ರಾಶಿ ರಾಶಿ ಕಸಕ್ಕೆ ಮುಕ್ತಿ; ಶಾಶ್ವತ ಪರಿಹಾರಕ್ಕೆ ಪಂಚಾಯತ್ ಗಮನ ಹರಿಸಲಿ
ನಿನ್ನೆಯಷ್ಟೇ ಸ್ಪೆಷಲ್ ನ್ಯೂಸ್ ಮೀಡಿಯಾ ಮಲ್ಲೂರು ಗ್ರಾಮ ಪಂಚಾಯತ್ ನ ಬೇಜವಾಬ್ದಾರಿ, ನಿರ್ಲಕ್ಷ್ಯತನದ ಬಗ್ಗೆ ಸಮಗ್ರ ವರದಿ ಮಾಡಿತ್ತು. ಮಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬದ್ರಿಯಾನಗರ ಚರ್ಚ್ ಬಳಿ ರಾಶಿ ರಾಶಿ ಕಸ ವಿಲೇವಾರಿ ಮಾಡದೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಬಗ್ಗೆ, ಜನವಸತಿ ಪ್ರದೇಶದಲ್ಲಿ ರಾಶಿ ರಾಶಿ ಕಸ ಇದ್ದರೂ ವಿಲೇವಾರಿ ಮಾಡದೆ ನಿರ್ಲಕ್ಷ್ಯ ವಹಿಸಿದ ಬಗ್ಗೆ ಸಮಗ್ರ ವರದಿ ಪ್ರಕಟಿಸಿತ್ತು.


ಇದೀಗ ವರದಿ ಪ್ರಕಟಗೊಳ್ಳುತ್ತಿದ್ದಂತೆ ಎಚ್ಚೆತ್ತ ಮಲ್ಲೂರು ಗ್ರಾಮ ಪಂಚಾಯತ್ ಇಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಉಪಾಧ್ಯಕ್ಷ, ಸದಸ್ಯರ ನೇತೃತ್ವದಲ್ಲಿ ಕಸ ವಿಲೇವಾರಿ ಮಾಡಿದೆ.ರಾಶಿ ರಾಶಿ ಕಸಕ್ಕೆ ಮುಕ್ತಿ ನೀಡಿದೆ. ವರದಿಗೆ ತಕ್ಷಣ ಸ್ಪಂದಿಸಿದ ಮಲ್ಲೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಸದಸ್ಯರ ಕಾರ್ಯ ಶ್ಲಾಘನೀಯ. ಆದರೆ ಇದು ಕೇವಲ ತಾತ್ಕಾಲಿಕ ಕ್ರಮವಷ್ಟೇ, ಇನ್ನು ಹತ್ತು ದಿನ ಕಳೆದರೆ ಮತ್ತೆ ಅಲ್ಲಿ ಕಸದ ಗುಡ್ಡೆ ನಿರ್ಮಾಣ ಆಗುವುದು ಪಕ್ಕಾ. ಇನ್ನು ಕೇವಲ ಪಂಚಾಯತ್ ಗೆ ನಾಲ್ಕು ತಿಂಗಳ ಅವಧಿಯಿದೆ. ಇಲ್ಲಿನ ಕಸದ ರಾಶಿಗೆ ಶಾಶ್ವತ ಪರಿಹಾರ ಒದಗಿಸಲು ಪಂಚಾಯತ್ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಪಕ್ಕದ ಪಂಚಾಯತ್ ಅಳವಡಿಸಿಕೊಂಡ ರೀತಿಯಲ್ಲಿ ಹಸಿ ತ್ಯಾಜ್ಯ ವಿಲೇವಾರಿಗೆ ಪ್ರಯತ್ನ ಮಾಡಿದರೆ ಶಾಶ್ವತ ಪರಿಹಾರ ಸಾಧ್ಯ . ಈ ನಿಟ್ಟಿನಲ್ಲಿ ಪಂಚಾಯತ್ ಗಮನಹರಿಸಲಿ ಎಂಬ ಸದುದ್ದೇಶ ನಮ್ಮದು.
