ಮಹಿಳೆಯ ಭೇಟಿಯಾಗಲು ಹೋಗಿ ಕಬಕದಲ್ಲಿ ಒದೆ ತಿಂದ ನಟೋರಿಯಸ್ ಕಾಮುಕ..

ಕರಾವಳಿ

ಬೋಳಂತೂರಿನ ಆಟೋ ಚಾಲಕ ಕಿಸ್ ರಹೀಂನ ಹುಚ್ಚಾಟಕ್ಕೆ ಮಹಿಳೆಯರ ಬದುಕು ಬರ್ಬಾದ್.

ಹೌದು, ಆಟೋ ಚಾಲಕರೆಂದರೆ ಜನರಿಗೆ ಪ್ರೀತಿ, ವಿಶ್ವಾಸ..ಚಾಲಕರ ಸಮಾಜಸೇವೆಗೊಂದು ಹ್ಯಾಟ್ಸಪ್ ಹೇಳಲೇಬೇಕು. ಆದರೆ ಆಟೋ ಚಾಲಕ ಬೋಳಂತೂರು ನಿವಾಸಿ ಕಿಸ್ ರಹೀಂ ಮಾತ್ರ ಆಟೋ ಚಾಲಕರ ಮೇಲಿನ ನಂಬಿಕೆ, ಪ್ರೀತಿ ಮತ್ತು ಜನತೆಯ ವಿಶ್ವಾಸಕ್ಕೆ ಕಂಠಕನಾಗಿದ್ದಾನೆ. ಆಟೋ ಚಾಲಕರ ಮಾನ-ಮರ್ಯಾದೆಯನ್ನು ಸಾರ್ವಜನಿಕ ಸಮಾಜದ ಮುಂದೆ ಹರಾಜು ಹಾಕುತ್ತಿದ್ದಾನೆ.

ವರ್ಷದ ಹಿಂದೊಮ್ಮೆ ವಾಣಿಜ್ಯ ಸಂಕೀರ್ಣದ ಮೆಟ್ಟಿಲಲ್ಲಿ ನಿಂತು ಶಾಲಾ ವಿದ್ಯಾರ್ಥಿನಿಯ ಮೊಬೈಲ್ ಸಂಖ್ಯೆ ಪಡೆಯುವ ನೆಪದಲ್ಲಿ ಪೀಡಿಸಿ ಲೈಂಗಿಕ ಕಿರುಕುಳ ನೀಡಿದಾಗ ಸಾರ್ವಜನಿಕರು ಹಿಡಿದು ಒದೆ ನೀಡಿದ ಬಳಿಕ ಪೊಲೀಸರ ವಶಕ್ಕೆ ನೀಡಿದ್ದರು. ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂರು ತಿಂಗಳ ಕಾಲ ಜೈಲಿಗಟ್ಟಿದ್ದರು. ಅದಾದ ಬಳಿಕ ಪುತ್ತೂರು ಬನ್ನೂರು ಎಂಬಲ್ಲಿನ ಮನೆಗೆ ನುಗ್ಗಿದ ಕಿಸ್ ರಹೀಂ ಮೈಮರೆಯುತ್ತಿದ್ದಂತೆ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಒಂದೆ ತಿಂದು ಕೈಕಾಲು ಮುರಿಸಿಕೊಂಡಿದ್ದ. ಅದಾದ ಬಳಿಕ ಕೊಳ್ನಾಡು ಗ್ರಾಮದ ಖಂಡಿಗದಲ್ಲೂ ಅದೇ ರೀತಿ ಮಾಡಲು ಹೋಗಿದ್ದ ಕಿಸ್ ರಹೀಂ ಗೆ ಮನಸೋಇಚ್ಛೆ ಥಳಿಸಿದ್ದರು. ಇದೀಗ ಮತ್ತೆ ಕಿಸ್ ರಹೀಂ ಹುಚ್ಚಾಟ ಕಬಕ ಸಮೀಪ ನಡೆದಿದೆ.

