ಯುನಿಸೆಕ್ಸ್ ಹೆಸರಿನಲ್ಲಿ ನಡೆಯುತ್ತಿದೆ ಭರ್ಜರಿ ಚರ್ಮದಂಧೆ!
ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಗಳು, ಇಸ್ಪೀಟ್ ಕ್ಲಬ್ ಗಳು, ವಿಡಿಯೋ ಗೇಮ್ ಗಳು ಭರ್ಜರಿ ಕಮಾಯಿ ಮಾಡುತ್ತಿದ್ದ ಕಾಲವೊಂದಿತ್ತು. ಎಲ್ಲವೂ ಸೆಟ್ಟಿಂಗ್ ಮೂಲಕ ನಡೆಯುತ್ತಿದ್ದವು. ಅಧಿಕಾರಿಗಳಿಗೆ ಮಂತ್ಲಿ ಕಪ್ಪ ಕಾಣಿಕೆ ಕೊಟ್ಟೇ ರಾಜಾರೋಷವಾಗಿ ನಡೆಯುತ್ತಿದ್ದವು. ಕೇರಳದ ಕಾಸರಗೋಡಿನಿಂದ ರೈಲು ಹತ್ತಿ ಮಸಾಜ್ ಸೆಂಟರ್ ಗೆ ಬಂದು ದೇಹ ತಣಿಸಿಕೊಂಡು ಹೋಗುತ್ತಿದ್ದರು. ಈ ಬಗ್ಗೆ ನಾಗರಿಕ ಸಂಘಟನೆಗಳ ಪ್ರತಿಭಟನೆಯಿಂದ ರಾಜಾರೋಷವಾಗಿ ನಡೆಯುತ್ತಿದ್ದ ಇಲ್ಲೀಗಲ್ ದಂಧೆಗೆ ಬ್ರೇಕ್ ಬಿದ್ದಿತ್ತು.
ಆದರೆ ಇದೀಗ ಮತ್ತೆ ಮಂಗಳೂರಿನಲ್ಲಿ ಅದೇ ಹಳೆಯ ವೈಭೋಗ ಮರಳಿ ಬಂದಿದೆ. ಯುನಿಸೆಕ್ಸ್ ಹೆಸರಿನಲ್ಲಿ ಮಸಾಜ್ ಸೆಂಟರ್ ಗಳು ನಗರದ ಗಲ್ಲಿ ಗಲ್ಲಿಗಳಲ್ಲಿ ಅಣಬೆಗಳಂತೆ ತಲೆ ಎತ್ತಿ ನಿಂತಿದೆ. ಆದರೆ ಇದನ್ನು ನಡೆಸುವವರು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಹೊರಗೆ ಗಂಡು, ಹೆಣ್ಣು ಬಂದು ಕೂದಲು ಕಟ್ಟಿಂಗ್, ಬ್ಯೂಟಿ ಸ್ಪಾ, ಮಸಾಜ್ ಮಾಡಿಕೊಳ್ಳುತ್ತಾರೆ ಅಂದುಕೊಂಡರೆ ಅದು ತಪ್ಪು ಕಲ್ಪನೆ. ಒಳಗಡೇ ನಡೆಯುತ್ತಿರುವುದು ಮಾತ್ರ ಥಕಥೈ ವ್ಯವಹಾರ. ಇದು ಯಾರಿಗೂ ಅನುಮಾನ ಬಾರದಂತೆ ಮಾಡಿರುವ ಸೆಟ್ಟಿಂಗ್ ಅಷ್ಟೇ. ಇಂತಹ ಹಲವಾರು ಮಸಾಜ್ ಸೆಂಟರ್ ಗಳು ಮಂಗಳೂರಿನ ಆಯಕಟ್ಟಿನ ಜಾಗದಲ್ಲಿ ನಡೆಯುತ್ತಿದೆ. ತಮ್ಮದೇ ಆದ ಗಿರಾಕಿಗಳಿಗೆ ಇಂದು ಇಂತಹ ಮಾಲ್ ಗಳು ಬಂದಿವೆ. ಬಂದು ಸುಖ ಪಡೆದುಕೊಂಡು ಹೋಗಿ ಎಂದು ನಂಬಿಕಸ್ಥ ಗ್ರಾಹಕರಿಗೆ ಫೋನಾಯಿಸಿ ಕರೆಯಿಸಿಕೊಳ್ಳುವ ಪರಿಪಾಟವು ಇದೆಯಂತೆ. ಕೆಲವೊಂದು ಅನುಮಾನಾಸ್ಪದ ಹೊಸ ಗ್ರಾಹಕರು ಬಂದರೆ ನಮ್ಮಲ್ಲಿ ಅಂತಹ ಸೇವೆಗಳು ಇಲ್ಲ ಎಂದು ನಂಬಿಸಿ ಕಳುಹಿಸುತ್ತಾರಂತೆ. ಆದರೆ ಅವರ ನಂಬಿಕಸ್ಥ ಗ್ರಾಹಕರಿಗೆ ಒಳಗೆಲ್ಲ ಎಲ್ಲವೂ ಲಭ್ಯವಿದೆಯಂತೆ!

