ಸೌಜನ್ಯ ರೇಪ್ ಆ್ಯಂಡ್ ಮರ್ಡರ್ ಪ್ರಕರಣ: ಪೋಸ್ಟ್‌ ಮಾರ್ಟಂ ಮಾಡಿದ್ದ ಪುತ್ತೂರಿನ ಸರಕಾರಿ ವೈದ್ಯ ಆದಂ ವಿಧಿವಶ

ರಾಜ್ಯ

ಧರ್ಮಸ್ಥಳ: ಸೌಜನ್ಯ ರೇಪ್ ಆ್ಯಂಡ್ ಮರ್ಡರ್ ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರು ಆಗಿರುವ ಸರಕಾರಿ ವೈದ್ಯ ಆದಂ ದಿಡೀರ್ ಆಗಿ ಮರಣ ಹೊಂದಿದ್ದಾರೆ. ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಈ ಇಡೀ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎನ್ನಲಾದ ಪ್ರಮುಖ ಮುಖ್ಯ ಸಾಕ್ಷಿಗಳಲ್ಲಿ ಒಬ್ಬರಾದ ಸರಕಾರಿ ವೈದ್ಯ ಡಾ.ಅದಂ ನಿಧನರಾಗಿದ್ದಾರೆ. ಡಾಕ್ಟರ್ ಆದಂ ಅವರಿಗೆ ಬ್ರೈನ್ ಹೆಮರೇಜ್ ಆಗಿದ್ದು ಅವರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನ ಹೊಂದಿದ್ದಾರೆ.

ಡಾಕ್ಟರ್ ಅದಂ ಉಸ್ಮಾನ್ ರವರು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಬಹುಕಾಲ ಮುಖ್ಯ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇತ್ತೀಚೆಗೆ ಅವರು ನಿವೃತ್ತರಾಗಿದ್ದರು. ಡಾಕ್ಟರ್ ಆದಂ ಮತ್ತು ಡಾಕ್ಟರ್ ರಶ್ಮಿ ಅವರ ಮೇಲೆ ಸೌಜನ್ಯ ರೇಪ್ ಆ್ಯಂಡ್ ಮರ್ಡರ್ ಕೇಸಿನ ಪೋಸ್ಟ್ ಮಾರ್ಟಂ ರಿಪೋರ್ಟ್ ತಿರುಚಿದ ಆರೋಪ ಕೇಳಿ ಬಂದಿತ್ತು. ಸರಿಯಾಗಿ ಬೆಳಕಿಲ್ಲದೆ ಕತ್ತಲಲ್ಲಿ ಪೋಸ್ಟ್ ಮಾರ್ಟಂ ಮಾಡಿದ್ದಾರೆ ಮತ್ತು ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಆರೋಪಿಗಳಿಗೆ ನೆರವಾಗಿದ್ದಾರೆ ಎನ್ನುವ ಗುರುತರವಾದ ಆರೋಪ ಅವರ ಮೇಲಿತ್ತು. ಆರೋಪಕ್ಕೆ ತಕ್ಕಂತೆ ಕೋರ್ಟು ಕೂಡ ಯಾವುದೇ ರೀತಿಯಲ್ಲಿ ಪೋಸ್ಟ್ ಮಾರ್ಟಂ ಸ್ಯಾಂಪಲ್ಸ್ ಅನ್ನು ವೈದ್ಯಕೀಯ ತಂಡ ಸಂಗ್ರಹಿಸಿಲ್ಲ ಎಂದು ದೂರಿತ್ತು.