ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ.ಸಂ: 96/2006 ಹಾಗೂ 103/2018 ರ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸುಳ್ಯ ಅಜ್ಜಾವರ ನಿವಾಸಿ ಎ. ಎಮ್ ಅಜೀಜ್ ಎಂಬಾತನ ವಿರುದ್ದ ಮಾನ್ಯ SCJ ಮತ್ತು JMFC ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾದೀಶರಾದ ಶ್ರೀಮತಿ ದಮಯಂತಿರವರು ಆರೋಪಿಯ ವಿರುದ್ಧದ ಆರೋಪಗಳು ಸಾಭೀತಾದ ಹಿನ್ನೆಲೆಯಲ್ಲಿ ಶಿಕ್ಷೆಯನ್ನು ವಿಧಿಸಿ ಆದೇಶ ನೀಡಿರುತ್ತಾರೆ.
ಪ್ರಕರಣದ ಅ.ಕ್ರ: 103/2018 ರಲ್ಲಿ ಒಂದು ವರ್ಷಗಳ ಸಾದಾ ಕಾರಾಗೃಹ ವಾಸ ಹಾಗೂ 5,000 ರೂ. ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 45 ದಿನಗಳ ಕಾಲ ಸಾದಾ ಕಾರಾಗೃಹ ವಾಸದ ಶಿಕ್ಷೆ ವಿಧಿಸಿರುತ್ತಾರೆ. ಹಾಗೂ ಅ.ಕ್ರ: 96/2006 ರಲ್ಲಿ ಮೂರು ವರ್ಷಗಳ ಕಾಲ ಸಾದಾ ಕಾರಾಗೃಹ ವಾಸ ಹಾಗೂ 5,000 ರೂ. ದಂಡವನ್ನು ವಿಧಿಸಿದ್ದು, ದಂಡವನ್ನು ಕಟ್ಟಲು ತಪ್ಪಿದ್ದಲ್ಲಿ 45 ದಿನಗಳ ಕಾಲ ಸಾದಾ ಕಾರಾಗೃಹ ವಾಸ ಹಾಗೂ ಕಲಂ 380ರಲ್ಲಿ ಮೂರು ವರ್ಷಗಳ ಕಾಲ ಸಾದಾ ಕಾರಾಗೃಹ ವಾಸ ಹಾಗೂ ಐದು ಸಾವಿರ ದಂಡ ವಿಧಿಸಿ ಆದೇಶಿಸಿರುತ್ತಾರೆ.
