ ನೀಡುವೆ. ನಾ ಕಾವುಂಗ.. ನಾ ಕಾನೇದೂಂಗ.. ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ ಪ್ರಧಾನಿ ನರೇಂದ್ರ ಮೋದಿ ಪಕ್ಷದಲ್ಲಿ ಇದೀಗ ಭ್ರಷ್ಟಾಚಾರಿಗಳೇ ತುಂಬಿದ್ದಾರೆ.

ಇತ್ತೀಚೆಗೆ ಬಿಜೆಪಿಯಲ್ಲಿರುವ ಭ್ರಷ್ಟಾಚಾರ ಪಟ್ಟಿಯನ್ನು ಕಾಂಗ್ರೆಸ್ ಟ್ವೀಟ್‌ ಮಾಡಿದೆ. ಕಾಂಗ್ರೆಸ್‌ ಮಾಡಿರುವ ಟ್ವೀಟ್‌ನಲ್ಲಿ ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಕರ್ನಾಟಕದ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿ 11 ನಾಯಕರ ಜತೆಗೆ ಅವರ ಮೇಲಿರುವ ಆರೋಪವನ್ನು ಹೆಸರಿಸಿ ಟ್ವೀಟ್ ಮಾಡಿದೆ ಕಾಂಗ್ರೆಸ್ ಪಾರ್ಟಿ. ಇದು ರಾಜ್ಯದ ಬಿಜೆಪಿ ನಾಯಕರಿಗೆ ಭಾರೀ ಮುಜುಗರವನ್ನು ಉಂಟು ಮಾಡಿದೆ.

ಕೇಂದ್ರ ಸಚಿವ ನಾರಾಯಣ ರಾಣೆಯ ಭೂ ಹಗರಣ, ಶಿವರಾಜ್‌ ಸಿಂಗ್‌ ಚೌಹಾಣ್‌ ರವರ ವ್ಯಾಪಂ ಹಗರಣ, ಬಸವರಾಜ ಬೊಮ್ಮಾಯಿಯ ಪೇ ಸಿಎಂ, ಪ್ರಫ‌ುಲ್‌ ಪಟೇಲ್‌ ಏರ್‌ ಇಂಡಿಯಾ ಹಗರಣ, ಹಿಮಂತ್‌ ಬಿಸ್ವಾ ಶರ್ಮಾ ಮತ್ತು ಸುವೇಂಧು ಅಧಿಕಾರಿ ಶಾರದಾ ಚಿಟ್ ಫಂಡ್ ಹಗರಣ, ರಘುಬರ್‌ ದಾಸ್‌ ಟೀ ಶರ್ಟ್‌ ಹಗರಣ, ಅಜಿತ್‌ ಪವಾರ್‌ ನೀರಾವರಿ ಹಗರಣ, ಪೆಮಾ ಖಂಡು 2,000 ಕೋಟಿ ರೂ. ಹಗರಣ ಮತ್ತು ಗಾಲಿ ಜನಾರ್ದನ ರೆಡ್ಡಿ 35 ಸಾವಿರ ಕೋಟಿ ಹಗರಣ, ಹಸನ್‌ ಮುಶ್ರಿಫ್ 1500 ಕೋಟಿ ಹಗರಣ, ಈ ಬಿಜೆಪಿ ಮುಖಂಡಹೆಸರು ಹಾಗೂ ಪೋಟೋಗಳನ್ನು ಕಾಂಗ್ರೆಸ್ ಟ್ವೀಟ್‌ ಮಾಡಿದೆ. ಈ ಬಗ್ಗೆ ಮೋದಿ ಸಾಹೇಬರು ಏನನ್ನುತ್ತಾರೆ.!