ಲಾರಿ ಚಾಲಕನ ಮೇಲೆ ಹಲ್ಲೆ. ಟೋಲ್ ಸಿಬ್ಬಂದಿಗಳ ಗೂಂಡಾಗಿರಿಗೆ ಬ್ರೇಕ್ ಹಾಕದ ಪೊಲೀಸರು.?
ಹಗಲು ದರೋಡೆ ನಡೆಸುತ್ತಿರುವ ಟೋಲ್ ಸಿಬ್ಬಂದಿಗಳ ಗೂಂಡಾಗಿರಿಗೆ ವಾಹನ ಚಾಲಕರು ನಲುಗಿ ಹೋಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ಸಮೀಪದ ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ ಸಿಬ್ಬಂದಿಗಳ ರೌಡಿಸಂ ಮಿತಿ ಮೀರಿದೆ.

ಪ್ರತಿನಿತ್ಯ ವಾಹನ ಚಾಲಕರ ಮೇಲೆ ಗೂಂಡಾಗಿರಿ ನಡೆಸುತ್ತಿದ್ದರೂ ಪೊಲೀಸರು ಮತ್ತು ಹೆದ್ದಾರಿ ಇಲಾಖೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ಶನಿವಾರ ಬೆಳಗ್ಗೆ ಲಾರಿ ಚಾಲಕನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಟೋಲ್ ಸಿಬ್ಬಂದಿಗಳ ಗೂಂಡಾಗಿರಿಗೆ ಪ್ರತಿಯಾಗಿ ವಾಹನ ಚಾಲಕರು ಕೂಡಾ ತಕ್ಕ ಉತ್ತರ ನೀಡಿದಲ್ಲಿ ಟೋಲ್ ಮಾಲಿಕನಿಗೆ ತಡೆಯಲು ಸಾಧ್ಯವಿದೆಯೇ ಎಂಬ ಆಕ್ರೋಶದ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
