ಮಂಗಳೂರು: ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರಿ ದಿಶಾ ರವರಿಗೆ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಸನ್ಮಾನ

ಕರಾವಳಿ

ಮಂಗಳೂರು: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಂಗಳೂರು ಇದರ ವತಿಯಿಂದ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದ ಆಳ್ವಾಸ್ ಕಾಲೇಜಿ ವಿದ್ಯಾರ್ಥಿನಿ ಕುಮಾರಿ ದಿಶಾ ಮೂಡಬಿದ್ರಿ ಅವರನ್ನು ಅದ್ಧೂರಿಯಾಗಿ ಸನ್ಮಾನಿಸಲಾಯಿತು. ಮಲಬಾರ್ ಗೋಲ್ಡ್ ಮಂಗಳೂರು ಇದರ ಗ್ರಾಹಕರಾದ ಗಂಗಾಧರ ಪೂಜಾರಿ ಮತ್ತು ರಶ್ಮಿ ಜಿ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸನ್ಮಾನ ಸ್ವೀಕರಿಸಿದ ಕು. ದಿಶಾರವರು ಮಾತನಾಡಿ, ನನಗೆ ತುಂಬಾ ಖುಷಿಯಾಗುತ್ತದೆ ಹಾಗೂ ತನ್ನ ಸಾಧನೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು. ದಿಶಾ ಅವರ ಪಾಲಕರಾದ ವೀಣಾರವರು ಕಾರ್ಯಕ್ರಮದಲ್ಲಿ ಮಾತಾಡಿ ಮಲಬಾರ್ ಗೋಲ್ಡ್ ನವರು ಹಮ್ಮಿಕೊಂಡಿರುವ ಈ ಕಾರ್ಯಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಹೇಳಿ, ಆಳ್ವಾಸ್ ಕಾಲೇಜಿನ ಛೇರ್ಮನ್ ಮೋಹನ್ ಅಳ್ವಾರವರ ಪ್ರೋತ್ಸಾಹ ಮತ್ತು ಮಾರ್ಗದರ್ಶನವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗಂಗಾಧರ ಪೂಜಾರಿ ಅವರು ಕು. ದಿಶಾ 600/600 ಅಂಕಗಳಿಸಿ ನಮ್ಮ ರಾಜ್ಯ ಹಾಗೂ ಜಿಲ್ಲೆ ಹೆಮ್ಮೆ ಪಡುವಂತಹ ಸಾದನೆಗೈದಿದ್ದಾರೆ, ಅದೇ ರೀತಿ ಮುಂದಿನ ಅವರ ಭವಿಷ್ಯವು ಉಜ್ವಲ ವಾಗಲಿ ಎಂದು ಹಾರೈಸಿದರು.

ಸಾಧನೆ ಮಾಡುವವರಿಗೆ ಯಾವಾಗಲೂ ಯಾವುದೆ ಅಡ್, ಆತಂಕವಾಗುವುದಿಲ್ಲ ಹಾಗೂ ಕು. ದಿಶಾರವರ ಸಾದನೆ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದು ಮಲಬಾರ್ ಗೋಲ್ಡ್ ನ ಸ್ಟೋರ್ ಹೆಡ್ ಹಫೀಜ್ ರೆಹಮಾನ್ ಶುಭ ಹಾರೈಸಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಂಗಳೂರು ಸ್ಟೋರ್ ಹೆಡ್ ಹಫೀಜ್ ರಹ್ಮಾನ್, ಬ್ರಾಂಚ್ ಮ್ಯಾನೇಜರ್ ರಘುರಾಮ್ ಸಿ ಎಸ್, ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್, ಸೇಲ್ಸ್ ಮೇನೇಜರ್ ಗಿರೀಶ್ ಶೆಟ್ಟಿ, ಡೆಪ್ಯೂಟಿ ಸೇಲ್ಸ್ ಮ್ಯಾನೇಜರ್ ಸಮೀರ್ ಮತ್ತಿತರರು ಉಪಸ್ಥಿತರಿದ್ದರು.