ರಾಜ್ಯ ವಿಧಾನ ಪರಿಷತ್​ನ ನಾಲ್ಕು ಸ್ಥಾನಗಳಿಗೆ ಸರ್ಕಾರ ನಾಮನಿರ್ದೇಶನ ಮಾಡುವ ಹಿನ್ನೆಲೆ, ನಾಲ್ವರು ಎಂಎಲ್​ಸಿಗಳ ಹೆಸರು ಫೈನಲ್

ರಾಜ್ಯ

ರಮೇಶ್​ ಬಾಬು, ದಿನೇಶ್​ ಅಮೀನ್​ ಮಟ್ಟು, ಡಾ.ಆರತಿ ಕೃಷ್ಣ, ಡಿಜಿ ಸಾಗರ್ ನಾಲ್ವರು ಪೈನಲ್

ವಿಧಾನ ಪರಿಷತ್ತಿಗೆ ನಾಲ್ವರ ಹೆಸರುಗಳನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. ಸಮಾಜಸೇವೆ, ಶಿಕ್ಷಣ, ಸಹಕಾರ ಕ್ಷೇತ್ರದ ಕೋಟಾದಡಿ ಕೆಪಿಸಿಸಿ ವಕ್ತಾರ ರಮೇಶ್​ ಬಾಬು, ಪತ್ರಕರ್ತರ ಕೋಟಾದಡಿ ದಿನೇಶ್​ ಅಮೀನ್​ ಮಟ್ಟು, ಅನಿವಾಸಿ ಭಾರತೀಯ ಸೇವೆ, ಮಹಿಳಾ, ಸಮಾಜ ಸೇವೆ ಕೋಟಾದಡಿ ಡಾ.ಆರತಿ ಕೃಷ್ಣ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷರಾದ ಡಿಜಿ ಸಾಗರ್ ಹೆಸರುಗಳನ್ನುಕಾಂಗ್ರೆಸ್​ ಹೈಕಮಾಂಡ್​ ಅಂತಿಮಗೊಳಿಸಿದೆ.

ಈ ನಾಲ್ವರನ್ನು ಪರಿಷತ್ ಗೆ ನಾಮನಿರ್ದೇಶನ ಎಂದು ಸಿದ್ದರಾಮಯ್ಯ ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ. ಖಾಲಿ ಇರುವ ಪರಿಷತ್ ನ​ ನಾಲ್ಕು ಸ್ಥಾನಗಳಿಗೆ ಹಲವಾರು ಕಾಂಗ್ರೆಸ್ ನಾಯಕರು ತೀವ್ರ ಲಾಬಿ ನಡೆಸಿದ್ದರು.

ರಾಜ್ಯ ವಿಧಾನ ಪರಿಷತ್​ನ ನಾಲ್ಕು ಸ್ಥಾನಗಳಿಗೆ ಸರ್ಕಾರ ನಾಮನಿರ್ದೇಶನ ಮಾಡುವ ಹಿನ್ನೆಲೆ ಇದೀಗ ನಾಲ್ವರು ಎಂಎಲ್​ಸಿಗಳ ಹೆಸರು ಫೈನಲ್ ಎನ್ನಲಾಗಿದೆ. ಈ ಹೆಸರುಗಳು ಅಂತಿಮವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ ಎಂದು ಹೇಳಲಾಗಿದೆ.