ಮೇ 31ರೊಳಗೆ HSRP ಅಳವಡಿಸದ ವಾಹನಗಳಿಗೆ ದಂಡ; ಪ್ರಾರಂಭದಲ್ಲಿ 500 ರೂ. ಬಳಿಕ 1000 ರೂ ದಂಡ ವಿಧಿಸುವ ಸಾಧ್ಯತೆ

ರಾಜ್ಯ

ಮೇ 31ರೊಳಗೆ ನಂಬರ್ ಪ್ಲೇಟ್ ಅಳವಡಿಸದ ವಾಹನಗಳಿಗೆ ದಂಡ ವಿಧಿಸುವ ಬಗ್ಗೆ ಇಲಾಖೆ ಚಿಂತನೆ ನಡೆಸುತ್ತಿದ್ದು ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದೆ. ಪ್ರಾರಂಭದಲ್ಲಿ 500 ರೂ ದಂಡ ಮತ್ತು ಬಳಿಕ 1000 ರೂ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

2019ರ ಏಪ್ರಿಲ್ 1ರ ಒಳಗೆ ನೋಂದಣಿಯ ವಾಹನಗಳಿಗೆ HSRP ಅಳವಡಿಕೆೆಗೆ ಮೇ 31ರವರೆಗೆ ಗಡುವು ಈಗಾಗಲೇ 2 ಬಾರಿ ವಿಸ್ತರಣೆಯಾಗಿದ್ದು, ಇನ್ನು ಮುಂದಕ್ಕೆ ವಿಸ್ತರಣೆಯಾಗುವ ಸಾಧ್ಯತೆಗಳಿಲ್ಲ. ಹೀಗಾಗಿ ಮೇ 31ರೊಳಗೆ HSRP ಅಳವಡಿಕೆ ಮಾಡದಿದ್ದರೆ ದಂಡ ವಿಧಿಸಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ. 2019ರ ಏಪ್ರಿಲ್ 1ಕ್ಕೂ ಮೊದಲೇ ಖರೀದಿಸಿದ ವಾಹನವಾದರೆ ಸರ್ಕಾರದ ಹೊಸ ನಿಯಮದ ಪ್ರಕಾರ ಇನ್ನೂ ಅತಿ ಸುರಕ್ಷಿತ ನೋಂದಣಿ ಫಲಕ(HSRP) ಅಳವಡಿಸಿಲ್ಲವಾದರೆ ತಕ್ಷಣವೇ ನೋಂದಣಿ ಮಾಡಿ ಮೇ 31ರ ಒಳಗೆ ಅಳವಡಿಸಿಕೊಳ್ಳಿ. ಇಲ್ಲವಾದರೆ ದಂಡ ತೆರಬೇಕಾದೀತು. ಈ ವಿಚಾರವನ್ನು ಇದೀಗ ರಾಜ್ಯ ಸಾರಿಗೆ ಇಲಾಖೆಯೇ ಸ್ಪಷ್ಟಪಡಿಸಿದ್ದು ಈಗ ವಿಧಿಸಿರುವ ಗಡುವು ವಿಸ್ತರಣೆಯಾಗುವ ಸಾಧ್ಯತಗಳು ಕಡಿಮೆ ಎಂದು ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿರುವ ಹಳೇ ನೋಂದಾಯಿತ ವಾಹನಗಳಿಗೆ ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಅಳವಡಿಸಲು ಸಾರಿಗೆ ಇಲಾಖೆ ಮೇ 31ರ ಗಡುವು ವಿಧಿಸಿದ್ದು ತಪ್ಪಿದಲ್ಲಿ ದಂಡ ವಿಧಿಸುವುದಾಗಿ ತಿಳಿಸಿದೆ. ಎರಡೆರಡು ಬಾರಿ ಗಡುವನ್ನು ವಿಸ್ತರಿಸಿದರೂ ನಿರೀಕ್ಷಿತ ಮಟ್ಟದ ಜಾರಿ ಆಗದೇ ಇರುವುದರಿಂದ ಸಾರಿಗೆ ಇಲಾಖೆ ಇದೀಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಪ್ರಾರಂಭದಲ್ಲಿ 500 ರೂ ದಂಡ ಮತ್ತು ಬಳಿಕ 1000 ರೂ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.