ವರದಿ: ಸಲಾವುದ್ದೀನ್ ಎಂ,ಎ
ಮೂಡಿಗೆರೆ: ಕಳೆದ ಹಲವು ದಿನಗಳ ಹಿಂದೆ ಹುಲಿಯನ್ನು ಕೊಂದು ಅದನ್ನು ಮೂರು ಬಾಗವನ್ನಾಗಿ ಕತ್ತರಿಸಿ ತಲೆಯನ್ನು ಕಡಿದು ನ್ಯಾಯಾಲಯಕ್ಕೆ ತೆರಳಿದ್ದ ವ್ಯಕ್ತಿಯೋರ್ವರ ಬೈಕಿನ ಬ್ಯಾಗಿನಲ್ಲಿಟ್ಟು ತನ್ನ ವಿರೋಧಿ ವ್ಯಕ್ತಿಯನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದ ಅರಣ್ಯ ಕಾವಲುಗಾರ ಸುರೇಶ್ ಇಂದು ಮೂಡಿಗೆರೆ ನ್ಯಾಯಾಲಯದ ಆವರಣದಲ್ಲಿ ನಾಟಕೀಯ ರೀತಿಯಲ್ಲಿ ಬೆಳವಣಿಗೆ ನಡೆದು ಕೊನೆಗೂ ಅರಣ್ಯ ಇಲಾಖೆ ಸುರೇಶನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಮೂಡಿಗೆರೆ ತಾಲೂಕಿನ ಕುಂಡ್ರ ಎಂಬಲ್ಲಿ ಹುಲಿಯನ್ನು ಕೊಂದು ಅದರ ಶಿರವನ್ನು ಕಡಿದು ಮಣ್ಣಿನಲ್ಲಿ ಹೂತು ಹಾಕಿ, ಸ್ವಲ್ಪ ದಿನದ ನಂತರ ಊರಿನ ಸತೀಶ ಎಂಬಾತನಿಗೂ ಸುರೇಶನಿಗೂ ಮನಸ್ಥಾಪ ಏರ್ಪಟ್ಟಿದ್ದು. ಇದರಿಂದ ಸಿಟ್ಟಿಗೆದ್ದ ಸುರೇಶ್, ಸತೀಶನನ್ನು ಜೈಲಿಗೆ ಕಳಿಸುತ್ತೇನೆಂದು ಶಫಥ ಗೈದಿದ್ದ ಎನ್ನಲಾಗಿದೆ. ನಂತರ ಗೆಳೆಯರೊಂದಿಗೆ ಸತೀಶ ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹೋಗುವ ದಿನಾಂಕವನ್ನು ಗುರುತಿಸಿಕೊಂಡು. ಚಿಕ್ಕಮಗಳೂರಿನ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ್ದ ಸತೀಶನ ಬೈಕಿನ ಬ್ಯಾಗಿಗೆ ಹುಲಿಯ ತಲೆಯ ಕಳೆಬರಹವನ್ನು ಇಟ್ಟು. ಅರಣ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಹುಲಿಯ ತಲೆಯನ್ನು ಬ್ಯಾಗಿನಲ್ಲಿಟ್ಟುಕೊಂಡಿದ್ದಾನೆ ಸತೀಶ ಎಂಬ ಮಾಹಿತಿಯನ್ನು ನೀಡಿದ್ದರ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೋರ್ಟಿನ ಆವರಣದ ಹೊರಬಾಗದಲ್ಲಿ ನಿಂತಿದ್ದ ಸತೀಶನ ಬೈಕ್ ಪರಿಶೀಲಿಸಿದಾಗ ಹುಲಿಯ ತಲೆಯನ್ನು ವಶಕ್ಕೆ ತೆಗೆದುಕೊಂಡು ಸತೀಶನ ಮೇಲೆ ಕ್ರಮ ಜರುಗಿಸಿ ಜೈಲಿಗಟ್ಟಿದ್ದರು.
ಈ ಪ್ರಕರಣದಲ್ಲಿ ಹುಲಿ ಕೊಂದ ಆರೋಪದಡಿಯಲ್ಲಿ ಮೂವರು ನೈಜ ಆರೋಪಿಗಳನ್ನು ಬಂಧಿಸಲಾಗಿತ್ತು. ಅದೇ ಸಮಯದಲ್ಲಿ ಈ ಪ್ರಕರಣದ ಪ್ರಮುಖ ಆರೋಪಿ ಸುರೇಶ ಓಡಿಹೋಗಿದ್ದು ಅತನ ಬಂಧನಕ್ಕೆ ಅರಣ್ಯಾಧಿಕಾರಿಗಳು ಶತ ಪ್ರಯತ್ನನಡೆಸಿದ್ದರು. ಆದರೆ ಇಂದು ಏಕಾಏಕಿಯಾಗಿ ಅರಣ್ಯ ಕಾವಲುಗಾರ ಸುರೇಶ ವಕೀಲರ ಮುಖಾಂತರ ನ್ಯಾಯಾಲಯಕ್ಕೆ ಶರಣಾಗಲು ನ್ಯಾಯಾಲಯಕ್ಕೆ ಆಗಮಿಸುವ ಮಾಹಿತಿಯನ್ನು ಕಲೆ ಹಾಕಿದ ಅರಣ್ಯಧಿಕಾರಿಗಳು ನ್ಯಾಯಾಲಯದ ಹೊರಭಾಗದಲ್ಲಿ ಈತನಿಗಾಗಿ ಹೊಂಚು ಹಾಕಿ ಕಾಯುತ್ತಿದ್ದರು. ಆರೋಪಿ ಸತೀಶ ನ್ಯಾಯಾಲಯ ಪ್ರವೇಶಿಸುತ್ತಿದ್ದಂತೆ ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಸದ್ರಿ ಪ್ರಕರಣವನ್ನು ವನ್ಯ ಜೀವಿ ಪ್ರಿಯ ಪ್ರದೀಪ್ ಛತ್ರ ಮೈಧಾನರವರು ಸಿಓಡಿ ತನಿಖೆಗೆ ಒಳಪಡಿಸುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.
