✍️. ಸಲಾವುದ್ದೀನ್ ಎಂ.ಎ
ಮೂಡಿಗೆರೆ: ತಾಲೂಕಿಗೆ ಇರುವ ಏಕೈಕ ತಾಲೂಕು ಕ್ರೀಡಾಂಗಣ ಹೊಯ್ಸಳ ಕ್ರೀಡಾಂಗಣ ವಾಗಿದ್ದು ಎಲ್ಲಾ ರೀತಿಯ ಸರ್ಕಾರಿ ಕಾರ್ಯಕ್ರಮಗಳು ಗಾಂಧಿ ಜಯಂತಿ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ ಸೇರಿದಂತೆ ಕ್ರೀಡೆಗಳು ನಡೆಯುವ ಏಕೈಕ ಕ್ರೀಡಾಂಗಣ ವಾಗಿದೆ. ಬೆಳಗ್ಗೆ ಮತ್ತು ಸಂಜೆ ವಾಯುವಿಹಾರ, ಪುಟ್ ಬಾಲ್, ಕ್ರಿಕೇಟ್ ಮುಂತಾದ ಕ್ರೀಡೆಗಳಲ್ಲಿ ತೊಡಗಿಕೊಳ್ಳುವ ಸಾರ್ವಜನಿಕರು ಮತ್ತು ಮಕ್ಕಳು. ಆದರೇ ಅಧಿಕಾರಿಗಳ ಮತ್ತು ಜನ ಪ್ರತಿನಿಧಿಗಳ ದಿವ್ಯ ನಿರ್ಲಕ್ಷದ ಪರಿಣಾಮ ಇದ್ದೊಂದು ಹೈಮಾಸ್ಕ್ ದೀಪವನ್ನು ಕಿತ್ತುಹಾಕಿ ವರ್ಷಗಳೇ ಕಳೆದರೂ ಅದನು ಮತ್ತೆ ಕೂರಿಸಲು ಹೋಗಿಲ್ಲಾ. ಹೈಮಾಸ್ಕ್ ದೀಪವನ್ನು ಕಂಬದ ಸಮೇತ ಕಿತ್ತು ಬದಿಯಲ್ಲಿ ಬಿಸಾಕಿದ್ದರ ಪರಿಣಾಮ ಅದರ ಮೇಲೆ ಗಿಡಗಂಟಿಗಳು ಬೆಳೆದಿವೆ. ಇಲ್ಲಿ ಅವ್ಯವಹಾರಗಳು ಕತ್ತಲಾದ ನಂತರ ನಿರಾತಂಕವಾಗಿ ನಡೆಯುತ್ತಿದ್ದರು ಅಧಿಕಾರಿಗಳು ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಕೂತಿರುವುದು ಕ್ರೀಡಾಭಿಮಾನಿಗಳಿಗೆ ಬೇಸರವನ್ನು ತಂದಿದೆ.

ಕ್ರೀಡಾಂಗಣ ಮಧ್ಯದಲ್ಲೆ ಕಲ್ಲಿನ ರಾಶಿ, ಸುತ್ತಲು ಗಿಡಗಂಟಿಗಳ ರಾಶಿಗಳೇ ಎದ್ದು ಕಾಣುತಿದ್ದು, ವಿಷ ಜಂತುಗಳು ಅಡಗಿವೆ. ಯೋಜನಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳೇ ನಾಪತ್ತೆಯಾಗಿದ್ದು ತಾಲ್ಲೂಕು ಆಢಳಿತ ಮತ್ತು ಜನಪ್ರತಿನಿಧಿಗಳು ಇದ್ದು ಇಲ್ಲದಂತಾಗಿದೆ. ವರ್ಷಗಳೇ ಕಳೆದರೂ ಆಗದ ಅಭೀವೃದ್ದಿ.
ಅಂದು ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಮಾಜಿ ಸಚಿವೆ ಮೋಟಮ್ಮ ರವರ ಪ್ರಯತ್ನದ ಫಲ ಹೊಯ್ಸಳರ ಹೆಸರನ್ನು ಇಟ್ಟು ಕ್ರೀಡಾಂಗಣ ಸ್ಥಾಪನೆ ಮತ್ತು ಅಭಿವೃದ್ದಿ , ಇಂದು ಜನಪ್ರತಿನಿಧಿಗಳ ನಿರ್ಲಕ್ಷ ಧೊರಣೆಗೆ ಹಾಳು ಕೊಂಪೆಯಾದ ಹೊಯ್ಸಳ ಕ್ರೀಡಾಂಗಣ. ಆದರೇ ಈ ಕ್ರೀಡಾಂಗಣದಲ್ಲಿ ವಾಲ್ ಕಟ್ಟುವ ಸಲುವಾಗಿ ಇದ್ದ ಹೈಮಾಸ್ಕ್ ದೀಪವನ್ನು ಕಳೆದ ಒಂದು ವರ್ಷಗಳ ಹಿಂದೆ ಕಿತ್ತು ಹಾಕಿದ್ದರ ಪರಿಣಾಮ, ಸರ್ಕಾರಿ ಕಾರ್ಯಕ್ರಮದಲ್ಲಿ ಮಳೆ-ಬಿಸಿಲಲ್ಲೇ ಸಾರ್ವಜನಿಕರು ಮತ್ತು ವಿಧ್ಯಾರ್ಥಿಗಳು ಕಾರ್ಯಕ್ರಮ ವೀಕ್ಷಿಸುತ್ತಿರುವುದು ವಿಷಾಧಕರ ಸಂಗತಿಯಾಗಿದೆ.
