ಮಂಗಳೂರಿನ ಖಡಕ್ ಕಮೀಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ ಅವರಿದ್ದಾರೆ. ಇವರು ಬಂದ ನಂತರ ಮಂಗಳೂರು ಶಾಂತವಾಗಿದೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಹಲವಾರು ಎಸಿಪಿ ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳೂರು ಕಮೀಷನರ್ ವ್ಯಾಪ್ತಿಯಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲ್ಪಟ್ಟಿರುವ, ಧೋ ನಂಬರ್ ದಂಧೆಕೋರರ ಪಾಲಿಗೆ ಮೃಷ್ಟಾನ್ನ ಭೋಜನ ಅನ್ನಿಸಿಕೊಂಡಿರುವ ಪಣಂಬೂರು ಉಪ ವಿಭಾಗದಲ್ಲಿ ದಕ್ಷ, ಸೂಪರ್ ಕಾಫ್ ಎಸಿಪಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಬೇರಾರೂ ಅಲ್ಲ. ಎಸಿಪಿ ಶ್ರೀಕಾಂತ್ ಕೆ.
ಎಸಿಪಿ ಶ್ರೀಕಾಂತ್ ಕೆ ರವರು ಪೊಲೀಸ್ ಇಲಾಖೆಯಲ್ಲಿ ನಿಯತ್ತಾಗಿ ಕೆಲಸ ಕಾರ್ಯಮಾಡಿಕೊಂಡು ಬಂದವರು. ಬಹಳ ಅನುಭವಿ, ಉತ್ತಮ ಸ್ವಭಾವದ ಖಡಕ್ ಪೊಲೀಸ್ ಆಫೀಸರ್ಸ್. ಮೈಸೂರು, ಸೋಮವಾರಪೇಟೆ, ಹೊಳೆನರಸೀಪುರ, ಮಂಗಳೂರು ಮೆಸ್ಕಾಂ ಜಾಗೃತ ದಳ, ಸಕಲೇಶಪುರ, ಪುತ್ತೂರು, ಕುಮಟಾ, ಉಡುಪಿ, ಬ್ರಹ್ಮಾವರ, ಕಾರವಾರ, ಕುಂದಾಪುರ, ಭಟ್ಕಳ ಮೊದಲಾದ ಕಡೆಗಳಲ್ಲಿ ಎಸ್. ಐ ಯಾಗಿಯೂ, ಇನ್ಸ್ ಪೆಕ್ಟರ್ ಆಗಿಯೂ ಸೇವೆ ಸಲ್ಲಿಸಿದವರು. ತಮ್ಮ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕತೆ, ದಕ್ಷತೆ ಕಂಡು ಮುಖ್ಯಮಂತ್ರಿಗಳ ಸ್ವರ್ಣ ಪದಕಕ್ಕೆ ಭಾಜನರಾದವರು. ಕಠಿಣ ನಿರ್ಧಾರಗಳು ಮತ್ತು ದಕ್ಷತೆಗೆ ಹೆಸರುವಾಸಿಯಾಗಿ, ಕಾನೂನಿನ ಚೌಕಟ್ಟಿನಲ್ಲಿ ನಿಷ್ಠೆಯಿಂದ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುತ್ತಾ ಕರ್ತವ್ಯ ನಿರ್ವಹಿಸುವ ಉತ್ತಮ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪಣಂಬೂರು ಉಪ ವಿಭಾಗದಲ್ಲಿ ಎಸಿಪಿ ಯಾಗಿ ಶ್ರೀಕಾಂತ್ ಕೆ. ಕಳೆದ ಒಂದು ವರ್ಷ ಎಂಟು ತಿಂಗಳಿನಿಂದ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಅಕ್ರಮ ದಂಧೆ, ಸಮಾಜ ಘಾತುಕ ಶಕ್ತಿಗಳನ್ನು ಮಟ್ಟಹಾಕಿ, ಮತೀಯವಾದಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕಮೀಷನರ್ ಒಬ್ಬರು ದಕ್ಷರಾದರೆ ಸಾಕಾಗುವುದಿಲ್ಲ. ಅವರ ಅಧೀನದಲ್ಲಿರುವ ಅಧಿಕಾರಿಗಳು ದಕ್ಷ, ನಿಷ್ಠರಾಗಿರದ್ದರೆ ನಿರ್ಭೀತ ಸಮಾಜ ಕಟ್ಟಲು ಸಾಧ್ಯ. ಕಮೀಷನರ್ ಆಶಯದಂತೆ ದಕ್ಷ, ಖಡಕ್ ಪೊಲೀಸ್ ಆಫೀಸರ್ಸ್ ಆಗಿರುವ ಶ್ರೀಕಾಂತ್ ಕೆ ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ದಂಧೆಗಳಿಗೆ ಮೂಗುದಾರ ಹಾಕಿರುವುದು ಮಾತ್ರವಲ್ಲ, ಸಮಾಜ ಬಾಹಿರ ಕೃತ್ಯದಲ್ಲಿ ತೊಡಗಿರುವ, ಸಮಾಜ ಘಾತುಕರ ಹೆಡೆಮುರಿ ಕಟ್ಟುವಲ್ಲಿ ಸಫಲರಾಗಿದ್ದಾರೆ. ಕೋಮು ಸೂಕ್ಷ್ಮ ಪಣಂಬೂರು ಉಪ ವಿಭಾಗದಲ್ಲಿ ಶಾಂತಿಯ ವಾತಾವರಣ ನೆಲೆಸುವಂತೆ ಮಾಡಿದ್ದಾರೆ. ಎಸಿಪಿ ಶ್ರೀಕಾಂತ್ ಕೆ ರವರ ನಡೆಗೆ ಜನಸಾಮಾನ್ಮರು ಫಿದಾ ಆಗಿದ್ದಾರೆ. ಜೊತೆಗೆ ಜನಸ್ನೇಹಿ ಅಧಿಕಾರಿಯಾಗಿ ನಾಗರೀಕರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಪೊಲೀಸ್ ಇಲಾಖೆಗೆ ಗೌರವವನ್ನು ತಂದು ಕೊಡುತ್ತಿದ್ದಾರೆ. ಸಮಸ್ಯೆಗಳೊಂದಿಗೆ ಅವರ ಕಛೇರಿಗೆ ಬೇಟಿ ನೀಡುವ ನೊಂದ ನಾಗರಿಕರ ಆಹವಾಲುಗಳನ್ನು ಶಾಂತವಾಗಿ ಆಳಿಸಿ, ನೊಂದವರಿಗೆ ನ್ಯಾಯ ದೊರಕಿಸಿಕೊಟ್ಟು, ಉತ್ತಮ ಸ್ವಭಾವದೊಂದಿಗೆ ಬೆರೆಯುವ ಕರಾವಳಿಯವರೇ ಆದ ಪಣಂಬೂರು ಎಸಿಪಿ ಶ್ರೀಕಾಂತ್ ಅವರಿಗೊಂದು ಸೆಲ್ಯೂಟ್.
