ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ತಿರುವು. ತನಿಖೆ ನಡೆಸುತ್ತಿದ್ದ ಕಾಮಾಕ್ಷಿಪಾಳ್ಯ ಪೊಲೀಸ್ ಇನ್ಸ್ಪೆಕ್ಟರ್ ಗಿರೀಶ್ ನಾಯಕ್ ವಿರುದ್ಧ ಸುಳ್ಳು ಸಾಕ್ಷಿ ಸೃಷ್ಟಿ ಮತ್ತು ದಾಖಲೆಗಳಲ್ಲಿ ದೋಷಾರೋಪಣೆ ಆರೋಪಗಳು ಎದ್ದಿವೆ. ಆರೋಪಿಗಳ ಫೋನ್ ಸೀಜ್ ಮಾಡಿದ್ದು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದ್ದರೂ, ಸೀಜ್ ಫೋಟೋಗಳಲ್ಲಿ ಠಾಣೆಯ ಫ್ಲೋರಿಂಗ್ ಮಿಸ್ಮ್ಯಾಚ್ ಆಗಿದೆ ಎಂಬ ಆರೋಪ ಕೇಳಿಬಂದಿದೆ.
ಆರೋಪಿಗಳಾದ ಪುಟ್ಟಸ್ವಾಮಿ, ನಂದೀಶ್, ವಿನಯ್, ನಾಗರಾಜ್, ಲಕ್ಷ್ಮಣ್, ದೀಪಕ್ ಮತ್ತು ಪ್ರದೂಷ್ ಅವರ ಫೋನ್ಗಳನ್ನು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪಂಚರ ಸಮಕ್ಷಮದಲ್ಲಿ ಸೀಜ್ ಮಾಡಲಾಗಿದೆ ಎಂದು ಚಾರ್ಜ್ಶೀಟ್ನಲ್ಲಿ ಹೇಳಲಾಗಿದೆ. ಸೀಜ್ ಸಂದರ್ಭದ ಫೋಟೋಗಳಲ್ಲಿ ಆರೋಪಿಗಳು ನಿಂತಿರುವ ಸ್ಥಳದ ಫ್ಲೋರಿಂಗ್ ವೆಟ್ರಿಪೈಡ್ ಟೈಲ್ಸ್ ಇದ್ದರೆ, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಮಜಾಕ್ ಟೈಲ್ಸ್ ಅಳವಡಿಸಲಾಗಿದೆ ಎಂಬುದು ಗಮನಕ್ಕೆ ಬಂದಿದೆ.
ಇದರಿಂದಾಗಿ ಫೋನ್ ಸೀಜ್ ಬೇರೆಡೆ ನಡೆದು, ಠಾಣೆಯಲ್ಲಿ ನಡೆದಂತೆ ಸುಳ್ಳು ದಾಖಲೆ ಸೃಷ್ಟಿಸಲಾಗಿದೆ ಎಂಬ ಆರೋಪ ಎದ್ದಿದೆ. ಇನ್ಸ್ಪೆಕ್ಟರ್ ಗಿರೀಶ್ ನಾಯಕ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಅವರನ್ನು ಆರೋಪಿಯನ್ನಾಗಿ ಮಾಡುವಂತೆ ವಕೀಲ ಸುಧನ್ವ ಅವರು ಸೆಷನ್ಸ್ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.ಕೋರ್ಟ್ ಕ್ರಮಗಳು ಪ್ರಕರಣದಲ್ಲಿ ಸಾಕ್ಷ್ಯ ನಾಶವಾಗದಂತೆ ಕಾಮಾಕ್ಷಿಪಾಳ್ಯ ಠಾಣೆಯ ಸಿಸಿಟಿವಿ ಕ್ಯಾಮೆರಾಗಳನ್ನು ರಕ್ಷಿಸುವಂತೆ ಕೋರ್ಟ್ ಆದೇಶ ನೀಡಿದೆ. ಇನ್ಸ್ಪೆಕ್ಟರ್ ಗಿರೀಶ್ ನಾಯಕ್ ಮೊದಲು ತನಿಖಾಧಿಕಾರಿಯಾಗಿದ್ದರು
