ಪುತ್ತೂರು ಹೊರವಲಯದ ಪರ್ಲಡ್ಕ ಬೈಪಾಸ್ ರಸ್ತೆ ಬಳಿ ಇಂದು ಮುಂಜಾನೆ ಕಾರೊಂದು ಪಲ್ಟಿ ಹೊಡೆದು ಮೂವರು ಸಾವನ್ನಪ್ಪಿದ್ದಾರೆ. ಬೈಪಾಸ್ ರಸ್ತೆ ಬದಿಯ ಕಂದಕಕ್ಕೆ ಸುಳ್ಯ ಮೂಲದ ಮಾರುತಿ ಆಲ್ಟೋ ಕಾರು ಪಲ್ಟಿ ಹೊಡೆದಿದೆ. ಮೃತರನ್ನು ಜಟ್ಟಿಪಳ್ಳ ನಿವಾಸಿಗಳಾದ ಅಣ್ಣು ನಾಯ್ಕ, ಚಿದಾನಂದ ನಾಯ್ಕ ಮತ್ತು ರಮೇಶ್ ನಾಯ್ಕ ಎಂದು ತಿಳಿದು ಬಂದಿದೆ.
ಅಪಘಾತ ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆಯ ಬಳಿಕವಷ್ಟೇ ಲಭ್ಯವಾಗಬೇಕಾಗಿದೆ.