ಇನ್ನು ಹಂಪನಕಟ್ಟೆಯ ಮಿಲಾಗ್ರಿಸ್, ರಸ್ತೆಯಲ್ಲಿರುವ ಸ್ಪಾ ಗಳಲ್ಲಿ ಒಳ ಹೊಕ್ಕರೆ ಸ್ವರ್ಗ ಸುಖ ಕೊಡುವ ಚೆಂದುಳ್ಳಿ ಚೆಲುವೆಯರಿದ್ದಾರಂತೆ. ಇಂತಿಷ್ಟು ರೇಟ್ ಕೊಟ್ಟರೆ ಸಂಪೂರ್ಣ ಬೆತ್ತಲಾಗುತ್ತಾರಂತೆ. ಅದರಲ್ಲೂ ಹಂಪನಕಟ್ಟೆಯ ಮಿಲಾಗ್ರೀಸ್ ರಸ್ತೆಯ ಪಕ್ಕವಿರುವ ಪ್ರತಿಷ್ಠಿತ ಹೋಟೆಲ್ ವೊಂದರ ಕೆಳಗಡೆ ನಡೆಯುತ್ತಿರುವ ಮಸಾಜ್ ಸ್ಪಾ ದಲ್ಲಿ ಭರ್ಜರಿ ಚರ್ಮದಂಧೆ ನಡೆಯುತ್ತಿದೆ. ಇಲ್ಲಿನ ಬೆಲೆವೆಣ್ಣುಗಳು ಉತ್ತರ ಭಾರತ ಹಾಗೂ ವಿದೇಶಿಯರು. ಒಂದು ಗಂಟೆಗೆ 2,500 ರೂಪಾಯಿ, ಒಂದೂವರೆ ಗಂಟೆಗೆ 3,500 ರೂಪಾಯಿ ಫಿಕ್ಸ್ ಅಂತೆ. ಒಳಗಡೆ ಬೆಲೆವೆಣ್ಣುಗಳ ಕೈಗೆ ನೀಡುವ ಟಿಪ್ಸ್ ಆಧರಿಸಿ ಒಂದೊಂದು ಬಟ್ಟೆ ಕಳಚುತ್ತಾರಂತೆ. ಐದರಿಂದ ಆರು ಸಾವಿರ ಎಕ್ಸ್ ಟ್ರಾ ನೀಡಿದರೆ ವಿದೇಶಿ ಹೆಣ್ಣು ಪೂರ್ತಿ ಬೆತ್ತಲಾಗುತ್ತಾಳಂತೆ. ಮತ್ತೊಂದು ವಿಶೇಷ ಎಂದರೆ ಇಲ್ಲಿ ಸೇವೆ ಬೇಕಾದರೆ ಒಂದು ಗಂಟೆ ಮುಂಚಿತವಾಗಿ ಆರ್ಡರ್ ಮಾಡಬೇಕಂತೆ. ಆದರೆ ಹೊರಗೆ ತಾವು ಸುಬಗರು, ತಮ್ಮಲ್ಲಿ ಅಂತಹ ಸಿಸ್ಟಮ್ ಇಲ್ಲ ಎಂದು ನಂಬಿಸುವ ಇವರದ್ದು ಗ್ರಾಹಕರನ್ನು ಪೂರ್ತಿ ಮುಂಡಾ ಮೋಚುವ ಕಾಯಕ.
