ಪರಂಗಿಪೇಟೆ ದಿಗಂತ್ ಉಡುಪಿಯಲ್ಲಿ ಪತ್ತೆ.. ಭಾರೀ ಕುತೂಹಲ ಕೆರಳಿಸಿದ್ದ ಪ್ರಕರಣ ಸುಖಾಂತ್ಯ

ಕರಾವಳಿ

ಕಳೆದ ಹನ್ನೆರಡು ದಿನಗಳಿಂದ ಕರಾವಳಿಯಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ದಿಗಂತ್ ಮಿಸ್ಸಿಂಗ್ ಕೇಸ್ ಸುಖಾಂತ್ಯಗೊಂಡಿದ್ದು, ಬಾಲಕ ದಿಗಂತ್ ಉಡುಪಿಯಲ್ಲಿ ಪತ್ತೆಯಾಗಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಕರಾವಳಿಯಲ್ಲಿ ತೀವ್ರ ಸೆನ್ಸೇಷನಲ್ ಸೃಷ್ಟಿಸಿದ್ದ ದಿಗಂತ್ ಮಿಸ್ಸಿಂಗ್ ಪ್ರಕರಣ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಆತನದ್ದು ಅಪಹರಣವಲ್ಲ, ಸ್ವಯಂಪ್ರೇರಿತವಾಗಿ ನಾಪತ್ತೆಯಾಗಿರುವುದು ಧೃಡಪಟ್ಟಿದ್ದವು. ಪರೀಕ್ಷೆ ಭಯ, ಒನ್ ವೇ ಲವ್ ಸ್ಟೋರಿ, ಲಿಂಗ ಪರಿವರ್ತನೆ ಜಾಲ ಈ ಮೂರು ಆಯಾಮಗಳು ಸುದ್ದಿ ಮಾಡಿದ್ದವು. ಆದರೆ ಇದೀಗ ಈತನ ನಾಪತ್ತೆ ಹಿಂದಿನ ಹಕೀಕತ್ತು ಅಸಲಿ ರಹಸ್ಯ ಇನ್ನಷ್ಟೇ ಹೊರಬರಬೇಕಿದೆ.