ಮುಸ್ಲಿಮರು ಪತ್ನಿಯರನ್ನು ಸಮಾನವಾಗಿ ನೋಡಿಕೊಂಡರೆ, ಬಹುಪತ್ನಿತ್ವಕ್ಕೆ ಅವಕಾಶ ಇದೆ: ಅಲಹಾಬಾದ್ ಹೈಕೋರ್ಟ್

ರಾಷ್ಟ್ರೀಯ

ಇಸ್ಲಾಂ ಧರ್ಮದ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಮುಸ್ಲಿಂ ಪುರುಷರು ಪಡೆಯಬಹುದಾದ ವಿವಾಹದ ಹಕ್ಕುಗಳ ಕುರಿತು ಇತ್ತೀಚೆಗೆ ಅಲಹಾಬಾದ್ ನ್ಯಾಯಾಲಯವು ಪ್ರಮುಖ ತೀರ್ಪೊಂದನ್ನು ನೀಡಿದೆ. ಮೊದಲ ಪತ್ನಿ ಜೀವಂತವಾಗಿದ್ದರೂ ಅಥವಾ ಆಕೆಯೊಂದಿಗೆ ವಿಚ್ಛೇದನವಾಗದಿದ್ದರೂ ಸಹ, ಮುಸ್ಲಿಂ ಪುರುಷನು ಎರಡನೇ ವಿವಾಹವಾಗಲು ಕಾನೂನಿನಲ್ಲಿ ಅವಕಾಶವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ತೀರ್ಪು ಮುಸ್ಲಿಂ ಪರ್ಸನಲ್ ಲಾ (ಷರಿಯತ್) ಅಡಿಯಲ್ಲಿ ಬರುವ ಹಕ್ಕುಗಳನ್ನು ಎತ್ತಿಹಿಡಿದಿದೆ. ಧಾರ್ಮಿಕ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿಯು ನಾಲ್ಕು ವಿವಾಹಗಳವರೆಗೆ ಮಾಡಿಕೊಳ್ಳಲು ಅವಕಾಶವಿರುವುದರಿಂದ, ಇದನ್ನು ಕಾನೂನುಬಾಹಿರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ವಿವರಿಸಿದೆ.

ಒಬ್ಬ ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಯ ಜೊತೆಗಿನ ಸಂಬಂಧ ಚಾಲ್ತಿಯಲ್ಲಿದ್ದಾಗಲೇ ಮತ್ತೊಂದು ಮದುವೆಯಾಗುವುದು ಅಪರಾಧವಲ್ಲ. ಇಂತಹ ಸಂದರ್ಭಗಳಲ್ಲಿ ಎರಡನೇ ವಿವಾಹವಾದ ವ್ಯಕ್ತಿಯ ವಿರುದ್ಧ ದ್ವಿಪತ್ನಿತ್ವದ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲು ಸಾಧ್ಯವಿಲ್ಲ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 494ರ ಅಡಿಯಲ್ಲಿ ಇದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಮುಸ್ಲಿಂ ಪುರುಷರು ತಮ್ಮೆಲ್ಲಾ ಪತ್ನಿಯರನ್ನು ಸಮಾನವಾಗಿ ನೋಡಿಕೊಂಡರೆ, ಬಹುಪತ್ನಿತ್ವಕ್ಕೆ ಅವಕಾಶ ಇದೆ ಎಂದು
ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪುನೀಡಿದೆ. ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಸ್ವಾಲ್ ಅವರಿದ್ದ ಏಕಸದಸ್ಯ ಪೀಠ, ಮುಸ್ಲಿಂ ಪುರಷರ ವಿವಾಹ ಆಯ್ಕೆಯ ಕುರಿತು ಈ ತೀರ್ಪು ನೀಡಿದೆ. ಇಸ್ಲಾಂ ಧರ್ಮಗ್ರಂಥ ಕುರಾನ್‌ನಲ್ಲಿ “ಸಮಂಜಸ ಕಾರಣ” ಇದ್ದರೆ ಮಾತ್ರ ಬಹುಪತ್ನಿತ್ವ ನಿಯಮ ಸಿಂಧುವಾಗುತ್ತದೆ. ಆದರೆ ಪುರುಷರು ಇದನ್ನು “ಸ್ವಾರ್ಥಕ್ಕಾಗಿ ದುರುಪಯೋಗ” ಮಾಡಿಕೊಳ್ಳುತ್ತಿದ್ದಾರೆ ಎಂದು ಕೋರ್ಟ್ ಅಸಾಮಾಧಾನ ವ್ಯಕ್ತಪಡಿಸಿದೆ. ಫುರ್ಕಾನ್ ಎಂಬ ಮುಸ್ಲಿಂ ವ್ಯಕ್ತಿಯ ವಿರುದ್ಧದ ಆರೋಪ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ಅಲಹಾಬಾದ್‌ ಹೈಕೋರ್ಟ್‌ ಈ ಮಹತ್ವದ ತೀರ್ಪು ನೀಡಿದೆ. ಬಂದಿದೆ