ಗಂಜಿಮಠ: ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ; ರಾಯಲ್ ಪ್ಯಾಲೇಸ್ ಮತ್ತು ಒಂಡೆಲಾ ಹಾಲ್ ಮಾಲಿಕರ ಮತ್ತು ಆಯೋಜಕರ ವಿರುದ್ದ ಪ್ರಕರಣ ದಾಖಲು.

ಕರಾವಳಿ

ಗಂಜಿಮಠ: ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ ಗಂಜಿಮಠ ಒಂಡೇಲಾ ಬಳಿಯ ರಾಯಲ್ ಪ್ಯಾಲೇಸ್ ಮತ್ತು ಒಂಡೆಲಾ ಹಾಲ್ ನ ಮಾಲಿಕರು ಮತ್ತು ಆಯೋಜಕರ ವಿರುದ್ದ ಪ್ರಕರಣ ದಾಖಲು.

ದಿನಾಂಕ 12-04-2026 ರಂದು ಮದ್ಯಾಹ್ನ 12 ಗಂಟೆಯಿಂದ 2-00 ಗಂಟೆಯ ಮಧ್ಯೆ ಗಂಜಿಮಠದ ಮುಚ್ಚೂರು ಕ್ರಾಸ್ ಬಳಿ ರಾಯಲ್ ಪ್ಯಾಲೇಸ್ ಮತ್ತು ಒಂಡೆಲಾ ಹಾಲ್ ನ ಮಾಲಿಕರು ಮದುವೆಗೆ ಕಾರ್ಯಕ್ರಮಕ್ಕೆ ಬಂದ ವಾಹನಗಳಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳದೆ ಮದುವೆ ಕಾರ್ಯಕ್ರಮಕ್ಕೆ ಹಾಲ್ ನ್ನು ಬಾಡಿಗೆ ನೀಡಿ ರಾಷ್ಟ್ರೀಯ ಹೆದ್ದಾರಿ ಸಾಣೂರು-ಮೂಡಬಿದ್ರೆ 169 ಹೆದ್ದಾರಿಯಲ್ಲೆ ವಾಹನಗಳನ್ನು ಪಾರ್ಕಿಂಗ್ ಮಾಡಿಸಿ ಟ್ರಾಫಿಕ್ ಜ್ಯಾಮ್ ಆಗಲು ಕಾರಣಕರ್ತರಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಕ್ರಮವಾಗಿ ಅಡ್ಡಿಪಡಿಸಿ ಸಾರ್ವಜನಿಕರಿಗೆ ತೊಂದರೆ ಮತ್ತು ಅಪಾಯವನ್ನುಂಟು ಮಾಡಿರುವ ಬಗ್ಗೆ ರಾಯಲ್ ಪ್ಯಾಲೇಸ್ ಮತ್ತು ಒಂಡೆಲಾ ಹಾಲ್ ನ ಮಾಲಿಕರ ಮತ್ತು ಆಯೋಜಕರ ಮೇಲೆ ಬಜಪೆ ಪೊಲೀಸರು ಮೊ.ನಂ 73/2026 ಕಲಂ 126(2), 285, 292 BNS ಕಲಂ 122 IMV Act ರಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.