ಶುಕ್ರವಾರ ಮಧ್ಯಾಹ್ನ ಸಿಕ್ಕಿಬಿದ್ದ ರಹೀಂಗೆ ಮಿತ್ತೂರು ಮಸೀದಿ ಪರಿಸರದ ನಿರ್ಜನ ಪ್ರದೇಶದಲ್ಲಿ ಮಾರುತಿ ಬ್ರೆಝಾ ಕಾರಿನಲ್ಲಿ ಬಂದ ಮೂವರು ತಂಡ ಗಂಟೆಗಳ ಕಾಲ ಭರ್ಜರಿ ಬಾಡೂಟ ನೀಡಿ ಮುಖ-ಮೂತಿ ಘಾಸಿಗೊಳಿಸಿದೆ. ಮೃಷ್ಟಾನ್ನ ಭೋಜನ ಸವಿದ ಕಿಸ್ ರಹೀಂ ಪುತ್ತೂರು ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದರ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ರಾಝಿಕ್ ಎಂಬಾತನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಟೋರಿಯಸ್ ಕಿಸ್ ರಹೀಂ

ಆಟೋ ಚಾಲಕ ಬೋಳಂತೂರು ರಹೀಂ ಅಂತಿಂಥ ಸಾಮಾನ್ಯ ವ್ಯಕ್ತಿಯಲ್ಲ. ಈವರೆಗೆ ಇಪ್ಪತ್ತೈದಕ್ಕೂ ಹೆಚ್ಚು ಕಡೆಗಳಲ್ಲಿ ಮಹಿಳೆಯರು ಮೇಲೆ ದೌರ್ಜನ್ಯ ಎಸಗುತ್ತಾ ಕಿರುಕುಳ ನೀಡಿರುವುದನ್ನು ಸ್ವತಃ: ಆತನ ಸಂಬಂಧಿಕರು ಮತ್ತು ಊರಿನವರೇ ಹೇಳುತ್ತಿದ್ದಾರೆ. ಆತನ ಹುಚ್ಚಾಟದಿಂದಾಗಿ ಇತರ ಆಟೋ ಚಾಲಕರ ಮಾನ-ಮರ್ಯಾದೆ ಹರಾಜಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಈತನ ಆಟೋದಲ್ಲಿ ಬಾಡಿಗೆ ಹೋಗುವ ಯುವತಿಯರ ಮತ್ತು ಮಹಿಳೆಯರ ಮೊಬೈಲ್ ಸಂಖ್ಯೆ ಪಡೆದು ಬಳಿಕ ತನ್ನ ಹುಚ್ಚಾಟ ಮೆರೆಯುತ್ತಾನೆ. ಈತನ ಮಾನಗೇಡಿ ಬುದ್ಧಿಯಿಂದ ಆಗಿ ಈಗಾಗಲೇ ಹಲವು ಮಹಿಳೆಯರು ತಮ್ಮ ದಾಂಪತ್ಯ ಜೀವನ ಕಳೆದುಕೊಂಡಿದ್ದಾರೆಂದು ಊರಿನವರು ಹೇಳಿದ್ದಾರೆ.

ಈತನ ವಿಕೃತ ಮನಸ್ಥಿತಿಯಿಂದಾಗಿ ಆಟೋ ಚಾಲಕ ಸಮುದಾಯ ತೀವ್ರ ಆತಂಕ ವ್ಯಕ್ತಪಡಿಸಿದೆ. ಆಟೋ ಚಾಲಕ-ಮಾಲಕ ಸಂಘದ ಪದಾಧಿಕಾರಿಗಳು ಇನ್ನಾದರೂ ರಹೀಂನ ತಮ್ಮ ಗುಂಪಿನಿಂದ ಒದ್ದೋಡಿಸಿ ಆಟೋ ಚಾಲಕರ ಮೇಲಿನ ಗೌರವ, ಘನತೆ ಮತ್ತು ವಿಶ್ವಾಸ ಉಳಿಸಿಕೊಳ್ಳಬೇಕು. ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಮಾಜ ಸ್ವಾಸ್ಥ್ಯ ಹಾಳುಗೆಡಹುವ ಚಾಲಕ ರಹೀಂನ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜನ ಒತ್ತಾಯಿಸಿದ್ದಾರೆ.