ಅದೇ ರೀತಿ ಯು.ಪಿ ಬಯ್ಯನೊಬ್ಬನ ಎರಡು ಸ್ಪಾ ದಲ್ಲಿ ( ಕಾರ್ ಸ್ಟ್ರೀಟ್ ಮತ್ತು ಅಳಕೆ) ಕೆಲವು ಅಧಿಕಾರಿಗಳೇ ಗಿರಾಕಿಗಳಂತೆ.! ಈತ ಮಾತು ಮೀತಿಗೂ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಹೆಸರನ್ನೇ ಹೇಳುತ್ತಿರುತ್ತಾನೆ. ಈತ ಕೆಲವು ಅಧಿಕಾರಿಗಳಿಗೂ ಸುಖ ಭೋಗದ ರುಚಿ ತೋರಿಸುತ್ತಿದ್ದಾನಂತೆ. ಈತನ ಸ್ಫಾದಲ್ಲಿ ಸಲಿಂಗ ಕಾಮಕ್ಕೂ ವ್ಯವಸ್ಥೆ ಇದೆಯಂತೆ. ಕೆಲವು ಮಂದಿ ಪೊಲೀಸ್ ಅಧಿಕಾರಿಗಳ ಹೆಸರನ್ನು ಈತ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನಂತೆ.! ಇನ್ನಾದರೂ ಪೊಲೀಸ್ ಅಧಿಕಾರಿಗಳು ಈತನೀಗೆ ಕಡಿವಾಣ ಹಾಕಬೇಕಾಗಿದೆ. ಇನ್ನು ಬಂಟ್ಸ್ ಹಾಸ್ಟೆಲ್, ಮಲ್ಲಿಕಟ್ಟೆ, ಕಂಕನಾಡಿ ಬಳಿ ಯಿರುವ ಸ್ಪಾಗಳ ಹೆಸರಲ್ಲಿ ಅನೈತಿಕ ದಂಧೆ ಬಹಳ ಜೋರಾಗಿಯೇ ಇದೆ.
ಮಂಗಳೂರಿನ ಕೆಲವೊಂದು ಯುನಿಸೆಕ್ಸ್ ಸೆಲೂನ್ ಗಳಲ್ಲಿ ಇಂತಹ ದಂಧೆ ಮಾಮೂಲಿಯಾಗಿದೆ. ಇನ್ನು ಬೆಂಗಳೂರಿನ ಕೆಲವು ಲೈವ್ ಬ್ಯಾಂಡ್ ಶೇಠುಗಳು ಮಂಗಳೂರಿನಲ್ಲಿ ಸ್ಫಾ ವ್ಯವಹಾರ ನಡೆಸಲು ವಕ್ಕರಿಸುತ್ತಾರಂತೆ ಎಂಬ ಗುಸುಗುಸು ಸುದ್ದಿಯಿದೆ. ಕೆಲವು ಸ್ಪಾಗಳು ನಿಯತ್ತಾಗಿ ತಮ್ಮ ಕೆಲಸ ಕಾರ್ಯನಿರ್ವಹಿಸುತ್ತಿದ್ದು, ‘ದೋ’ ದಂಧೆಯಿಂದ ದೂರ ಇದ್ದರೆ ಕೆಲವುಗಳಲ್ಲಿ ಅನೈತಿಕ ವ್ಯವಹಾರ ಬಹಳ ಜೋರಾಗಿಯೇ ನಡೆಯುತ್ತಿದೆ.

ನಮ್ಮದು ಪ್ರೊಫೇಶನಲ್, ಅನೈತಿಕ ಚಟುವಟಿಕೆ ನಡೆಯುತ್ತಿಲ್ಲ ಎಂದು ನಂಬಿಸುವ ಇಂತಹ ಹತ್ತಾರು ಯುನಿಸೆಕ್ಸ್ ಮಸಾಜ್ ಸೆಂಟರ್ ಗಳು ಮಂಗಳೂರಿನಲ್ಲಿ ಭರ್ಜರಿ ಕಮಾಯಿ ನಡೆಸುತ್ತಿದೆ. ಕದ್ರಿ ವ್ಯಾಪ್ತಿಯಲ್ಲಂತು ಎಲ್ಲವೂ ಖುಲ್ಲಂ ಖುಲ್ಲ. ಇಲ್ಲಿನ ಅಧಿಕಾರಿಗಳು ಸಕತ್ತಾಗಿ ನಿದ್ರೆಗೆ ಜಾರಿದ್ದಾರೆ.! ಮಾನ್ಯ ಪೊಲೀಸ್ ಆಯುಕ್ತರು ಇಂತಹ ಯುನಿಸೆಕ್ಸ್ ಮೇಲೆ ಇನ್ನಾದರೂ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.